Shree Bale Honnuru Khasa Shakha Matha

Shree Bale Honnuru Khasa Shakha Matha Claimed

ಶ್ರೀ ಬಾಳೆಹೊನ್ನೂರು ಖಾಸಾ ಶಾಖಾ ಮಠ

Average Reviews

Description

ಶ್ರೀ ಬಾಳೆಹೊನ್ನೂರು ಖಾಸಾ ಶಾಖಾ ಮಠ

ಶ್ರೀ ಗುರು ಸಿದ್ದೇಶ್ವರ ಸ್ವಾಮಿ ಕ್ಷೇತ್ರ

ತುಮಕೂರು ಜಿಲ್ಲೆ ಕೊರಟಗೆರೆ ತಾಲ್ಲೂಕಿನಲ್ಲಿರುವ ಶ್ರೀ ಗುರು ಶಿವಯೋಗಿಸಿದ್ದೇಶ್ವರರ ತಪೋಭೂಮಿ ಶ್ರೀಕ್ಷೇತ್ರ ಸಿದ್ದರಬೆಟ್ಟಕ್ಕೆ ಪೌರಾಣಿಕ, ಐತಿಹಾಸಿಕ, ಆಧ್ಯಾತ್ಮಿಕ, ದಿವ್ಯಔಷಧಯುಕ್ತ ಗಿಡ ಮೂಲಿಕೆಗಳ ನೈಸರ್ಗಿಕ ಸಿರಿಸಂಪದದ ಹಿನ್ನಲೆಯುಂಟು. ಇವುಗಳಹಿನ್ನೆಲೆಯಲ್ಲಿ ಶ್ರೀ ಕ್ಷೇತ್ರಕ್ಕೆ ಬೂದಗವಿ, ಸುವರ್ಣಗಿರಿ, ರಸಾಸಿದ್ದರ ಬೆಟ್ಟ, ಬೆಳ್ಳಿಬೆಟ್ಟ ಎಂಬಪರ್ಯಾಯ ನಾಮಾಂಕಿತಗಳುಂಟು. ಆಧ್ಯಾತ್ಮ ಸಾಧಕರಿಗೆ ಹೇಳಿ ಮಾಡಿಸಿದ ತಾಣ ಶ್ರೀಕ್ಷೇತ್ರಸಿದ್ದರಬೆಟ್ಟ. ಹರದನಹಳ್ಳಿಯ ಗೋಸಲ ಸಿದ್ದೇಶ್ವರರು, ತೋಂಟದ ಸಿದ್ದ ಲಿಂಗೇಶ್ವರರು,ರೇವಣಸಿದ್ದರು, ರುದ್ರಮುನಿ ಶಿವಾಚಾರ್ಯರು, ಕಾನಾಮಡುವಿನ ಶರಣ ಬಸವೇಶ್ವರರು,ಶ್ರೀ ನಿ.ಪ್ರ.ಸ್ವ. ಅಟವಿ ಸ್ವಾಮಿಗಳು, ಶ್ರೀ ನಿ.ಪ್ರ.ಸ್ವ. ಉದ್ದಾನ ಶಿವಯೋಗಿಗಳು, ಜಡೆಯಶಾಂತಮುನಿ ಶಿವಯೋಗಿಗಳು ಮೊದಲ್ಗೊಂಡು ಅನೇಕ ಸಾಧು ಸಂತರು ತಪೋಗೈದುಪಾವನಗೊಳಿಸಿದ ದಿವ್ಯಕ್ಷೇತ್ರ ಈ ಸಿದ್ದರಬೆಟ್ಟ.ನಿಸರ್ಗ ರಮಣೀಯತೆಗೆ ಹೆಸರಾದ ಶ್ರೀ ಕ್ಷೇತ್ರದ ಅಷ್ಟ ದಿಕ್ಕುಗಳಲ್ಲೂಗಿರಿಶಿಖರಗಳುಂಟು. ಬೆಟ್ಟದಲ್ಲಿ ಹಾಗೂ ಸುತ್ತಮುತ್ತಲಲ್ಲಿ ಸಾವಿರಾರು ಔಷಧಯುಕ್ತಗಿಡಮೂಲಿಕಗಳ ಬಂಡಾರವುಂಟು. ಅಸಂಖ್ಯಾತ ಕಾಡು ಪ್ರಾಣಿಗಳ ವಾಸಸ್ಥಾನವುಂಟು. ಈರೀತಿಯಲ್ಲಿ ಪ್ರಸಿದ್ಧ ಪುಣ್ಯಕ್ಷೇತ್ರವಾಗಿರುವ ಶ್ರೀ ಕ್ಷೇತ್ರ ಸಿದ್ದರಬೆಟ್ಟದ ತಪ್ಪಲಿನಲ್ಲಿ 2006ರಲ್ಲಿಸ್ಥಾಪಿತಗೊಂಡು ಭಕ್ತರನ್ನು ಪೊರೆಯುತ್ತಿರುವ ಮಠವೇ ಶ್ರೀ ಬಾಳೆಹೊನ್ನೂರು ಖಾಸಾಶಾಖಾ ಮಠ. 2006ರ ಫೆಬ್ರವರಿ 10ರಂದು ಕೇದಾರ ಪೀಠದ ಶ್ರೀ ವೈರಾಗ್ಯಸಿಂಹಾಸನಾಧೀಶ್ವರ 1008 ಜಗದ್ಗುರು ಭೀಮಾಶಂಕರಲಿಂಗ ಶಿವಾಚಾರ್ಯ ಭಗವತ್ಪಾದರನೇತೃತ್ವದಲ್ಲಿ, ಶ್ರೀ ರಂಭಾಪುರಿ ಜಗದ್ಗುರು 1008 ಶ್ರೀ ಪ್ರಸನ್ನ ರೇಣುಕ ವೀರ ಸೋಮೇಶ್ವರಶಿವಾಚಾರ್ಯ ಭಗವತ್ಪಾದರು ಶ್ರೀ ಬಾಳೆಹೊನ್ನೂರು ಖಾಸಾ ಶಾಖಾ ಮಠವನ್ನು ಸ್ಥಾಪಿಸಿ,ಶ್ರೀ ಷ.ಬ್ರ.ವೀರಭದ್ರ ಶಿವಾಚಾರ್ಯ ಸ್ವಾಮಿಗಳನ್ನು ಮಠಾದಿಪತಿಗಳಾಗಿ ಪಟ್ಟದ ಅನುಗ್ರಹನೀಡಿದರು.ಕಿರಿಯ ವಯಸ್ಸಿನಲ್ಲಿ ಹಿರಿಯದಾದ ಆದರ್ಶದಾಶಯಗಳನ್ನೊತ್ತು ಶ್ರೀ ಮಠದಜವಾಬ್ದಾರಿ ನಿರ್ವಹಿಸುತ್ತಿರುವ ಶ್ರೀ ವೀರಭದ್ರ ಶಿವಾಚಾರ್ಯರು ಶ್ರೀ ಕ್ಷೇತ್ರ ಸಿದ್ದರಬೆಟ್ಟಹಾಗೂ ಶ್ರೀ ಮಠದ ಸುತ್ತಮುತ್ತಲ ಜನತೆಯ ಸರ್ವಾಂಗೀಣ ಅಭಿವೃದ್ಧಿಗೆ ಶ್ರಮಿಸುತ್ತಿದ್ದಾರೆ.ಶ್ರೀ ಕ್ಷೇತ್ರಕ್ಕೆ ಬರುವ ಸಕಲ ಭಕ್ತರಿಗೆ ಜ್ಯಾತ್ಯಾತೀತ ಒಲವಿನೊಂದಿಗೆ ತ್ರಿಕಾಲ ಅನ್ನ ದಾಸೋಹನಡೆಸುತ್ತಿದ್ದಾರೆ. ಅನಾಥರು, ಅತಿ ಬಡವರು ಆದ ಮಕ್ಕಳಿಗೆ ಅವರ ಸಂಪೂರ್ಣವಿದ್ಯಾಭ್ಯಾಸದ ಹೊಣೆಹೊತ್ತು ಅನ್ನ-ವಿದ್ಯೆ, ವಸತಿಯುತ ನೆರವನ್ನು ಕಲ್ಪಿಸಿದ್ದು ಪ್ರಸ್ತುತಕರ್ನಾಟಕ, ಆಂಧ್ರ ಹಾಗೂ ಮೇಘಾಲಯದ 17 ಮಕ್ಕಳು ಸೇರಿ ಒಟ್ಟು 110ಕ್ಕೂ ಅಧಿಕವಿದ್ಯಾರ್ಥಿಗಳಿಗೆ ಶ್ರೀ ಮಠದಲ್ಲಿ ಆಶ್ರಯ ನೀಡಿದ್ದಾರೆ.ಶ್ರೀ ಷ.ಬ್ರ. ವೀರಭದ್ರ ಶಿವಾಚಾರ್ಯರು ಶ್ರೀ ಮಠದ ಪಟ್ಟಾಧಿಕಾರವನ್ನುಸ್ವೀಕರಿಸಿದ ಕೇವಲ 9 ವರ್ಷಗಳಲ್ಲಿ ಸಾಧಿಸಿರುವ ಕಾರ್ಯಗಳು ಅಪಾರ. ವೇದ, ಯೋಗಜ್ಯೋತಿಷ್ಯ ಶಾಸ್ತ್ರಗಳನ್ನು ಕಲಿಯುವ ಮಕ್ಕಳಿಗೆ ಸಂಸ್ಕøತ ವೇದ ಪಾಠಶಾಲೆ ತೆರೆದಿರುವಶ್ರೀಗಳು ಉಚಿತ ವಿದ್ಯಾರ್ಥಿನಿಲಯವನ್ನು ಸ್ಥಾಪಿಸಿದ್ದಾರೆ ಹಾಗೂ ಶ್ರೀ ಮಠದ ವತಿಯಿಂದಪ್ರತಿವರ್ಷ ಎಸ್.ಎಸ್.ಎಲ್.ಸಿ. ಹಾಗೂ ಪಿ.ಯು.ಸಿ.ಯಲ್ಲಿ ಹೆಚ್ಚು ಅಂಕ ಪಡೆದವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರವಿತ್ತು ಪೆÇ್ರೀತ್ಸಾಹಿಸಲಾಗುತ್ತಿದೆ.