Shree Budihalu Virktamatha

Shree Budihalu Virktamatha Claimed

ಶ್ರೀ ಬೂದಿಹಾಳು ವಿರಕ್ತಮಠ

Average Reviews

Description

ಶ್ರೀ ಬೂದಿಹಾಳು ವಿರಕ್ತಮಠ

ಕರ್ತೃ – ಶ್ರೀ ಮ.ನಿ.ಪ್ರ. ಸಿದ್ದಬಸವ ಶಿವಯೋಗಿಗಳು

ಹಾಸನ ಜಿಲ್ಲೆ ಅರಸೀಕೆರೆ ತಾಲ್ಲೂಕಿನ ದೊಡ್ಡಮೇಟಿಕುರ್ಕಿ ಗ್ರಾಮವು ತಾಲ್ಲೂಕುಕೇಂದ್ರದಿಂದ 25 ಕಿ.ಮೀ ದೂರದಲ್ಲಿದ್ದು ಈ ಗ್ರಾಮದಲ್ಲಿ ಸುಮಾರು 125 ವರ್ಷಗಳ ಹಿಂದೆಸ್ಥಾಪಿತಗೊಂಡಿರುವ ಶ್ರೀ ಬೂದಿಹಾಳು ವಿರಕ್ತಮಠವು ತನ್ನ ಧಾರ್ಮಿಕ ಹಾಗೂ ಸಾಮಾಜಿಕಕಾರ್ಯಕ್ರಮಗಳ ಮೂಲಕ ಈ ಭಾಗದಲ್ಲಿ ಧಾರ್ಮಿಕ ವಾತಾವರಣವನ್ನು ಸೃಷ್ಟಿಸುತ್ತಿದೆ.ಚಿಕ್ಕನಾಯಕನಹಳ್ಳಿ ತಾಲ್ಲೂಕಿನ ಬೂದಿಹಾಳು ಗ್ರಾಮದಲ್ಲಿ ಸ್ಥಾಪಿತಗೊಂಡಿದ್ದ ಶ್ರೀಮಠವು ಶ್ರೀಮ.ನಿ.ಪ್ರ. ಸಿದ್ಧಬಸವ ಶಿವಯೋಗಿಗಳ ಕಾಲದಲ್ಲಿ ದೊಡ್ಡಮೇಟಿಕುರ್ಕಿ ಗ್ರಾಮಕ್ಕೆಸ್ಥಳಾಂತರಗೊಂಡಿದ್ದು ಈ ಕಾರಣದಿಂದಾಗಿ ಶ್ರೀಮಠಕ್ಕೆ ಶ್ರೀ ಬೂದಿಹಾಳು ವಿರಕ್ತಮಠವೆಂದುಹೆಸರು ಬಂದಿದೆ.ಭಕ್ತರ ಅಪೇಕ್ಷೆಯಂತೆ ದೊಡ್ಡಮೇಟಿಕುರ್ಕಿ ಗ್ರಾಮದಲ್ಲಿ ಶ್ರೀಮಠವನ್ನು ಸ್ಥಾಪಿಸಿದಶ್ರೀ ಮ.ನಿ.ಪ್ರ. ಸಿದ್ದಬಸವ ಶಿವಯೋಗಿಗಳು ಸಮಾಜದ ಒಳಿತಿಗಾಗಿ ಧರ್ಮಕಾರ್ಯಗಳನ್ನುಕೈಗೊಂಡು ಭಕ್ತರಿಗೆ ಧಾರ್ಮಿಕ ಸಂಸ್ಕಾರ ನೀಡಿ ಸಮಾಜದಲ್ಲಿ ಶಾಂತಿ ನೆಮ್ಮದಿಗಳುನೆಲೆಸುವಂತೆ ಮಾಡುತ್ತಾರೆ. ಈ ಕಾರಣದಿಂದಾಗಿ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಶ್ರೀಮಠಕ್ಕೆಆಗಮಿಸತೊಡಗಿ ಶ್ರೀಮಠವು ಪ್ರಸಿದ್ದಗೊಂಡಿದೆ. ಮಠದ ಅಭಿವೃದ್ಧಿಗೆ ಶ್ರಮಿಸಿದ ಶ್ರೀಗಳು1954ರಲ್ಲಿ ಹಿಂದಿನ ಶ್ರೀಗಳಾದ ಶ್ರೀ ಮ.ನಿ.ಪ್ರ. ಶಾಂತವೀರ ಮಹಾಸ್ವಾಮಿಗಳನ್ನು ತಮ್ಮಉತ ್ತರಾಧಿಕಾರಿಗಳನ್ನಾಗಿ ನೇಮಕ ಮಾಡಿ 1959ರ ಅಕ್ಟೋಬರ್ 22ರಲ್ಲಿಲಿಂಗೈಕ್ಯರಾಗಿರುತ್ತಾರೆ.1954ರಲ್ಲಿ ಅಧಿಕಾರಕ್ಕೆ ಬಂದ ಶ್ರೀ ಶಾಂತವೀರ ಸ್ವಾಮಿಗಳು ಶಿವಯೋಗಮಂದಿರದಲ್ಲಿ ಸಂಸ್ಕøತ, ವೇದಾಧ್ಯಯನ ಅಭ್ಯಸಿಸಿದವರಾಗಿದ್ದು ಭಕ್ತರಲ್ಲಿ ವೀರಶೈವಧರ್ಮದ ಆಚರಣೆಗಳ ಬಗ್ಗೆ ಅರಿವು ಮೂಡಿಸುತ್ತಾ ಶ್ರೀಮಠವನ್ನು ಸಮರ್ಥವಾಗಿಮುನ್ನಡೆಸಿದರು. ಪ್ರಸ್ತುತ ಶ್ರೀಗಳಾದ ಶ್ರೀ ಮ.ನಿ.ಪ್ರ. ರಾಜಶೇಖರ ಮಹಾಸ್ವಾಮಿಗಳುಹಿಂದಿನ ಶ್ರೀಗಳ ಕೃಪಾಶೀರ್ವಾದದಲ್ಲಿ ಬೆಳೆದು 1995ರ ಮೇ 11ರಲ್ಲಿ ಶ್ರೀ ವಿರಕ್ತಮಠದಅಧಿಕಾರವನ್ನು ಸ್ವೀಕರಿಸಿದರು.ಶ್ರೀ ರಾಜಶೇಖರ ಸ್ವಾಮಿಗಳು ಮಠದ ಜಮೀನನ್ನು ಅಭಿವೃದ್ಧಿಗೊಳಿಸಿದ್ದು ಮಠದಆದಾಯ ಮೂಲವನ್ನು ಹೆಚ್ಚಿಸಿದ್ದಾರೆ. ಗುರುಗಳ ಗದ್ದುಗೆಗಳಿಗೆ ಮಂಟಪವನ್ನುನಿರ್ಮಿಸಿರುವ ಶ್ರೀಗಳು ಮಠದ ವತಿಯಿಂದ ಕಿರಿಯ / ಹಿರಿಯ ಪ್ರಾಥಮಿಕ ಶಾಲೆಯನ್ನುನಡೆಸಿಕೊಂಡು ಬರುತ್ತಿದ್ದಾರೆ.

