ಶ್ರೀಶೈಲದ ಕಡೆಯಿಂದ ಸಂಚರಿಸುತ್ತ ಬಂದ ಸಿದ್ದಪುರುಷರಾದ ಶ್ರೀ ಮ.ನಿ.ಪ್ರ.ನೀಲಕಂಠ ಮಹಾಸ್ವಾಮಿಗಳು (ಶ್ರೀ ನೀಲಮಜ್ಜಯ್ಯ) ಸಮೀಪದ ಮಹದೇಶ್ವರ ಬೆಟ್ಟದಲ್ಲಿಅನುಷ್ಠಾನಗೊಂಡು ಹಾರನಹಳ್ಳಿ ಪಾಳೇಗಾರ ಲಿಂಗಣ್ಣರಾಜನಿಗೆ ಆಶೀರ್ವದಿಸಿ ನಿನಗೆ ಹೆಣ್ಣುಮಗು ಜನಿಸುತ್ತದೆ ಎಂದು ಹರಸಿ ಶ್ರೀಶೈಲದೆಡೆಗೆ ಪ್ರಯಾಣಿಸಿದರು. ಇತ್ತ ಪಾಳೇಗಾರನಿಗೆಹೆಣ್ಣು ಮಗು ಜನಿಸಿ ಆ ಮಗುವಿಗೆ ಗುರುಗಳ ಹೆಸರನ್ನೇ ಇಟ್ಟು ನೀಲಮ್ಮನೆಂದು ಕರೆದಳು.ಬಾಲೆ ನೀಲಮ್ಮಳಿಗೆ ಎಂಟು ವರುಷವಾಗುವಾಗ ಗುರುಗಳು ಸಂಚಾರದಿಂದ ಮರಳುತ್ತಾರೆ.ಗುರುಗಳು ಮರಳಿದ ಸುದ್ದಿಯನ್ನು ಕೇಳಿದ ಪಾಳೇಗಾರನು ಅವರನ್ನು ಅರಮನೆಗೆಕರೆಸಿ ಪೂಜೆ ನೆರವೇರಿಸಿ ಗುರುಗಳಿಗೆ ವೀರಶೈವ ಮಠವನ್ನು ಸ್ಥಾಪಿಸಲು ಜಾಗವನ್ನುನೀಡುತ್ತಾರೆ. ಆನಂತರ ಅಲ್ಲಿ ನಾನು ನಿರ್ವಿಕಲ್ಪ ಸಮಾಧಿ ಹೊಂದುವೆನೆಂದೂ, ನನಗಾಗಿಸಮಾಧಿಯನ್ನು ಸಿದ್ದಗೊಳಿಸಿರೆಂದು ಗುರುಗಳು ಹೇಳಿದಾಗ ಬಾಲೆ ನೀಲಮ್ಮಳು ನಾನೂನಿಮ್ಮ ಜೊತೆಯಲ್ಲಿ ಸಮಾಧಿಯಾಗುವೆ, ನೀವಿಲ್ಲದೇ ನನ್ನ ಬದುಕಿಗೆ ಅಥರ್sವಿಲ್ಲವೆಂದುಬೇಡಿದಳು. ಆಗ ಗುರುಗಳು ಬಾಲೆಯನ್ನು ಸಮಾಧಿಗೆ ಕಳುಹಿಸಿ ನೀರಿನಲ್ಲಿ ದೀಪ ಹಚ್ಚಿ ತೆಂಗಿನಕಾಯಿ ಮತ್ತು ನಿಂಬೆಹಣ್ಣನ್ನು ಹೋಳು ಮಾಡಿ ನೆಲಮಾಳಿಗೆಯ ಬಾಗಿಲಲ್ಲಿಟ್ಟುಭಕ್ತರನ್ನು ಕರೆಸಿ, ದೀಪ ನಂದಿದಾಗ ಹಾಗೂ ಹೋಳು ಮಾಡಿಟ್ಟ ನಿಂಬೆಹಣ್ಣು ತೆಂಗಿನಕಾಯಿಎಂದು ಕೊಡುತ್ತವೆಯೋ ಆ ದಿನ ನೆಲಮಾಳಿಗೆಯ ಬಾಗಿಲನ್ನು ತೆಗೆಯಬೇಕೆಂದು