ಶ್ರೀ ಪುಷ್ಪಗಿರಿ ಮಹಾಸಂಸ್ಥಾನ ಮಠವು ಸುಮಾರು ಒಂದು ಸಾವಿರ ವರ್ಷಗಳದೀರ್ಘ ಇತಿಹಾಸ ಹೊಂದಿದೆಯೆಂದು ಹೇಳಲಾಗಿದ್ದು ಶ್ರೀ ಮಠವು ತನ್ನ ಧಾರ್ಮಿಕ,ಸಾಮಾಜಿಕ, ಶೈಕ್ಷಣಿಕ ಹಾಗೂ ಸಾಂಸ್ಕøತಿಕ ಶ್ರೀಮಂತಿಕೆಯಿಂದಾಗಿ ಪ್ರಸಿದ್ದಿಗೊಂಡಿದೆ.ದ್ವಾರಸಮುದ್ರ (ಈಗಿನ ಹಳೇಬೀಡು)ವನ್ನು ಕೇಂದ್ರವನ್ನಾಗಿಟ್ಟುಕೊಂಡು ರಾಜ್ಯವನ್ನಾಳುತ್ತಿದ್ದ11ನೇ ಶತಮಾನದ ಹೊಯ್ಸಳರಿಗೂ ಪುಷ್ಪಗಿರಿಗೂ ಅವಿನಾಭಾವ ಸಂಬಂಧ.ದ್ವಾರಸಮುದ ್ರಕ್ಕೆ ಸಮೀಪದಲ್ಲಿಯೇ ಇರುವ ಪುಷ ್ಪಗಿರಿಯಲ್ಲಿ ರಾಜವಿಷ್ಣುವರ್ಧನನ ರಾಣಿಯಾದ ಶಾಂತಲಾದೇವಿಯಿಂದ ನಿರ್ಮಿತಗೊಂಡ ಇತಿಹಾಸ ಪ್ರಸಿದ್ದಶ್ರೀ ಮಲ್ಲಿಕಾರ್ಜುನಸ್ವಾಮಿ ದೇವಾಲಯ ಇಲ್ಲಿಯ ಪ್ರಮುಖ ಆಕರ್ಷಣೆ. ಆಸಮಯದಲ್ಲಿಯೇ ಶ್ರೀಮಠವು ಸ್ಥಾಪಿತಗೊಂಡಿರಬಹುದೆಂದು ಹೇಳಲಾಗಿದೆ. ಕಾಲಾನಂತರಸುಮಾರು 600 ವರ್ಷಗಳ ಹಿಂದೆ ಚಿಲ್ಕೂರಿಗೆ ಸ್ಥಳಾಂತರಗೊಂಡಿದ್ದ ಮಠವು ಅಲ್ಲಿ 6ತಲೆಮಾರುಗಳ ಕಾಲ ಮುಂದುವರೆದಿದೆ.ಹಿಂದಿನ ಶ್ರೀಗಳಾದ ಶ್ರೀ ಶ್ರೀ ಬಸವರಾಜ ಶಿವಾಚಾರ್ಯ ಸ್ವಾಮಿಗಳುಪುಷ್ಪಗಿರಿಯ ಮೂಲ ಮಠಕ್ಕೆ 2003ರಲ್ಲಿ ಮರಳಿಬಂದು ಇಲ್ಲಿ 42 ದಿನಗಳು ಇದ್ದು ಅಭಿವೃದ್ದಿಪಡಿಸುತ್ತಿರುವಾಗಲೇ ಲಿಂಗೈಕ್ಯರಾದರು. ಇವರ ಗದ್ದುಗೆ ಶ್ರೀಮಠದಲ್ಲಿದೆ. ಶ್ರೀಗಳಐಕ್ಯಾನಂತರ 2008ರಲ್ಲಿ ಸಮಾಜದ ಭಕ್ತರು ಈಗಿನ ಶ್ರೀಗಳಾದ ಶ್ರೀ ಶ್ರೀ ಸೋಮಶೇಖರಶಿವಾಚಾರ್ಯ ಸ್ವಾಮಿಗಳನ್ನು ಶ್ರೀಮಠಕ್ಕೆ ಪಟ್ಟಾಧಿಕಾರಗೊಳಿಸಿದ್ದು ಶ್ರೀಗಳು ಹಳೇ ಮಠವನ್ನುಜೀರ್ಣೋದ್ಧಾರಗೊಳಿಸುವುದರ ಜೊತೆಗೆ ವಸತಿ ನಿಲಯ, ದಾಸೋಹಭವನ, ಕಲ್ಯಾಣಮಂಟಪ ಇನ್ನೂ ಮುಂತಾದ ಅಭಿವೃದ್ದಿಯೋಜನೆಗಳನ್ನು ಕಾರ್ಯಗತಗೊಳಿಸುತ್ತಿದ್ದಾರೆ.