ಅರಕಲಗೂಡು ತಾಲ್ಲೂಕು ಕೇಂದ್ರದಿಂದ 20 ಕಿ.ಮೀ. ದೂರದಲ್ಲಿರುವಕೆಸವತ್ತೂರು ಗ್ರಾಮದಲ್ಲಿ ಅಸ್ತಿತ್ತ್ವದಲ್ಲಿರುವ ಶ್ರೀ ಸಿದ್ದಲಿಂಗೇಶ್ವರ ವಿರಕ್ತ ಮಠವು ತನ್ನಧಾರ್ಮಿಕ ಹಾಗೂ ಸಾಮಾಜಿಕ ಕಾರ್ಯಕ್ರಮಗಳ ಮೂಲಕ ಪ್ರಚಲಿತದಲ್ಲಿದೆ. ವಿರಕ್ತಸಂಪ್ರದಾಯವನ್ನು ರೂಡಿಸಿಕೊಂಡು ಬಂದಿರುವ ಶ್ರೀ ಸಿದ್ದಲಿಂಗೇಶ್ವರ ವಿರಕ್ತ ಮಠವುಬಸವಾದಿ ಶರಣರ ತತ್ತ್ವಾದರ್ಶಗಳನ್ನು ಜನರಿಗೆ ತಲುಪಿಸುವ ಕಾರ್ಯದಲ್ಲಿ ನಿರತವಾಗಿದೆ.ಕಾಯಕಯೋಗಿ, ನಡೆದಾಡುವ ದೇವರು, ಅಭಿನವ ಬಸವಣ್ಣ ಸಿದ್ದಗಂಗೆಯತಪಸ್ವಿ ಡಾ. ಶ್ರೀ ಶ್ರೀ ಶಿವಕುಮಾರ ಮಹಾಸ್ವಾಮಿಗಳು ಆಗಮಿಸಿ ಪಾದವನ್ನಿಟ್ಟು ಮನತುಂಬಿಸಕಲ ಭಕ್ತರನ್ನು ಮನಸಾರೆ ಹಾರೈಸಿದ ತಪೋಭೂಮಿ ಕೆಸವತ್ತೂರು ಗ್ರಾಮ. ಕೆಸವತ್ತೂರುಹಾಗೂ ಸುತ್ತಮುತ್ತಲ ಗ್ರಾಮಗಳ ಶರಣ ಬಂಧುಗಳ ಧಾರ್ಮಿಕ ಕಾರ್ಯ ಮತ್ತು ಸಂಸ್ಕøತಿಆಚರಣೆಗಳನ್ನು ಉಳಿಸಿ ಬೆಳೆಸಿಕೊಂಡು ಹೋಗಲು ಶ್ರೀಮಠದ ಅವಶ್ಯಕತೆಯನ್ನುಮನಗಂಡು ಕೆಸವತ್ತೂರು ಗ್ರಾಮದಲ್ಲಿ 2008ರಲ್ಲಿ ಶ್ರೀ ಸಿದ್ದಲಿಂಗೇಶ್ವರ ವಿರಕ್ತಮಠವನ್ನುಸ್ಥಾಪಿಸಲಾಯಿತು.ಶ್ರೀಮಠದ ಪ್ರಥಮ ಪೀಠಾಧಿಪತಿಗಳಾಗಿ 2008ರ ಏಪ್ರಿಲ್ 17ರಂದು ಅಧಿಕಾರವಹಿಸಿಕೊಂಡ ಶ್ರೀ ನಿ.ಪ್ರ.ಸ್ವ. ಬಸವರಾಜೇಂದ್ರ ಸ್ವಾಮಿಗಳು ಭಕ್ತರ ಸಹಕಾರದೊಂದಿಗೆಶ್ರೀಮಠವನ್ನು ಪ್ರಗತಿ ಪಥದತ್ತ ಕೊಂಡೊಯ್ಯುತ್ತಿದ್ದಾರೆ. ಶ್ರೀಗಳು ಶ್ರೀಮಠಕ್ಕೆ ಬರುವಭಕ್ತಾದಿಗಳ ಅನುಕೂಲಕ್ಕಾಗಿ ನೂತನ ಕಟ್ಟಡ ನಿರ್ಮಿಸುವ ಯೋಜನೆಯನ್ನುರೂಪಿಸಿಕೊಂಡಿದ್ದು ಭಕ್ತರ ಸಹಕಾರದೊಂದಿಗೆ ಕಾರ್ಯೋನ್ಮುಖರಾಗಿದ್ದಾರೆ.