Shree Adiguru Bittamundeshwara Pattada Matha

Shree Adiguru Bittamundeshwara Pattada Matha Claimed

ಶ್ರೀ ಆದಿಗುರು ಬಿಟ್ಟಮಂಡೇಶ್ವರಸ್ವಾಮಿ ಪಟ್ಟದ ಮಠ

Average Reviews

Description

ಶ್ರೀ ಆದಿಗುರು ಬಿಟ್ಟಮಂಡೇಶ್ವರಸ್ವಾಮಿ ಪಟ್ಟದ ಮಠ

ಶ್ರೀ ಷ.ಬ್ರ. ಬಾಲಷಡಕ್ಷರಿ ಸ್ವಾಮಿಗಳು

ಚಾಮರಾಜನಗರ ಜಿಲ್ಲೆ ಕೊಳ್ಳೇಗಾಲ ತಾಲ್ಲೂಕಿನ ಚಿಕ್ಕಿಂದವಾಡಿ ಗ್ರಾಮವುತಾಲ್ಲೂಕು ಕೇಂದ್ರದಿಂದ 12 ಕಿ.ಮೀ. ದೂರದಲ್ಲಿದ್ದು ಈ ಗ್ರಾಮದಲ್ಲಿ ಅಸ್ತಿತ್ತ್ವದಲ್ಲಿರುವ ಶ್ರೀಆದಿಗುರು ಬಿಟ್ಟಮಂಡೇಶ್ವರ ಸ್ವಾಮಿ ಪಟ್ಟದ ಮಠವು ತನ್ನ ಧಾರ್ಮಿಕ ಆಚರಣೆಗಳ ಮೂಲಕಈ ಭಾಗದ ಜನರನ್ನು ಧರ್ಮಮಾರ್ಗದಲ್ಲಿ ಮುನ್ನಡೆಯುವಂತೆ ಪ್ರೇರೇಪಿಸುತ್ತಿದೆ.ಶ್ರೀಮಠದ ಕರ್ತೃ ಗುರುಗಳ ಬಗ್ಗೆಯಾಗಲೀ ಇತಿಹಾಸದ ಬಗ್ಗೆಯಾಗಲೀ ಸ್ಪಷ್ಟವಾದಮಾಹಿತಿಗಳು ದೊರೆಯುವುದಿಲ್ಲ.ಶ್ರೀಮಠದ ಮೂಲ ಕರ್ತೃಗಳು ಉತ್ತರದ ಕಡೆಯಿಂದ ಇಲ್ಲಿಗೆ ಸಂಚಾರದಲ್ಲಿಬಂದು ಅನುಷ್ಠಾನದಲ್ಲಿದ್ದು ನಂತರ ಮಠವನ್ನು ಸ್ಥಾಪನೆ ಮಾಡಿದರೆಂದು ತಿಳಿದು ಬರುತ್ತದೆ.ಆದರೆ ಇವರ ಕಾಲಮಾನದ ಬಗ್ಗೆ ಸ್ಪಷ್ಟತೆಯಿಲ್ಲ. ಶ್ರೀಮಠದ ಎರಡನೇ ಶ್ರೀಗಳೆಂದು ಶ್ರೀಷ.ಬ್ರ. ಬಸಪ್ಪ ಸ್ವಾಮಿಗಳನ್ನು ಗುರುತಿಸಲಾಗಿದ್ದು ಇವರ ಕಾಲಮಾನ 1912 ರಿಂದ 1945ಎಂದು ಉಲ್ಲೇಖವಿದೆ. ಇವರೇ ಮೂರನೇ ಗುರುಗಳಾದ ಶ್ರೀ ಷ.ಬ್ರ. ವಿದ್ವಾನ್ ಗಂಗಾಧರಮಹಾಸ್ವಾಮಿಗಳಿಗೆ ಶ್ರೀಮಠದ ಅಧಿಕಾರವನ್ನು ಹಸ್ತಾಂತರಿಸಿದ್ದಾರೆ.ಶ್ರೀ ವಿದ್ವಾನ್ ಗಂಗಾಧರ ಸ್ವಾಮಿಗಳು ಸಿದ್ದಗಂಗೆ ಮತ್ತು ಮೈಸೂರಿನ ಸಂಸ್ಕøತಮಹಾರಾಜ ಪಾಠಶಾಲೆಯಲ್ಲಿ ಸಂಸ್ಕøತ, ಜ್ಯೋತಿಷ್ಯದಲ್ಲಿ ಪರಿಣಿತ ಪಡೆದು ಆಪಾಠಶಾಲೆಯಲ್ಲಿಯೇ ಉಪನ್ಯಾಸಕರಾದರು. ಈ ರೀತಿಯಾಗಿ ಆಳವಾದ ಅರಿವನ್ನುಹೊಂದಿದ್ದ ಶ್ರೀಗಳು ತಮ್ಮ ಅನುಭವವನ್ನು ದಾರೆಯೆರೆದು ಅಸಂಖ್ಯಾತ ಭಕ್ತರನ್ನುಸಂಪಾದಿಸಿದ್ದರು. ಶ್ರೀಗಳು ಶ್ರೀಮಠದ ಅಧಿಕಾರ ವಹಿಸಿಕೊಂಡ ನಂತರ ಶ್ರೀಮಠವುಅಮೂಲಾಗ್ರ ಬದಲಾವಣೆ ಕಂಡು ಪ್ರಗತಿ ಪಥದತ್ತ ಮುನ್ನಡೆಯಿತು. ಇಂತಹಮಹಾಗುರುಗಳು 1997ರ ಆಗಸ್ಟ್ 16ರಲ್ಲಿ ಲಿಂಗೈಕ್ಯರಾದರು.ಈಗಿನ ಶ್ರೀಗಳಾದ ಶ್ರೀ ಷ.ಬ್ರ. ಬಾಲ ಷಡಕ್ಷರಿ ಸ್ವಾಮಿಗಳು 1997ರ ಸೆಪ್ಟಂಬರ್ 04ರಂದು ಶ್ರೀಮಠದ ಪಟ್ಟಕ್ಕೆ ಬಂದಿದ್ದು ಗುರುಗಳು ಹಾಕಿಕೊಟ್ಟ ಹಾದಿಯಲ್ಲಿ ಶ್ರೀಮಠವನ್ನುಸಮರ್ಥವಾಗಿ ಮುನ್ನಡೆಸಿಕೊಂಡು ಬರುತ್ತಿದ್ದಾರೆ. ಶ್ರೀಮಠದ ಧಾರ್ಮಿಕ ಆಚರಣೆಗಳನ್ನುಚುರುಕುಗೊಳಿಸಿರುವ ಶ್ರೀಗಳು ಶ್ರಾವಣ ಮಾಸದಲ್ಲಿ ಲಿಂ|| ಶ್ರೀ ಷ.ಬ್ರ. ಗಂಗಾಧರಮಹಾಸ್ವಾಮಿಗಳ ಪುಣ್ಯಾರಾಧನೆಯನ್ನು ನಡೆಸುತ್ತಿದ್ದಾರೆ.

