ಯಲಬುರ್ಗಾ ತಾಲ್ಲೂಕಿನ ಮಂಗಳೂರು ಗ್ರಾಮದಲ್ಲಿ ಪುರಾತನ ಕಾಲದಲ್ಲಿಸ್ಥಾಪನೆಗೊಂಡಿರುವ ಶ್ರೀ ಅರಳಲೆ ಕಟ್ಟೀಮನಿ ಹಿರೇಮಠವು ತನ್ನ ಧಾರ್ಮಿಕ ಆಚರಣೆಗಳಮೂಲಕ ಈ ಗ್ರಾಮದಲ್ಲಿ ಧಾರ್ಮಿಕ ವಾತಾವರಣವನ್ನು ಸೃಷ್ಟಿಸಿದೆ. ಶ್ರೀಮಠವು ಶ್ರೀರಂಭಾಪುರಿ ಪೀಠದ ಶಾಖಾಮಠವಾಗಿದ್ದು ಪುತ್ರವರ್ಗದ ಪರಂಪರೆಯಲ್ಲಿ ಬೆಳೆದುಬಂದಿದೆ.ಶ್ರೀಮಠವು ಸ್ಥಾಪನೆಗೊಂಡ ಕಾಲಮಾನದ ಬಗ್ಗೆಯಾಗಲೀ ಕರ್ತೃಗುರುಗಳಬಗ್ಗೆಯಾಗಲೀ, ಪರಂಪರೆಯ ಬಗ್ಗೆಯಾಗಲೀ ಯಾವುದೇ ಮಾಹಿತಿಗಳು ಲಭ್ಯವಿಲ್ಲ.ಶ್ರೀಮಠವು ಪುರಾತನವಾದದ್ದೆಂದು ಹೇಳಬಹುದಾದ ದಾಖಲೆಗಳು ಸಿಕ್ಕಿದ್ದರೂ ಹಿಂದಿನಶ್ರೀಗಳಾದ ಶ್ರೀ ಷಡಕ್ಷರಿ ಶಿವಾಚಾರ್ಯರ ಬಗ್ಗೆ ಮಾತ್ರ ಮಾಹಿತಿ ತಿಳಿದು ಬರುತ್ತದೆ.ಶ್ರೀಮಠದ ಜಮೀನಿನಲ್ಲಿ ನಾಲ್ಕು ಗದ್ದುಗೆಗಳು ಸ್ಥಾಪಿತಗೊಂಡಿದ್ದರೂ ಗುರುತಿಸಲಾಗುತ್ತಿಲ್ಲ.ಹಿಂದಿನ ಶ್ರೀಗಳಾದ ಶ್ರೀ ಷಡಕ್ಷರಿ ಶಿವಾಚಾರ್ಯ ಸ್ವಾಮಿಗಳು ಶ್ರೀಮಠದಅಧಿಕಾರವಹಿಸಿಕೊಂಡು ಕೇವಲ ಧಾರ್ಮಿಕ ಆಚರಣೆಗಳಿಗಷ್ಟೇ ಸೀಮಿತವಾಗದೆ ಸ್ವಾತಂತ್ರ್ಯಪೂರ್ವದಲ್ಲಿ ನಡೆದ ಸ್ವಾತಂತ್ರ್ಯ ಸಂಗ್ರಾಮದಲ್ಲಿ ತಮ್ಮನ್ನು ತೊಡಗಿಸಿಕೊಂಡು ಸೆರೆವಾಸವನ್ನುಅನುಭವಿಸಿದವರು. ಇವರು ರಾಷ್ಟ್ರಪ್ರೇಮ ಪ್ರಜ್ಞೆಯನ್ನು ಭಕ್ತರಲ್ಲಿ ಬಿತ್ತಿ ಯುವ ಜನಾಂಗಕ್ಕೆಚೇತನ ನೀಡುವ ಶಕ್ತಿಯಾಗಿದ್ದರು ಎಂದು ತಿಳಿದುಬರುತ್ತದೆ.