ಉಟಕನೂರು ಗ್ರಾಮದ ಹೊರಭಾಗದ ಹಳ್ಳದ ದಡದಲ್ಲಿ ಸುಮಾರು 150ವರ್ಷಗಳ ಹಿಂದೆ ಮಹಾ ತಪಸ್ವಿಗಳೂ, ಶಾಪಾನುಗ್ರಹ ಸಮರ್ಥರೂ ಆದ ಶ್ರೀ ಷ.ಬ್ರ.ಬಸವಲಿಂಗ ದೇಶಿಕೇಂದ್ರರಿಂದ ಸಂಸ್ಥಾಪಿಸಲ್ಪಟ್ಟ ಶ್ರೀ ಅಡವಿ ಸಿದ್ದೇಶ್ವರ ಮಠವು ಶ್ರೀಮದ್ಕಾಶಿ ಪೀಠದ ಶಾಖಾಮಠವಾಗಿ ಮುಂದುವರೆದಿದೆ. ಶ್ರೀ ಬಸವಲಿಂಗ ದೇಶಿಕೇಂದ್ರರುಸಿಂಧನೂರು ತಾಲ್ಲೂಕಿನ ಅಂಕಲಗಿಯ ಅಡವಿಸಿದ್ಧರಲ್ಲಿ 12 ವರ್ಷಗಳ ಕಾಲ ದೀರ್ಘ ಸೇವೆಮಾಡಿ ಅವರಿಂದ ಅನುಗ್ರಹ ಪಡೆದು ಬಂದು ಮಠ ಸ್ಥಾಪಿಸಿದ್ದಾರೆ. ಶ್ರೀಗಳು ಶಿವಪೂಜಾನಿಷ್ಠರಾಗಿದ್ದು ತಮ್ಮ ಧಾರ್ಮಿಕ ಆಚರಣೆಗಳು ಮತ್ತು ಲೀˉÉಗಳಿಂದ ಸುತ್ತಮುತ್ತಲಿನಲ್ಲಿ ಪ್ರಸಿದ್ಧಿಗೊಂಡು ಶ್ರೀಮಠವನ್ನು ಮಂಚೂಣಿಗೆ ತಂದಿದ್ದಾರೆ.ಶ್ರೀಗಳು ಲಿಂಗೈಕ್ಯರಾದ ನಂತರ ಬಂದ ಶ್ರೀ ಮರಿಬಸವಲಿಂಗ ದೇಶಿಕೇಂದ್ರರು ಶ್ರೀಬಾಲಲೀˉÁ ಶಿವಯೋಗಿಗಳೆಂದೇ ಪ್ರಸಿದ್ಧರಾಗಿದ್ದು ತಮ್ಮ ಪವಾಡಗಳಿಂದ, ಲೀˉÉಗಳಿಂದಭಕ್ತರನ್ನು ಉದ್ಧರಿಸಿದವರು. ಶ್ರೀಗಳು ˉÉೂೀಕಕˉÁ್ಯಣಾರ್ಥವಾಗಿ ಅವತರಿಸಿದ ಧಾರ್ಮಿಕಮಹಾಪುರುಷರು, ಭಕ್ತರ ಕಲ್ಪತರುಗಳು, ಆಧ್ಯಾತ್ಮˉÉೂೀಕದ ಅನುಭಾವಿಗಳೂ ಆಗಿದ್ದರು.ರಾಯಚೂರು ಜಿˉÉ್ಲಯಾದ್ಯಂತ ನಡೆದಾಡುವ ದೇವರೆಂದೇ ಖ್ಯಾತರಾಗಿದ್ದ ಪೂಜ್ಯ ಶ್ರೀಮರಿಬಸವಲಿಂಗ ಶಿವಯೋಗಿ ತಾತನವರು ಅನುಪಮವಾದ ಸಿದ್ಧಿಯಿಂದ, ಸಾಧನೆಯಶಿಖರದತ್ತ ಮುನ್ನಡೆದು ಸದ್ಭಕ್ತರಿಗೆˉÁ್ಲ ಮುಕ್ತಿಯ ಮಹಾ ಮಾರ್ಗವನ್ನು ತೋರಿಸಿದಮಹಾನುಭಾವರು. ಶ್ರೀಗಳು ಪ್ರವಾಸ ಮಾಡಿ ಭಕ್ತರಿಗೆ ಹರಸಿ ಅನುಷ್ಠಾನಗೊಂಡˉÉ್ಲˉÁ್ಲಶಾಖಮಠಗಳು ಪ್ರಾರಂಭವಾದವು. ಇಂತಹ ಮಹಾಮಹಿಮ ಪುರುಷರಾದ ಪರಮ ಪೂಜ್ಯತಾತನವರು ಸದ್ಭಕ್ತರ ಹೃನ್ಮಂದಿರಗಳಲ್ಲಿ ಶಾಶ್ವತ ನೆˉÉಯನ್ನು ಹೊಂದಿದ್ದಾರೆ.ಈಗಿನ ಶ್ರೀಗಳಾದ ಶ್ರೀ ಷ.ಬ್ರ. ಮರಿಬಸವರಾಜ ದೇಶಿಕೇಂದ್ರ ಸ್ವಾಮಿಗಳುಶ್ರೀಮಠದ ಪಟ್ಟಕ್ಕೆ ಬಂದು ಹಿಂದಿನ ಲೀˉÁ ಪುರುಷರುಗಳ ಆಶೀರ್ವಾದ ಬಲದಿಂದ, ಭಕ್ತರಸಹಕಾರದೊಂದಿಗೆ ಶ್ರೀಮಠವನ್ನು ಅಭಿವೃದ್ಧಿಪಡಿಸುತ್ತಾ ಸಮರ್ಥವಾಗಿ ಮುನ್ನಡೆಸಿಕೊಂಡುಬರುತ್ತಿದ್ದಾರೆ. ಶ್ರೀಮಠದಲ್ಲಿ ಪುಷ್ಯ ಬಹುಳ ಅಷ್ಟಮಿಗೆ ಲಿಂ. ಶ್ರೀ ಷ.ಬ್ರ. ಬಾಲಲೀˉÁಶಿವಯೋಗಿಗಳು ಹಾಗೂ ಪುಷ್ಯ ಶುದ್ಧ ಪಂಚಮಿಗೆ ಶ್ರೀ ಷ.ಬ್ರ. ಬಸವಲಿಂಗ ದೇಶಿಕೇಂದ್ರಮಹಾಸ್ವಾಮಿಗಳ ಪುಣ್ಯಸ್ಮರಣೋತ್ಸವ ನಡೆಯುತ್ತದೆ.
Swamiji
Swamiji Name :
ಶ್ರೀ ಷ.ಬ್ರ. ಮರಿಬಸವರಾಜ ದೇಶಿಕೇಂದ್ರ ಸ್ವಾಮಿಗಳು
Date of Birth :
1-6-1981
Place :
ಊಟಕನೂರು, ಮಾನ್ವಿ ತಾ||
Photo :
Programs
¥ತಿÀ್ರ ಅಮವಾಸ್ಯೆಗೆ ವಿಶೇಷ ಪೂಜೆ, ಪ್ರಸಾದ. ಪುಷ್ಯ ಬಹುಳ ಅಷ್ಟಮಿಗೆ ಲಿಂ|| ಶ್ರೀ ಷ.ಬ್ರ. ಬಾಲಲೀಲ ಶಿವಯೋಗಿಗಳ ಪುಣ್ಯಾರಾಧನೆ. ಪುಷ್ಯ ಶುದ್ಧ ಪಂಚಮಿಗೆ ಶ್ರೀ ಬಸವಲಿಂಗ ದೇಶಿಕೇಂದ್ರ ಮಹಾಸ್ವಾಮಿಗಳ ಪುಣ್ಯಸ್ಮರಣೋತ್ಸವ. ಶಿವರಾತ್ರಿಗೆ ವಿಶೇಷ ಪೂಜೆ ಮತ್ತು ಜಾಗರಣೆ. ಶಾª್ರÀಣ ಮಾಸದಲ್ಲಿ ನಿತ್ಯ ರುದ್ರಾಭಿಷೇಕ ಹಾಗೂ ವಿಶೇಷ ಪೂಜೆ. zಸ Àರಾದಲ್ಲಿ ಶ್ರೀದೇವಿ ಪುರಾಣ ಪಾರಾಯಣ.