Shree 108 Savira Devara Samsthana Kille Brahanmatha

Shree 108 Savira Devara Samsthana Kille Brahanmatha Claimed

ಶ್ರೀ 108 ಸಾವಿರ ದೇವರ ಸಂಸ್ಥಾನ ಕಿಲ್ಲೇ ಬೃಹನ್ಮಠ

Average Reviews

Description

ಶ್ರೀ 108 ಸಾವಿರ ದೇವರ ಸಂಸ್ಥಾನ ಕಿˉÉ್ಲೀ ಬೃಹನ್ಮಠ

ಕರ್ತೃ – ಶ್ರೀ ಷ.ಬ್ರ. ಕೊಳಂಕಿ ಗುರುಪಾದ ಶಿವಯೋಗಿ ಶಿವಾಚಾರ್ಯರು

ರಾಯಚೂರು ನಗರದ ಹೃದಯಭಾಗದಲ್ಲಿ ವಿರಾಜಮಾನವಾಗಿ ಕಂಗೊಳಿಸುತ್ತಿರುವ ಹಾಗೂ ಸಾವಿರಾರು ವರ್ಷಗಳ ಇತಿಹಾಸ ಹೊಂದಿರುವ ಶ್ರೀಮದ್ ರಂಭಾಪುರಿಪೀಠದ ಶಾಖಾಮಠವಾದ ಶ್ರೀ 108 ಸಾವಿರ ದೇವರ ಸಂಸ್ಥಾನ ಕಿˉÉ್ಲೀ ಬೃಹನ್ಮಠವನ್ನುರಾಯಚೂರು ಜಿˉÉ್ಲಯ ಮಾನ್ವಿ ತಾಲ್ಲೂಕಿನ ಅರೋಲಿ ಗ್ರಾಮದ ಶ್ರೀ ಕೊಳಂಕಿ ಗುರುಪಾದಶಿವಯೋಗೀಶ್ವರ ಹಿರೇಮಠದ ಶ್ರೀ 108 ಸಾವಿರ ದೇವರು ಷ.ಬ್ರ. ಜೀವೈಕ್ಯ ಕೊಳಂಕಿಗುರುಪಾದ ಶಿವಯೋಗಿ ಶಿವಾಚಾರ್ಯ ಮಹಾಸ್ವಾಮಿಗಳು ಸ್ಥಾಪಿಸಿದ್ದು ಇಂದು ನಾಡಿನಪ್ರಮುಖ ಮಠಗಳಲ್ಲಿ ಒಂದಾಗಿದೆ. ಶ್ರೀಮಠದ ಸ್ಥಾಪಿತ ಕಾಲ ಬಹುಶಃ 11ನೇ ಶತಮಾನದಮಂಗಲಭಾಗ ಮತ್ತು 12ನೇ ಶತಮಾನದ ಆದಿಭಾಗ ಎಂದು ಅಂದಾಜಿಸˉÁಗಿದೆ.ಕರ್ತೃಗುರುಗಳು ಪವಾಡಪುರುಷರಾಗಿದ್ದು ತಮ್ಮ ಧಾರ್ಮಿಕ ಆಚರಣೆ ಹಾಗೂಪವಾಡಗಳಿಂದಾಗಿ ಭಕ್ತರ ಜನಮಾನಸದಲ್ಲಿ ಬೇರೂರಿದ್ದರು. ಶ್ರೀಗಳು ಬಸವಣ್ಣನವರಸಹೋದರಿ ಅಕ್ಕನಾಗಮ್ಮರಿಗೆ ನಿತ್ಯಕ್ರಿಯಾಗುರುಗಳಾಗಿದ್ದರೆಂದು ತಿಳಿದುಬರುತ್ತದೆ. ಹಾಗೂಕಾಕತೀಯ ರಾಣಿ ರುದ್ರಮ್ಮಾಜಿಯ ಗುರುಗಳಾಗಿದ್ದರೆಂದು ಹೇಳˉÁಗುತ್ತಿದ್ದು ಆಕೆಯನ್ನು ಶ್ರೀರಂಭಾಪುರಿ ಪೀಠ ಪರಂಪರೆಯ ಅನುಯಾಯಿಯಾಗುವಂತೆ ಮಾಡಿ ಆಕೆಯ ಸಾಮ್ರಾಜ್ಯದಲ್ಲಿ ವೀರಶೈವ ಪರಂಪರೆಯನ್ನು ಪಸರಿಸಿದ್ದರು.