Shree Kshetra Tapovana

Shree Kshetra Tapovana Claimed

ಶ್ರೀ ಕ್ಷೇತ್ರ ತಪೆÇೀವನ

Average Reviews

Description

ಶ್ರೀಕ್ಷೇತ್ರ ತಪೋವನ – ಮನೆಹಳ್ಳಿ ಗ್ರಾಮ

ಕರ್ತೃ – ಶ್ರೀ ಗುರುಸಿದ್ದವೀರೇಶ್ವರ ಮಹಾಸ್ವಾಮಿಗಳು

ಕೊಡಗು ಜಿಲ್ಲೆ ಸೋಮವಾರಪೇಟೆ ತಾಲ್ಲೂಕು ಮನೆಹಳ್ಳಿ ಗ್ರಾಮವೆಂಬ ಪುರಾತನಕಾಲದಲ್ಲಿದ್ದ ಗ್ರಾಮದಲ್ಲಿ ಕಳೆದ ದಶಕದಿಂದೀಚೆಗೆ ಸ್ಥಾಪಿತಗೊಂಡು ಅಸಂಖ್ಯಾತ ಭಕ್ತರನ್ನುಪೆÇರೆಯುತ್ತಿರುವ ಶ್ರೀ ಕ್ಷೇತ್ರ ತಪೋವನವು ಕಡಿಮೆ ಅವಧಿಯಲ್ಲಿಯೇ ನಾಡಿನ ಗಮನಸೆಳೆದಿದೆ. ಸುಮಾರು 800 ವರ್ಷಗಳ ಹಿಂದೆ ಅಸ್ತಿತ್ತ್ವದಲ್ಲಿತ್ತೆಂದು ಹೇಳಲಾಗುವ ಮನೆಹಳ್ಳಿಗ್ರಾಮವು ಕ್ರಮೇಣ ನಾಶಗೊಂಡು ದಟ್ಟಾರಣ್ಯವಾಗಿತ್ತು. ಇತ್ತೀಚೆಗೆ 2004ರಲ್ಲಿ ಶ್ರೀ ಮ.ನಿ.ಪ್ರ.ಮಹಾಂತ ಶಿವಲಿಂಗ ಸ್ವಾಮಿಗಳು ಈ ಸ್ಥಳದಲ್ಲಿ ಮಠವನ್ನು ಸ್ಥಾಪಿಸಿದ್ದಾರೆ.ಸುಮಾರು 800 ವರ್ಷಗಳ ಹಿಂದೆ ಮನೆಹಳ್ಳಿ ಗ್ರಾಮವು ಒಂದು ಪಟ್ಟಣವಾಗಿದ್ದುರಾಜರಾಳ್ವಿಕೆಗೆ ಒಳಪಟ್ಟಿತ್ತು. ಆದರೆ ಕ್ರಮೇಣ ಈ ಪಟ್ಟಣವು ನಾಶಗೊಂಡಿದ್ದು ಕಳೆದಏಳುನೂರು ವರ್ಷಗಳಿಂದ ನಿರ್ಜನ ಪ್ರದೇಶವಾಗಿತ್ತು ಎಂದು ಶ್ರೀ ಮಹಾಂತ ಶಿವಲಿಂಗಸ್ವಾಮಿಗಳು ಅಭಿಪ್ರಾಯ ಪಡುತ್ತಾರೆ. ಕೋಟೆಯು ಕೂಡ ಸ್ಥಾಪಿತಗೊಂಡಿತ್ತೆಂದುಹೇಳಲಾಗುತ್ತಿದ್ದು ಕೋಟೆಯ ಅವಶೇಷಗಳು, ಸಾವಿರಾರು ಹೆಂಚಿನ ಚೂರುಗಳು ಹಾಗೂಕೆಲವು ಮನೆಗಳಿಗೆ ಉಪಯೋಗಿಸುತ್ತಿದ್ದ ಅವಶೇಷಗಳು ಕಾಣಸಿಗುತ್ತಿದ್ದು ಹೆಚ್ಚಿನಸಂಶೋಧನೆಯ ಅಗತ್ಯವಿದೆ.