Shree Basavanagudi Matha

Shree Basavanagudi Matha Claimed

ಶ್ರೀ ಬಸವನಗುಡಿ ಮಠ

Average Reviews

Description

ಶ್ರೀ ಬಸವನಗುಡಿ ಮಠ

ಕರ್ತೃ – ಪೂಜ್ಯ ಶ್ರೀ ನಂದೀಶ್ವರ ಮಹಾಸ್ವಾಮಿಗಳು

ಮಂಗಳೂರು ನಗರದ ಹೃದಯ ಭಾಗದಲ್ಲಿ ಅಸ್ತಿತ್ತ್ವದಲ್ಲಿರುವ ಶ್ರೀ ಬಸವನಗುಡಿಮಠವು ಪುರಾತನ ಕಾಲದ್ದಾಗಿದ್ದು, ಕೆಳದಿ ಅರಸರ ನಂತರ ಟಿಪ್ಪು ಸುಲ್ತಾನನ ಆಡಳಿತದಅವಧಿಯಲ್ಲಿ ಹೆಚ್ಚು ಆಶ್ರಯ ದೊರೆತು ಅಭಿವೃದ್ಧಿ ಕಂಡಿದೆ ಎಂದು ಹೇಳಲಾಗುತ್ತದೆ.ಶ್ರೀಮಠದಲ್ಲಿ ಬಸವಣ್ಣನ (ನಂದಿ) ಮೂರ್ತಿಯಿದ್ದು ಆ ಕಾರಣದಿಂದಾಗಿಯೇ ಶ್ರೀಮಠಕ್ಕೆ ಶ್ರೀಬಸವನಗುಡಿ ಮಠವೆಂಬ ಹೆಸರು ಬಂದಿದೆ.ಶ್ರೀಮಠದ ಪೂರ್ವೇತಿಹಾಸದ ಕುರಿತಾಗಿ ಹೆಚ್ಚಿನ ಮಾಹಿತಿಗಳು ಲಭ್ಯವಿಲ್ಲ.ಪುರಾತನವಾದ ಈ ಮಠದಲ್ಲಿ ಆಡಳಿತ ನಡೆಸಿದ ಮಠಾದೀಶರುಗಳ ವಿವರಗಳುದೊರಕುವುದಿಲ್ಲ. ಸುಮಾರು 250 ವರ್ಷಗಳ ಇತ್ತೀಚಿನ ವಿವರಗಳು ಅಲ್ಪ ಪ್ರಮಾಣದಲ್ಲಿದೊರಕುತ್ತವೆ. ದಾವಣಗೆರೆ ಜಿಲ್ಲೆ ಹೊನ್ನಾಳಿ ತಾಲ್ಲೂಕಿನ ಹೊಟ್ಯಾಪುರ ಗ್ರಾಮದ ಹಿರೇಮಠದಶ್ರೀ ರೇವಣಸಿದ್ದ ಶಿವಾಚಾರ್ಯ ಮಹಾಸ್ವಾಮಿಗಳು ದಕ್ಷಿಣ ಕನ್ನಡ ಜಿಲ್ಲೆಯಲ್ಲಿಸಂಚಾರದಲ್ಲಿದ್ದಾಗ ಇಲ್ಲಿಗೆ ಆಗಮಿಸಿ ಶ್ರೀಮಠದ ಜವಾಬ್ದಾರಿಯನ್ನು ವಹಿಸಿಕೊಂಡರುಎಂದು ತಿಳಿದುಬರುತ್ತದೆ.ಸ್ವಾತಂತ್ರ್ಯಾ ನಂತರದ ದಿನಗಳಲ್ಲಿ ಶ್ರೀಮಠದ ಅಧಿಕಾರವನ್ನು ವಹಿಸಿಕೊಂಡ ಶ್ರೀರೇವಣಸಿದ್ದ ಶಿವಾಚಾರ್ಯರು ಜೀರ್ಣಗೊಂಡಿದ್ದ ಮಠದ ಕಟ್ಟಡವನ್ನುಅಭಿವೃದ್ಧಿಪಡಿಸಿದರು. ಅನ್ಯರ ಪಾಲಾಗಿದ್ದ ಮಠದ ಆಸ್ತಿಯನ್ನು ಮಠದ ವಶಕ್ಕೆ ಪಡೆಯಲುಕಾನೂನಿನ ಹೋರಾಟ ನಡೆಸಿ ಯಶಸ್ವಿಯಾದರು. ಮಠದ ಆಸ್ತಿಯನ್ನು ವ್ಯವಸ್ಥಿತಗೊಳಿಸಿಧಾರ್ಮಿಕ ಕಾರ್ಯಗಳು ನಡೆಯುವಂತೆ ಮಾಡಿ ಹೊಟ್ಯಾಪುರ ಮತ್ತು ಮಂಗಳೂರುಎರಡೂ ಕಡೆ ಆಡಳಿತ ನಡೆಸಿದ ಗುರುಗಳು ಈಗಿನ ಶ್ರೀಗಳನ್ನು ತಮ್ಮಉತ್ತರಾಧಿಕಾರಿಯನ್ನಾಗಿ ನೇಮಿಸಿ 1984ರಲ್ಲಿ ಲಿಂಗೈಕ್ಯರಾದರು.ಪ್ರಸ್ತುತ ಶ್ರೀಗಳಾದ ಶ್ರೀ ಷ.ಬ್ರ. ಗಿರಿಸಿದ್ದೇಶ್ವರ ಶಿವಾಚಾರ್ಯ ಸ್ವಾಮಿಗಳು2002ರಲ್ಲಿ ಹೊಟ್ಯಾಪುರದಲ್ಲಿ ಪಟ್ಟಾಧಿಕಾರ ಸ್ವೀಕರಿಸಿದ್ದು ಪ್ರತಿ 15 ದಿನಕ್ಕೊಮ್ಮೆ ಇಲ್ಲಿಗೆಆಗಮಿಸಿ ಇಲ್ಲಿನ ಆಚರಣೆಗಳು, ಅಭಿವೃದ್ಧಿ ಕಾರ್ಯಗಳನ್ನು ಮುನ್ನಡೆಸಿಕೊಂಡುಬರುತ್ತಿದ್ದಾರೆ. ಪಂಚಪೀಠಗಳ ಸಂಪ್ರದಾಯದ ಶ್ರೀಮಠವು ಗುರುವಿರಕ್ತರೆಂಬ ಬೇದವಿಲ್ಲದೆಸಮಾನ ದೃಷ್ಠಿಕೋನದೊಂದಿಗೆ ಮುನ್ನಡೆಯುತ್ತಿದ್ದು ಪ್ರತಿ ವರ್ಷ ವಿಶೇಷವಾಗಿ ಬಸವಜಯಂತಿಯನ್ನು ಆಚರಿಸಲಾಗುತ್ತದೆ.

