Parama Poojya Shree Shadakshari Shivayogi Dr. Murugarajendra Mahaswamigalu
Claimed
ಪರಮ ಪೂಜ್ಯ ಶ್ರೀ ಷಡಕ್ಷರಿ ಶಿವಯೋಗಿ ಡಾ|| ಮುರುಘರಾಜೇಂದ್ರ ಮಹಾಸ್ವಾಮಿಗಳು
Average Reviews
Description
ಶ್ರೀ ನವಕಲ್ಯಾಣ ಮಠ – ಜಿಡಗಾ
ಕರ್ತೃ – ಶ್ರೀ ಮ.ನಿ.ಪ್ರ. ಬಸವಲಿಂಗೇಶ್ವರ ಮಹಾಸ್ವಾಮಿಗಳು
ಕಲಬುರಗಿ ಜಿಲ್ಲೆ ಆಳಂದ ತಾಲ್ಲೂಕಿನ ಜಿಡಗಾ ಗ್ರಾಮದ ಹೊರವಲಯದಲ್ಲಿಸ್ಥಾಪಿತಗೊಂಡಿರುವ ಶ್ರೀ ನವಕಲ್ಯಾಣ ಮಠವು ಜಾತ್ಯಾತೀತ ಭಾವನೆಯಲ್ಲಿ ಬೆಳೆದು ಈಭಾಗದ ಧಾರ್ಮಿಕ ಚಟುವಟಿಕೆಗಳ ಕೇಂದ್ರಬಿಂದುವಾಗಿ ಬೆಳೆದಿದೆ. ಸುಮಾರು 400ವರ್ಷಗಳ ಹಿಂದೆ ಶ್ರೀ ಬಸವಲಿಂಗೇಶ್ವರ ಮಹಾಸ್ವಾಮಿಗಳಿಂದ ಸ್ಥಾಪಿತಗೊಂಡಿರುವಶ್ರೀ ನವಕಲ್ಯಾಣಮಠವು ಹಿಂದಿನ ಶ್ರೀಗಳಾದ ಶ್ರೀ ಷಡಕ್ಷರಿ ಸಿದ್ದರಾಮೇಶ್ವರ ಶಿವಯೋಗಿಗಳಿಂದಾಗಿ ಪ್ರಸಿದ್ಧಿಗೆ ಬಂದಿದೆ.ಶ್ರೀಮಂತ ಪರಂಪರೆಯನ್ನು ಹೊಂದಿರುವ ಶ್ರೀ ನವಕಲ್ಯಾಣ ಮಠದ ಕರ್ತೃಗುರುಗಳು ಸಂಚಾರದಲ್ಲಿ ಈ ಪ್ರದೇಶಕ್ಕೆ ಬಂದು ನೆಲೆನಿಂತು ಅನುಷ್ಠಾನಗೊಂಡಿದ್ದಾಗ ಈಭಾಗದ ಭಕ್ತರು ಗುರುಗಳಿಗೆ ಸ್ಪಂದಿಸಿ ಶ್ರೀಮಠವನ್ನು ಸ್ಥಾಪಿಸಿಕೊಡುತ್ತಾರೆ. ಶ್ರೀಬಸವಲಿಂಗೇಶ್ವರ ಮಹಾಸ್ವಾಮಿಗಳು ಆಧ್ಯಾತ್ಮ ಪುರುಷರಾಗಿ ಬಸವಾದಿ ಶಿವಶರಣರತತ್ವಗಳನ್ನು ಪ್ರಚುರಪಡಿಸುತ್ತಾರೆ. ಇವರು ನೆಲೆನಿಂತ ಜಾಗದಲ್ಲಿ ದಾಸೋಹದ ವ್ಯವಸ್ಥೆಯನ್ನುಪ್ರಾರಂಭಿಸಿ ಅಸಹಾಯಕರಿಗೆ ನೆರವಾದರು.