ಹೇಳಿಸಂಚಾರಕ್ಕೆ ಹೋಗುತ್ತಾರೆ. ಇತ್ತ ಗುರುಗಳು ಹೇಳಿದಂತೆಯೇ ನಲವತ್ತೊಂದನೇ ದಿನಕ್ಕೆದೀಪನಂದಿತು. ಆಗ ಭಕ್ತರು ನೆಲಮಾಳಿಗೆಯ ಬಾಗಿಲನ್ನು ತೆಗೆದು ನೋಡಿದಾಗ ಹೂವಿನರಾಶಿ ಗೋಚರವಾಯಿತಂತೆ.ಬಾಲೆ ನೀಲಮ್ಮಳ ಈ ಘಟನೆ ನಡೆದ ಮೂರು ವರ್ಷಗಳ ತರುವಾಯಸಂಚಾರಕ್ಕೆ ಹೋಗಿದ್ದ ಗುರುಗಳು ಆಗಮಿಸಿದರು. ಈ ಘಟನೆಗಳನ್ನು ಕೇಳಿ ನೀಲಮ್ಮಳಪವಾಡದ ಬಗ್ಗೆ ಭಕ್ತರಿಗೆ ತಿಳಿಯ ಹೇಳಿ ಇದೇ ನೆಲಮಾಳಿಗೆಯಲ್ಲಿ ಹುಣ್ಣಿಮೆಯಾದ ಮೂರುದಿನಕ್ಕೆ ಶುಕ್ರವಾರದಂದು ತಾವೂ ಸಮಾಧಿ ಹೊಂದುತ್ತಾರೆ. ಈ ಹಿನ್ನಲೆಯಲ್ಲಿ ಸ್ಥಾಪನೆಗೊಂಡಮಠವು ಇಂದು ದೇಶಿವ್ಯಾಪಿ ಖ್ಯಾತಿ ಪಡೆದು ವೀರಶೈವ ಧರ್ಮವನ್ನು ಪ್ರಚಾರಪಡಿಸುವಲ್ಲಿಯಶಸ್ವಿಯಾಗಿದೆ. ಮಠದ ಕರ್ತೃಗುರುಗಳಾದ ಶ್ರೀ ನೀಲಮ್ಮಜ್ಜಯ್ಯನವರು ಇಲ್ಲಿ ಜೀವಂತಸಮಾಧಿಹೊಂದಿದ ನಂತರ ಪ್ರಾರಂಭಗೊಂಡ ಮೇಲೆ ಅನೇಕ ಗುರುಗಳು ಮಠದ ಪರಮಪರೆಯನ್ನು ಬೆಳೆಸಿದರಾದರೂ ಪರಂಪರೆಯಲ್ಲಿ ಬಂದಿರುವ ಗುರುಗಲ ಬಗ್ಗೆ ಸ್ಪಷ್ಟತೆಯಿಲ್ಲ. ಕರ್ತೃಗುರುಗಳ ನಂತರದ ಪರಂಪರೆಯಲ್ಲಿ ಈವರೆಗೂ 57 ಜನ ಶ್ರೀಗಳುಅಧಿಕಾರ ನಡೆಸಿರುವರೆಂದು ಹೇಳಲಾಗುತ್ತಿದ್ದು ಸುಮಾರು 20ಕ್ಕೂ ಅಧಿಕ ಶ್ರೀಗಳ ಹೆಸರುಮಾತ್ರ ದೊರೆಯುತ್ತಿದೆ. ಹದಿನೇಳನೇ ಶತಮಾನದಲ್ಲಿ ಪೀಠವನ್ನು ಅಲಂಕರಿಸಿದ ಶ್ರೀಮ.ನಿ.