Swamiji

Swamiji Name :
ಶ್ರೀ ಷ.ಬ್ರ. ಬಾಲಷಡಕ್ಷರಿ ಸ್ವಾಮಿಗಳು
Date of Birth :
07-02-1987
Place :
ಚಿಕ್ಕಿಂದವಾಡಿ, ಕೊಳ್ಳೇಗಾಲ ತಾ||
Pattadikara :
04-09-1997
Photo :

Programs

ಪ್ರತಿ ಅಮವಾಸ್ಯೆ, ಹುಣ್ಣಿಮೆಗಳಲ್ಲಿ ವಿಶೇಷ ಪೂಜೆ
ಶ್ರಾವಣ ಮಾಸದಲ್ಲಿ ಲಿಂ|| ಶ್ರೀ ಷ.ಬ್ರ. ಗಂಗಾಧರ
ಮಹಾಸ್ವಾಮಿಗಳ ಪುಣ್ಯಾರಾಧ£

Photos

Full Address Kannada

ಶ್ರೀ ಆದಿಗುರು ಬಿಟ್ಟಮಂಡೇಶ್ವರ ಸ್ವಾಮಿ ಪಟ್ಟದ ಮಠ
ಚಿಕ್ಕಿಂದವಾಡಿ, ಪಾಳ್ಯ ಪೋ - 571 440
ಕೊಳ್ಳೇಗಾಲ ತಾ||, ಚಾಮರಾಜನಗರ ಜಿಲ್ಲೆ

Map

Near by Places

ಚಿಕ್ಕಿಂದವಾಡಿ ಗೇಟ್ - 2
ಕಿ.ಮೀ. ಕೊಳ್ಳೇಗಾಲ - 12 ಕಿ.ಮೀ.
ಚಾಮರಾಜನಗರ - 45 ಕಿ.ಮೀ.

Statistic

11 Views
0 Rating
0 Favorite
0 Share
error: Content is protected !!