ಕರ್ನಾಟಕ ರಾಜ್ಯ ಶ್ರೀ ಸೇವಾಲಾಲ್ ದುರ್ಗಾದೇವಿ ಬಂಜಾರ ಗುರುಪೀಠ
Average Reviews
Description
ಕರ್ನಾಟಕ ರಾಜ್ಯ ಶ್ರೀ ಸೇವಾಲಾಲ್ದು ರ್ಗಾದೇವಿ ಬಂಜಾರ ಗುರುಪೀಠ
ಪೂಜ್ಯ ಶ್ರೀ ಮ.ನಿ. ಜಗದ್ಗುರು ತಿಪ್ಪೇಶ್ವರ ಮಹಾಸ್ವಾಮಿಗಳು
ಬಳ್ಳಾರಿ ಜಿಲ್ಲಾ ಹೂವಿನಹಡಗಲಿ ತಾಲ್ಲೂಕು ಕೇಂದ್ರದಿಂದ ಕೇವಲ 12 ಕಿ.ಮೀ.ದೂರದಲ್ಲಿರುವ ಕಾಲ್ವಿ ತಾಂಡಾದಲ್ಲಿ 2004ರಲ್ಲಿ ಸ್ಥಾಪಿತಗೊಂಡಿರುವ ಶ್ರೀ ಸೇವಾಲಾಲದುರ್ಗಾದೇವಿ ಬಂಜಾರ ಗುರುಪೀಠವು ದಮನಿತ ಜನರ ಧ್ವನಿಯಾಗಿ ವೀರಶೈವಧರ್ಮಾಚರಣೆ ಹಾಗೂ ಬಸವ ತತ್ವಗಳನ್ನು ರೂಢಿಸಿಕೊಂಡು ಬಳ್ಳಾರಿ ಜಿಲ್ಲೆಯಲ್ಲಿ ತನ್ನದೇಆದ ಮಹತ್ವವನ್ನು ಸಾರುತ್ತಿದೆ.ಶ್ರೀಮನ್ನಿರಂಜನ ಜಗದ್ಗುರು ತಿಪ್ಪೇಶ್ವರ ಮಹಾಸ್ವಾಮಿಗಳು ಹಾನಗಲ್ ತಾಲ್ಲೂಕುಶಿವಾಜಿಪುರ ಗ್ರಾಮದಲ್ಲಿ ಜನಿಸಿದವರಾಗಿದ್ದು ಚಿಕ್ಕ ವಯಸ್ಸಿನಲ್ಲಿಯೇ ಆಧ್ಯಾತ್ಮಿಕತೆಯತ್ತ ಮನಮಾಡಿದವರು. ಶ್ರೀಗಳು ಮುಖ್ಯವಾಗಿ ದಮನಿತ ಜನರ, ಶೋಷಿತ ಜನರ ಧ್ವನಿಯಾಗಿಕಾರ್ಯನಿರ್ವಹಿಸುತ್ತಿದ್ದಾರೆ. ಜೊತೆಯಲ್ಲಿಯೇ ಸಮಾಜದ ಎಲ್ಲಾ ಸ್ತರದ ಜನರನ್ನುತಲುಪುವಲ್ಲಿ ಯಶಸ್ವಿಯಾಗಿದ್ದಾರೆ. ಶ್ರೀಗಳು ವಿರಕ್ತಮಠದ ಪರಂಪರೆಯನ್ನು ಯಶಸ್ವಿಯಾಗಿಅಳವಡಿಸಿಕೊಂಡು ಮಠವನ್ನು ಮುನ್ನಡೆಸುತ್ತಿದ್ದಾರೆ.ಶ್ರೀಗಳು ಶ್ರೀಮಠದಲ್ಲಿ ಧಾರ್ಮಿಕ ಆಚರಣೆಗಳೊಂದಿಗೆ ಪ್ರತಿ ಅಮವಾಸ್ಯೆ ಹಾಗೂಹುಣ್ಣಿಮೆಗಳಲ್ಲಿ ವಿಶೇಷ ಪೂಜೆ ಹಾಗೆಯೇ ದಸರಾದಲ್ಲಿ 9 ದಿನಗಳ ಕಾಲ ಶ್ರೀದೇವಿ ಪುರಾಣಪಾರಾಯಣ ಕಾರ್ಯಕ್ರಮಗಳನ್ನು ನಡೆಸಿಕೊಡುತ್ತಿದ್ದಾರೆ. ಪ್ರತಿವರ್ಷ ಫೆಬ್ರವರಿ 15ರಂದುಶ್ರೀ ಸೇವಾಲಾಲ ಮಹಾರಾಜರ ಜಯಂತಿಯನ್ನು ಯಶಸ್ವಿಯಾಗಿ ಆಚರಿಸಲಾಗುತ್ತಿದೆ.ಶ್ರೀಗಳು ಶೈಕ್ಷಣಿಕವಾಗಿ ಶ್ರೀಮಠದಲ್ಲಿ ಅನಾಥ ಬಡ ಮಕ್ಕಳಿಗೆ ಶಿಕ್ಷಣ, ವಸತಿ ಜೊತೆಗೆಸಂಸ್ಕಾರಗಳನ್ನು ಕೊಟ್ಟು ಆಶ್ರಯ ಕೊಟ್ಟಿದ್ದಾರೆ.
Swamiji
Swamiji Name :
ಪೂಜ್ಯ ಶ್ರೀ ಮ.ನಿ. ಜಗದ್ಗುರು ತಿಪ್ಪೇಶ್ವರ ಮಹಾಸ್ವಾಮಿಗಳು
Place :
ಶಿವಾಜಿಪುರ, ಹಾನಗಲ್ಲು ತಾ||
Photo :
Programs
ಪ್ರತಿ ಅಮವಾಸ್ಯೆ, ಹುಣ್ಣಿಮೆಗೆ ವಿಶೇಷ ಪೂಜೆ.
ಪ್ರತಿ ವರ್ಷ ಫೆಬ್ರವರಿ 15ರಂದು ಶ್ರೀ ಸೇವಾಲಾಲ್ ಮಹಾರಾಜರ ಜಯಂತಿ.
ದಸರಾದಲ್ಲಿ 9 ದಿನಗಳ ಕಾಲ ಶ್ರೀದೇವಿ ಪುರಾಣ ಪಾರಾಯಣ.
Institutions
ಅನಾಥ ಬಡ ವಿದ್ಯಾರ್ಥಿಗಳಿಗೆ ಶ್ರೀಮಠದಲ್ಲಿ ಶಿಕ್ಷಣ ವಸತಿ ಇದೆ.
ವಿದ್ಯಾರ್ಥಿ ನಿಲಯ.
Photos
Full Address Kannada
ಶ್ರೀ ಸೇವಾಲಾಲ್ ದುರ್ಗಾದೇವಿ ಬಂಜಾರ ಗುರುಪೀಠ
ಕಾಲ್ವಿ ತಾಂಡ, ಕಾಲ್ವಿ ಪೋಸ್ಟ್ - 583 219
ಹೂವಿನಹಡಗಲಿ ತಾ||, ಬಳ್ಳಾರಿ ಜಿ|