ಶ್ರೀ ಗುರುಪಾದ ಶಿವಾಚಾರ್ಯರು ರಾಯಚೂರಿನ ಹೊರಭಾಗದ ಕೊಳಂಕಿಯಲ್ಲಿ ಅನುಷ್ಠಾನ ಕೈಗೊಂಡಿದ್ದರು. ಆ ಸಮಯದಲ್ಲಿ ನಾಡು ಭೀಕರ ಬರಗಾಲಕ್ಕೆ ತುತ್ತಾಗಿಜನಜಾನುವಾರುಗಳ ನೀರಿಗಾಗಿ ಹಾಹಾಕಾರವೆದ್ದಿತ್ತು. ಆಗ ಶ್ರೀಗಳು ತಪೋನುಷ್ಠಾನಗೈದುಈ ಪ್ರದೇಶಕ್ಕೆ ಮಳೆಯನ್ನು ತರಿಸಿ ಜೀವಸಂಕುಲವನ್ನು ಉಳಿಸಿದರೆಂದು ಹೇಳˉÁಗಿದ್ದು ಈಪವಾಡಕ್ಕೆ ಮೆಚ್ಚಿ ಅಂದಿನ ರಾಜರು, ಶ್ರೀಗಳು ಅನುಷ್ಠಾನಗೈದ ಸ್ಥಳವನ್ನೇ ಕೊಡುಗೆಯಾಗಿನೀಡಿದರೆಂದು ಉಪಲಬ್ಧ ದಾಖˉÉಗಳು ಹೇಳುತ್ತವೆ. ಈ ರೀತಿ ತಮ್ಮ ಕಾರ್ಯಗಳಿಂದಮನೆಮಾತಾದ ಶ್ರೀಗಳ ಗದ್ದಗೆ ಶ್ರೀಕ್ಷೇತ್ರ ಕೊಳಂಕಿಯಲ್ಲಿಯೇ ಇದ್ದು ಪೂಜನೀಯವಾಗಿದೆ.ಕರ್ತೃಗುರುಗಳ ನಂತರ ಶ್ರೀಮಠಕ್ಕೆ ಕೊಳಂಕಿಯ ಗುರುಪಾದ ಶಿವಯೋಗೀಶ್ವರಹಿರೇಮಠದಲ್ಲಿ ಜನಿಸಿದ ವಟುಗಳೇ ವಂಶಪಾರಂಪರಿಕವಾಗಿ ಪೀಠಾಧಿಪತಿಗಳ ಸ್ಥಾನವನ್ನುಅಲಂಕರಿಸುತ್ತಾ ಬಂದಿದ್ದು ಇದುವರೆಗೂ 28 ಜನ ಶ್ರೀಗಳು ಅಧಿಕಾರ ನಡೆಸಿದ್ದಾರೆ. ಹಿಂದಿನಶ್ರೀಗಳಾದ ಶ್ರೀ ಷ.ಬ್ರ. ಗುರುಪಾದ ಶಿವಾಚಾರ್ಯರು 1961ರ ಸೆಪ್ಟೆಂಬರ್ 6ರಲ್ಲಿ ಪಟ್ಟಕ್ಕೆಬಂದು ಶ್ರೀಮಠದ ಸರ್ವಾಂಗೀಣ ಅಭಿವೃದ್ಧಿಗೆ ಶ್ರಮಿಸಿದ್ದರು. ಶ್ರೀಗಳು ಹಿರಿಯ ಗುರುಗಳಗದ್ದುಗೆ, ಶ್ರೀ ವೀರಭದ್ರೇಶ್ವರ ದೇವಸ್ಥಾನ, ಕˉÁ್ಯಣ ಮಂಟಪ, ವಾಣಿಜ್ಯ ಸಂಕೀರ್ಣಗಳನಿರ್ಮಾಣದೊಂದಿಗೆ ಭವ್ಯವಾದ ಮಂಟಪವನ್ನು ನಿರ್ಮಿಸಿದರು. ಶ್ರೀಗಳು 1996ರಲ್ಲಿ ಶ್ರೀಶಾಂತಮಲ್ಲ ಶಿವಾಚಾರ್ಯರನ್ನು ಪಟ್ಟಕ್ಕೆ ತಂದು 2000ರಲ್ಲಿ ಲಿಂಗೈಕ್ಯರಾದರು.ಈಗಿನ ಶ್ರೀಗಳಾದ ಶ್ರೀ ಷ.