ಕರ್ತೃ ಗುರುಗಳ ನಂತರದ ಪರಂಪರೆಯಲ್ಲಿ ಪೂಜ್ಯ ಶ್ರೀ ಷಡಕ್ಷರಿಮಹಾಸ್ವಾಮಿಗಳು, ಪೂಜ್ಯ ಶ್ರೀ ಸಿದ್ದರಾಮೇಶ್ವರ ಮಹಾಸ್ವಾಮಿಗಳು, ಪೂಜ್ಯ ಶ್ರೀ ಸಿದ್ದರಾಮಮಹಾಸ್ವಾಮಿಗಳು ಹೀಗೆ ಅನೇಕ ಗುರುಗಳು ಶ್ರೀಮಠವನ್ನು ಮುನ್ನಡೆಸಿದ್ದು ಶ್ರೀಮಠವನ್ನುಧಾರ್ಮಿಕ, ಸಾಮಾಜಿಕ ಹಾಗೂ ಸಾಂಸ್ಕøತಿಕವಾಗಿ ಶ್ರೀಮಂತಗೊಳಿಸಿದ್ದಾರೆ. ಶ್ರೀ ಸಿದ್ದರಾಮಮಹಾಸ್ವಾಮಿಗಳು ಶ್ರೀಮಠವನ್ನು ಮತ್ತಷ್ಟು ಬೆಳೆಸಿ ಪ್ರಚಾರಕ್ಕೆ ತಂದರು. ತಮ್ಮ ಕರ್ತೃತ್ವಶಕ್ತಿಯಿಂದ ಅಪಾರ ಸಂಖ್ಯೆಯ ಭಕ್ತ ಬಳಗವನ್ನು ಹೊಂದಿದ್ದ ಶ್ರೀಗಳು ತಮ್ಮ ನಂತರ ಶ್ರೀಷಡಕ ್ಷರಿ ಸಿದ್ದರಾಮೇಶ್ವರ ಶಿವಯೋಗಿಗಳನ್ನು ತಮ್ಮ ಉತ ್ತರಾಧಿಕಾರಿಗಳನ್ನಾಗಿಆಯ್ಕೆಮಾಡಿಕೊಂಡರು.ಶ್ರೀ ಷಡಕ ್ಷರಿ ಸಿದ್ದರಾಮೇಶ ್ವರ ಶಿವಯೋಗಿಗಳು ಬಾಲ್ಯದಿಂದಲೂಆಧ್ಯಾತ್ಮಿಕತೆಯತ್ತ ಒಲವು ಹೊಂದಿದ್ದು ಮುಗುಳಖೋಡಾದ ಶ್ರೀ ಯಲ್ಲಾಲಿಂಗಮಹಾರಾಜರ ಆಶೀರ್ವಾದದಲ್ಲಿ ಬೆಳೆದವರು. ಮುಂದೆ ಶಿವಯೋಗಿಗಳು ಮೊದಲು ಶ್ರೀನವಕಲ್ಯಾಣಮಠದ ಅಧಿಕಾರ ಸ್ವೀಕರಿಸಿ ತದನಂತರ ಮುಗುಳಖೋಡಾದ ಮಠದಅಧಿಕಾರವನ್ನು ವಹಿಸಿಕೊಂಡು ಎರಡೂ ಮಠಗಳನ್ನು ಉತ್ತುಂಗಕ್ಕೆ ಕೊಂಡೊಯ್ದರು.ಮೊದಲು ಜಿಡಗಾ ಗ್ರಾಮದ ಒಳಗಿದ್ದ ಮೂಲ ಮಠವು ತಮ್ಮ ಚಟುವಟಿಕೆಗಳಿಗೆ ಸಾಲದೇಹೋದಾಗ 1981ರಲ್ಲಿ ಗ್ರಾಮದ ಹೊರವಲಯದ ಗುಡ್ಡದಲ್ಲಿ ಐವತ್ತು ಎಕರೆ ಜಮೀನನ್ನುಖರೀದಿಸಿ 1985ರಲ್ಲಿ ತಪೋವನವನ್ನು ನಿರ್ಮಿಸಲು ಪ್ರಾರಂಭಿಸಿ ಗುರುಮಠವನ್ನುಸ್ಥಾಪಿಸಿದರು. ಅನುಭವ ಆಶ್ರಮ, ವಚನ ಮಂಟಪ, ಬಸವ ಭವನ, ಯೋಗಾಶ್ರಮ,ಸಿದ್ದಾಶ್ರಮ, ಪರ್ಣಕುಟೀರ, ರಾಮಕೃಷ್ಣ ಮಂದಿರ, ಲಚ್ಛಣ ಸಿದ್ದಲಿಂಗ ಮಹಾರಾಜರ 46ಕುಟೀರ, ದತ್ತಾತ್ರೇಯ ದೇವಸ್ಥಾನ, ತಿಂತಿಣಿ ಮೋನೇಶ್ವರ ಈ ರೀತಿಯಾಗಿ ಜ್ಯಾತ್ಯಾತೀತವಾಗಿಎಲ್ಲಾ ಮಹಾತ್ಮರ ಹೆಸರಿನಲ್ಲಿ ಆಶ್ರಮಗಳನ್ನು ನಿರ್ಮಿಸಿದರು. ಇಂತಹ ಭವ್ಯವಾದತಪೋವನ, ಅದರ ಮಧ್ಯೆ ಕಂಗೊಳಿಸುವ ಆಶ್ರಮಗಳ ಸಮುಚ್ಛಯ ಒಂದು ಆಧ್ಯಾತ್ಮಲೋಕಕ್ಕೆ ಕರೆದೊಯ್ಯುತ್ತದೆ.ಈಗಿನ ಶ್ರೀಗಳಾದ ಡಾ|| ಶ್ರೀ ಷಡಕ್ಷರಿ ಮುರುಘರಾಜೇಂದ್ರ ಮಹಾಸ್ವಾಮಿಗಳುಶಿವಯೋಗಮಂದಿರ ಮತ್ತು ಕಾಶಿಯಲ್ಲಿ ಸಂಸ್ಕøತ ಸಾಹಿತ್ಯವನ್ನು ಅಧ್ಯಯನ ಮಾಡಿಬಂದಿದ್ದಾರೆ. ಶ್ರೀಗಳು ವ್ಯವಹಾರ ಜ್ಞಾನಕ್ಕಾಗಿ ಪದವಿ ಶಿಕ್ಷಣವನ್ನು ಪಡೆದು ಜೊತೆಯಲ್ಲಿಪಿ.ಎಚ್.ಡಿ. ಪದವಿ ಕೂಡ ಪೂರೈಸಿದ್ದಾರೆ. ಮಠಕ್ಕೆ ಮರಳಿ ಗುರುಗಳ ಮಾರ್ಗದರ್ಶನಹಾಗೂ ಕೃಪಾರ್ಶೀವಾದದಲ್ಲಿ ಪರಿಪಕ್ವಗೊಂಡ ಶ್ರೀಗಳು ಪರಂಪರೆಯ ಹಾದಿಯಲ್ಲಿಶ್ರೀಮಠವನ್ನು ಸಮರ್ಥವಾಗಿ ಮುನ್ನಡೆಸುತ್ತಿದ್ದು ತಮ್ಮ ಸಾಮಾಜಿಕ ಕಾರ್ಯಚಟುವಟಿಕೆಗಳಮೂಲಕ ಸಮಾಜದ ಅಭಿವೃದ್ದಿಯಲ್ಲಿ ತೊಡಗಿದ್ದಾರೆ.ತಪೋವನದಲ್ಲಿ ನಿರ್ಮಿಸಲ್ಪಟ್ಟಿರುವ ಶರಣ ಬಸವೇಶ್ವರ ಗುಡಿ ಹಾಗೂ ಇತರದೇವಾಲಯಗಳಲ್ಲಿ ನಿತ್ಯ ಎರಡು ವೇಳೆ ಪೂಜೆ, ಶರಣ ಬಸವೇಶ್ವರ ದೇವಸ್ಥಾನದಲ್ಲಿನಂದಾದೀಪ, ರುದ್ರಾಭಿಷೇಕ, ಅಮವಾಸ್ಯೆ ಮತ್ತು ಹುಣ್ಣಿಮೆಗಳಲ್ಲಿ ಪ್ರವಚನ, ಕೀರ್ತನೆ,ಸಂಗೀತೋತ್ಸವ, ಫೆಬ್ರವರಿಯಲ್ಲಿ ಲಿಂ|| ಶ್ರೀ ಷಡಕ್ಷರಿ ಸಿದ್ದರಾಮೇಶ್ವರ ಶಿವಯೋಗಿಗಳಪುಣ್ಯಾರಾಧನೆ ಹಾಗೂ ಶ್ರೀಮಠದ ರಥೋತ್ಸವವು ಜರುಗುತ್ತದೆ. ಈ ಎಲ್ಲಾ ಸಂದರ್ಭಗಳಲ್ಲಿಮಹಾದಾಸೋಹದ ವ್ಯವಸ್ಥೆಯನ್ನು ಆಯೋಜಿಸುತ್ತಿದ್ದು ಕನಿಷ್ಠ 20,000 ಜನಪಾಲ್ಗೊಳ್ಳುತ್ತಾರೆ. ಹಾಗೆಯೇ ಪ್ರತಿ ದಿನ ಕನಿಷ್ಠ 1000 ಜನರಿಗೆ ಅನ್ನದಾಸೋಹದ ವ್ಯವಸ್ಥೆಇರುತ್ತದೆ.