Shree Annadaneshwari Puravara Hirematha

Shree Annadaneshwari Puravara Hirematha Claimed

ಶ್ರೀ ಅನ್ನದಾನೇಶ್ವರಿ ಪುರವರ ಹಿರೇಮಠ

Average Reviews

Description

ಶ್ರೀ ಅನ್ನದಾನೇಶ್ವರಿ ಪುರವರ ಹಿರೇಮಠ

ಕರ್ತೃ – ಪೂಜ್ಯ ಶ್ರೀ ಅನ್ನದಾನೇಶ್ವರ ಶಿವಯೋಗಿ ಮಹಾಸ್ವಾಮಿಗಳು

ಬಸವನಬಾಗೇವಾಡಿ ತಾಲ್ಲೂಕು ಕೇಂದ್ರದಿಂದ ಸುಮಾರು 40ಕಿ.ಮೀ. ದೂರದಲ್ಲಿರುವ ಆಲಮಟ್ಟಿ ಜˉÁಶಯವು ನಾಡಿನ ಪ್ರಮುಖ ಜˉÁಶಯಗಳˉÉ್ಲೂಂದಾಗಿದ್ದು ನಿಸರ್ಗರಮಣೀಯ ಸ್ಥಳವಾಗಿದೆ. ಆದರೆ ಇಂತಹ ಜˉÁಶಯದಲ್ಲಿ ಸುಮಾರು 16ನೇ ಶತಮಾನದಲ್ಲಿ ಶ್ರೀ ಅನ್ನದಾನೇಶ್ವರಿ ಶಿವಯೋಗಿ ಮಹಾಸ್ವಾಮಿಗಳಿಂದ ಸ್ಥಾಪಿಸಲ್ಪಟ್ಟ ಶ್ರೀ ಪುರವರಹಿರೇಮಠ ಮೂಲಮಠವು ಮುಳುಗಡೆಯಾಗಿರುವುದು ಬೇಸರದ ಸಂಗತಿ. ಶ್ರೀಮಠವು ಶ್ರೀರಂಭಾಪುರಿ ಶಾಖಾಮಠವಾಗಿ ಪುತ್ರವರ್ಗದ ಪರಂಪರೆಯಲ್ಲಿ ಬೆಳೆದುಬಂದಿದೆ.1990ರ ಸುಮಾರಿಗೆ ಈಗಿರುವ ಅಣೆಕಟ್ಟೆ ಪ್ರದೇಶದ ಎತ್ತರ ಸ್ಥಳಕ್ಕೆ ಶ್ರೀಮಠವನ್ನುಸ್ಥಳಾಂತರಿಸಿ ಶ್ರೀಮಠದ ಪರಂಪರೆಯನ್ನು ಮುಂದುವರೆಸˉÁಗಿದೆ. ಕರ್ತೃಗುರುಗಳಾದ ಶ್ರೀಅನ್ನದಾನೇಶ್ವರ ಶಿವಯೋಗಿ ಸ್ವಾಮಿಗಳು ಮಹಾತಪಸ್ವಿಗಳಾಗಿದ್ದು ಭಕ್ತರನ್ನು ಸನ್ಮಾರ್ಗದಲ್ಲಿನಡೆಸುತ್ತಾ ಶ್ರೀಮಠವನ್ನು ಅಭಿವೃದ್ಧಿಗೊಳಿಸಿದ್ದಾರೆ. ಆದರೆ ಆ ನಂತರದ ಪರಂಪರೆಯ ಬಗ್ಗೆಮಾಹಿತಿಗಳ ಅಲಭ್ಯತೆ ಇದೆ. ಇದಕ್ಕೆ ಕಾರಣ ಮೂಲಮಠವು ಜˉÁಶಯದಲ್ಲಿ ಮುಳುಗಡೆಗೊಂಡಿರುವುದು.ಹಿಂದಿನ ಶ್ರೀಗಳಾದ ಶ್ರೀ ಮಹಾಂತ ಶಿವಾಚಾರ್ಯ ಸ್ವಾಮಿಗಳ ಬಗ್ಗೆ ಮಾತ್ರ ಕೆಲಮಾಹಿತಿಗಳು ದೊರಕುತ್ತದೆ. ಶ್ರೀಗಳು ಶಿವಪೂಜಾನಿಷ್ಠರಾಗಿದ್ದು, ಸದಾಕಾಲ ಭಕ್ತರ ಹಾಗೂಸಮಾಜದ ಉನ್ನತಿಗಾಗಿ ಶ್ರಮಿಸಿದ್ದಾರೆ. ಶ್ರೀಗಳ ಕಾˉÁವಧಿಯಲ್ಲಿಯೇ ಶ್ರೀಮಠದ ಸ್ಥಳಾಂತರಪ್ರಕ್ರಿಯೆ ನಡೆದಿದ್ದು, ಹೆಚ್ಚಿನ ಅಭಿವೃದ್ಧಿ ಕಂಡಿದೆ. ಶ್ರೀಗಳು ಶ್ರೀಮಠಕ್ಕೆ ಬೃಹತ್ ಕಟ್ಟಡಕಾರ್ಯ ಕೈಗೊಂಡು ಯಶಸ್ವಿಗೊಳಿಸುತ್ತಿರುವಾಗˉÉೀ 1992ರಲ್ಲಿ ಲಿಂಗೈಕ್ಯರಾಗಿದ್ದಾರೆ.ಈಗಿನ ಶ್ರೀಗಳಾದ ಶ್ರೀ ರುದ್ರಮುನಿ ದೇವರು ಶ್ರೀಮಠದ ಉತ್ತರಾಧಿಕಾರಿಗಳಾಗಿನೇಮಕಗೊಂಡು ಶ್ರೀಮಠವನ್ನು ಮುನ್ನಡೆಸುತ್ತಿದ್ದಾರೆ. ಶ್ರೀಗಳು ಹೊನ್ನಾಳಿ ಹಾಗೂಮೈಸೂರಿನಲ್ಲಿ ತಮ್ಮ ವಿದ್ಯಾಭ್ಯಾಸ ಪೂರ್ಣಗೊಳಿಸಿದ್ದು, ತಮ್ಮ ಪಾಂಡಿತ್ಯಪೂರ್ಣಉಪದೇಶಗಳಿಂದ, ಧಾರ್ಮಿಕ ಆಚರಣೆ ಹಾಗೂ ಶ್ರೀಮಠದ ಅಭಿವೃದ್ಧಿ ಕಾರ್ಯಗಳಿಂದಭಕ್ತರ ಪ್ರೀತ್ಯಾದರಗಳಿಗೆ ಪಾತ್ರರಾಗಿದ್ದಾರೆ. ಶ್ರೀಗಳು ಶ್ರೀಮಠವನ್ನು ಸರ್ವಾಂಗೀಣವಾಗಿಅಭಿವೃದ್ಧಿಗೊಳಿಸಿದ ನಂತರವಷ್ಟೇ ಶ್ರೀಮಠದ ಪಟ್ಟಾಧಿಕಾರ ವಹಿಸಿಕೊಳ್ಳಲಿದ್ದಾರೆ.