Swamiji

Swamiji Name :
ಶ್ರೀ ಮ.ನಿ.ಪ್ರ. ರಾಜಶೇಖರ ಮಹಾಸ್ವಾಮಿಗಳು
Date of Birth :
06-03-1969
Place :
ದೊಡ್ಡಮೇಟಿಕುರ್ಕಿ, ಅರಸಿಕೆರೆ ತಾ||
Pattadikara :
11-05-1995
Photo :

Programs

ಪ್ರತಿ ಅಮವಾಸ್ಯೆ, ಹುಣ್ಣಿಮೆಗಳಿಗೆ ವಿಶೇಷ ಪೂಜೆ
ಆಶ್ವೀಜ ಬಹುಳ ಸಪ್ತಮಿಗೆ ಲಿಂ|| ಶ್ರೀ ಮ.ನಿ.ಪ್ರ. ಸಿದ್ದಬಸವ ಶಿವಯೋಗಿಗಳು ಹಾಗೂ ಲಿಂ|| ಶ್ರೀ ಮ.ನಿ.ಪ್ರ. ಶಾಂತವೀರಸ್ವಾಮಿಗಳ ಪುಣ್ಯಾರಾಧನೆ

Institutions

ಶ್ರೀ ಶಾಂತವೀರ ಶಿಕ್ಷಣ ಸಂಸ್ಥೆ ಕಿರಿಯ / ಹಿರಿಯ ಪ್ರಾಥಮಿಕ / ಪ್ರೌಢಶಾಲೆ

Photos

Full Address Kannada

ಶ್ರೀ ಬೂದಿಹಾಳು ವಿರಕ್ತಮಠ
ದೊಡ್ಡಮೇಟಿಕುರ್ಕಿ - 573 117
ಅರಸೀಕೆರೆ ತಾ||, ಹಾಸನ ಜಿಲ್ಲೆ

Map

Near by Places

ಅರಸಿಕೆರೆ - 25 ಕಿ.ಮೀ.
ಹಾಸನ - 65 ಕಿ.ಮೀ.
ಹುಳಿಯಾರು - 35 ಕಿ.ಮೀ.
ತಿಪಟೂರು - 35 ಕಿ.ಮೀ.

Statistic

88 Views
0 Rating
0 Favorite
0 Share
error: Content is protected !!