ವಿಜಯನಗರದ ಅರಸ ಪ್ರೌಢದೇವರಾಯರ ಕಾಲದ ನಂತರದ ಕಾಲಘಟ್ಟದಲ್ಲಿಶ್ರೀ ಸಿದ್ದರಾಮೇಶ್ವರ ಶಿವಯೋಗಿಗಳು ವಿಜಯನಗರ(ಹಂಪಿ)ದಿಂದ ಹಾಸನ ಭಾಗಕ್ಕೆಸಂಚಾರ ಬಂದು ತೇಜೂರು ಗ್ರಾಮದ ಭಕ್ತ ದೊಡ್ಡಪ್ಪನವರ ಮನೆಯಲ್ಲಿ ತಂಗಿಪವಾಡಗಳನ್ನು ಮಾಡುತ್ತಾರೆ. ಇವರ ಮಹಿಮೆಯನ್ನರಿತ ಊರಿನ ಶಿಲ್ಪಿಗಳು ಗುರುಗಳಿಗೆತಿಳಿಯದೇ ಊರ ಮುಂದಿನ ಬಸವಣ್ಣ ದೇವಸ್ಥಾನದ ಮುಂದೆ ಕಲ್ಲಿನ ಕಂಬದಲ್ಲಿ ಶ್ರೀಗಳಮೂರ್ತಿಯನ್ನು ಕೆತ್ತಿದರು. ಅದನ್ನು ಅರಿತ ಶ್ರೀಗಳು ಪಕ್ಕದಲ್ಲಿರುವ ಮಠದ ಆವರಣದಲ್ಲಿಜೀವಂತವಾಗಿ ಐಕ್ಯಗೊಂಡರು ಎಂದು ಊರಿನ ಹಿರಿಯರು ಹಾಗೂ ಈಗಿನ ಶ್ರೀಗಳುಜನಪದ ಕಥೆ ಆಧಾರದ ಮೇಲೆ ಹೇಳುತ್ತಾರೆ.ಕರ್ತೃಗುರುಗಳು ಜೀವಂತವಾಗಿ ಐಕ್ಯಗೊಂಡ ನಂತರ ಗದ್ದುಗೆ ನಿರ್ಮಾಣವಾಗಿಅವರ ವಂಶಸ್ಥರು ಚಾಮರಾಜನಗರ ಜಿಲ್ಲೆ ಕುಲಗಾಣ ಗ್ರಾಮದ ಕಡೆಯಿಂದ ವರ್ಷಕ್ಕೊಮ್ಮೆಬಂದು ಆರಾಧನೆ ಮಾಡಿ ಹೋಗುತ್ತಿದ್ದರು. ಆ ವಂಶಸ್ಥರಲ್ಲಿ ಪ್ರಸ್ತುತ ಶ್ರೀಗಳ ಮನೆಯವರೂಕೂಡ ಒಬ್ಬರು. ಪ್ರಸ್ತುತ ಶ್ರೀಗಳಾದ ಶ್ರೀ. ಷ.ಬ್ರ. ಕಲ್ಯಾಣ ಸ್ವಾಮಿಗಳು ತಮ್ಮ 16ನೇವಯಸ್ಸಿನಲ್ಲಿಯೇ 1978ರಲ್ಲಿ ತಮ್ಮ ಹುಟ್ಟೂರಾದ ಕುಲಗಾಣದ ಮಠದ ಪಟ್ಟವನ್ನು ಸ್ವೀಕರಿಸಿತದನಂತರ ಸುತ್ತೂರಿನಲ್ಲಿ ವಿದ್ಯಾಭ್ಯಾಸವನ್ನು ಮುಂದುವರೆಸುತ್ತಾರೆ.ಶ್ರೀಗಳು ಸುತ್ತೂರಿನಲ್ಲಿ ಓದುತ್ತಿರುವಾಗ ಆಗಾಗ್ಗೆ ತೇಜೂರಿಗೆ ಬಂದು ಕರ್ತೃಗಳಗದ್ದುಗೆಗೆ ಪೂಜಿಸಿ ಹೋಗುತ್ತಿದ್ದರು. ಆಗ ಅವರಿಗೆ ಗದ್ದುಗೆಯ ಪ್ರೇರಣೆಯಾಗಿ ಸುತ್ತೂರುಮತ್ತು ಸಿದ್ದಗಂಗ ಶ್ರೀಗಳ ಮಾರ್ಗದರ್ಶನ ಹಾಗೂ ಭಕ್ತರ ನೆರವಿನಿಂದ 1993ರಲ್ಲಿ ಶ್ರೀಶಿವಯೋಗಿ ಸಿದ್ದರಾಮೇಶ್ವರ ಮಠವನ್ನು ಸ್ಥಾಪಿಸುತ್ತಾರೆ. ಕೇವಲ ಗದ್ದುಗೆಯಿದ್ದ ಸ್ಥಳದಲ್ಲಿಮಠವನ್ನು ಸ್ಥಾಪಿಸಿದ ಶ್ರೀಗಳು ಶ್ರೀಮಠವನ್ನು ಸರ್ವಾಂಗೀಣವಾಗಿ ಅಭಿವೃದ್ಧಿಗೊಳಿಸಿದ್ದಾರೆ.ಶ್ರೀಮಠದ ಆವರಣದಲ್ಲಿ ಪುರಾತನ ಈಶ್ವರ ಮತ್ತು ಬಸವಣ್ಣ ದೇವರದೇವಸ್ಥಾನವಿದ್ದು ಶ್ರೀಗಳು ನಿತ್ಯಪೂಜೆ ನಡೆಸುತ್ತಾ ವಿಶೇಷ ಸಂದರ್ಭಗಳಲ್ಲಿ ವಿಶೇಷಧಾರ್ಮಿಕ ಕಾರ್ಯಕ್ರಮಗಳನ್ನು ನಡೆಸುತ್ತಾರೆ. ಶ್ರೀಮಠದಲ್ಲಿ ಪ್ರತಿವರ್ಷ ಮೇ ತಿಂಗಳಲ್ಲಿಕರ್ತೃಗಳ ಆರಾಧನಾ ಮಹೋತ್ಸವ ಜರುಗುತ್ತದೆ. ಶ್ರೀಗಳು ತಮ್ಮ ಉತ್ತರಾಧಿಕಾರಿಯನ್ನಾಗಿಶ್ರೀ ಷಡಕ್ಷರಿ ಸ್ವಾಮಿಗಳನ್ನು ನೇಮಕ ಮಾಡಿಕೊಂಡಿದ್ದಾರೆ.
Swamiji
Swamiji Name :
ಶ್ರೀ ಷ.ಬ್ರ. ಕಲ್ಯಾಣ ಮಹಾಸ್ವಾಮಿಗಳು
Date of Birth :
1962
Place :
ಕುಲಗಾಣ, ಚಾಮರಾಜನಗರ ತಾ||
Pattadikara :
1978
Photo :
Programs
ಪ್ರತಿ ಅಮಾವಾಸ್ಯೆ, ಹುಣ್ಣಿಮೆಗಳಲ್ಲಿ ವಿಶೇಷ ಪೂಜೆ
ಕಾರ್ತೀಕ ಮಾಸದಲ್ಲಿ ನಿತ್ಯ ದೀಪೋತ್ಸವ
ಮೇ ತಿಂಗಳಲ್ಲಿ ಕರ್ತೃಗಳ ಆರಾಧನೆ
ಆಗಸ್ಟ್ ತಿಂಗಳಲ್ಲಿ ಹಿಂದಿನ ಸುತ್ತೂರು ಶ್ರೀಗಳಾದ
ಶ್ರೀ ರಾಜೇಂದ್ರ ಮಹಾಸ್ವಾಮಿಗಳ ಹುಟ್ಟುಹಬ್ಬ ಆಚರಣೆ
ಏಪ್ರಿಲ್ ತಿಂಗಳಲ್ಲಿ ಸಿದ್ದಗಂಗ ಶ್ರೀಗಳ ಹುಟ್ಟುಹಬ್ಬ ಆಚರಣೆ
Institutions
ಕಿರಿಯ / ಹಿರಿಯ ಪ್ರಾಥಮಿಕ ಶಾಲೆ
Photos
Full Address Kannada
ಶ್ರೀ ಶಿವಯೋಗಿ ಸಿದ್ದರಾಮೇಶ್ವರ ಮಠ
ತೇಜೂರು, ಹಳ್ಳಿ ಮೈಸೂರು ಪೋಸ್ಟ್ - 573210
ಹೊಳೆನರಸೀಪುರ ತಾ||, ಹಾಸನ ಜಿಲ್ಲೆ