ಶ್ರೀ ಷಡಕ್ಷರಿ ಶಿವಾಚಾರ್ಯ ಸ್ವಾಮಿಗಳು ಬೆಳಗಾವಿಯ ಆಯುರ್ವೇದ ಕಾಲೇಜ್ನಲ್ಲಿ ಡಿಪ್ಲೊಮಾ ಪದವಿ ಪಡೆದು ಮಂಗಳೂರಿನಲ್ಲಿ ಆಯುರ್ವೇದ ಆಸ್ಪತ್ರೆಯನ್ನುಪ್ರಾರಂಭಿಸಿದ ಶ್ರೀಗಳು ಧಾರ್ಮಿಕ, ಸಾಮಾಜಿಕ ಕಾರ್ಯಕ್ರಮಗಳ ಜೊತೆಯಲ್ಲಿ, ವೈದ್ಯ ಸೇವೆಹಾಗೂ ದೇಶಸೇವೆಯನ್ನು ಕೈಗೊಂಡಿದ್ದ ಮಹಾಮಹಿಮ ಪುರುಷರಾಗಿದ್ದರು. ಶ್ರೀಗಳುಕಾಯಕಯೋಗಿಗಳೂ ಆಗಿದ್ದು ಶ್ರೀಮಠದ ಜಮೀನನ್ನು ಅಭಿವೃದ್ಧಿಗೊಳಿಸಿ ಆದಾಯಮೂಲವನ್ನಾಗಿ ಮಾಡಿದ್ದರು.ಈಗಿನ ಶ್ರೀಗಳಾದ ಶ್ರೀ ಸಿದ್ದಲಿಂಗ ಶಿವಾಚಾರ್ಯ ಸ್ವಾಮಿಗಳು 1993ರ ಮಾರ್ಚ್18ರಲ್ಲಿ ಶ್ರೀಮಠದ ಅಧಿಕಾರ ವಹಿಸಿಕೊಂಡಿದ್ದು ಶ್ರೀಮಠವನ್ನು ಸರ್ವಾಂಗೀಣವಾಗಿಅಭಿವೃದ್ಧಿಗೊಳಿಸುವತ್ತ ಗಮನಹರಿಸಿದ್ದಾರೆ. ಶ್ರೀಗಳು ಸಂಸ್ಕøತ ಮತ್ತು ವೇದಾಭ್ಯಾಸವನ್ನುಮಾಡಿದವರಾಗಿದ್ದು ಭಕ್ತರಿಗೆ ಉಪದೇಶ ಮಾಡುತ್ತಾ ಭಕ್ತರನ್ನು ಸನ್ಮಾರ್ಗದಲ್ಲಿ ನಡೆಯುವಂತೆಮಾಡುವಲ್ಲಿ ಯಶಸ್ವಿಯಾಗಿದ್ದಾರೆ.
Swamiji
Swamiji Name :
ಶ್ರೀ ಷ.ಬ್ರ. ಸಿದ್ದಲಿಂಗ ಶಿವಾಚಾರ್ಯ ಸ್ವಾಮಿಗಳು
Date of Birth :
22-11-1958
Place :
ಮಂಗಳೂರು, ಯಲಬುರ್ಗಾ ತಾ||
Pattadikara :
18-3-1993
Photo :
Programs
ಚೈತ್ರ ಶುದ್ಧ ನವಮಿಗೆ ಲಿಂ|| ಶ್ರೀ ಷ.ಬ್ರ. ಷಡಕ್ಷರ ಶಿವಾಚಾರ್ಯ ಮಹಾಸ್ವಾಮಿಗಳ ಪುಣ್ಯಾರಾಧನೆ,
ವಿವಿಧ ಧಾರ್ಮಿಕ ಹಾಗೂ ಸಾಂಸ್ಕøತಿಕ ಕಾರ್ಯಕ್ರಮಗಳು.
ಕಾರ್ತೀಕ ಶುದ್ಧ ದಶಮಿಗೆ ವಾರ್ತಿ ಶ್ರೀ ರೇವಣಸಿದ್ದೇಶ್ವರ ಕಾರ್ತಿಕೋತ್ಸವ.
Photos
Full Address Kannada
ಶ್ರೀ ಅರಳೆಲೆ ಕಟ್ಟೀಮನಿ ಹಿರೇಮಠ
ಮಂಗಳೂರು - 583 230
ಯಲಬುರ್ಗಾ ತಾ||, ಕೊಪ್ಪಳ ಜಿ||