ಕೊಳ್ಳೇಗಾಲ ತಾಲ್ಲೂಕು ಕೇಂದ್ರದಿಂದ ಕೇವಲ 05 ಕಿ.ಮೀ. ದೂರದಲ್ಲಿರುವಹೊಂಡರಬಾಳು ಗ್ರಾಮದಲ್ಲಿ ಅಸ್ತಿತ್ತ್ವದಲ್ಲಿರುವ ಶ್ರೀ ಆದಿಗುರು ಶಂಕಿನಸ್ವಾಮಿ ಪಟ್ಟದಮಠವು ತನ್ನ ಧಾರ್ಮಿಕ ಆಚರಣೆ ಮುಖೇನ ಈ ಭಾಗದಲ್ಲಿ ಧಾರ್ಮಿಕ ವಾತಾವರಣವನ್ನುನೆಲೆಗೊಳಿಸಿದೆ. ಶ್ರೀಮದ್ ಉಜ್ಜಯಿನಿ ಪೀಠದ ಶಾಖಾಮಠವಾಗಿ ಶಿಷ್ಯವರ್ಗದಪರಂಪರೆಯಲ್ಲಿ ಬೆಳೆದು ಬಂದಿರುವ ಶ್ರೀಮಠದ ಕರ್ತೃ ಗುರುಗಳೆಂದು ಶ್ರೀ ಆದಿಗುರುಶಂಕಿನ ಮಹಾಸ್ವಾಮಿಗಳನ್ನು ಗುರುತಿಸಲಾಗಿದೆ. ಶ್ರೀಮಠವು ಪುರಾತನ ಮಠವಾಗಿದ್ದುಸುಮಾರು 13ನೇ ಶತಮಾನದ ನಂತರದಲ್ಲಿ ಸ್ಥಾಪಿಗೊಂಡಿದೆಯೆಂದು ಹೇಳಲಾಗುತ್ತದೆ.ಇದಕ್ಕೆ ಪೂರಕವಾಗಿ ಮಠದಲ್ಲಿ ಪುರಾತನ ತಾಳೆಗರಿ, ತಾಮ್ರದ ಚಾಪೋಡು (ತಟ್ಟೆ) ಹಾಗೂಬೆಳ್ಳಿಯ ಮಂಟಪವನ್ನು ಕಾಣಬಹುದಾಗಿದೆ.ಕರ್ತೃಗುರುಗಳು ಸೇರಿದಂತೆ ಈವರೆಗೂ ಶ್ರೀಮಠದ ಪರಂಪರೆಯಲ್ಲಿ 16 ಜನಶ್ರೀಗಳು ಅಧಿಕಾರ ನಡೆಸಿದ್ದಾರೆ ಎಂದು ಹೇಳಲಾಗಿದೆ. ಶ್ರೀಮಠದಲ್ಲಿ ಒಂದು ಗದ್ದುಗೆ, ಮಠದಆವರಣದಲ್ಲಿ ಎರಡು ಹಾಗೂ ಇನ್ನೊಂದು ಕಟ್ಟಡದಲ್ಲಿ 12 ಗದ್ದುಗೆಗಳನ್ನುಕಾಣಬಹುದಾಗಿದ್ದು ನಿತ್ಯ ಪೂಜೆಗೆ ಒಳಪಟ್ಟಿವೆ. ಶ್ರೀ ಮಠದ ಪರಂಪರೆಯಲ್ಲಿ ಬಂದಿರುವಹಿಂದಿನ ಶ್ರೀಗಳಾದ ಶ್ರೀ ಷ.ಬ್ರ. ಶಂಕರ ಶಿವಾಚಾರ್ಯ ಮಹಾಸ್ವಾಮಿಗಳು 1971ರಲ್ಲಿಲಿಂಗೈಕ್ಯರಾಗಿದ್ದು ಇವರ ನಂತರ ಶ್ರೀಮಠವು ಆರು ವರ್ಷಗಳ ಕಾಲ ಖಾಲಿ ಉಳಿದಿದ್ದು ಆಗಶ್ರೀಮಠವು ಚಿಕ್ಕಮಠವಾಗಿತ್ತು.ಈಗಿನ ಶ್ರೀಗಳಾದ ಶ್ರೀ ಷ.