Shree Adaviswami Matha

Shree Adaviswami Matha Claimed

ಶ್ರೀ ಅಡವಿಸ್ವಾಮಿ ಮಠ

Average Reviews

Description

ಶ್ರೀ ಅಡವಿಸ್ವಾಮಿ ಮಠ

ಕರ್ತೃ – ಶ್ರೀ ಮ.ನಿ.ಪ್ರ. ಅಡವಿ ಮಹಾಸ್ವಾಮಿಗಳು

ಹಾವೇರಿ ಜಿಲ್ಲಾ ಸವಣೂರು ಪಟ್ಟಣದ ಮಧ್ಯಭಾಗದಲ್ಲಿ ಶ್ರೀ ಅಡವಿಸ್ವಾಮಿಗಳಿಂದ ಸ್ಥಾಪಿತಗೊಂಡಿರುವ ಪುರಾತನವಾದ ಪರಂಪರೆಯ ಶ್ರೀ ಅಡವಿಸ್ವಾಮಿ ಮಠವುಅಸ್ತಿತ್ವದಲ್ಲಿದ್ದು ಪ್ರಸ್ತುತ ಶ್ರೀಗಳು 10ನೆಯವರಾಗಿದ್ದಾರೆ. ಹಾಗೆಯೇ ಶ್ರೀ ಮಠವು ಸವಣೂರುಭಾಗದ ಪ್ರಮುಖ ಮಠವಾಗಿದ್ದು ಈ ಭಾಗದ ಜನರಲ್ಲಿ ಧಾರ್ಮಿಕ ಪ್ರಜ್ಞೆಯನ್ನು ಬೆಳೆಸುವಲ್ಲಿಯಶಸ್ವಿಯಾಗಿದೆ.ಕರ್ತೃಗುರುಗಳಾದ ನಂತರದಲ್ಲಿ ಬಂದ ಎಲ್ಲಾ ಗುರುಗಳು ಧರ್ಮನಿಷ್ಠರಾಗಿ ತಮ್ಮತಮ್ಮ ಕಾಲಾವಧಿಯಲ್ಲಿ ಮಠವನ್ನು ಅಭಿವೃದ್ಧಿಗೊಳಿಸುತ್ತಾ, ಧಾರ್ಮಿಕ ಆಚರಣೆಗಳನ್ನುನಡೆಸುತ್ತಾ ಮಠಕ್ಕೆ ಭಕ್ತರನ್ನು ಸೆಳೆದು ಅವರಿಗೆ ಸನ್ಮಾರ್ಗವನ್ನು ತೋರಿದ್ದಾರೆ. ಹಾಗೆಯೇಶ್ರೀಮಠದ ಗುರುಗಳು ಲೋಕಸಂಚಾರಿಗಳಾಗಿದ್ದು ವೀರಶೈವ ಧರ್ಮದ ಉಪಯುಕ್ತತೆಯನ್ನು ನಾಡಿನಾದ್ಯಂತ ಪಸರಿಸಿದ್ದಾರೆ.ಹಿಂದಿನ ಶ್ರೀಗಳಾದ ನಾಲ್ಕನೆಯ ಶ್ರೀ ಅಡವಿಸ್ವಾಮಿಗಳು ತಪೋನಿಷ್ಠರಾಗಿದ್ದುಜನರಿಗೆ ಉತ್ತಮ ಮಾರ್ಗದರ್ಶನ ನೀಡಿದ್ದಾರೆ. ಶ್ರೀಗಳು ಶಿಥಿüಲಗೊಂಡಿದ್ದ ಮಠದಕಟ್ಟಡವನ್ನು ತೆಗೆಸಿ ನೂತನವಾಗಿ ನಿರ್ಮಿಸಿದ್ದು, ತಮ್ಮ ಜೀವಿತಾವಧಿಯಲ್ಲಿ ಶ್ರೀಮಠದಏಳಿಗೆಗೆ ಕಾರಣೀಭೂತರಾಗಿ ಜನಮಾನಸದಲ್ಲಿ ನೆಲೆನಿಂತಿದ್ದಾರೆ ಎಂದು ಹೇಳಲಾಗುತ್ತದೆ.ಈಗಿನ ಶ್ರೀಗಳಾದ ಶ್ರೀ ಕುಮಾರ ಸ್ವಾಮಿಗಳು 1975ರ ಫೆಬ್ರವರಿ 23ರಂದುಶ್ರೀಮಠದ ಅಧಿಕಾರವನ್ನು ಹೊಂದಿ ಮಠವನ್ನು ಮುನ್ನಡೆಸಿದ್ದಾರೆ. ಶ್ರೀಗಳು ಅಧಿಕಾರವಹಿಸಿಕೊಂಡ ನಂತರ ಹಿರಿಯ ಶ್ರೀಗಳ ಹಾದಿಯಲ್ಲಿಯೇ ಭಕ್ತರನ್ನು ಮಠಕ್ಕೆ ಸೆಳೆದು ಅವರಸಹಕಾರದೊಂದಿಗೆ ಮಠವನ್ನು ಉನ್ನತಿಯತ್ತ ಮುನ್ನಡೆಸಿದ್ದಾರೆ.ಶ್ರೀಮಠದ ಗದ್ದುಗೆಗಳಿಗೆ ಪ್ರತಿನಿತ್ಯ ಪೂಜೆಯೊಂದಿಗೆ ಪ್ರತಿ ಹಬ್ಬಗಳಲ್ಲೂ ವಿಶೇಷಪೂಜಾ ಕಾರ್ಯಕ್ರಮಗಳು ಜರುಗುತ್ತವೆ. ಶ್ರಾವಣ ಮಾಸದಲ್ಲಿ ಶ್ರೀ ಹಿರಿಯ ಗುರುಗಳಪುಣ್ಯಾರಾಧನೆ, ಮಾಘ ಮಾಸದಲ್ಲಿ ಶ್ರೀ ಹಾನಗಲ್ಲು ಕುಮಾರ ಸ್ವಾಮಿಗಳ ಪುಣ್ಯಸ್ಮರಣೋತ್ಸವ ಹಾಗೂ ಸಾಮೂಹಿಕ ವಿವಾಹಗಳು ನಡೆಯುತ್ತವೆ.