ಧಾರ್ಮಿಕವಾಗಿ ಅಪಾರವಾದುದನ್ನು ಸಾಧಿಸಿರುವ ಈ ಶ್ರೀಮಠವು ಶಿಕ್ಷಣಕ್ಷೇತ್ರದಲ್ಲಿಯೂ ಕಾರ್ಯನಿರ್ವಹಿಸುತ್ತಿದ್ದು ಪ್ರಾಥಮಿಕ ಶಾಲೆ, ಪ್ರೌಢಶಾಲೆ, ಪದವಿಪೂರ್ವಕಾಲೇಜು ಹಾಗೂ ಬಡ ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಉಚಿತ ವಿದ್ಯಾರ್ಥಿ ನಿಲಯವನ್ನುಪ್ರಾರಂಭಿಸಲಾಗಿದೆ. ಹಾಗೆಯೇ ಜನೋಪಯೋಗಿ ಕಲ್ಯಾಣ ಕಾರ್ಯಕ್ರಮಗಳಿಗಾಗಿ ಗ್ರಾಮದಆಸ್ಪತ್ರೆಗೆ ಮೂರು ಎಕರೆ ಜಾಗ, ಹಿಂದುಳಿದ ಮತ್ತು ಅಲ್ಪಸಂಖ್ಯಾತರ ಸರ್ಕಾರಿ ವಿದ್ಯಾರ್ಥಿನಿಲಯಕ್ಕೆ ಜಾಗವನ್ನು ನೀಡಿದೆ ಮತ್ತು ಆಯುರ್ವೇದ ಆಸ್ಪತ್ರೆಯನ್ನು ನಿರ್ಮಿಸಲು 5 ಎಕರೆಜಾಗವನ್ನು ದಾನ ಮಾಡಿದೆ.
Swamiji
Swamiji Name :
ಪರಮ ಪೂಜ್ಯ ಶ್ರೀ ಷಡಕ್ಷರಿ ಶಿವಯೋಗಿ ಡಾ|| ಮುರುಘರಾಜೇಂದ್ರ ಮಹಾಸ್ವಾಮಿಗಳು
Date of Birth :
25-06-1970
Place :
ಜಮಗಿ, ಆಳಂದ ತಾ||
Photo :
Programs
ಪ್ರತಿ ಹುಣ್ಣಿಮೆಗೆ ಶ್ರೀಗಳ ದರ್ಶನ ಮತ್ತು ವಿಶೇಷ ಪೂಜೆ
ಫೆಬ್ರವರಿಯಲ್ಲಿ ಲಿಂ. ಶ್ರೀ ಷಡಕ್ಷರಿ ಸಿದ್ದರಾಮೇಶ್ವರ ಶಿವಯೋಗಿಗಳ ಪುಣ್ಯಾರಾಧನೆ ಹಾಗೂ ಶ್ರೀ ಮಠದ ರಥೋತ್ಸವ
ಸೆಪ್ಟಂಬರ್ 18ಕ್ಕೆ ಲಿಂ|| ಶ್ರೀ ಷಡಕ್ಷರಿ ಸಿದ್ದರಾಮೇಶ್ವರ ಶಿವಯೋಗಿಗಳ ಜಯಂತಿ
Institutions
ಕಿರಿಯ / ಹಿರಿಯ ಪ್ರಾಥಮಿಕ/ ಪ್ರೌಢ ಶಾಲೆ
ಪದವಿಪೂರ್ವ ಕಾಲೇಜ್ ವಿದ್ಯಾರ್ಥಿ ನಿಲಯ
Photos
Full Address Kannada
ಶ್ರೀ ನವಕಲ್ಯಾಣ ಮಠ
ಜಿಡಗ - 585 302
ಆಳಂದ ತಾ||, ಕಲಬುರಗಿ ಜಿಲ್ಲೆ