Swamiji

Swamiji Name :
ಪೂಜ್ಯ ಶ್ರೀ ರುದ್ರಮುನಿ ದೇವರು
Place :
ಆಲಮಟ್ಟಿ ಗ್ರಾಮ, ಬಸವನಬಾಗೇವಾಡಿ ತಾ||
Photo :

Programs

ಪ್ರತಿ ಅಮವಾಸ್ಯೆಗೆ ರುದ್ರಾಭಿಷೇಕ ಹಾಗೂ ಪ್ರಸಾದ.
ಕಾರ್ತಿಕ ಮಾಸದಲ್ಲಿ ದೀಪೋತ್ಸವ.
ದಸರರಾದಲ್ಲಿ ಬನ್ನಿ ಮುಡಿಯುವ ಕಾರ್ಯಕ್ರಮ.
ಆಗಿ ಹುಣ್ಣಿಮೆಗೆ ಶ್ರೀಮಠದ ರಥೋತ್ಸವ.

Photos

Full Address Kannada

ಶ್ರೀ ಅನ್ನದಾನೇಶ್ವರ ಪುರವರ ಹಿರೇಮಠ
ಆಲಮಟ್ಟಿ ಪುನರ್ವಸತಿ ಕೇಂದ್ರ - 586 201
ಬಸವನಬಾಗೇವಾಡಿ ತಾ||, ವಿಜಯಪುರ ಜಿ||

Map

Near by Places

ನಿಡಗುಂದ - 7 ಕಿ.ಮೀ.
ಬ.ಬಾಗೇವಾಡಿ - 40 ಕಿ.ಮೀ.
ವಿಜಯಪುರ - 60 ಕಿ.ಮೀ.

Statistic

0 Views
0 Rating
0 Favorite
0 Share
error: Content is protected !!