ಪ್ರ. ನೀಲಲೋಚನ ಮಹಾಸ್ವಾಮಿಗಳ ಬಗ್ಗೆ ಮಾಹಿತಿಗಳಿವೆ. ಶ್ರೀ ನೀಲಲೋಚನಸ್ವಾಮಿಗಳು ಮಹಾತಪಸ್ವಿಗಳಾಗಿದ್ದರು, ಇವರ ತಪೋಶಕ್ತಿಗೆ ಬೆರಗಾದ ಮೈಸೂರಿನ ಆಗಿನದೊರೆ ಹೈದರಾಲಿಯು ಗುರುಗಳಿಗೆ “ಜಂಗಮ ಜೀತ್ ಫಕೀರ” ಎಂಬ ಬಿರುದನ್ನು ನೀಡಿಕಾಣಿಕೆಗಳನ್ನು ಅರ್ಪಿಸಿ ಗೌರವಿಸುತ್ತಾನೆ. ಶ್ರೀ ನೀಲಲೋಚನ ಸ್ವಾಮಿಗಳಿಗೆ ಹೈದರಾಲಿಯುನೀಡಿದ ಕಾಣಿಕೆಗಳು ಇಂದಿಗೂ ಮಠದಲ್ಲಿ ಸ್ಮಾರಕಗಳಾಗಿವೆ. ಶ್ರೀಗಳು ತಮ್ಮ ಉದಾತ್ತಧ್ಯೇಯ ಧೋರಣೆಗಳಿಂದ ಸಮಸ್ತ ಸಮಾಜ, ಜಾತಿ, ಮತ, ಪಂಥಗಳನ್ನೆನ್ನದೆ ಸಮಾನತೆಯನೆರಳಿನಲ್ಲಿ ಬದುಕುವಂತೆ ಮಾಡಿದ್ದರು. ಇವರ ನಂತರ ಶ್ರೀ ಮ.ನಿ.ಪ್ರ. ಮರಿದೇವ ಪ್ರಭುಸ್ವಾಮಿಗಳು ಅಧಿಕಾರ ನಡೆಸಿದ್ದು ಇವರ ಗದ್ದುಗೆಯು ತರೀಕೆರೆ ತಾಲ್ಲೂಕಿನ ಹುಣಸಘಟ್ಟದಲ್ಲಿನಿರ್ಮಾಣವಾಗಿದೆ.ಶ್ರೀ ಮರಿದೇವ ಪ್ರಭುಸ್ವಾಮಿಗಳ ನಂತರದ ಶ್ರೀ ಮ.ನಿ.ಪ್ರ. ಶಿವಲಿಂಗದೇಶಿಕಶಿವಯೋಗಿಗಳು 19ನೇ ಶತಮಾನದಲ್ಲಿ ಪೀಠವನ್ನಾಳಿ ಭಕ್ತರನ್ನುದ್ದರಿಸಿದ ತಪೋನಿಷ್ಠರು.ಇವರ ಕಾಲದಲ್ಲಿ ಶ್ರೀ ಕೋಡಿಮಠವು ಪ್ರಬುದ್ಧಮಾನಕ್ಕೆ ಬಂದಿದ್ದು ಶಾಖಾಮಠಗಳು ಸಹಅಭಿವೃದ್ಧಿಗೊಂಡವು. ತ್ರಿಕಾಲ ಜ್ಞಾನಿಯಾದ ಶ್ರೀ ಶಿವಲಿಂಗಜ್ಜಯ್ಯನವರು ತಮ್ಮ ತಪೋಶಕ್ತಿಯಿಂದ ಹೊತ್ತಿಗೆಯನ್ನು (ಭವಿಷ್ಯವಾಣಿ) ರಚಿಸಿದ್ದು ಈ ಮಹಾನ್ ಹೊತ್ತಿಗೆಯಆಧಾರದ ಮೇಲೆ ಇಂದಿಗೂ ಭವಿಷ್ಯವಾಣಿಯನ್ನು ಹೇಳಲಾಗುತ್ತಿದೆ. ಇವರ ನಂತರ 1887ರಿಂದ ಶ್ರೀಮಠವನ್ನು ಅಭಿವೃದ್ಧಿ ಪಥದತ್ತ ಕೊಂಡೊಯ್ದವರು ಶ್ರೀಮಠದ 54ನೇ ಶ್ರೀಗಳಾದಶ್ರೀ ಮ.ನಿ.ಪ್ರ. ಮರಿಶಿವಲಿಂಗಸ್ವಾಮಿಗಳು.ನಂತರದ ಶ್ರೀ ಮ.ನಿ.