ಬ್ರ. ಶಾಂತಮಲ್ಲ ಶಿವಾಚಾರ್ಯ ಮಹಾಸ್ವಾಮಿಗಳು1996ರ ಮೇ 1ರಂದು ಶ್ರೀಮಠಕ್ಕೆ ಪಟ್ಟಾಧಿಕಾರಗೊಂಡು ಶ್ರೀಮಠವನ್ನು ಧಾರ್ಮಿಕ,ಸಾಮಾಜಿಕ, ಸಾಂಸ್ಕøತಿಕವಾಗಿ ಹೆಚ್ಚು ಪ್ರಚಲಿತಗೊಳಿಸುತ್ತಿದ್ದಾರೆ. ಹಾಗೂ ಶ್ರೀಮಠದಪೂರ್ವೇತಿಹಾಸದ ಬಗ್ಗೆ ಸಂಶೋಧನೆ ನಡೆಸುತ್ತಿರುವ ಶ್ರೀಗಳು ಆ ನಿಟ್ಟಿನಲ್ಲಿ ಪರಂಪರೆಯಎˉÁ್ಲ ಗುರುಗಳ ಗದ್ದುಗೆಗಳನ್ನು ಗುರುತಿಸಿದ್ದಾರೆ.ಶ್ರೀಗಳ ಸಂಶೋಧನೆಯ ಪ್ರಕಾರ ಪರಂಪರೆಯ ಮೊದಲ ಮೂರು ಜನಗುರುಗಳ ಗದ್ದುಗೆಗಳು ಕೊಳಂಕಿಯಲ್ಲಿದ್ದು ನಂತರದ ಏಳು ಗುರುಗಳ ಗದ್ದುಗೆಗಳು ಮಾನ್ವಿತಾಲ್ಲೂಕಿನ ಅರೋಲಿ ಗ್ರಾಮದಲ್ಲಿ, 10 ಗುರುಗಳ ಗದ್ದುಗೆಗಳು ರಾಯಚೂರು ಜಿˉÉ್ಲಯಅಲ್ಕೂರು, ಮಲ್ಲದಗುಡ್ಡ, ಗಬ್ಬೂರು, ಕಾತರಕಿ, ಚಂದ್ರಬಂಡಾ, ಅಸ್ಕಿಹಾಳ್ ಹಾಗೂತಲಮಾರಿನಲ್ಲಿ ದೊರಕಿವೆ. ಈಚಿಗಿನ ಎಂಟು ಜನ ಗುರುಗಳ ಗದ್ದುಗೆಗಳು ರಾಯಚೂರುನಗರದˉÉ್ಲೀ ದೊರಕಿದ್ದು ಬಹುಶಃ ಶ್ರೀಮಠದ ಪರಂಪರೆಯು ಕೊಳಂಕಿಯಿಂದ ಪ್ರಾರಂಭಗೊಂಡು ಅರೋಲಿ ಹಾಗೂ ಮುಂತಾದೆಡೆ ಸಾಗಿ ಬಂದು ಇತ್ತೀಚಿನ ಎಂಟು ತˉÉಮಾರುಗಳಿಂದ ರಾಯಚೂರು ನಗರದಲ್ಲಿ ಸ್ಥಿರಗೊಂಡಿದೆಯೆಂದು ಅಂದಾಜಿಸಬಹುದು. ಬಹುಶಃಇದಕ್ಕೆ ಕಾರಣ ಸುಮಾರು ಸಾವಿರ ವರ್ಷಗಳ ಇತಿಹಾಸವಿರುವ ಶ್ರೀಮಠದಲ್ಲಿನ ಗುರುಗಳುಸದಾ ಸಂಚಾರ ಮಾಡುತ್ತಾ ಇದ್ದಿರುವುದು.ಶ್ರೀಮಠದಲ್ಲಿ ಬಡ ಜಂಗಮ ವಿದ್ಯಾರ್ಥಿಗಳಿಗೆ ಉಚಿತ ವಸತಿ ದಾಸೋಹದ ಜತೆಗೆವೇದಾಭ್ಯಾಸವನ್ನು ಹಾಗೂ ಅವರ ವಿದ್ಯಾಭ್ಯಾಸವನ್ನು ಶ್ರೀಮಠದಿಂದˉÉೀ ಕೊಡˉÁಗುತ್ತಿದೆ.ಹಾಗೂ ಪ್ರಸ್ತುತ ಶ್ರೀಗಳು ಸಾಮಾಜಿಕವಾಗಿ ಸಮಾಜದಲ್ಲಿ ಸಾಮರಸ್ಯ ಮೂಡಿಸಲು ಹೆಚ್ಚುಶ್ರಮಿಸುತ್ತಿದ್ದು ಸಕಲ ಧರ್ಮೀಯರ ಸಭೆ ಸಮಾರಂಭಗಳಲ್ಲಿ ಪಾˉÉ್ಗೂಳ್ಳುತ್ತಾಸೌಹಾರ್ದತೆಯನ್ನು ಮೆರೆಯುತ್ತಿದ್ದಾರೆ. ಶ್ರೀಮಠದಲ್ಲಿ ಜಗನ್ಮಾತೆ ಶಾಂಭವಿ ದೇವಿಯಬೆಳ್ಳಿಯ ಮೂರ್ತಿಯಿದ್ದು (51 ಕಿˉÉೂೀ) ವಿಶೇಷ ಪೂಜೆಗೊಳಪಟ್ಟಿದೆ.

