ಕಲಬುರಗಿ ಜಿಲೆ ್ಲಯ ಫಿರೋಜಾಬಾದ್ ಗ್ರಾಮದ ಮzs À್ಯಭಾಗದಲ್ಲಿಅಸ್ತಿತ್ತ್ವದಲ್ಲಿರುವ ಶ್ರೀ ಅನ್ನದಾನೇಶ್ವರ ವಿರಕ್ತ ಮಠವು ತನ್ನ ಧಾರ್ಮಿಕ, ಸಾಮಾಜಿಕಕಾರ್ಯಕ್ರಮಗಳ ಮೂಲಕ ಈ ಭಾಗದ ಜನರಲ್ಲಿ ಧಾರ್ಮಿಕ ಅರಿವನ್ನು ಮೂಡಿಸುತ್ತಿದೆ.ಪೂಜ್ಯ ಶ್ರೀ ಅನ್ನದಾನೇಶ್ವರ ಮಹಾಸ್ವಾಮಿಗಳು 18ನೇ ಶತಮಾನದಲ್ಲಿ ಬಾಳಿಬದುಕಿದಮಹಾತಪಸ್ವಿಗಳು. ಶ್ರೀಗಳು ಸದಾ ಸಂಚಾರದಲ್ಲಿರುತ್ತಾ ಅಲ್ಲಲ್ಲಿ ಅನುಷ್ಠಾನಗೊಂಡು ಆಕ್ಷೇತ್ರಗಳನ್ನೆಲ್ಲಾ ಜಾಗೃತಗೊಳಿಸುತ್ತಾ ಮುಂದುವರೆಯುತ್ತಿದ್ದರು. ಈ ರೀತಿಯಾಗಿಫಿರೋಜಾಬಾದ್ ಪ್ರಾಂತ್ಯಕ್ಕೆ ಆಗಮಿಸಿದ ಶ್ರೀಗಳು ಇಲ್ಲಿ ನೆಲೆನಿಂತು ಮಠವನ್ನು ಸ್ಥಾಪಿಸಿದ್ದುಸುತ್ತಮುತ್ತಲಿನ ಪ್ರಾಂತ್ಯಗಳಲ್ಲೆಲ್ಲಾ ಪ್ರಸಿದ್ದಿಗೊಂಡಿದ್ದರು.ಪೂಜ್ಯ ಶ್ರೀ ಅನ್ನದಾನೇಶ್ವರ ಮಹಾಸ್ವಾಮಿಗಳು ಅನುಷ್ಠಾನಗೊಂಡು ಮಠಸ್ಥಾಪಿಸಿರುವದರಿಂದ ಶ್ರೀಮಠಕ್ಕೆ ಶ್ರೀ ಅನ್ನದಾನೇಶ್ವರ ವಿರಕ್ತ ಮಠವೆಂಬ ಹೆಸರೇರೂಡಿಗತವಾಗಿ ಮುಂದುವರೆದುಕೊಂಡು ಬಂದಿದೆ. 18ನೇ ಶತಮಾನದಲ್ಲಿಯೇಪ್ರಾರಂಭಗೊಂಡಿರುವ ಶ್ರೀಮಠದ ಪರಂಪರೆಯು ಅನೇಕ ಗುರುಗಳ ಮುಖೇನಮುಂದುವರೆದುಕೊಂಡು ಬಂದಿರುವುದಾದರೂ ನಿಖರ ದಾಖಲೆಗಳ ಕೊರತೆಯಿಂದಾಗಿಪರಂಪರೆಯನ್ನು ಸ್ಪಷ್ಟವಾಗಿ ದಾಖಲಿಸಲು ಸಾಧ್ಯವಾಗುವುದಿಲ್ಲ.ಪ್ರಸ್ತುತ ಶ್ರೀ.ಮ.ನಿ.ಪ್ರ. ಗುರುಬಸವ ಮಹಾಸ್ವಾಮಿಗಳು ಶ್ರೀಮಠದ ಅಧಿಕಾರವನ್ನು2000ದಲ್ಲಿ ವಹಿಸಿಕೊಂಡು ಸಮರ್ಥವಾಗಿ ಮುನ್ನಡೆಸಿಕೊಂಡು ಬರುತ್ತಿದ್ದಾರೆ. ಶ್ರೀಗಳುಜೇವರ್ಗಿ ತಾಲ್ಲೂಕಿನ ಸೊನ್ನ ಗ್ರಾಮದಲ್ಲಿ ಜನಿಸಿದವರಾಗಿದ್ದು ಹುಬ್ಬಳ್ಳಿ ಮೂರು ಸಾವಿರಮಠ ಮತ್ತು ಶಿವಯೋಗಮಂದಿರಗಳಲ್ಲಿ ಉನ್ನತ ವ್ಯಾಸಂಗ ಹಾಗೂ ಸಂಸ್ಕøತಅಧ್ಯಯನವನ್ನು ಪೂರ್ಣಗೊಳಿಸಿದ್ದಾರೆ. ಶ್ರೀಗಳು ರಾಯಚೂರು ಜಿಲ್ಲೆ ಲಿಂಗಸಗೂರುತಾಲ್ಲೂಕಿನ ಸಂತೆಕಲ್ಲೂರು ಗ್ರಾಮದ ವಿರಕ್ತಮಠದ ಪೀಠಾಧ್ಯಕ್ಷರೂ ಆಗಿದ್ದು ವಿಶೇಷಸಂದರ್ಭಗಳಲ್ಲಿ ಫಿರೋಜಾಬಾದ್ ವಿರಕ್ತಮಠಕ್ಕೆ ಆಗಮಿಸಿ ಧಾರ್ಮಿಕ ಕಾರ್ಯಕ್ರಮಗಳನ್ನುನಡೆಸಿಕೊಡುತ್ತಾರೆ. ಹಾಗೂ ಶ್ರೀಮಠದ ಶ್ರೀ ಅನ್ನದಾನೇಶ್ವರ ಜಾತ್ರೆಯನ್ನು ಆಗಿ ಹುಣ್ಣಿಮೆಗೆಎರಡು ದಿನ ಮುಂಚಿತವಾಗಿ ನಡೆಸಿಕೊಂಡು ಬರಲಾಗುತ್ತಿದೆ.
Swamiji
Swamiji Name :
ಶ್ರೀ.ಮ.ನಿ.ಪ್ರ. ಗುರುಬಸವ ಮಹಾಸ್ವಾಮಿಗಳು
Place :
ಸೊನ್ನ, ಜೇವರ್ಗಿ ತಾ||
Pattadikara :
2000
Photo :
Programs
ಆಗಿ ಹುಣ್ಣಿಮೆಗೆ ಎರಡು ದಿನ ಮುಂಚಿತವಾಗಿ ಶ್ರೀ ಅನ್ನದಾನೇಶ್ವರ ಜಾತ್ರೆ, ವಿವಿಧ ಧಾರ್ಮಿಕ ಸಾಂಸ್ಕøತಿಕ ಕಾರ್ಯಕ್ರಮಗಳು
Institutions
ಕಿರಿಯ / ಹಿರಿಯ ಪ್ರಾಥಮಿಕ / ಪ್ರೌಢಶಾಲೆ
Photos
Full Address Kannada
ಶ್ರೀ ಅನ್ನದಾನೇಶ್ವರ ವಿರಕ್ತ ಮಠ
ಫಿರೋಜಾಬಾದ್ - 585 308
ಕಲಬುರಗಿ ತಾ||, ಜಿಲ್ಲೆ