ಪ್ರ. ಗುರುಲಿಂಗ ಸ್ವಾಮಿಗಳು ಅಧಿಕಾರವನ್ನು ವಹಿಸಿಕೊಂಡುಕೇವಲ ಎರಡೂವರೆ ವರ್ಷಗಳ ಕಾಲ ಅಧಿಕಾರ ನಡೆಸಿದ್ದರು. ಇವರ ನಂತರ ಅಧಿಕಾರವಹಿಸಿಕೊಂಡವರೇ ಹಿಂದಿನ ಶ್ರೀಗಳಾದ ಶ್ರೀ ಮ.ನಿ.ಪ್ರ. ನೀಲಲೋಚನ ಮಹಾಸ್ವಾಮಿಗಳು.1933ರ ಏಪ್ರಿಲ್ 27ರಲ್ಲಿ ಶ್ರೀಮಠದ ಪಟ್ಟವನ್ನೇರಿದ ಶ್ರೀಗಳು ಐದು ದಶಕಗಳಿಗೂ ಅಧಿಕಕಾಲ ಸುಧೀರ್ಘ ಆಡಳಿತವನ್ನು ನಡೆಸಿ ಮಠವನ್ನು ಸರ್ವತೋಮುಖವಾಗಿಅಭಿವೃದ್ದಿಪಡಿಸಿದರು. ಇವರ ಕಾಲದಲ್ಲಿ ಶ್ರೀಮಠಕ್ಕೆ ಅಪಾರ ಭೂಸಂಪತ್ತು ರೂಡಿಗೊಂಡಿದ್ದುಶ್ರೀಮಂತ ಮಠವಾಗಿ ಬೆಳೆಯಲು ಕಾರಣವಾಯಿತು. ಇಂತಹ ಮಹಾನ್ ಶ್ರೀಗಳುಮಾಡಾಳು ಮಠದಲ್ಲಿ ಲಿಂಗೈಕ್ಯರಾಗಿದ್ದು ಅವರ ಗದ್ದುಗೆಯನ್ನು ಅಲ್ಲಿಯೇ ನಿರ್ಮಿಸಲಾಗಿದೆ.ಈvನ ಶ್ರೀಗಳಾದ ಶ್ರೀ ಮ.ನಿ.ಪ್ರ. ಜಗದ್ಗುರು ಶಿವಾನಂದ ರಾಜೇಂದ್ರಮಹಾಸ್ವಾಮಿಗಳು 1983ರ ಮಾರ್ಚ್ 24ರಲ್ಲಿ ಶ್ರೀಮಠದ ಅಧಿಕಾರ ವಹಿಸಿಕೊಂಡಿದ್ದುಶ್ರೀಮಠವನ್ನು ಅಭಿವೃದ್ದಿ ಪಥದತ್ತ ಮುನ್ನಡೆಸಿದರು. ಎಂ.ಎಸ್ಸಿಯವರೆಗೆ ವ್ಯಾಸಂಗಗೈದಪೂಜ್ಯರು ಶಿವಯೋಗ ಸಂಪನ್ನರು, ಬಹುಭಾಷಾ ಪಂಡಿತರು, ಸಾಹಿತ್ಯ, ಕಲೆ, ಸಂಗೀತಪೋಷಕರು. ಪ್ರಾರಂಭದ ಶಿಕ್ಷಣವನ್ನು ಕೋಡಿಮಠದಲ್ಲಿಯೇ ಪಡೆದಿದ್ದು ತದ ನಂತರಬಹುಭಾಷಾ ಪಂಡಿತರಾಗಿ ದೇಶವ್ಯಾಪಿ ಹೆಸರುಗಳಿಸಿದ್ದು ಅಪಾರ ಶಿಷ್ಯ ಸಂಪತ್ತನ್ನುಗಳಿಸಿಕೊಂಡಿದ್ದಾರೆ.