Shree Akkamahadevi Ashrama

Shree Akkamahadevi Ashrama Claimed

ಶ್ರೀ ಅಕ್ಕಮಹಾದೇವಿ ಆಶ್ರಮ

Average Reviews

Description

ಶ್ರೀ ಅಕ್ಕಮಹಾದೇವಿ ಆಶ್ರಮ

ಪೂಜ್ಯ ಶ್ರೀ ಶರಣಮ್ಮ ತಾಯಿಯವರು

ದೊಡ್ಡಸಗರ ಗ್ರಾಮವು ಪುರಾತನ ಕಾಲದಿಂದಲೂ ವೀರಶೈವ ಧರ್ಮವನ್ನುಪೋಷಿಸುತ್ತಾ ಬಂದಿದೆ. ಇದಕ್ಕೆ ಸಾಕ್ಷಿ ಎಂಬಂತೆ ಈ ಗ್ರಾಮದಲ್ಲಿ ಹಲವಾರು ವೀರಶೈವಮಠಗಳು ಧಾರ್ಮಿಕ ಆಚರಣೆಗಳನ್ನು ನಡೆಸುತ್ತಾ ಭಕ್ತರನ್ನು ಸನ್ಮಾರ್ಗದಲ್ಲಿ ಮುನ್ನಡೆಸಿಕೊಂಡು ಬರುತ್ತಿವೆ. ಇತ್ತೀಚೆಗೆ ಆ ಪರಂಪರೆಗೆ ಹೊಸದಾಗಿ ಸೇರ್ಪಡೆಯಾಗಿದ್ದು ಶ್ರೀಅಕ್ಕಮಹಾದೇವಿ ಆಶ್ರಮ ಅಥವಾ ಶ್ರೀ ಆನಂದಾಶ್ರಮ.12ನೇ ಶತಮಾನದ ಶರಣೆ ಅಕ್ಕಮಹಾದೇವಿಯವರ ತತ್ವಾದರ್ಶಗಳಿಗೆ ಶರಣಾಗಿಅಕ್ಕನವರ ತತ್ವಗಳನ್ನು, ಆದರ್ಶಗಳನ್ನು ಜಗತ್ತಿಗೆ ಪ್ರಚುರಪಡಿಸಲೋಸುಗ 1989ರಲ್ಲಿಸ್ಥಾಪಿತಗೊಂಡ ಮಠವೇ ಶ್ರೀ ಅಕ್ಕಮಾದೇವಿ ಆಶ್ರಮ. ಪರಮಪೂಜ್ಯ ಮಾತೆ ಶರಣಮ್ಮತಾಯಿಯವರು ಜೀವನದಲ್ಲಿ ವೈರಾಗ್ಯವನ್ನು ತಾಳಿ ಸಂಸಾರವನ್ನು ತೊರೆದು, ಶಿವದೀಕ್ಷೆಯನ್ನು ಪಡೆದು ಸಂಚಾರಕ್ಕೆ ಹೊರಟರು. ಹೀಗೆ ಸಂಚಾರದಲ್ಲಿದ್ದ ಪೂಜ್ಯ ಶರಣಮ್ಮತಾಯಿಯವರು ದೊಡ್ಡಸಗರ ಗ್ರಾಮಕ್ಕೆ ಆಗಮಿಸಿ ಆಶ್ರಮವನ್ನು ಸ್ಥಾಪಿಸಿದ್ದಾರೆ. ಭಕ್ತರಿಗೆಬಸವಾದಿ ಶರಣರ ತತ್ವಗಳನ್ನು ಪ್ರಚುರಗೊಳಿಸುತ್ತಾ, ಅಕ್ಕಮಹಾದೇವಿಯವರ ಆದರ್ಶಗಳನ್ನು ತಿಳಿಯಪಡಿಸುತ್ತಾ ಧರ್ಮಪ್ರಸಾರ ಕಾರ್ಯದಲ್ಲಿ ತಮ್ಮನ್ನು ತಾವು ಪೂರ್ಣವಾಗಿತೊಡಗಿಸಿಕೊಂಡಿದ್ದಾರೆ.ಪೂಜ್ಯ ಶರಣಮ್ಮ ತಾಯಿಯವರು ತಮ್ಮ ಕಾರ್ಯಕ್ರಮಗಳ ಮೂಲಕ ಭಕ್ತರನ್ನುಸಂಪಾದಿಸಿಕೊಂಡು ಅವರಿಗೆ ಸೂಕ್ತ ಮಾರ್ಗದರ್ಶನ ನೀಡುತ್ತಾ ಬಂದಿದ್ದು, ಭಕ್ತರಸಹಕಾರದೊಂದಿಗೆ ಬೃಹದಾಕಾರದ ಕಲ್ಲಿನ ಕಟ್ಟಡವನ್ನು ನಿರ್ಮಿಸಿರುವುದು ಗಮನಾರ್ಹ.ಶ್ರೀಮಠದಲ್ಲಿ ಪ್ರತಿನಿತ್ಯ ಧಾರ್ಮಿಕ ಆಚರಣೆಗಳೊಂದಿಗೆ ಮಹಾಶಿವರಾತ್ರಿ, ಶ್ರಾವಣ ಮಾಸಹಾಗೂ ಮಹಾನವಮಿಗಳಲ್ಲಿ ವಿಶೇಷ ಧಾರ್ಮಿಕ ಆಚರಣೆಗಳನ್ನು ನಡೆಸಲಾಗುತ್ತದೆ.

Swamiji

Swamiji Name :
ಪೂಜ್ಯ ಶ್ರೀ ಶರಣಮ್ಮ ತಾಯಿಯವರು
Date of Birth :
1957
Place :
ಗಬಸಾವಳಗಿ, ಸಿಂಧಗಿ ತಾ||
Photo :

Programs

ಪ್ರರತಿ ಅಮವಾಸ್ಯೆ ಹಾಗೂ ಹುಣ್ಣಿಮೆಗಳಲ್ಲಿ ವಿಶೇಷ ಪೂಜೆ.
ಶ್ರಾವಣ ಮಾಸ, ಮಹಾ ಶಿವರಾತ್ರಿ ಹಾಗೂ ಮಹಾ ನವಮಿಗಳಲ್ಲಿ
ವಿಶೇಷ ಧಾರ್ಮಿಕ ಕಾರ್ಯಕ್ರಮಗಳು.

Photos

Full Address Kannada

ಶ್ರೀ ಅಕ್ಕಮಹಾದೇವಿ ಆಶ್ರಮ
ದೊಡ್ಡಸಗರ - 587 323
ಶಹಾಪುರ ತಾ||, ಯಾದಗಿರಿ ಜಿ||

Map

Near by Places

ರಸ್ತಾಪುರ ಕ್ರಾಸ್ - 8 ಕಿ.ಮೀ.
ಶಹಾಪುರ - 16 ಕಿ.ಮೀ.
ಯಾದಗಿರಿ - 42 ಕಿ.ಮೀ.

Statistic

7 Views
0 Rating
0 Favorite
0 Share
error: Content is protected !!