ಪೂಜ್ಯ ಶ್ರೀಗಳು ಎಂ.ಎಸ್ಸಿ., ಎಂ.ಇಡಿ., ಎಂ.ಪಿ.ಇ.ಡಿ. ಪದವಿಯನ್ನು ಪಡೆದಿದ್ದು,ವಿದೇಶದಲ್ಲಿ ಖೋಖೋ-ವಾಲಿಬಾಲ್ ತರಬೇತುದಾರರಾಗಿ ಹಾಗೂ ಪ್ರಾಂಶುಪಾಲರಾಗಿಮತ್ತು ಕರ್ನಾಟಕದ 20 ವಿದ್ಯಾಸಂಸ್ಥೆಗಳಲ್ಲಿ ಪ್ರಾಚಾರ್ಯರಾಗಿ ಸೇವೆ ಸಲ್ಲಿಸಿದ್ದು ಹಲವಾರುಪ್ರಶಸ್ತಿಗಳನ್ನು ಪಡೆದಿರುತ್ತಾರೆ. ಶ್ರೀಗಳು ಜ್ಯೋತಿಷ್ಯ ಶಾಸ್ತ್ರದಲ್ಲಿ ಅಪಾರ ಅನುಭವ ಹೊಂದಿದ್ದುಸುತ್ತೂರು, ಸಿದ್ದಗಂಗೆ, ಚಿತ್ರದುರ್ಗ, ಸಿರಿಗೆರೆ ಹೀಗೆ ಇನ್ನೂ ಅನೇಕ ಮಠಗಳಲ್ಲಿ ಧರ್ಮಕಾರ್ಯಗಳಲ್ಲಿ ತೊಡಗಿಸಿಕೊಂಡ ಅನುಭವಿಗಳಾಗಿರುತ್ತಾರೆ. ಪೂಜ್ಯ ಶ್ರೀಗಳು ಈ ಎಲ್ಲಾಅನುಭವಗಳನ್ನು ಭಕ್ತರಿಗೆ ತಿಳಿಸುತ್ತಾ ಅವರಲ್ಲಿ ಧಾರ್ಮಿಕ ಹಾಗೂ ಸಾಮಾಜಿಕ ಅರಿವನ್ನುಮೂಡಿಸಲು ಶ್ರಮಿಸುತ್ತಿದ್ದಾರೆ.
Swamiji
Swamiji Name :
ಶ್ರೀ ನಿ.ಪ್ರ.ಸ್ವ. ಬಸವರಾಜೇಂದ್ರ ಸ್ವಾಮಿಗಳು
Date of Birth :
29-10-1976
Place :
ಮೈಸೂರು
Pattadikara :
17-04-2008
Photo :
Programs
ಪ್ರತಿ ಅಮವಾಸೆಗೆ ವಿಶೇಷ ಪೂಜೆ ಏಪ್ರಿಲ್ ತಿಂಗಳಲ್ಲಿ ಶ್ರೀ ಸಿದ್ದಗಂಗಾ ಶ್ರೀಗಳ ಜಯಂತೋತ್ಸವ ಬಸವ ಜಯಂತಿ ಆಚರಣೆ ಆಗಸ್ಟ್ ತಿಂಗಳಲ್ಲಿ ಶ್ರೀ ಕ್ಷೇತ್ರ ಸುತ್ತೂರು ಶ್ರೀ ಜಗದ್ಗುರು ಶಿವರಾತ್ರಿ ರಾಜೇಂದ್ರ ಮಹಾಸ್ವಾಮಿಗಳ ಜಯಂತೋತ್ಸವ ಕಾರ್ತೀಕ ಮಾಸದಲ್ಲಿ ಒಂದು ತಿಂಗಳು ರುದ್ರಾಭಿಷೇಕ ಹಾಗೂ ಧಾರ್ಮಿಕ ಕಾರ್ಯಕ್ರಮಗಳು
Photos
Full Address Kannada
ಶ್ರೀ ಸಿದ್ದಲಿಂಗೇಶ್ವರ ವಿರಕ್ತ ಮಠ
ಕೆಸವತ್ತೂರು - 573 130
ಅರಕಲಗೂಡು ತಾ||, ಹಾಸನ ಜಿಲ್ಲೆ