Shree Virakta Matha

Shree Virakta Matha Claimed

ಶ್ರೀ ವಿರಕ್ತ ಮಠ

Average Reviews

Description

ಶ್ರೀ ವಿರಕ್ತ ಮಠ

ಕರ್ತೃ – ಪರಮ ಪೂಜ್ಯ ರುದ್ರಪ್ಪ ಸ್ವಾಮಿಗಳು

ಸೋಮವಾರಪೇಟೆ ಪಟ್ಟಣದ ಮzs À್ಯಭಾಗದಲ್ಲಿ ಶ್ರೀ ವಿರಕ ್ತಮಠವುಸ್ಥಾಪನೆಯಾಗಿದ್ದು ಶ್ರೀ ಚಿತ್ರದುರ್ಗ ಬೃಹನ್ಮಠದ ಶಾಖಾ ಮಠವಾಗಿ ವಿರಕ್ತ ಸಂಪ್ರದಾಯದಲ್ಲಿಬೆಳೆದುಬಂದಿದೆ. ಶ್ರೀಮಠದ ಕರ್ತೃಗುರುಗಳೆಂದು ಪೂಜ್ಯ ಶ್ರೀ ರುದ್ರಪ್ಪ ಸ್ವಾಮಿಗಳನ್ನುಗುರುತಿಸಲಾಗಿದ್ದು 19ನೇ ಶತಮಾನದ ಆದಿಯಲ್ಲಿ ಶ್ರೀ ವಿರಕ್ತ ಮಠವು ಸ್ಥಾಪಿತಗೊಂಡಿದೆ.ಕರ್ತೃಗುರುಗಳಾದ ಶ್ರೀ ರುದ್ರಪ್ಪ ಸ್ವಾಮಿಗಳು ಶ್ರೀ ವಿರಕ್ತ ಮಠಕ್ಕೆ ಬರುವ ಮೊದಲೇಇಲ್ಲಿ ಮಠ ಇದ್ದಿರಬಹುದೆಂದು ಹೇಳಲಾಗಿದ್ದು ಸ್ಪಷ್ಟತೆಯಿಲ್ಲ. ಶ್ರೀ ರುದ್ರಪ್ಪ ಸ್ವಾಮಿಗಳುಶ್ರೀಮಠದ ಪೀಠಾಧಿಪತಿಗಳಾಗಿ ಪ್ರಸಿದ್ದರಾಗಿದ್ದು ಇವರ ಖ್ಯಾತಿ ಕೊಡಗನ್ನಾಳುತ್ತಿದ್ದ ಶ್ರೀಲಿಂಗರಾಜ ಒಡೆಯರ್ ಅರಸರವರ ತನಕ ತಲುಪಿ ಅರಸರು ಶ್ರೀಮಠಕ್ಕೆ 1814ರಲ್ಲಿ 25 ರಿಂದ30 ಎಕರೆ ಭೂಮಿಯನ್ನು ಜಹಾಗೀರ್ ನೀಡಿರುವುದರ ದಾಖಲೆ ಇದೆ.ಕರ್ತೃ ಗುರುಗಳ ನಂತರದ ಪರಂಪರೆಯ ಬಗ್ಗೆ ಹೆಚ್ಚಿನ ಮಾಹಿತಿಗಳು ಲಭ್ಯವಿಲ್ಲ.ಪರಂಪರೆಯ ಹಿಂದಿನ ಶ್ರೀಗಳಾದ ಶ್ರೀ ಮ.ನಿ.ಪ್ರ. ಗುರುಸಿದ್ದ ಸ್ವಾಮಿಗಳು ಧೀರ್ಘಕಾಲಶ್ರೀಮಠವನ್ನು ಸಮರ್ಥವಾಗಿ ಮುನ್ನಡೆಸಿದ್ದು 1934ರಲ್ಲಿ “ಶ್ರೀ ಜಯದೇವ ಉಚಿತ ಪ್ರಸಾದನಿಲಯ”ವನ್ನು ಸ್ಥಾಪಿಸಿದರು. ಶ್ರೀಗಳ ಕಾಲದಲ್ಲಿಯೇ ಶ್ರೀಮಠವು ನವೀಕರಣಗೊಂಡಿದ್ದುಗುರುಗಳು ತಮ್ಮ ಜೀವಿತಾವಧಿಯಲ್ಲಿಯೇ 1983ರ ಏಪ್ರಿಲ್ 04ರಲ್ಲಿ ಪ್ರಸ್ತುತ ಶ್ರೀಗಳಾದ ಶ್ರೀಮ.ನಿ.ಪ್ರ. ವಿಶ್ವೇಶ್ವರ ಸ್ವಾಮಿಗಳನ್ನು ಪಟ್ಟಕ್ಕೆ ತಂದು 1987ರಲ್ಲಿ ಲಿಂಗೈಕ್ಯರಾಗಿದ್ದಾರೆ.ಪ್ರಸ್ತುತ ಶ್ರೀಗಳಾದ ಶ್ರೀ ಮ.ನಿ.ಪ್ರ. ವಿಶ್ವೇಶ್ವರ ಸ್ವಾಮಿಗಳು ಬೆಂಗಳೂರು ಹಾಗೂಎಡೆಯೂರುಗಳಲ್ಲಿ ವಿದ್ಯಾಭ್ಯಾಸ ಮಾಡಿ ಮಠಕ್ಕೆ ಆಗಮಿಸಿ ಮಠವನ್ನು ಧಾರ್ಮಿಕ,ಸಾಮಾಜಿಕ ಹಾಗೂ ಶೈಕ್ಷಣಿಕವಾಗಿ ಅಭಿವೃದ್ದಿಪಡಿಸಿದ್ದಾರೆ. ಶ್ರೀಗಳು ಶ್ರೀಮಠದಲ್ಲಿ ನಿತ್ಯಧಾರ್ಮಿಕ ಆಚರಣೆಗಳೊಂದಿಗೆ ಜೇಷ್ಠ ಮಾಸದಲ್ಲಿ ಶ್ರೀ ಹಿರಿಯ ಗುರುಗಳ ಪುಣ್ಯಾರಾಧನೆಕಾರ್ಯಕ್ರಮ ಹಾಗೂ ಕಾರ್ತೀಕ ಮಾಸದಲ್ಲಿ “ಶಿವಾನುಭವ ಪರೀಕ್ಷೆ” ವಿನೂತನಕಾರ್ಯಕ್ರಮಗಳನ್ನೂ ನಡೆಸಿಕೊಂಡು ಬರುತ್ತಿದ್ದಾರೆ.

