ಕರ್ನಾಟಕದ ಪ್ರಮುಖ ನಗರಗಳˉÉ್ಲೂಂದಾದ ಶಿವಮೊಗ್ಗ ನಗರದ ವೆಂಕಟೇಶ್ವರಬಡಾವಣೆಯಲ್ಲಿ ಸ್ಥಾಪಿತಗೊಂಡಿರುವ ಬಸವಕೇಂದ್ರವು ಚಿತ್ರದುರ್ಗದ ಶ್ರೀ ಮುರುಘಾಮಠದ ಶಾಖಾಮಠವಾಗಿದೆ. ಬಸವಕೇಂದ್ರವು ಈ ಭಾಗದಲ್ಲಿ ಧಾರ್ಮಿಕ ಆಚರಣೆಗಳನ್ನುನಡೆಸುತ್ತಾ ಜನರಲ್ಲಿ ಧಾರ್ಮಿಕ ಪ್ರಜ್ಞೆಯನ್ನು ಬೆಳೆಸುವಲ್ಲಿ ಸಹಕಾರಿಯಾಗಿದೆ.ಚಿತ್ರದುರ್ಗ ಮುರುಘಾ ಬೃಹನ್ಮಠದ ಶ್ರೀ ಶಿವಮೂರ್ತಿ ಮುರುಘಾ ಶರಣರಕೃಪಾಶೀರ್ವಾದದಿಂದ 2006ರ ಡಿಸೆಂಬರ್ 20ರಲ್ಲಿ ಬಸವಕೇಂದ್ರದ ಉತ್ತರಾಧಿಕಾರಿಗಳಾಗಿನೇಮಕಗೊಂಡ ಪೂಜ್ಯ ಶ್ರೀ ಬಸವ ಮರುಳಸಿದ್ದ ಸ್ವಾಮಿಗಳವರು ಹೆಚ್ಚು ಕ್ರಿಯಾಶೀಲರಾಗಿದ್ದು ಶ್ರೀಮಠದಲ್ಲಿ ಶರಣತತ್ವದಡಿ ಆಚರಣೆಗಳನ್ನು ನಡೆಸಿಕೊಂಡು ಬರುತ್ತಿದ್ದಾರೆ.ಶ್ರೀಗಳು ಚಿತ್ರದುರ್ಗದ ಶ್ರೀ ಮುರುಘಾ ಮಠದಲ್ಲಿ ಅಧ್ಯಯನ ನಡೆಸಿದವರಾಗಿದ್ದು ಅಲ್ಲಿಯಶರಣತತ್ವ ಆಚರಣೆಗಳನ್ನು ಪರಿಣಾಮಕಾರಿಯಾಗಿ ಜಾರಿಗೊಳಿಸುತ್ತಿದ್ದಾರೆ. ಇದರ ಮೊದಲಹಂತವಾಗಿ ಶ್ರೀ ಬಸವ ನೆˉÉ ಬಾಲಕಾಶ್ರಮವು ಸ್ಥಾಪಿಸಲ್ಪಟ್ಟಿದೆ.ಶ್ರೀಗಳು ಮಠದಲ್ಲಿ ಪ್ರತಿ ತಿಂಗಳು “ಶರಣ ಸಂಗಮ” ಎಂಬ ವಿಶೇಷಕಾರ್ಯಕ್ರಮದೊಂದಿಗೆ ಪ್ರತಿ ದಿನ ಸಂಜೆ ಭಜನೆ ಮತ್ತು ಪ್ರವಚನ ನಡೆಸಿಕೊಡುತ್ತಿದ್ದಾರೆ.ಹಾಗೆಯೇ ಪ್ರತಿ ವರ್ಷ ಕಾರ್ತೀಕ ಮಾಸದಲ್ಲಿ ಪ್ರತಿ ನಿತ್ಯ “ಚಿಂತನ ಕಾರ್ತೀಕ” ಎಂಬವಿನೂತನ ಕಾರ್ಯಕ್ರಮವನ್ನು ಹಮ್ಮಿಕೊಂಡು ವಿವಿಧ ಧಾರ್ಮಿಕ, ಸಾಂಸ್ಕøತಿಕ ಹಾಗೆಯೇಜನರನ್ನು ಚಿಂತನೆಗೆ ಹಚ್ಚುವ ಉಪನ್ಯಾಸಗಳನ್ನು ಪ್ರತಿನಿತ್ಯ ವಿವಿಧ ಕ್ಷೇತ್ರಗಳ ಗಣ್ಯರಿಂದನಡೆಸಿಕೊಡುತ್ತಾರೆ.
Swamiji
Swamiji Name :
ಪೂಜ್ಯ ಶ್ರೀ ಬಸವ ಮರುಳಸಿದ್ದ ಸ್ವಾಮಿಗಳು
Date of Birth :
1-12-1984
Place :
ಕಂದಗಲ್ಲು, ದಾವಣಗೆರೆ ತಾ||
Pattadikara :
20-12-2006
Photo :
Programs
ಪ್ರತಿ ತಿಂಗಳು 20ರಂದು "ಶರಣ ಸಂಗಮ" ಪ್ರತಿ ದಿನ ಸಂಜೆ ಭಜನೆ ಮತ್ತು ಪ್ರವಚನ. ಶ್ರಾವಣ ಮಾಸದಲ್ಲಿ ಒಂದು ವಾರ ವಿಶೇಷ ಕಾರ್ಯಕ್ರಮಗಳು. ಕಾರ್ತೀಕ ಮಾಸದಲ್ಲಿ ನಿತ್ಯ "ಚಿಂತನ ಕಾರ್ತೀಕ".
Institutions
ಬಸವ ನೆˉÉ ಬಾಲಕಾಶ್ರಮ ಇದೆ.
Photos
Full Address Kannada
ಬಸವ ಕೇಂದ್ರ 3ನೇ ತಿರುವು, ಅ.ನ.ಕೃ. ರಸ್ತೆ, ವೆಂಕಟೇಶ್ವರ ನಗರ ಶಿವಮೊಗ್ಗ - 577 201