Sukshetra Shree Chilume Matha

Sukshetra Shree Chilume Matha Claimed

ಸುಕ್ಷೇತ್ರ ಶ್ರೀ ಚಿಲುಮೆಮಠ

Average Reviews

Description

ಸುಕ್ಷೇತ್ರ ಶ್ರೀ ಚಿಲುಮೆಮಠ

ಶ್ರೀ ಮ.ನಿ.ಪ್ರ. ಜಯದೇವ ಸ್ವಾಮಿಗಳು

ಹಾಸನ ಜಿಲ್ಲೆ ಅರಕಲಗೂಡು ಪಟ್ಟಣದ ಹೊರವಲಯದಲ್ಲಿ ಅಸ್ತಿತ್ತ್ವದಲ್ಲಿರುವಶ್ರೀ ಚಿಲುಮೆ ಮಠವು ಪುರಾತನ ಮಠವಾಗಿದ್ದು ಕರ್ತೃಗುರುಗಳ ಬಗ್ಗೆ ನಿಖರವಾದದಾಖಲೆಗಳಿಲ್ಲ. ಹದಿನೈದನೇ ಶತಮಾನದ ಶ್ರೀ ತೋಂಟದ ಸಿದ್ದಲಿಂಗೇಶ್ವರರು ಸಂಚಾರದಲ್ಲಿತಮ್ಮ ಶಿಷ್ಯವರ್ಗದೊಡನೆ ಈ ಸ್ಥಳದಲ್ಲಿ ಕೆಲ ಕಾಲ ನೆಲೆನಿಂತು ಮುಂದುವರೆದರೆಂದುಕ್ರಮೇಣ ಈ ಜಾಗೃತ ಸ್ಥಳದಲ್ಲಿ ಮಠ ಸ್ಥಾಪಿತಗೊಂಡಿತೆಂದು ಹೇಳಲಾಗುತ್ತದೆ.ಶ್ರೀ ಮಠದ ಗುರುಪರಂಪರೆಯಲ್ಲಿ ಶ್ರೀ ಜಡೆ ಸ್ವಾಮಿಗಳು, ಶ್ರೀ ಗದ್ದುಗೆಸ್ವಾಮಿಗಳು, ಶ್ರೀ ನಂಜುಂಡ ಸ್ವಾಮಿಗಳು ಎಂಬ ಹೆಸರುಗಳು ಕೇಳಿಬರುತ್ತಿದ್ದು ಇವರಲ್ಲಿಯಾವ ಶ್ರೀಗಳು ಶ್ರೀಮಠದ ಕರ್ತೃಗುರುಗಳೆಂದು ತಿಳಿದು ಬರುವುದಿಲ್ಲ. ಪರಂಪರೆಯಲ್ಲಿಬರುವ ಶ್ರೀ ಮ.ನಿ.ಪ್ರ. ನಂಜುಂಡ ಸ್ವಾಮಿಗಳು ಪವಾಡ ಪುರುಷರಾಗಿದ್ದು ತಮ್ಮಪವಾಡಗಳಿಂದ ಮನೆ ಮಾತಾಗಿದ್ದರೆಂದು ಇಲ್ಲಿನ ಜನಪದ ಕಥೆಯಲ್ಲಿ ತಿಳಿದು ಬರುತ್ತದೆ.ಹಿಂದಿನ ಶ್ರೀಗಳಾದ ಶ್ರೀ ಮ.ನಿ.ಪ್ರ. ಶಿವದೇವಸ್ವಾಮಿಗಳವರು ಶ್ರೀಮಠವನ್ನು ಸಮರ್ಥವಾಗಿಮುನ್ನಡೆಸಿ ಪ್ರಸ್ತುತ ಶ್ರೀಗಳನ್ನು ತಮ್ಮ ಉತ್ತರಾಧಿಕಾರಿಗಳನ್ನಾಗಿ ಪಟ್ಟಕ್ಕೆ ತಂದು 1991ರನವೆಂಬರ್ನಲ್ಲಿ ಲಿಂಗೈಕ್ಯರಾಗಿದ್ದಾರೆ.ಪ್ರಸ್ತುತ ಶ್ರೀಗಳಾದ ಶ್ರೀ ಮ.ನಿ.ಪ್ರ. ಜಯದೇವ ಸ್ವಾಮಿಗಳು ಹಿಂದಿನಶ್ರೀಗಳಿರುವಾಗಲೇ ತಮ್ಮ ಚಿಕ್ಕವಯಸ್ಸಿನಲ್ಲಿಯೇ 1976ರಲ್ಲಿ ಶ್ರೀಮಠದ ಪಟ್ಟಾಧಿಕಾರಸ್ವೀಕರಿಸಿದ್ದು ಹಿರಿಯ ಗುರುಗಳ ಸೇವೆಯಲ್ಲಿ ಬಹುವರ್ಷಗಳ ಕಾಲ ತೊಡಗಿಕೊಂಡು ಅವರಮಾರ್ಗದರ್ಶನದಲ್ಲಿ ಪರಿಪಕ್ವಗೊಂಡರು. ಹಿರಿಯ ಗುರುಗಳ ಕಾಲಾ ನಂತರ ಮಠದಸಂಪೂರ್ಣ ಜವಾಬ್ದಾರಿಯನ್ನು ವಹಿಸಿಕೊಂಡ ಶ್ರೀಗಳು ಶ್ರೀಮಠವನ್ನು ಸರ್ವತೋಮುಖಅಭಿವೃದ್ದಿಪಡಿಸುವತ್ತ ಚಿತ್ತಹರಿಸಿದ್ದಾರೆ. ಶ್ರೀಗಳು ಶ್ರೀಮಠದ ಜೊತೆಗೆ ಸಂತೆಮರೂರು ಶ್ರೀಸಿದ್ದೇಶ್ವರ ಸ್ವಾಮಿ ಮಠಕ್ಕೂ ಶ್ರೀಗಳಾಗಿದ್ದಾರೆ.ಶ್ರೀಮಠಕ್ಕೆ ಚಿಲುಮೆ ಮಠವೆಂದು ಹೆಸರು ಬರಲು ಕಾರಣ, ಮಠದಲ್ಲಿರುವ ಚಿಕ್ಕಕಲ್ಯಾಣಿ(ಚಿಲುಮೆ). ಮಠದಲ್ಲಿ ಚಿಲುಮೆ ಇದ್ದ ಕಾರಣದಿಂದಾಗಿ ರೂಡಿಗತವಾಗಿ ಜನರು ಶ್ರೀಚಿಲುಮೆ ಮಠವೆಂದು ಕರೆಯಲು ಪ್ರಾರಂಭಿಸಿ ಅದೇ ಹೆಸರು ಉಳಿದುಕೊಂಡಿದೆ.ಶ್ರೀಮಠದಲ್ಲಿ ಹಿಂದಿನ ಗುರುಗಳ ಗದ್ದುಗೆಯನ್ನು ಹೊರತು ಪಡಿಸಿ ಬೇರೆ ಯಾವ ಗುರುಗಳಗದ್ದುಗೆಗಳು ಕಾಣಸಿಗುವುದಿಲ್ಲ.