Swamiji

Swamiji Name :
ಶ್ರೀ ಷ.ಬ್ರ. ಗಿರಿಸಿದ್ದೇಶ್ವರ ಶಿವಾಚಾರ್ಯ ಸ್ವಾಮಿಗಳು
Date of Birth :
06-06-1963
Place :
ಹೊಟ್ಯಾಪುರ, ಹೊನ್ನಾಳಿ ತಾ||
Pattadikara :
24-03-2002

Programs

ಪ್ರತಿ ಅಮವಾಸ್ಯೆ, ಹುಣ್ಣಿಮೆಗಳಲ್ಲಿ ವಿಶೇಷ ಪೂಜೆ ನವರಾತ್ರಿಗೆ ನಿತ್ಯ ರುದ್ರಾಭಿಷೇಕ, ಹೋಮ, ವಿಶೇಷ ಧಾರ್ಮಿಕ ಕಾರ್ಯಕ್ರಮಗಳು ಬಸವ ಜಯಂತಿ ಆಚರಣೆ

Full Address Kannada

ಶ್ರೀ ಬಸವನಗುಡಿ ಮಠ ನ್ಯೂ ಚಿತ್ರಮಂದಿರದ ಹತ್ತಿರ, ಮಂಗಳೂರು-575 001 ದಕ್ಷಿಣ ಕನ್ನಡ ಜಿಲ್ಲೆ

Map

Near by Places

ಮಂಗಳೂರು ಬಸ್ಸ್ಟ್ಯಾಂಡ್ - 3 ಕಿ.ಮೀ. ಮೂಡಬಿದ್ರೆ - 25 ಕಿ.ಮೀ. ಕಟೀಲ್ - 20 ಕಿ.ಮೀ. ಉಡುಪಿ - 60 ಕಿ.ಮೀ.

Statistic

141 Views
0 Rating
0 Favorite
1 Share
error: Content is protected !!