Shree Kirikodli Matha

Shree Kirikodli Matha Claimed

ಶ್ರೀ ಕಿರಿಕೊಡ್ಲಿ ಮಠ

Average Reviews

Description

ಶ್ರೀ ಕಿರಿಕೊಡ್ಲಿ ಮಠ

ಕರ್ತೃ – ಪರಮ ಪೂಜ್ಯ ಶ್ರೀ ಉರಿ ಬಸವ ಸ್ವಾಮಿಗಳು

ಕೊಡಗು ಜಿಲ್ಲೆ ಸೋಮವಾರಪೇಟೆ ತಾಲ್ಲೂಕಿನ ಕೊಡ್ಲಿಪೇಟೆ ಗ್ರಾಮದಿಂದ 3ಕಿ.ಮೀ. ಅಂತರದಲ್ಲಿರುವ ಕಿರಿಕೊಡ್ಲಿಯಲ್ಲಿ ಸ್ಥಾಪಿತಗೊಂಡಿರುವ ಶ್ರೀ ಕ್ಷೇತ್ರ ಕಿರಿಕೊಡ್ಲಿ ಮಠವುಪರಮ ಪೂಜ್ಯ ಲಿಂ. ಶ್ರೀ ಉರಿಬಸವ ಸ್ವಾಮಿಗಳ ಅಧ್ಯಕ್ಷತೆಯಲ್ಲಿ ಕೊಡಗಿನ ರಾಜರಜಹಗೀರನ್ನು ಹೊಂದಿ ವೈಭವಯುತವಾಗಿದ್ದು ಜನ ಸೇವೆಯಲ್ಲಿ ತೊಡಗಿಸಿಕೊಂಡುಅನ್ನದಾಸೋಹ ಹಾಗೂ ಜ್ಞಾನದಾಸೋಹದ ತವರೂರಾಗಿ ಈ ಭಾಗದ ಭಕ್ತರಲ್ಲಿ ಬಹಳಪ್ರಸಿದ್ದಿ ಹೊಂದಿತ್ತು.ಕರ್ತೃ ಗುರುಗಳ ನಂತರದಲ್ಲಿ ಶ್ರೀಮಠಕ್ಕೆ ಅನೇಕ ಸ್ವಾಮಿಗಳು ಆಗಿ ಹೋಗಿದ್ದುಭಕ್ತರ ಪ್ರೀತಿಗೆ ಪಾತ್ರವಾಗುತ್ತಲೇ ಬಂದಿದ್ದರು. ಆದರೆ ಈ ಭಾಗದ ಪಾಳೇಗಾರರ ಕಾಲದಲ್ಲಿದ್ದಶ್ರೀ ಮಹಾಂತ ಸ್ವಾಮಿಗಳಿಗೂ ಪಾಳೇಗಾರರಿಗೂ ವೈಮನಸ್ಸು ಉಂಟಾಗಿದ್ದರಿಂದಪಾಳೇಗಾರರು ಕೊಡಗಿನ ರಾಜರಿಗೆ ದೂರನ್ನಿತ್ತು ಶ್ರೀಮಠಕ್ಕೆ ಕೊಟ್ಟಿದ್ದ ಜಹಗೀರುಭೂಮಿಯನ್ನು ಹಿಂದಕ್ಕೆ ಪಡೆದು ಮಠವನ್ನು ಆಸ್ತಿ ಇಲ್ಲದ ಮಠವಾಗಿಸಿತು. ಇದನ್ನುಗಮನಿಸಿದ ಶ್ರೀಮಠದ ಸುತ್ತ ಇರುವ ಭಕ್ತವೃಂದ 63 ಹಳ್ಳಿಯ ಜನರನ್ನು ಸೇರಿಸಿಪಾಳೇಗಾರರಿಂದ ದೂರೀಕರಿಸಲ್ಪಟ್ಟ ಮಠದ ಅಸ್ತಿತ್ವವನ್ನು ಉಳಿಸಲು ನಿಶ್ಚಯಿಸಿ ಪ್ರತಿ ವರ್ಷಶ್ರೀಮಠಕ್ಕೆ ಧವಸ ಧಾನ್ಯ ಹಾಗೂ ಕಾಣಿಕೆಗಳನ್ನು ಕೊಡುತ್ತಾ ಬಂದಿದ್ದನ್ನು ಕಾಣಬಹುದು.ಪರಂಪರೆಯ ಹಿಂದಿನ ಶ್ರೀಗಳಾದ ಶ್ರೀ ಷ.ಬ್ರ. ಗುರುಸಿದ್ದಸ್ವಾಮಿಗಳು 1937ರಮೇ 09ರಲ್ಲಿ ಶ್ರೀಮಠದ ಪಟ್ಟಕ್ಕೆ ಬಂದು ತಮ್ಮ ಅವಧಿಯಲ್ಲಿ ಅನೇಕ ಅಭಿವೃದ್ಧಿ ಕೆಲಸಗಳನ್ನುನಡೆಸುತ್ತಾ ಸುತ್ತಲ ಭಕ್ತರ ಪ್ರೀತಿಗೆ ಪಾತ್ರರಾಗಿದ್ದರು. 1976ರ ಮೇ 09ರಲ್ಲಿ ಪ್ರವಾಸಕಾಲದಲ್ಲಿಶ್ರೀಗಳು ಆಕಸ್ಮಿಕವಾಗಿ ಲಿಂಗೈಕ್ಯರಾದಾಗ 1983ರ ಏಪ್ರಿಲ್ 18ರಲ್ಲಿ ಶ್ರೀ ಸಿದ್ದಗಂಗಾ ಶ್ರೀಗಳಸಾನಿಧ್ಯದಲ್ಲಿ ಪ್ರಸ್ತುತ ಶ್ರೀಗಳಾದ ಶ್ರೀ ಷ.ಬ್ರ. ಸದಾಶಿವ ಸ್ವಾಮಿಗಳನ್ನು ಪಟ್ಟಕ್ಕೆ ತಂದರು.ಪ್ರಸ್ತುತ ಶ್ರೀಗಳು ಹಳೆಯ ಮಠದ ಪಕ್ಕದಲ್ಲಿ ಹೊಸಮಠವನ್ನು ನಿರ್ಮಿಸಿದ್ದುಕಲ್ಯಾಣಮಂಟಪ ನಿರ್ಮಾಣದ ಕೆಲಸ ಪ್ರಗತಿಯಲ್ಲಿದೆ. ಶ್ರೀಗಳು 2005-06ರಲ್ಲಿ “ಶ್ರೀಗುರುಸಿದ್ದ ಸ್ವಾಮಿ ವಿದ್ಯಾಪೀಠ (ರಿ)”ವನ್ನು ಸ್ಥಾಪಿಸಿ ಅದರ ಅಡಿಯಲ್ಲಿ ಪೂರ್ವ ಪ್ರಾಥಮಿಕಶಿಕ್ಷಣದಿಂದ ಪದವಿಪೂರ್ವ ಶಿಕ್ಷಣದವರೆಗೆ ಶಿಕ್ಷಣವನ್ನು ನೀಡುತ್ತಿದ್ದಾರೆ. ಶ್ರೀಗಳು ಶ್ರೀಮಠದಅಧಿಕಾರ ವಹಿಸಿಕೊಂಡ ನಂತರ ಶ್ರೀಮಠವು ಸರ್ವಾಂಗೀಣವಾಗಿ ಅಭಿವೃದ್ಧಿ ಕಂಡಿದೆ.