Swamiji

Swamiji Name :
ಶ್ರೀ ಮ.ನಿ.ಪ್ರ. ವಿಶ್ವೇಶ್ವರ ಸ್ವಾಮಿಗಳು
Date of Birth :
10-04-1957
Place :
ಪೊನ್ನಸಮುದ್ರ, ಪಾವಗಡ ತಾ||
Pattadikara :
04-04-1983
Photo :

Programs

ಶಿವರಾತ್ರಿ ಮತ್ತು ಬಸವಜಯಂತಿ ಆಚರಣೆ
ಯುಗಾದಿಯಂದು ಪಂಚಾಂಗ ಶ್ರವಣ
ಜೇಷ್ಠ ಮಾಸದಲ್ಲಿ ಶ್ರೀ ಹಿರಿಯ ಗುರುಗಳ ಪುಣ್ಯಾರಾಧನೆ
ಹಾಗೂ ಧಾರ್ಮಿಕ ಮತ್ತು ಸಾಂಸ್ಕøತಿಕ ಕಾರ್ಯಕ್ರಮಗಳು
ಧನುರ್ಮಾಸದಲ್ಲಿ ನಿತ್ಯ ವಿಶೇಷ ಪೂಜೆ
ಕಾರ್ತಿಕ ಮಾಸದಲ್ಲಿ “ಶಿವಾನುಭವ ಪರೀಕ್ಷೆ”

Photos

Full Address Kannada

ಶ್ರೀ ವಿರಕ್ತ ಮಠ
ಬಸವೇಶ್ವರ ರಸ್ತೆ, ಸೋಮವಾರಪೇಟೆ-571 236
ಕೊಡಗು ಜಿಲ್ಲೆ

Map

Near by Places

ಬಸ್ ಸ್ಟ್ಯಾಂಡ್ - 1 ಕಿ.ಮೀ.
ಕುಶಾಲನಗರ - 28 ಕಿ.ಮೀ.
ಮಡಿಕೇರಿ - 40 ಕಿ.ಮೀ.

Statistic

316 Views
0 Rating
0 Favorite
0 Share
error: Content is protected !!