ಶ್ರೀಮಠದ ಶಾಖಾಮಠಗಳು ಬಾಣಾವರ, ಬಿಕ್ಕೋಡು, ಚಿಕ್ಕನಾಯಕನಹಳ್ಳಿ,ಬೀರೂರು, ಅರಸೀಕೆರೆ ಹಾಗೂ ಬೆಂಗಳೂರು ನಗರಗಳಲ್ಲಿದ್ದು ಈಗಿನ ಶ್ರೀಗಳು ಶ್ರೀಕೋಡಿಮಠದ ಜೊತೆಯಲ್ಲಿ ಈ ಎಲ್ಲಾ ಶಾಖಾ ಮಠಗಳ ಅಭಿವೃದ್ದಿಯಲ್ಲೂನಿರತರಾಗಿದ್ದಾರೆ. ಶ್ರೀ ಮಠದ ಅಡಿಯಲ್ಲಿ ಅನೇಕ ಶಿಕ ್ಷಣ ಸಂಸ್ಥೆಗಳುಕಾರ್ಯನಿರ್ವಹಿಸುತ್ತಿದ್ದು ಲಕ್ಷಾಂತರ ಸಂಖ್ಯೆಯಲ್ಲಿ ಮಕ್ಕಳು ಈ ಶಿಕ್ಷಣ ಸಂಸ್ಥೆಗಳಲ್ಲಿ ಅಭ್ಯಸಿಸಿವಿಶ್ವದಾದ್ಯಂತ ಅನೇಕ ಸ್ತರಗಳಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ.
Swamiji
Swamiji Name :
ಶ್ರೀ ಮ.ನಿ.ಪ್ರ. ಜಗದ್ಗುರು ಶಿವಾನಂದ ಶಿವಯೋಗಿ ರಾಜೇಂದ್ರ ಮಹಾಸ್ವಾಮಿಗಳು
Date of Birth :
20-02-1969
Place :
ಕಂಚಕಲ್ಲು ಬಿದರೆ, ಕಡೂರು ತಾ||
Pattadikara :
24-03-1983
Photo :
Programs
ಪ್ರತಿ ಮಾಸದ ಕೃಷ್ಣಪಕ್ಷ ಬಿದಿಗೆಗೆ ಮಹಾಮಂಗಳಾರತಿ
ಶ್ರಾವಣ ಮಾಸದಲ್ಲಿ ವಿಶೇಷ ಪೂಜೆ, ಕಡೇ ಶ್ರಾವಣ ಸೋಮವಾರ ಜಂಗಮರ ಪಾದ ಪೂಜೆ
ಭಾದ್ರಪದ ಮಾಸದ ಶುಕ್ಲಪಕ್ಷ ಏಕಾದಶಿಗೆ ಮಾಡಾಳು ಗೌರಮ್ಮನವರ ಮಹಾಮಂಗಳಾರತಿ
ಭಾದ್ರಪದ ಮಾಸದ ಶುಕ್ಲಪಕ್ಷ ದ್ವಾದಶಿಗೆ ಮಾಡಾಳು ಗೌರಮ್ಮನವರ ವಿಸರ್ಜನಾ ಮಹೋತ್ಸವ
ವಿಜಯದಶಮಿಯ ಆಚರಣೆ
ಮಹಾಶಿವರಾತ್ರಿಯಲ್ಲಿ ವಿಶೇಷ ಪೂಜಾ ಕಾರ್ಯಕ್ರಮಗಳು
ಪಾಲ್ಗುಣ ಮಾಸದಲ್ಲಿ ಶ್ರೀ ಮಹದೇಶ್ವರ ಜಾತ್ರಾ ಮಹೋತ್ಸವ, ವಿಶೇಷ ಧಾರ್ಮಿಕ ಆಚರಣೆಗಳು
Institutions
ಕಿರಿಯ / ಹಿರಿಯ ಪ್ರಾಥಮಿಕ / ಪ್ರೌಢಶಾಲೆ
ಪದವಿ ಪೂರ್ವ ಕಾಲೇಜ್
Photos
Full Address Kannada
ಶ್ರೀ ಕೋಡಿಮಠ ಸುಕ್ಷೇತ್ರ
ಹಾರನಹಳ್ಳಿ - 573 119
ಅರಸೀಕೆರೆ ತಾ||, ಹಾಸನ ಜಿಲ್ಲೆ