ಹಾಸನ ಜಿಲ್ಲೆ ಅರಸೀಕೆರೆ ತಾಲ್ಲೂಕಿನ ಮಾಡಾಳು ಗ್ರಾಮದಲ್ಲಿ 1984ರಲ್ಲಿಅಸ್ತಿತ್ತ್ವಕ್ಕೆ ಬಂದಿರುವ ಶ್ರೀ ಗುರು ಶಿವಬಸವ ಕುಮಾರಾಶ್ರಮವು ಅತಿ ಕಡಿಮೆಅವಧಿಯಲ್ಲಿಯೇ ಈ ಭಾಗದ ಪ್ರಮುಖ ಧಾರ್ಮಿಕ ಕೇಂದ್ರವಾಗಿ ಬೆಳೆದಿದೆ. ಹಾರನಹಳ್ಳಿ ಶ್ರೀಕೋಡಿ ಮಠದ ಹಿಂದಿನ ಶ್ರೀಗಳಾದ ಶ್ರೀ ಮ.ನಿ.ಪ್ರ. ನೀಲಲೋಚನ ಮಹಾಸ್ವಾಮಿಗಳುಕೋಡಿಮಠಕ್ಕೆ ಉತ್ತರಾಧಿಕಾರಿಗಳನ್ನು ನೇಮಿಸಿ ಮಾಡಾಳು ಗ್ರಾಮಕ್ಕೆ ಆಗಮಿಸಿ ಇಲ್ಲಿನಪ್ರಶಾಂತ ಸ್ಥಳದಲ್ಲಿ ಮಠವನ್ನು ಸ್ಥಾಪಿಸಿದ್ದಾರೆ.ನೂತನವಾಗಿ ಪ್ರಾರಂಭಗೊಂಡ ಮಠದಲ್ಲಿ ಗುರುಗಳು ಏಕಾಂತವಾಗಿ ಕಾಲಕಳೆಯುತ್ತ ಲೋಕೋದ್ದಾರಕ್ಕಾಗಿ ಅನುಷ್ಠಾನವನ್ನು ಕೈಗೊಂಡರು. ಆ ಸಮಯದಲ್ಲಿ1979ರಿಂದಲೂ ಗುರುಗಳ ಸಂಪರ್ಕವನ್ನಿಟ್ಟುಕೊಂಡಿದ್ದ ಆಂಧ್ರದ ಆದವಾನಿ ತಾಲ್ಲೂಕಿನನರಿಜಾಂಗಿ ವಿರಕ್ತಮಠದ ಶ್ರೀ ಮ.ನಿ.ಪ್ರ. ತೋಂಟದಾರ್ಯ ಸ್ವಾಮಿಗಳು ಆಗಮಿಸಿ ಗುರುಗಳಸೇವೆಗೈಯುತ್ತಾ ಇಲ್ಲೇ ನೆಲೆನಿಂತರು. ತದನಂತರ ಶ್ರೀ ನೀಲಲೋಚನ ಸ್ವಾಮಿಗಳು ಹಾಗೂಮಠದ ಭಕ್ತರು ನಿರ್ಧರಿಸಿ ಶ್ರೀ ತೋಂಟದಾರ್ಯ ಸ್ವಾಮಿಗಳಿಗೆ 1988ರಲ್ಲಿ ಶ್ರೀಮಠದಪಟ್ಟಾಧಿಕಾರ ನೀಡಿದರು. ತರುವಾಯ 1992ರಲ್ಲಿ ಶ್ರೀ ನೀಲಲೋಚನ ಸ್ವಾಮಿಗಳುಲಿಂಗೈಕ್ಯರಾಗಿದ್ದು ಗುರುಗಳ ಗದ್ದುಗೆ ಶ್ರೀಮಠದಲ್ಲಿದೆ.ಅದಾಗಲೇ ಶ್ರೀಮಠದಲ್ಲಿ ಶ್ರೀ ಶಿವಲಿಂಗೇಶ್ವರ ಸ್ವಾಮಿಗಳ ತೋರುಗದ್ದುಗೆಸ್ಥಾಪಿತಗೊಂಡಿದ್ದು ಗದ್ದುಗೆಯ ಮೇಲೆ ಶ್ರೀ ಶಿವಲಿಂಗೇಶ್ವರ ಸ್ವಾಮಿಗಳ ಮೂರ್ತಿಯನ್ನುಪ್ರತಿಷ್ಠಾಪಿಸಿ ನಿತ್ಯಪೂಜೆ ನಡೆಸಲಾಗುತ್ತಿತ್ತು. ತದನಂತರ ಶ್ರೀ ತೋಂಟದಾರ್ಯ ಸ್ವಾಮಿಗಳುತಮ್ಮ ಗುರುಗಳಾದ ಶ್ರೀ ನೀಲಲೋಚನ ಸ್ವಾಮಿಗಳ ಗದ್ದುಗೆಗೆ ಭವ್ಯ ಮಂಟಪವನ್ನುನಿರ್ಮಿಸಿದರು. ಮೂರು ದಶಕಗಳ ಕಾಲ ಶ್ರೀಮಠವನ್ನು ಸರ್ವತೋಮುಖವಾಗಿಅಭಿವೃದ್ದಿಪಡಿಸಿದ ಶ್ರೀಗಳು 2014ರ ಅಕ್ಟೋಬರ್ 11ರಲ್ಲಿ ಲಿಂಗೈಕ್ಯರಾದರು.ಪ್ರಸ್ತುತ ಶ್ರೀಗಳಾದ ಶ್ರೀ ಮ.ನಿ.ಪ್ರ. ಅಭಿನವ ಶಿವಲಿಂಗ ಸ್ವಾಮಿಗಳು 2014ರಡಿಸಂಬರ್ 26ರಲ್ಲಿ ಶ್ರೀಮಠದ ಅಧಿಕಾರವನ್ನು ಸ್ವೀಕರಿಸಿದ್ದು ಸಮರ್ಥವಾಗಿಮುನ್ನಡೆಸಿಕೊಂಡು ಬರುತ್ತಿದ್ದಾರೆ. ಶ್ರೀಗಳು ತಮ್ಮ ವಿದ್ಯಾಭ್ಯಾಸವನ್ನು ಇದೇ ಮಠದ ಶಿಕ್ಷಣಸಂಸ್ಥೆಯಲ್ಲಿ ಪೂರ್ಣಗೊಳಿಸಿದ್ದು ಗುರುಗಳ ಸೇವೆಯಲ್ಲಿ ನಿರತರಾಗಿದ್ದವರು. ಶ್ರೀಗಳು ಇದೀಗಭಕ್ತರ ಸಹಕಾರದೊಂದಿಗೆ ಹಿಂದಿನ ಗುರುಗಳ ಗದ್ದುಗೆಗೆ ಮಂಟಪವನ್ನು ನಿರ್ಮಿಸುವತ್ತಗಮನಹರಿಸಿದ್ದಾರೆ.
Swamiji
Swamiji Name :
ಶ್ರೀ ಮ.ನಿ.ಪ್ರ. ಅಭಿನವ ಶಿವಲಿಂಗ ಸ್ವಾಮಿಗಳು
Date of Birth :
01-02-1996
Place :
ಕೂತಬಾಳು, ರೋಣ ತಾ||
Pattadikara :
26-12-2014
Photo :
Programs
ಪ್ರತಿ ತಿಂಗಳ ಹುಣ್ಣಿಮೆಯಾದ 2ನೇ ದಿನಕ್ಕೆ ಮಹಾಮಂಗಳಾರತಿ
ಶ್ರಾವಣ ಮಾಸದ 1 ತಿಂಗಳು ವಿಶೇಷ ಪೂಜಾ ಕಾರ್ಯಕ್ರಮಗಳು
ಡಿಸಂಬರ್/ಜನವರಿ ತಿಂಗಳಲ್ಲಿ ಲಿಂ. ಶ್ರೀ ಮ.ನಿ.ಪ್ರ. ನೀಲಲೋಚನ
ಮಹಾಸ್ವಾಮಿಗಳ ಪುಣ್ಯಾರಾಧನೆ
ಕಾರ್ತಿಕ ಮಾಸದಲ್ಲಿ ದೀಪೋತ್ಸª
Institutions
ಕಿರಿಯ / ಹಿರಿಯ ಪ್ರಾಥಮಿಕ / ಪ್ರೌಢಶಾಲೆ ಗೋಶಾಲೆ
Photos
Full Address Kannada
ಶ್ರೀ ಗುರು ಶಿವಬಸವ ಕುಮಾರಾಶ್ರಮ
ಮಾಡಾಳು - 573 117
ಅರಸೀಕೆರೆ ತಾ||, ಹಾಸನ ಜಿಲ್ಲೆ