ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹೊಸಕೋಟೆಯು ಬೆಂಗಳೂರುಮಹಾನಗರದಿಂದ ಕೇವಲ 25 ಕಿ.ಮೀ. ದೂರದಲ್ಲಿದ್ದು ಪುರಾತನ ವೀರಶೈವ ಧಾರ್ಮಿಕಕ್ಷೇತ್ರವಾಗಿತ್ತು. ಈ ಪಟ್ಟಣದಲ್ಲಿ ಸುಮಾರು 14 ವೀರಶೈವ ಮಠಗಳು ಅಸ್ತಿತ್ತ್ವದಲ್ಲಿತ್ತೆಂದುಹೇಳಲಾಗುತ್ತಿದ್ದು ಪ್ರಸ್ತುತ ಶರಣೆ ವೀರಮ್ಮನವರ ಮಠವು ಮಾತ್ರ ಅಸ್ತಿತ್ತ್ವ ಉಳಿಸಿಕೊಂಡುಬಂದಿದೆ. ಪುರಾತನ ಕಾಲದಲ್ಲಿ ಶ್ರೀ ನಂದಪ್ಪದೇವರು ಎಂಬುವವರು ಈ ಪ್ರದೇಶದಲ್ಲಿಅನುಷ್ಠಾನ ಕೈಗೊಂಡು ಭಕ್ತರನ್ನು ಧರ್ಮ ಮಾರ್ಗದಲ್ಲಿ ಕೊಂಡೊಯ್ದು ಲಿಂಗೈಕ್ಯರಾಗಿದ್ದುಇವರ ಗದ್ದುಗೆಯ ಮೇಲೆ ಭಕ್ತರೇ ಸ್ಥಾಪಿಸಿದ ಮಠವೇ ಶರಣೆ ವೀರಮ್ಮನವರ ಮಠ.ಕಾಲಾನುಕ್ರಮದಲ್ಲಿ ಶ್ರೀಮಠವು ಅಸ್ತಿತ್ತ್ವ ಕಳೆದುಕೊಂಡು ಜೀರ್ಣಗೊಂಡಿದ್ದುಕಳೆದ ಶತಮಾನದಿಂದೀಚೆಗೆ ಕಾಳಪ್ಪನ ಹಳ್ಳಿಯ ಶ್ರೀ ಕರಿಬಸವ ಸ್ವಾಮಿಗಳಿಂದ ಪುನರ್ಸ್ಥಾಪಿಗೊಂಡಿದೆ. ಭಕ್ತರ ಅಪೇಕ್ಷೆ ಮೆರೆಗೆ ಇಲ್ಲಿನ ಮಠವನ್ನು ವಹಿಸಿಕೊಂಡ ಶ್ರೀ ಕರಿಬಸವಸ್ವಾಮಿಗಳು ಭಕ್ತರ ಸಹಕಾರದೊಂದಿಗೆ ಅಭಿವೃದ್ದಿಪಡಿಸಿದ್ದಾರೆ. ಇವರಿಗೆ ಸಹಾಯಕವಾಗಿಶ್ರೀಮಠದ ಅಭಿವೃದ್ದಿಗೆ ಟೊಂಕ ಕಟ್ಟಿ ನಿಂತವರು ಶರಣೆ ವೀರಮ್ಮನವರು. ಅಮ್ಮನವರುಜ್ಯೋತಿಷ್ಯ ಶಾಸ್ತ್ರ ಹೇಳುವುದು ಮತ್ತು ಭಿಕ್ಷಾಟನೆಯಿಂದ ಮಠದ ಧಾರ್ಮಿಕ ಆಚರಣೆಗಳನ್ನುನಡೆಸಿದ್ದು ಇವರ ಪ್ರಭಾವ ಸಮಾಜದ ಮೇಲೆ ಹೆಚ್ಚಾಗಿ ರೂಡಿಗತವಾಗಿ ವೀರಮ್ಮನವರ ಮಠಎಂದೇ ಕರೆಯತೊಡಗಿದರು.ಶರಣೆ ವೀರಮ್ಮನವರ ನಂತರ ಎಸ್.ಆರ್. ವೀರಭದ್ರಯ್ಯನವರ ಮಗಳಾದಶರಣೆ ಕಾತ್ಯಾಯಿನಿಯವರು ಶ್ರೀಮಠವನ್ನು ಮುನ್ನಡೆಸುತ್ತಿದ್ದು ಶರಣೆ ವೀರಮ್ಮನವರಹಾದಿಯಲ್ಲಿ ಸಾಗುತ್ತಿದ್ದಾರೆ. ಶನಿವಾರ, ಸೋಮವಾರ ಹಾಗೂ ಏಕಾದಶಿಗಳಲ್ಲಿಭಿಕ್ಷಾಟನೆಯನ್ನು ಮಾಡುವ ಅಮ್ಮನವರು ಅಪೇಕ್ಷಿತರಿಗೆ ಜ್ಯೋತಿಷ್ಯ ಶಾಸ್ತ್ರವನ್ನೂಹೇಳುತ್ತಾರೆ. ಶ್ರೀಮಠದಲ್ಲಿ ನಿತ್ಯ ಧಾರ್ಮಿಕ ಆಚರಣೆಗಳೊಂದಿಗೆ ಅಕ್ಕನ ಹುಣ್ಣಿಮೆ ಆದಎರಡನೇ ದಿನಕ್ಕೆ ಶ್ರೀ ಹಿರಿಯ ಗುರುಗಳ ಆರಾಧನೆಯನ್ನು ನಡೆಸುತ್ತಾ ಬರುತ್ತಿದ್ದಾರೆ. ಪ್ರತಿವರ್ಷ ಬುದ್ದ ಪೂರ್ಣಿಮೆಯಂದು ಗ್ರಾಮದ ಜಾತ್ರೆಯು ನಡೆಯುತ್ತಿದ್ದು ಆ ಸಮಯದಲ್ಲಿಮಠದಲ್ಲಿ ಅನ್ನಸಂತರ್ಪಣೆ ಹಾಗೂ ವಿವಿಧ ಕಾರ್ಯಕ್ರಮಗಳು ಆಯೋಜನೆಗೊಂಡಿರುತ್ತವೆ.
Swamiji
Swamiji Name :
ಶರಣೆ ಕಾತ್ಯಾಯಿನಿಯವರು
Date of Birth :
25-02-1955
Place :
ಹೊಸಕೋಟೆ, ಬೆಂಗಳೂರು ಗ್ರಾ. ಜಿ||
Photo :
Programs
ಪ್ರತಿ ಹುಣ್ಣಿಮೆ, ಅಮವಾಸ್ಯೆಗಳಲ್ಲಿ ವಿಶೇಷ ಪೂಜೆ ಕಾರ್ಯಕ್ರಮಗಳು
ಬುದ್ದ ಪೂರ್ಣಿಮೆಗೆ ಊರ ಜಾತ್ರೆ ಮತ್ತು ಮಠದಲ್ಲಿ ಅನ್ನಸಂತರ್ಪಣೆ ಹಾಗೂ ಕಾರ್ಯಕ್ರಮಗಳು
ಕಾರ್ತಿಕದ 2ನೇ ಸೋಮವಾರ ಮಠದ ಅಮ್ಮನವರ “ಜಲವಿವಾದ” ಅಕ್ಕನ ಹುಣ್ಣಿಮೆ ಆದ 2ನೇ ದಿನಕ್ಕೆ ಶ್ರೀ ಹಿರಿಯ ಗುರುಗಳ ಪುಣ್ಯಾರಾಧನೆ