Basavakendra Shree Rudradevara Matha

Basavakendra Shree Rudradevara Matha Claimed

ಬಸವಕೇಂದ್ರ ಶ್ರೀ ರುದ್ರದೇವರ ಮಠ

Average Reviews

Description

ಶ್ರೀ ರುದ್ರದೇವರ ಮಠ (ಬಸವ ಕೇಂದ್ರ)

ಕರ್ತೃ – ಪೂಜ್ಯ ಶ್ರೀ ರುದ್ರದೇವರು ಮಹಸ್ವಾಮಿಗಳು

ಶಿರಸಿ ಪಟ್ಟಣದ ಮಧ್ಯಭಾಗದ ಸಿಂಪಿಗಲ್ಲಿ ಪ್ರದೇಶದಲ್ಲಿ ಈಗ್ಗೆ ಸುಮಾರುಮೂರುನೂರು ವರ್ಷಗಳ ಹಿಂದೆ ಪ್ರಾರಂಭವಾಗಿರುವ ಶ್ರೀ ರುದ್ರದೇವರ ಮಠವುಚಿತ್ರದುರ್ಗದ ಶ್ರೀ ಮುರುಘಾ ಬೃಹನ್ಮಠದ ಶಾಖಾಮಠವಾಗಿ ಬೆಳೆದು ಬಂದಿದೆ. ಪೂಜ್ಯ ಶ್ರೀರುದ್ರದೇವರು ಮಹಾಸ್ವಾಮಿಗಳು ಸಂಚಾರದಲ್ಲಿದ್ದಾಗ ಭಕ್ತರ ಅಪೇಕ್ಷೆ ಮೇರೆಗೆ ಇಲ್ಲಿ ನೆಲೆಸಿಶ್ರೀಮಠವನ್ನು ಸ್ಥಾಪಿಸಿದ್ದರಿಂದ ಶ್ರೀ ರುದ್ರದೇವರ ಮಠ ಎಂಬ ಹೆಸರು ಬಂದಿದೆ. ಶ್ರೀಮಠವುಪ್ರಸ್ತುತ ಚಿತ್ರದುರ್ಗ ಬೃಹನ್ಮಠದ “ಬಸವ ಕೇಂದ್ರ” ವಾಗಿಯೂ ಕಾರ್ಯ ನಿರ್ವಹಿಸುತ್ತಿದೆ.ಪುರಾತನ ಪರಂಪರೆಯ ಶ್ರೀಮಠದ ಪರಂಪರೆಯ ಬಗ್ಗೆ ದಾಖಲೆಗಳುಲಭ್ಯವಿಲ್ಲವಾದರೂ ಸಿಕ್ಕಿರುವ ಮಾಹಿತಿಗಳ ಆಧಾರದ ಮೇಲೆ ಶ್ರೀಮಠದ ಈಗಿನ ಶ್ರೀಗಳುಐದನೇ ಶ್ರೀಗಳು ಎಂದು ಗುರುತಿಸಬಹುದು. ಕರ್ತೃಗುರುಗಳ ನಂತರ ಶ್ರೀ ಮ.ನಿ.ಪ್ರ.ಶಾಂತವೀರಸ್ವಾಮಿಗಳು. ಶ್ರೀ ಮ.ನಿ.ಪ್ರ. ಜಯಂತ ಸ್ವಾಮಿಗಳು ಹಾಗೂ ಹಿಂದಿನ ಶ್ರೀಗಳಾದಪ್ರಸ್ತುತ ಚಿತ್ರದುರ್ಗ ಬೃಹನ್ಮಠದ ಶರಣರಾದ ಶ್ರೀ ಶಿವಮೂರ್ತಿ ಮುರುಘಾಶರಣರು,ಇವರುಗಳು ಅಧಿಕಾರ ನಡೆಸಿದ್ದಾರೆ.ಕೆಲ ಕಾಲ ಖಾಲಿ ಉಳಿದಿದ್ದ ಶ್ರೀಮಠಕ್ಕೆ ಚಿತ್ರದುರ್ಗದ ಶ್ರೀ ಮಲ್ಲಿಕಾರ್ಜುನಮುರುಘರಾಜೇಂದ್ರ ಜಗದ್ಗುರುಗಳು ಶ್ರೀ ಶಿವಮೂರ್ತಿಸ್ವಾಮಿಗಳನ್ನು 1988ರಲ್ಲಿ ಅಧಿಕಾರಕ್ಕೆತಂದರು. ಈ ಶ್ರೀಗಳೇ ಹಾವೇರಿಯ ಹೊಸ ಮಠದ ಜವಾಬ್ದಾರಿಯನ್ನುನೋಡಿಕೊಳ್ಳಬೇಕಾಯಿತು. ಗುರುಗಳು ಎರಡೂ ಮಠಗಳನ್ನು ನಿರ್ವಹಿಸುವ ಹಾಗೂ ಅವರಪ್ರಗತಿ ಶೀಲ ಗುಣಗಳನ್ನು ಗಮನಿಸಿದ ಶ್ರೀ ಮಲ್ಲಿಕಾರ್ಜುನ ಜಗದ್ಗುರುಗಳು ಶ್ರೀ ಶಿವಮೂರ್ತಿಸ್ವಾಮಿಗಳನ್ನು ತಮ್ಮ ಉತ್ತರಾಧಿಕಾರಿಗಳನ್ನಾಗಿ ಚಿತ್ರದುರ್ಗದ ಬೃಹನ್ಮಠಕ್ಕೆ ನೇಮಿಸಿ 1991ರವಿಜಯದಶಮಿಯಂದು ಅಧಿಕಾರ ನೀಡಿದರು.ಶ್ರೀ ಶಿವಮೂರ್ತಿ ಶರಣರು ಚಿತ್ರದುರ್ಗಕ್ಕೆ ತೆರಳಿದ ನಂತರ ಶ್ರೀಮಠವು ಪುನಃಖಾಲಿ ಉಳಿಯಬೇಕಾಯಿತು. ಇತ್ತೀಚೆಗೆ ಚಿತ್ರದುರ್ಗದ ಶ್ರೀ ಶಿವಮೂರ್ತಿ ಶರಣರು 2010ಆಗಸ್ಟ್ 10 ರಂದು ಈಗಿನ ಶ್ರೀಗಳಾದ ಶ್ರೀ ಮ.ನಿ.ಪ್ರ. ಮಲ್ಲಿಕಾರ್ಜುನ ಸ್ವಾಮಿಗಳನ್ನುಚರಮೂರ್ತಿಗಳನ್ನಾಗಿ ನೇಮಿಸಿದ್ದು ಶ್ರೀ ಮಲ್ಲಿಕಾರ್ಜುನ ಸ್ವಾಮಿಗಳು ಶರಣರಮಾರ್ಗದರ್ಶನದಲ್ಲಿ ಶ್ರೀಮಠವನ್ನು ಅಭಿವೃದ್ದಿ ಪಥದತ್ತ ಕೊಂಡೊಯ್ಯುತ್ತಿದ್ದಾರೆ.