ವಿಶೇಷತೆ:

‘ಗುರುಪಾದ ಶಿವಯೋಗೀಶ್ವರ ರತ್ನ’

ಪ್ರಶಸ್ತಿ ಪ್ರದಾನ

ವಿಶೇಷ ಕಾರ್ಯಕ್ರಮಗಳು

ಶ್ರೀಮಠದಲ್ಲಿ ಪ್ರತಿವರ್ಷ ವಿಶೇಷವಾಗಿ

ಆರೋಗ್ಯ ಶಿಬಿರ

ರಕ್ತದಾನ ಶಿಬಿರ

ವ್ಯಕ್ತಿತ್ವ ವಿಕಸನ ಶಿಬಿರ

ಸಂಗೀತ ಕಾರ್ಯಕ್ರಮ

ಸರ್ವಧರ್ಮ ಸಮನ್ವಯ

ಕಾರ್ಯಕ್ರಮಗಳ ಆಯೋಜನೆ.

Swamiji

Swamiji Name :
ಶ್ರೀ 108 ಸಾವಿರ ದೇವರ ಸಂಸ್ಥಾನ ಕಿಲ್ಲೇ ಬೃಹನ್ಮಠ
Date of Birth :
1-5-1970
Place :
ಅರೋಲಿ, ಮಾನ್ವಿ ತಾ||
Pattadikara :
1-5-1996
Photo :

Programs

ಯುಗಾದಿ ಪಾಡ್ಯಕ್ಕೆ ಪಂಚಾಗ ಶ್ರವಣ. ಶ್ರಾವಣ ಮಾಸದಲ್ಲಿ ನಿತ್ಯ ಪುರಾಣ ಪ್ರವಚನ. ವೈಶಾಖ ಶುದ್ಧ ತೃತೀಯಕ್ಕೆ ಬಸವಣ್ಣನ ಜಯಂತಿ ಹಾಗೂ ಶ್ರೀಮಠದಲ್ಲಿ ತೊಟ್ಟಿಲು ಕಾರ್ಯಕ್ರಮ, ಧರ್ಮಸಭೆ. ಭಾದ್ರಪದ ಮಾಸದ 3ನೇ ಭಾನುವಾರ ಕರ್ತೃಗಳ ಜಯಂತಿ ಪರ್ವು ಸಮಾರಾಧನೆ ಅಂಗವಾಗಿ ಶ್ರೀ ಕೊಳಂಕಿ ಮಠಕ್ಕೆ ಸದ್ಭಾವನಾ ಪಾದಯಾತ್ರೆ. ದಸರಾದಲ್ಲಿ ಶ್ರೀದೇವಿ ಪುರಾಣ ಪಾರಾಯಣ. ಕಾರ್ತೀಕ ಮಾಸದಲ್ಲಿ ಹಿಂದಿನ ಶ್ರೀಗಳಾದ ಲಿಂ. ಶ್ರೀ ಷ.ಬ್ರ. ಗುರುಪಾದ ಶಿವಾಚಾರ್ಯರ ಪುಣ್ಯಾರಾಧನೆ.

Photos

Full Address Kannada

ಶ್ರೀ 108 ಸಾವಿರ ದೇವರ ಸಂಸ್ಥಾನ ಕಿˉÉ್ಲೀ ಬೃಹನ್ಮಠ ಬೇರೂನ್ಕಿˉÉ್ಲ, ರಾಯಚೂರು - 584 101 ರಾಯಚೂರು ತಾ||, ಜಿ||

Map

Near by Places

ಹೊರಗಿನ ಮಠ - 2 ಕಿ.ಮೀ. ಶಕ್ತಿನಗರ - 12 ಕಿ.ಮೀ. ಮಾನ್ವಿ - 50 ಕಿ.ಮೀ. ದೇವದುರ್ಗ - 65 ಕಿ.ಮೀ.

Statistic

208 Views
0 Rating
0 Favorite
0 Share
error: Content is protected !!