Swamiji

Swamiji Name :
ಶ್ರೀ ಮ.ನಿ.ಪ್ರ. ಕುಮಾರ ಸ್ವಾಮಿಗಳು
Date of Birth :
20-6-1943
Place :
ಬಾಳೂರು, ಹಾನಗಲ್ಲು ತಾ||
Pattadikara :
23-2-1975
Photo :

Programs

ಪ್ರತಿ ಅಮವಾಸ್ಯೆ ಹಾಗೂ ಹುಣ್ಣಿಮೆಗೆ ವಿಶೇಷ ಪೂಜೆ.
ಶ್ರಾವಣ ಮಾಸದಲ್ಲಿ ಶ್ರೀ ಹಿರಿಯ ಗುರುಗಳ ಪುಣ್ಯಾರಾಧನೆ.
ಮಾಘ ಮಾಸದಲ್ಲಿ ಹಾನಗಲ್ಲ ಕುಮಾರ ಸ್ವಾಮಿಗಳ ಪುಣ್ಯ ಸ್ಮರಣೋತ್ಸವ ಹಾಗೂ ದೀಪ ಅಯ್ಯಾಚಾರ, ಸಾಮೂಹಿಕ ವಿವಾಹಗಳು.

Photos

Full Address Kannada

ಶ್ರೀ ಅಡವಿಸ್ವಾಮಿ ಮಠ
ಸವಣೂರು - 581 118
ಸವಣೂರು ತಾ||, ಹಾವೇರಿ ಜಿ||

Map

Near by Places

ಬಂಕಾಪುರ ಕ್ರಾಸ್ - 10 ಕಿ.ಮೀ.
ಶಿಗ್ಗಾಂವ - 11 ಕಿ.ಮೀ.
ಹಾವೇರಿ - 30 ಕಿ.ಮೀ.
ಗದಗ - 60 ಕಿ.ಮೀ.

Statistic

7 Views
0 Rating
0 Favorite
0 Share
error: Content is protected !!