Swamiji

Swamiji Name :
ಶ್ರೀ ಮ.ನಿ.ಪ್ರ. ಜಯದೇವ ಸ್ವಾಮಿಗಳು
Date of Birth :
20-02-1969
Place :
ದೇವಿಗೆರಿ, ಹಾವೇರಿ ತಾ||
Pattadikara :
1976
Photo :

Programs

ಪ್ರತಿ ಅಮವಾಸ್ಯೆ, ಹುಣ್ಣಿಮೆಗಳಿಗೆ ವಿಶೇಷ ಪೂಜೆ
ಪ್ರತಿ ಯುಗಾದಿಗೆ ಹಿರಿಯ ಗುರುಗಳ ಆರಾಧನೆ ಮತ್ತು ಸಾಮೂಹಿಕ ವಿವಾಹ ಹಾಗೂ ವಿವಿಧ ಧಾರ್ಮಿಕ ಕಾರ್ಯಕ್ರಮಗಳು

Photos

Full Address Kannada

ಸುಕ್ಷೇತ್ರ ಶ್ರೀ ಚಿಲುಮೆಮಠ
8ನೇ ವಾರ್ಡ್, ಅರಕಲಗೂಡು - 573 102
ಹಾಸನ ಜಿಲ್ಲೆ

Map

Near by Places

ಅರಕಲಗೂಡು ಬಸ್ ಸ್ಟ್ಯಾಂಡ್ - 2 ಕಿ.ಮೀ
ಹೊಳೆನರಸಿಪುರ - 24 ಕಿ.ಮೀ.
ಹಾಸನ - 30 ಕಿ.ಮೀ.
ಚನ್ನರಾಯಪಟ್ಟಣ - 50 ಕಿ.ಮೀ.

Statistic

21 Views
0 Rating
0 Favorite
0 Share
error: Content is protected !!