ಶ್ರೀ ಮಠದಲ್ಲಿ ಪ್ರತಿ ಹುಣ್ಣಿಮೆ ದಿನದಂದು ಸುತ್ತಮುತ್ತಲಿನ ಅನಾರೋಗ್ಯ ಪೀಡಿತಜನತೆಗೆ ಉಚಿತ ಆಯುರ್ವೇದ ಚಿಕಿತ್ಸೆ ನೀಡುತ್ತಿದ್ದು ಅಂದು ಮುಸ್ಸಂಜೆ ಬೆಳದಿಂಗಳ ಕೂಟಏರ್ಪಡಿಸಿ ಉತ್ತಮ ಉಪನ್ಯಾಸಕ, ಸಾಹಿತಿಗಳಿಂದ ಉಪನ್ಯಾಸ ಏರ್ಪಡಿಸಲಾಗುತ್ತದೆ ಮತ್ತುಶ್ರೀ ಮಠದಲ್ಲಿ ದೂರದೂರುಗಳಿಂದ ಬರುವ ಪ್ರವಾಸಿಗರಿಗಾಗಿ 2011ರಲ್ಲಿ ಪ್ರವಾಸಿ ಮಂದಿರನಿರ್ಮಿಸಿದ್ದು ಎಲ್ಲಾ ವರ್ಗದ ಜನರೂ ಇದರ ಉಪಯೋಗ ಪಡೆಯುತ್ತಿದ್ದಾರೆ.ಶ್ರೀಗಳು ಕ್ಷೇತ್ರದ ಸುತ್ತಮುತ್ತಲಿನ ಬಡವರಿಗೆ, ಆಸ್ತಿಕ ಬಂಧುಗಳಿಗೆಅನುಕೂಲವಾಗುವಂತೆ ಪ್ರತಿ ವರ್ಷ, ವರ್ಷಕ್ಕೆ ಎರಡು ಬಾರಿ “ಕಾಶಿಯಾತ್ರೆ”ಯನ್ನುಆಯೋಜಿಸುತ್ತಿದ್ದು ಸಾವಿರಾರು ಭಕ್ತರು ಇದರ ಸದುಪಯೋಗ ಪಡೆದಿದ್ದಾರೆ. ಶ್ರೀಗಳುಗೋಸಂರಕ್ಷಕರೂ ಆಗಿದ್ದು ದೇಶೀ ಗೋವಿನ ತಳಿಗಳನ್ನು ಸಂರಕ್ಷಿಸಿ ಸಂವರ್ಧಿಸುವಸಲುವಾಗಿ ಗೋಶಾಲೆಯನ್ನು ಪ್ರಾರಂಭಿಸಿದ್ದು ಮುಂದೆ ಈ ಗೋವುಗಳ ಸಗಣಿಯಿಂದಶಾಸ್ತ್ರೋಕ್ತ ರೀತಿಯಲ್ಲಿ ವಿಭೂತಿ ತಯಾರಿಸುವ ಯೋಜನೆಯಲ್ಲಿದ್ದಾರೆ.ಶ್ರೀ ಮಠದಲ್ಲಿ ಪ್ರತಿ ವರ್ಷ ನಡೆಸಲಾಗುವ ಗುರುಗಳ ಪೀಠಾರೋಹಣ ವರ್ಧಂತಿದಿವಸ ಜಗದ್ಗುರು ರೇಣುಕರ, ಬಸವೇಶ್ವರರ ಜಯಂತೋತ್ಸವ ನಡೆಸಲಾಗುತ್ತಿದ್ದು ಮೂರುವರ್ಷಕ್ಕೊಮ್ಮೆ ಶ್ರೀಕ್ಷೇತ್ರ ಹಾಗೂ ಸಮಾಜ, ನಾಡು-ನುಡಿಗೆ ದುಡಿದ ಸೇವಾಕರ್ತರನ್ನುಗುರುತಿಸಿ “ಸಿದ್ದಶ್ರೀ” ಪ್ರಶಸ್ತಿ ನೀಡಿ ಗೌರವಿಸಲಾಗುತ್ತಿದೆ ಹಾಗೂ ಪ್ರತಿ ವರ್ಷ ಕಾರ್ತೀಕಮಾಸದ ಪೌರ್ಣಿಮೆಯಂದು ಶ್ರೀ ಮಠದಲ್ಲಿ ಲಕ್ಷದೀಪೋತ್ಸವ ಸಮಾರಂಭವನ್ನುಅದ್ದೂರಿಯಾಗಿ ನಡೆಸಲಾಗುತ್ತಿದೆ. ಈ ರೀತಿಯಾಗಿ ಶ್ರೀಗಳು ಶ್ರೀ ಮಠವನ್ನು ಕೆಲವೇವರ್ಷಗಳಲ್ಲಿ ಧಾರ್ಮಿಕ, ಸಾಮಾಜಿಕ, ಶೈಕ್ಷಣಿಕ, ಸಾಂಸ್ಕøತಿಕ ಕಾರ್ಯಚಟುವಟಿಕೆಗಳಕೇಂದ್ರಬಿಂದುವಾಗಿ ಪರಿವರ್ತಿಸಿದ್ದಾರೆ.

