ಕರ್ತೃ – ಶ್ರೀ ಷ.ಬ್ರ. ರುದ್ರಮುನಿ ಶಿವಾಚಾರ್ಯರು ಊರ ಒಳಗೆ ಮಠ
ಶಿಗ್ಗಾಂವ ತಾಲ್ಲೂಕು ಬಂಕಾಪುರವೆಂಬ ಪ್ರಾಚೀನ ಪಟ್ಟಣದ ಮಧ್ಯಭಾಗದಲ್ಲಿಶ್ರೀ ರಂಭಾಪುರಿ ಪೀಠದ ಮೂಲಪುರುಷರಾದ ಶ್ರೀ ರೇವಣಸಿದ್ದ ಭಗವತ್ಪಾದರಿಂದಸ್ಥಾಪಿತಗೊಂಡಿರಬಹುದಾದ ಪ್ರಾಚೀನ ಕಾಲದ ಶ್ರೀ ಅರಳೆಲೆ ಹಿರೇಮಠವು ಅಸ್ತಿತ್ವದಲ್ಲಿದೆ.ಶ್ರೀ ರೇವಣಸಿದ್ದರು ಭಕ್ತರ ಆಶಯದಂತೆ ಶ್ರೀಮಠವನ್ನು ಸ್ಥಾಪಿಸಿ ಮಠಕ್ಕೆ ಶ್ರೀರುದ್ರಮುನಿ ಶಿವಾಚಾರ್ಯರನ್ನು ನೇಮಿಸಿ ಭಕ್ತರಿಗೆ ಆಶೀರ್ವಾದ ನೀಡಿ ಮುನ್ನಡೆದರುಎಂದು ಬಂಕಾಪುರದ ಶ್ರೀ ರುದ್ರಮುನೀಶ್ವರ ಪ್ರಕಾಶನವು ಹೊರತಂದಿರುವ “ಬೆಳಕಿನಕಿರಣ” ಎಂಬ ಪುಸ್ತಕದಲ್ಲಿ ಉಲ್ಲೇಖವಾಗಿದೆ. ಹಾಗೆಯೇ ಶ್ರೀಮಠವು ಕ್ರಿ.ಪೂ. 934ರಲ್ಲೇಸ್ಥಾಪನೆಯಾಯಿತೆಂದು ಸಹ ಉಲ್ಲೇಖವಿದೆ. ಇಲ್ಲಿಯವರೆಗೂ 99 ಸ್ವಾಮಿಗಳು ಅಧಿಕಾರಕ್ಕೆಬಂದು ಈಗಿನ ಶ್ರೀಗಳು 100ನೆಯವರೆಂದು ಹೇಳಲಾಗಿದೆ.ಶ್ರೀಮಠದ ಪರಂಪರೆ ಪ್ರಾಚೀನದ್ದೆಂದು ಉಲ್ಲೇಖವಿದೆಯಾದರೂ ಸೂಕ್ತ ಆಧಾರಗಳು ಲಭ್ಯವಿಲ್ಲ. ಶ್ರೀ ಚನ್ನಬಸವ ಶಿವಾಚಾರ್ಯ ನಂತರದ ಪರಂಪರೆಯ ಬಗ್ಗೆ ಮಾತ್ರಆಧಾರಗಳಿವೆ. ಶ್ರೀಮಠದ ಆವರಣದಲ್ಲಿ ಅರಳೆಲೆ (ಅಶ್ವತ್ಥ) ಮರವು ಇದ್ದುದರಿಂದ ಅಥವಾಈ ಮಠದ ವಟುವಿಗೆ ಶ್ರೀ ರೇವಣಸಿದ್ಧರು ಅರಳೆಲೆ ಮರದ ಕಟ್ಟಿಗೆಯಿಂದ ಮಾಡಿದದಂಡವನ್ನು ನೀಡಿದ್ದರಿಂದಲೋ ಶ್ರೀಮಠಕ್ಕೆ ಈ ಹೆಸರು ಬಂದಿರಬಹುದು.