Shree Shivayogishwara Mandira – Virakta Matha

Shree Shivayogishwara Mandira – Virakta Matha Claimed

ಶ್ರೀ ಶಿವಯೋಗೀಶ್ವರ ಮಂದಿರ - ವಿರಕ್ತಮಠ

Average Reviews

Description

ಶ್ರೀ ಶಿವಯೋಗೀಶ್ವರ ಮಂದಿರ – ವಿರಕ್ತಮಠ

ಕರ್ತೃ – ಪರಮ ಪೂಜ್ಯ ಶ್ರೀ ಕಲ್ಮಠಾದೀಶ್ವರರು

ತುರುವೇಕೆರೆ ಪಟ್ಟಣದ ಹೊರವಲಯದಲ್ಲಿ ಅಸ್ತಿತ ್ವದಲ್ಲಿರುವ ಶ್ರೀಶಿವಯೋಗೀಶ್ವರ ಮಂದಿರ ವಿರಕ್ತಮಠವು ಪುರಾತನ ಕಾಲದ್ದಾದರೂ ಕಾಲಕ್ರಮೇಣ ತನ್ನಅಸ್ತಿತ್ವವನ್ನು ಕಳೆದುಕೊಂಡಿತ್ತು. ಇತ್ತೀಚೆಗೆ ಇಲ್ಲಿನ ಭಕ್ತರ ಕೋರಿಕೆಯ ಮೇರೆಗೆ ತಿಪಟೂರುತಾಲ್ಲೂಕು ನೊಣವಿನಕೆರೆ ಗ್ರಾಮದ ಪ್ರಸಿದ್ದ ಶ್ರೀ ಸೋಮೇಕಟ್ಟಿ ಕಾಡಸಿದ್ದೇಶ್ವರ ಮಠದಶ್ರೀಗಳಾದ ಶ್ರೀ ಮ. ನಿ. ಪ್ರ. ಕರಿವೃಷಭ ದೇಶಿಕೇಂದ್ರ ಶಿವಯೋಗೀಶ್ವರ ಮಹಾಸ್ವಾಮಿಗಳುಜೀರ್ಣಗೊಂಡಿದ್ದ ಶ್ರೀ ಮಠವನ್ನು ಭಕ್ತರ ಸಹಕಾರದೊಂದಿಗೆ ಜೀರ್ಣಾಭಿವೃದ್ದಿಗೊಳಿಸಿಪುನರ್ಸ್ಥಾಪಿಸಿದ್ದಾರೆ.ಶ್ರೀ ವಿರಕ್ತ ಮಠದ ಕರ್ತೃ ಗುರುಗಳೆಂದು ಪೂಜ್ಯ ಶ್ರೀ ಕಲ್ಮಠಾದೀಶ್ವರರನ್ನುಹೆಸರಿಸಲಾಗಿದ್ದು ಇವರ ಕರ್ತೃ ಗದ್ದುಗೆಯು ಶ್ರೀ ಮಠದಲ್ಲಿದೆ. ಆದರೆ ಕರ್ತೃ ಗುರುಗಳಬಗ್ಗೆಯಾಗಲೀ ನಂತರದ ಪರಂಪರೆಯ ಕುರಿತಾಗಲೀ ಯಾವುದೇ ಮಾಹಿತಿಗಳು ಲಭ್ಯವಿಲ್ಲ.ಆದರೆ ಶ್ರೀ ಮಠವು ತುರುವೇಕೆರೆಯ ವೀರಶೈವರ ಪ್ರಮುಖ ಧಾರ್ಮಿಕ ಕೇಂದ್ರವಾಗಿಬೆಳೆದಿತ್ತು ಎಂಬುದಕ್ಕೆ ದಾಖಲೆಗಳು ಸಿಗುತ್ತವೆ. ಈ ಕಾರಣದಿಂದಾಗಿಯೇ ಪಟ್ಟಣದವೀರಶೈವ ಮುಖಂಡರು ನೊಣವಿನಕೆರೆಯ ಗುರುಗಳ ಬಳಿಯಲ್ಲಿ ಶ್ರೀ ಮಠವನ್ನು ತಮ್ಮವಶಕ್ಕೆ ತೆಗೆದುಕೊಂಡು ಮುನ್ನಡೆಸಬೇಕೆಂದು ಬಿನ್ನವಿಸಿಕೊಂಡರು.