Swamiji

Swamiji Name :
ಶ್ರೀ ಷ. ಬ್ರ. ವೀರಭದ್ರ ಶಿವಾಚಾರ್ಯ ಮಹಾಸ್ವಾಮಿಗಳು
Date of Birth :
1-06-1981
Place :
ಅಬ್ಬಿಗೆರೆ, ರೋಣ ತಾ||
Pattadikara :
10-02-2006
Photo :

Programs

ಪ್ರತಿ ಹುಣ್ಣಿಮೆಗೆ "ಬೆಳದಿಂಗಳ ಕೂಟ" ಕಾರ್ಯಕ್ರಮದಲ್ಲಿ ಸಾಧಕರಿಗೆ ಸನ್ಮಾನ ಪ್ರತಿ ವರ್ಷ ಎರಡು ಬಾರಿ ಕಾಶಿಯಾತ್ರೆ ಮತ್ತು ಬೃಹತ್ ಉಚಿತ ಆರೋಗ್ಯ ತಪಾಸಣೆ ಶಿಬಿರ ಪ್ರತಿ ವರ್ಷ ಜೂನ್ನಲ್ಲಿ "ಪ್ರತಿಭಾ ಪುರಸ್ಕಾರ" ಕಾರ್ಯಕ್ರಮ ವೈಶಾಖ ಮಾಸದಲ್ಲಿ ಶ್ರೀ ಮಠದ ವಾರ್ಷಿಕೋತ್ಸವ, ಸಾಮೂಹಿಕ ವಿವಾಹ ಹಾಗೂ ಸರ್ವಧರ್ಮ ಸಮ್ಮೇಳನ ಶ್ರಾವಣ ಮಾಸದಲ್ಲಿ ಪ್ರತಿ ದಿನ ಒಂದೊಂದು ಗ್ರಾಮದಲ್ಲಿ ಶ್ರೀಗಳ ಪ್ರವಚನ

Institutions

ಪ್ರೌಢಶಾಲೆ ಸಂಸ್ಕøತ ಪಾಠಶಾಲೆ ಅನಾಥ ನಿಲಯ ಉಚಿತ ವಿದ್ಯಾರ್ಥಿ ನಿಲಯ

Photos

Full Address Kannada

ಶ್ರೀ ಬಾಳೆಹೊನ್ನೂರು ಖಾಸಾ ಶಾಖಾ ಮಠ ಶ್ರೀಕ್ಷೇತ್ರ ಸಿದ್ದರಬೆಟ್ಟ, ನೇಗಲಾಲ ಪೋ. - 572 138 ಕೊರಟಗೆರೆ ತಾ||, ತುಮಕೂರು ಜಿಲ್ಲೆ

Map

Near by Places

ತುಂಬಾಡಿ - 13 ಕಿ.ಮೀ. ದಾಬಸಪೇಟೆ - 52 ಕಿ.ಮೀ. ತುಮಕೂರು - 35 ಕಿ.ಮೀ. ನೆಲಹಾಳು - 15 ಕಿ.ಮೀ.

Statistic

24 Views
0 Rating
0 Favorite
0 Share
error: Content is protected !!