ಈ ಪ್ರದೇಶದಲ್ಲಿ ಮನೆಹಳ್ಳಿ ಎಂಬ ಪಟ್ಟಣವಿದ್ದ ಸಮಯದಲ್ಲಿ ಕಲ್ಯಾಣ ಕ್ರಾಂತಿಯನಂತರ ಶ್ರೀಕ್ಷೇತ್ರದ ಕರ್ತೃಗಳಾದ ಪೂಜ್ಯ ಶ್ರೀ ಗುರುಸಿದ್ದವೀರೇಶ್ವರ ಸ್ವಾಮಿಗಳು ಈ ಕ್ಷೇತ್ರಕ್ಕೆಸಂಚಾರ ಬಂದು ಅನುಷ್ಠಾನ ಕೈಗೊಂಡಿದ್ದರು ಎಂದು ಹೇಳಲಾಗಿದೆ. ಶ್ರೀಗುರುಸಿದ್ದವೀರೇಶ್ವರ ಸ್ವಾಮಿಗಳು ಇಲ್ಲಿ ನೆಲೆಸಿ ಧಾರ್ಮಿಕ ಆಚರಣೆಗಳನ್ನು ಕೈಗೊಂಡುಭಕ್ತರಿಗೆ ಧಾರ್ಮಿಕ ಮಾರ್ಗದರ್ಶನ ನೀಡಿದ್ದರು. ಆದರೆ ಈ ಪಟ್ಟಣವು ಮುಂದೆನಾಮಾವಶೇಷಗೊಂಡಿದ್ದರಿಂದ ಶ್ರೀಮಠದ ಪೂರ್ವೇತಿಹಾಸದ ಬಗ್ಗೆ ಹೆಚ್ಚಿಗೆ ತಿಳಿದುಬರುವುದಿಲ್ಲ. ಶ್ರೀಮಠದ ಪರಂಪರೆಯಲ್ಲಿ ಕರ್ತೃಗಳ ನಂತರ ಅನೇಕ ಗುರುಗಳು ಅಧಿಕಾರನಡೆಸಿದ್ದಾರೆಂದು ಹೇಳಲಾಗುತ್ತಿದ್ದರೂ ಪರಂಪರೆಯ ಬಗ್ಗೆ ಸ್ಪಷ್ಟತೆ ಇಲ್ಲ.ಶ್ರೀಕ್ಷೇತ್ರದಲ್ಲಿ ಇಲ್ಲಿಗೆ 150-200 ವರ್ಷಗಳ ಹಿಂದೆ ಲಿಂ|| ಶ್ರೀ ಮ.ನಿ.ಪ್ರ.ಪ್ರಭುದೇವ ಸ್ವಾಮಿಗಳು ಎಂಬುವವರು ಧಾರ್ಮಿಕ ಆಚರಣೆಗಳನ್ನು ನಡೆಸಿದ್ದು ಇವರುಬಳಸುತ್ತಿದ್ದ ಪೂಜಾ ಸಾಮಾಗ್ರಿಗಳು ಈ ಕ್ಷೇತ್ರದ ಸುತ್ತಮುತ್ತಲ ಹಳ್ಳಿಗಳ ಭಕ್ತರ ಮನೆಗಳಲ್ಲಿಸಿಕ್ಕಿದ್ದು ಅವು ಈಗ ಇದೇ ಮಠದಲ್ಲಿವೆ. ಶ್ರೀಗಳು ಶ್ರೀಕ್ಷೇತ್ರದಲ್ಲಿ ಅನುಷ್ಟಾನ ಕೈಗೊಂಡುಇಲ್ಲಿಯೇ ಐಕ್ಯರಾಗಿದ್ದು ಇವರ ಗದ್ದುಗೆ ಈಗಲೂ ಮಠದ ಸಮೀಪವಿದೆ.ಈ ರೀತಿಯಾಗಿ ಬಹುತೇಕ ಖಾಲಿ ಉಳಿದು ಸಂಪೂರ್ಣ ನಾಶ ಹೊಂದಿದ್ದಒಂದು ಪುರಾತನ ಗ್ರಾಮವನ್ನು ಹುಡುಕಿಕೊಂಡು 2003ರಲ್ಲಿ ಐದು ಜನರ ಜೊತೆಗೆ ಬಂದುಇಲ್ಲಿರುವ ಕೆಲವು ಗುರುತುಗಳನ್ನು ಗುರುತಿಸಿದವರು ಪ್ರಸ್ತುತ ಶ್ರೀಗಳಾದ ಶ್ರೀ ಮ.ನಿ.ಪ್ರ.ಮಹಾಂತ ಶಿವಲಿಂಗ ಸ್ವಾಮಿಗಳು. ಅವುಗಳು ಐದು ಬಿಲ್ವಪತ್ರೆ ಮರಗಳು, ಕರ್ತೃಗಳುಅನುಷ್ಠಾನ ಕೈಗೊಂಡಿದ್ದ ಕಟ್ಟೆ ಹಾಗೂ ಅವರು ಬಳಸುತ್ತಿದ್ದ ಬಾವಿ ಮುಂತಾದವು.2003ರವರೆಗೂ ದಟ್ಟಾರಣ್ಯವಾಗಿದ್ದ ಸ್ಥಳದಲ್ಲಿ 2004ರಲ್ಲಿ ಶ್ರೀ ಮಹಾಂತಶಿವಲಿಂಗ ಸ್ವಾಮಿಗಳು ಮಠವನ್ನು ಸ್ಥಾಪಿಸಿ ಶ್ರೀ ಗುರುಸಿದ್ದ ವೀರೇಶ್ವರ ತಪೋವನವೆಂದುಕರೆದರು. ಅಲ್ಲಿಂದ ಇಲ್ಲಿಯವರೆಗೂ ಶ್ರೀ ಕ್ಷೇತ್ರದಲ್ಲಿ ನಿರಂತರವಾಗಿ ಧಾರ್ಮಿಕ ಆಚರಣೆಗಳುಬಹಳ ವಿಶೇಷವಾಗಿ ನಡೆದುಕೊಂಡು ಬರುತ್ತಿವೆ. ಶ್ರೀಕ್ಷೇತ್ರದ ಕ್ಷೇತ್ರನಾಥ ಶ್ರೀ ಗುರುಸಿದ್ದವೀರೇಶ್ವರರ ವಿಶೇಷವೆಂದರೆ ಮಠಾಧೀಶರ ಮತ್ತು ಭಕ್ತರ ಬಿನ್ನಹದಂತೆ ವರ್ಷವಿಡೀ ಉತ್ಸವಪೀಠದ ಸಂಚಾರ ಮಾಡುವುದು. ಪ್ರತಿ ಹುಣ್ಣಿಮೆ ಹಾಗೂ ವಿಶೇಷ ದಿನಗಳಲ್ಲಿ ಮಾತ್ರ ಉತ್ಸವಮೂರ್ತಿ ಶ್ರೀಮಠಕ್ಕೆ ಮರಳಿ ವಿಶೇಷ ಪೂಜೆ ನಡೆಸಲಾಗುತ್ತದೆ. ಶ್ರೀಕ್ಷೇತ್ರದಮಹಿಮೆಯನ್ನರಿತು 50ಕ್ಕೂ ಹೆಚ್ಚಿನ ಮಠಾದೀಶರು ಶ್ರೀಕ್ಷೇತ್ರಕ್ಕೆ ಬೇಟಿ ನೀಡಿ ಇಲ್ಲಿ ತಮಗೆಆದ ಅನುಭವವನ್ನು ಸಂತೋಷದಿಂದ ಹಂಚಿಕೊಂಡಿದ್ದಾರೆ. ಈಗಲೂ ಶ್ರೀಕ್ಷೇತ್ರನಾಥನಿಂದನೂರಾರು ಪವಾಡಗಳು ನಡೆಯುತ್ತಿರುತ್ತವೆ ಎಂದು ಸುತ್ತಮುತ್ತಲಿನ ಗ್ರಾಮಸ್ಥರುಅಭಿಪ್ರಾಯಿಸುತ್ತಾರೆ ಹಾಗೂ ಕ್ಷೇತ್ರನಾಥನು ಹತ್ತಾರು ಸ್ಥಳಗಳಲ್ಲಿ ಪುರಾತನ ವಸ್ತುಗಳನ್ನುಹುಡುಕಿಕೊಟ್ಟಿರುವುದು ವಿಶೇಷ.ಶ್ರೀ ಕ್ಷೇತ್ರವನ್ನು ಶ್ರೀ ಮಹಾಂತ ಶಿವಲಿಂಗ ಸ್ವಾಮಿಗಳು ಭಕ್ತರ ಸಹಕಾರದೊಂದಿಗೆವಿಶೇಷವಾಗಿ ರೂಪಿಸುತ್ತಿದ್ದು ಶ್ರೀಗಳಿಗೆ ನೂತನ ಮಠವು ನಿರ್ಮಾಣವಾಗುತ್ತಿದೆ. ಕರ್ತೃಗಳುಅನುಷ್ಠಾನ ಮಾಡಿದ ಸ್ಥಳದಲ್ಲಿ ಶಿಲಾ ಮಂಟಪ ನಿರ್ಮಾಣವಾಗುತ್ತಿದ್ದು, ಉತ್ಸವ ಪೀಠಕ್ಕೆಕುಟೀರವನ್ನು ನಿರ್ಮಿಸಲಾಗಿದೆ ಹಾಗೂ ಈಗಾಗಲೇ ಹೆಂಚಿನ ವಿಶಾಲವಾದ ಮಠವಿದ್ದುಶ್ರೀಗಳು ಶ್ರೀಮಠವನ್ನು ಸರ್ವತೋಮುಖ ರೀತಿಯಲ್ಲಿ ಅಭಿವೃದ್ದಿ ಪಡಿಸುತ್ತಿದ್ದಾರೆ ಹಾಗೂಚೈತ್ರಮಾಸದಲ್ಲಿ ವಾರ್ಷಿಕ ಜಾತ್ರೆ ನಡೆಸುತ್ತಿದ್ದು ಆ ಸಮಯದಲ್ಲಿ ಸಾಮೂಹಿಕ ವಿವಾಹ,ಸಾಮೂಹಿಕ ದೀಕ್ಷೆ ಕಾರ್ಯಕ್ರಮ ಸೇರಿದಂತೆ ವಿವಿಧ ಧಾರ್ಮಿಕ ಹಾಗೂ ಸಾಂಸ್ಕøತಿಕಕಾರ್ಯಕ್ರಮಗಳು ಆಯೋಜನೆಗೊಂಡಿರುತ್ತವೆ.