ಬ್ರ. ವಿದ್ವಾನ್ ನೀಲಕಂಠ ಶಿವಾಚಾರ್ಯಮಹಾಸ್ವಾಮಿಗಳು 1977ರ ಜೂನ್ 17ರಂದು ಶ್ರೀಮಠದ ಪಟ್ಟಕ್ಕೆ ಬಂದಿದ್ದು ಇವರು ಬಂದನಂತರ ಶ್ರೀಮಠವನ್ನು ಅಮೂಲಾಗ್ರವಾಗಿ ಅಭಿವೃದ್ದಿಪಡಿಸಿದ್ದಾರೆ. ಸಂಸ್ಕøತದಲ್ಲಿ ಸ್ನಾತಕಪದವೀದರರಾಗಿರುವ ಶ್ರೀಗಳು ಜ್ಯೋತಿಷ್ಯ, ವೇದ, ಆಗಮ ಶಾಸ್ತ್ರಗಳ ಬಗ್ಗೆ ಆಳವಾದಅರಿವನ್ನು ಹೊಂದಿದ್ದಾರೆ. 1987ರಿಂದ ಸಾಲೂರು ಮಠದ ಸಂಸ್ಥೆಯಲ್ಲಿ ಸಂಸ್ಕøತಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿರುವ ಶ್ರೀಗಳು ಸಾವಿರಾರು ವಿದ್ಯಾರ್ಥಿಗಳಿಗೆ ತಮ್ಮ ಜ್ಞಾನವನ್ನುದಾರೆ ಎರೆದಿದ್ದಾರೆ. ಶ್ರೀಗಳು ಶ್ರೀಮಠದ ಕಟ್ಟಡವನ್ನು ಜೀರ್ಣೋದ್ಧಾರಗೊಳಿಸಿದ್ದು2006ರಲ್ಲಿ ಶ್ರೀಮಠಕ್ಕೆ ನೂತನವಾಗಿ ಕಟ್ಟಡವನ್ನು ನಿರ್ಮಿಸಿದ್ದಾರೆ. ಹಾಗೆಯೇ ಪುರಾತನಗದ್ದುಗೆಗಳನ್ನು ನವೀಕರಿಸಿರುವ ಶ್ರೀಗಳು ಇತ್ತೀಚೆಗೆ ಕಲ್ಯಾಣ ಮಂಟಪದ ನಿರ್ಮಾಣಕಾರ್ಯದಲ್ಲಿ ತೊಡಗಿಕೊಂಡಿದ್ದಾರೆ.
Swamiji
Swamiji Name :
ಶ್ರೀ ಷ.ಬ್ರ. ವಿದ್ವಾನ್ ನೀಲಕಂಠ ಶಿವಾಚಾರ್ಯ ಮಹಾಸ್ವಾಮಿಗಳು
Date of Birth :
10-12-1951
Place :
ಆಲಹಳ್ಳಿ, ಕೊಳ್ಳೇಗಾಲ ತಾ||
Pattadikara :
17-06-1977
Photo :
Programs
ಪ್ರತಿ ಹುಣ್ಣಿಮೆಗೆ ವಿಶೇಷ ಪೂಜೆ
ಶ್ರೀ ಸಿದ್ದೇಶ್ವರ ಜಾತ್ರೆ
ಚೈತ್ರಮಾಸದಲ್ಲಿ ಲಿಂ|| ಶ್ರೀ ಷ.ಬ್ರ. ಪ್ರಸನ್ನ ಮಲ್ಲಿಕಾರ್ಜುನ
ಮಹಾಸ್ವಾಮಿಗಳ ಪುಣ್ಯಾರಾಧ£
Photos
Full Address Kannada
ಶ್ರೀ ಆದಿಗುರು ಶಂಕಿನ ಸ್ವಾಮಿ ಪಟ್ಟದ ಮಠ
ಹೊಂಡರಬಾಳು, ಮಧುವನಹಳ್ಳಿ ಪೋ - 571 801
ಕೊಳ್ಳೇಗಾಲ ತಾ||, ಚಾಮರಾಜನಗರ ಜಿಲ್ಲೆ