Swamiji

Swamiji Name :
ಶ್ರೀ ಷ.ಬ್ರ. ಸದಾಶಿವ ಸ್ವಾಮಿಗಳು
Date of Birth :
06-05-1968
Place :
ಸಿರಂಗಾಲ, ಸೋಮವಾರಪೇಟೆ ತಾ||
Pattadikara :
18-04-1983
Photo :

Programs

ಚೈತ್ರ ಮಾಸದಲ್ಲಿ ಶ್ರೀ ಹಿರಿಯ ಗುರುಗಳ ಪುಣ್ಯಾರಾಧನೆ

Institutions

ಕಿರಿಯ / ಹಿರಿಯ ಪ್ರಾಥಮಿಕ / ಪ್ರೌಢಶಾಲೆ ಪದವಿ ಪೂರ್ವ / ಪದವಿ ಕಾಲೇಜ್

Photos

Full Address Kannada

ಶ್ರೀ ಕಿರಿಕೊಡ್ಲಿ ಮಠ ಕಿರಿಕೊಡ್ಲಿ,
ಕೊಡ್ಲಿಪೇಟೆ ಪೋಸ್ಟ್ - 571 231
ಸೋಮವಾರಪೇಟೆ ತಾ||, ಕೊಡಗು ಜಿಲ್ಲೆ

Map

Near by Places

ಕೊಡ್ಲಿಪೇಟೆ - 3 ಕಿ.ಮೀ.
ಬಾಳುಪೇಟೆ - 23 ಕಿ.ಮೀ.
ಸಕಲೇಶಪುರ - 28 ಕಿ.ಮೀ.
ಹಾಸನ - 55 ಕಿ.ಮೀ.

Statistic

198 Views
0 Rating
0 Favorite
0 Share
error: Content is protected !!