ಶ್ರೀ ಪುಷ್ಪಗಿರಿ ಮಹಾಸಂಸ್ಥಾನ ಮಠವು ಕೇಂದ್ರಮಠವಾಗಿದ್ದು ಶ್ರೀ ಮಠದಶಾಖೆಗಳಾಗಿ ಬೇಲೂರು ತಾಲ್ಲೂಕಿನ ಚಿಲ್ಕೂರಿನಲ್ಲಿರುವ ಶ್ರೀ ಪುಷ್ಪಗಿರಿ ಮಠ, ಹಾಸನತಾಲ್ಲೂಕಿನ ಗುಂಡಶೆಟ್ಟಿಹಳ್ಳಿಯ ಶ್ರೀಮಠ, ಯಲಲಗುಂದದ ಶ್ರೀಮಠ ಹಾಗೂ ರಾಮದೇವರಹಳ್ಳಿಯ ಶ್ರೀ ರಾಮೇಶ್ವರ ದೇವಾಲಯಗಳು ಕಾರ್ಯನಿರ್ವಹಿಸುತ್ತಿವೆ ಹಾಗೂ ಶ್ರೀಮಠದಅಡಿಯಲ್ಲಿ 10ಕ್ಕೂ ಅಧಿಕ ವಿದ್ಯಾಸಂಸ್ಥೆಗಳು ಹಾಸನ ಜಿಲ್ಲೆಯಾದ್ಯಂತ ನಡೆಯುತ್ತಿದ್ದುಗ್ರಾಮೀಣ ಪ್ರದೇಶದ ಬಡಮಕ್ಕಳ ವಿದ್ಯಾಭ್ಯಾಸಕ್ಕೆ ಸಹಕಾರಿಯಾಗಿದೆ ಹಾಗೂ ಶ್ರೀಮಠದವತಿಯಿಂದ ರೈತರಿಗಾಗಿ ಸಾವಯವ ಕೃಷಿಯ ಬಗೆಗಿನ ಶಿಕ್ಷಣವನ್ನು ನೀಡುತ್ತಿದ್ದುಗೋಶಾಲೆಯನ್ನು ತೆರೆಯಲಾಗಿದೆ.
Swamiji
Swamiji Name :
ಪೂಜ್ಯ ಶ್ರೀ ಸೋಮಶೇಖರ ಶಿವಾಚಾರ್ಯ ಮಹಾಸ್ವಾಮಿಗಳು
Date of Birth :
30-07-1985
Place :
ಅತ್ತಿಕಟ್ಟಿ, ಬ್ಯಾಡಗಿ ತಾ||
Pattadikara :
2008
Photo :
Programs
ಪ್ರತಿ ಹುಣ್ಣಿಮೆಗೆ “ಬೆಳದಿಂಗಳಗೋಷ್ಠಿ” ಕಾರ್ತೀಕ ಮಾಸದಲ್ಲಿ ಕಡೇ ಕಾರ್ತೀಕದಂದು ಬೆಟ್ಟದ ಮಲ್ಲಿಕಾರ್ಜುನ ಸ್ವಾಮಿಯಾ ಜಾತ್ರೆ ಏಪ್ರಿಲ್ನಲ್ಲಿ ಲಿಂ|| ಶ್ರೀ ಬಸವರಾಜ ಸ್ವಾಮಿಗಳ ಆರಾಧನೆ
Institutions
ಕಿರಿಯ / ಹಿರಿಯ ಪ್ರಾಥಮಿಕ / ಪ್ರೌಢಶಾಲೆ
ಪದವಿ ಪೂರ್ವ, ಪದವಿ ಕಾಲೇಜ್
ಗೋಶಾಲೆ ವಿದ್ಯಾರ್ಥಿ ನಿಲಯ / ಅನಾಥಾಶ್ರಮ
Photos
Full Address Kannada
ಶ್ರೀ ಪುಷ್ಪಗಿರಿ ಮಹಾಸಂಸ್ಥಾನ ಮಠ
ಪುಷ್ಪಗಿರಿ, ಹಳೇಬೀಡು (ಹೋ)-573 121
ಬೇಲೂರು ತಾ||, ಹಾಸನ ಜಿಲ್ಲೆ