ವಿಶೇಷತೆ

ಶ್ರೀ ಕ್ಷೇತ್ರದಲ್ಲಿ ಕ್ಷೇತ್ರಪಾಲಕ

ಶ್ರೀ ವೀರಭದ್ರೇಶ್ವರ ಸ್ವಾಮಿ

ಹಾಗೂ ಮಾತಾ

ಪ್ರಸನ್ನ ತಪೋವನೇಶ್ವರಿ

ತಾಯಿಯವರ ಸನ್ನಿಧಾನಗಳಿವೆ

Swamiji

Swamiji Name :
ಶ್ರೀ ಮ.ನಿ.ಪ್ರ. ಮಹಾಂತ ಶಿವಲಿಂಗ ಸ್ವಾಮಿಗಳು
Date of Birth :
14-01-1984
Place :
ಹುಬ್ಬಳ್ಳಿ, ಧಾರವಾಡ ಜಿಲ್ಲೆ
Pattadikara :
27-05-2005
Photo :

Programs

ಪ್ರತಿ ಹುಣ್ಣಿಮೆ ಆದ ಎರಡನೇ ದಿನಕ್ಕೆ
ಮಹಾಮಂಗಳಾರತಿ, ಮಹಾಪ್ರಸಾದ ಹಾಗೂ ವಿಶೇಷ ಪೂಜಾ ಕಾರ್ಯಕ್ರಮಗಳು
ಚೈತ್ರ ಮಾಸದಲ್ಲಿ ಶ್ರೀಮಠದ ಜಾತ್ರೆ, ಸಾಮೂಹಿಕ ವಿವಾಹ,
ಸಾಮೂಹಿಕ ದೀಕ್ಷೆ, ವಿವಿಧ ಧಾರ್ಮಿಕ ಸಾಂಸ್ಕøತಿಕ ಕಾರ್ಯಕ್ರಮಗಳು
ದಸರದಲ್ಲಿ ನಿತ್ಯ ಉತ್ಸವ ಕೊನೆ ದಿವಸ ವಿಜಯದಶಮಿ ಉತ್ಸವ.
ಕಾರ್ತೀಕ ಮಾಸದಲ್ಲಿ ನಿತ್ಯ ದೀಪೋತ್ಸವ.

Institutions

ವಿದ್ಯಾರ್ಥಿ ನಿಲಯ (ಉಚಿತ)

Photos

Full Address Kannada

ಶ್ರೀ ಕ್ಷೇತ್ರ ತಪೋವನ ಮನೆಹಳ್ಳಿ ಗ್ರಾಮ,
ಅಂಕನಹಳ್ಳಿ ಪೋ. - 571 235
ಸೋಮವಾರಪೇಟೆ ತಾ||, ಕೊಡಗು ಜಿಲ್ಲೆ

Map

Near by Places

ಮೆಣಸೆ - 1 ಕಿ.ಮೀ.
ಅಂಕನಹಳ್ಳಿ - 5 ಕಿ.ಮೀ.
ಅರಕಲಗೂಡು - 15 ಕಿ.ಮೀ.

Statistic

348 Views
0 Rating
0 Favorite
0 Share
error: Content is protected !!