Swamiji

Swamiji Name :
ಶ್ರೀ.ಮ.ನಿ.ಪ್ರ. ಮಲ್ಲಿಕಾರ್ಜುನ ಸ್ವಾಮಿಗಳು
Date of Birth :
01-06-1985
Place :
ಸೀಬಾರ, ಚಿತ್ರದುರ್ಗ ತಾ||
Pattadikara :
10-08-2010
Photo :

Programs

ಪ್ರತಿ ತಿಂಗಳ ಕೊನೆಯ ಭಾನುವರ “ಶರಣ ಸಂಗಮ” ಕಾರ್ಯಕ್ರಮ ಜರುಗುವುದು
ಶಿವರಾತ್ರಿ, ಬಸವಜಯಂತಿ, ನಾಗರ ಪಂಚಮಿಯಂದು ವಿಶೇಷ ಕಾರ್ಯಕ್ರಮಗಳು

Photos

Full Address Kannada

ಬಸವಕೇಂದ್ರ ಶ್ರೀ ರುದ್ರದೇವರ ಮಠ
ಸಿಂಪಿಗಲ್ಲಿ, ಶಿರಸಿ - 581401
ಶಿರಸಿ ತಾ|| ಉತ್ತರಕನ್ನಡ ಜಿ||

Map

Near by Places

ಸಿದ್ದಾಪುರ - 35 ಕಿ.ಮೀ.
ಹಾವೇರಿ - 75 ಕಿ.ಮೀ.

Statistic

101 Views
0 Rating
0 Favorite
0 Share
error: Content is protected !!