ಶ್ರೀಮಠದ ಹಿಂದಿನ ಗುರುಗಳಾದ ಶ್ರೀ ರುದ್ರಮುನಿ ಶಿವಾಚಾರ್ಯರು ತಮ್ಮಅನುಷ್ಠಾನ ಬಲದಿಂದ ಅನೇಕ ಪವಾಡಗಳನ್ನು ಮಾಡಿ ಈ ಭಾಗದ ಭಕ್ತರಿಗೆ ದೇವರಂತೆಇದ್ದರು ಎಂದು ಹಿರಿಯ ಭಕ್ತರು ನೆನಪಿಸಿಕೊಳ್ಳುತ್ತಾರೆ. ಸುಮಾರು 60 ವರ್ಷಗಳಸುಧೀರ್ಘ ಆಡಳಿತದಲ್ಲಿ ಶ್ರೀಗಳು ಮಠವನ್ನು ಆರ್ಥಿಕವಾಗಿ ಸ್ವಾವಲಂಬಿಯಾಗುವಂತೆಮಾಡಿದ್ದಾರೆ. ಹಾಗೆಯೇ ಶ್ರೀಮಠದ ಸರ್ವಾಂಗೀಣ ಅಭಿವೃದ್ಧಿಯನ್ನು ಸಾಧಿಸಿ ಈ ಭಾಗದಭಕ್ತರಲ್ಲಿ ಧಾರ್ಮಿಕ ಪ್ರಜ್ಞೆಯನ್ನು ಜಾಗೃತಗೊಳಿಸಿದ್ದಾರೆ.ಈಗಿನ ಶ್ರೀಗಳಾದ ಶ್ರೀ ರೇವಣಸಿದ್ದೇಶ್ವರ ಶಿವಾಚಾರ್ಯರು 1987ರ ಮೇ11ರಂದು ಶ್ರೀಮಠದ ಅಧಿಕಾರವಹಿಸಿಕೊಂಡು ಹಿರಿಯ ಶ್ರೀಗಳ ಹಾದಿಯಲ್ಲಿಯೇ ಮುನ್ನಡೆದಿದ್ದಾರೆ. ಶ್ರೀಗಳು ಹೆಚ್ಚು ಕ್ರಿಯಾಶೀಲರಾಗಿ ತಮ್ಮ ಕ್ರಿಯಾತ್ಮಕ ಚಟುವಟಿಕೆಗಳಿಂದ ಮಠದನವೀಕರಣ ಕಾರ್ಯಗಳೊಂದಿಗೆ ಅಭಿವೃದ್ಧಿಪಡಿಸಿದ್ದಾರೆ.
Swamiji
Swamiji Name :
ಶ್ರೀ ಷ.ಬ್ರ. ರೇವಣಸಿದÉ್ದೀಶ್ವರ ಶಿವಾಚಾರ್ಯ ಸ್ವಾಮಿಗಳು
Date of Birth :
11-11-1957
Place :
ಬಂಕಾಪುರ, ಶಿಗ್ಗಾಂವ ತಾ||
Pattadikara :
11-5-1987
Photo :
Programs
ಪ್ರತಿ ಅಮವಾಸ್ಯೆಗೆ ವಿಶೇಷ ಪೂಜೆ.
ಪುಷ್ಯ ಬಹುಳ ಏಕಾದಶಿಗೆ ಶ್ರೀ ಹಿರಿಯ ಗುರುಗಳ ಪುಣ್ಯಸ್ಮರಣೆ.
ಶ್ರಾವಣ ಮಾಸದಲ್ಲಿ ನಿತ್ಯ ವಿಶೇಷ ಪೂಜಾ ಕಾರ್ಯಕ್ರಮಗಳು.
ಕಾರ್ತೀಕದಲ್ಲಿ ಕಾರ್ತಿಕೋತ್ಸವ, ರುದ್ರಾಭಿಷೇಕ.
ಶ್ರೀಗಳ ಹುಟ್ಟುಹಬ್ಬದ ದಿನದಂದು ವಿಶೇಷ ಕಾರ್ಯಕ್ರಮಗಳು.