ಶ್ರೀ ಕರಿವೃಷಭ ದೇಶಿಕೇಂದ್ರ ಶಿವಯೋಗೀಶ್ವರ ಮಹಾಸ್ವಾಮಿಗಳು ಭಕ್ತರಕೋರಿಕೆಗೆ ಸ್ಪಂದಿಸಿ ಶ್ರೀ ಮಠವನ್ನು ಜೀರ್ಣೋದ್ದಾರ ಮಾಡಿದ್ದಲ್ಲದೇ ಮಠದಲ್ಲಿನಗದ್ದುಗೆಗಳನ್ನು ನವೀಕರಿಸಿ ನಿತ್ಯ ಪೂಜೆಗೆ ಒಳಪಡಿಸಿದರು ಹಾಗೂ ಭಕ್ತರು ಮಠದ ಎರಡುಎಕರೆ ಜಮೀನಿನ ಜೊತೆಯಲ್ಲಿ ಇನ್ನೂ ಇಪ್ಪತ್ತು ಎಕರೆ ಜಮೀನನ್ನು ಶ್ರೀ ಮಠಕ್ಕೆರೂಡಿಸಿಕೊಟ್ಟಿದ್ದು, ಶ್ರೀಗಳು ಆ ಜಮೀನನ್ನು ಅಭಿವೃದ್ಧಿಪಡಿಸಿ ಶ್ರೀ ಮಠದ ಆದಾಯಮೂಲವನ್ನಾಗಿ ಪರಿವರ್ತಿಸಿದರು. ಶ್ರೀ ಮಠದ ಕಟ್ಟಡವನ್ನು ವಿಸ್ತಾರಗೊಳಿಸಿದ್ದಲ್ಲದೇ ಕಲ್ಯಾಣಮಂಟಪವನ್ನು ನಿರ್ಮಿಸಿ ಸಾರ್ವಜನಿಕ ಉಪಯೋಗಕ್ಕೆ ನೀಡಿದ್ದಾರೆ.ಶ್ರೀಗಳು ಭಕ್ತರ ಸಂಘಟನೆಯನ್ನು ಮಾಡತೊಡಗಿ ಅವರಿಗೆ ಪಾರ್ವತಿ ಬಳಗಹಾಗೂ ಬಸವೇಶ್ವರ ಯುವಕ ಸಂಘಗಳನ್ನು ಪ್ರಾರಂಭಿಸುವಂತೆ ಪ್ರೇರಿಪಿಸಿದರು ಹಾಗೂ ಶ್ರೀಮಠದಲ್ಲಿ ಉಚಿತ ಸಾಮೂಹಿಕ ವಿವಾಹ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಸಮಾಜಸುಧಾರಣೆಗೆ ಮುಂದಾದರು. ಅಲ್ಲದೇ ಶ್ರೀ ಮಠದ ವತಿಯಿಂದ ಶಾಲೆಗಳನ್ನು ಪ್ರಾರಂಭಿಸಿಅಲ್ಲಿನ ವಿದ್ಯಾರ್ಥಿಗಳಿಗೋಸ್ಕರ ವಿದ್ಯಾರ್ಥಿ ನಿಲಯವನ್ನು ಸ್ಥಾಪಿಸಿದ್ದು ದಾಸೋಹಮೂರ್ತಿಗಳೆಂದೇ ಹೆಸರಾಗಿದ್ದಾರೆ.

Swamiji

Swamiji Name :
ಶ್ರೀ ಮ. ನಿ. ಪ್ರ. ಕರಿವೃಷಭ ದೇಶಿಕೇಂದ್ರ ಶಿವಯೋಗಿಶ್ವರ ಮಹಾಸ್ವಾಮಿಗಳು
Date of Birth :
31-01-1954
Place :
ಸಾಲುಟಿಕಿ, ಇಂಡಿ ತಾ||
Pattadikara :
15-11-1985
Photo :

Programs

ಪ್ರತಿ ಹುಣ್ಣಿಮೆಗೆ ಶ್ರೀಗಳ "ಇಷ್ಟಲಿಂಗ ಮಹಾಪೂಜೆ" ಶ್ರಾವಣ ಮಾಸದಲ್ಲಿ ನಿತ್ಯ ರುದ್ರಾಭಿಷೇಕ ಮತ್ತು ಲೋಕ ಕಲ್ಯಾಣಾರ್ಥವಾಗಿ "ಇಷ್ಟಲಿಂಗ ಮಹಾಪೂಜೆ" ಪ್ರತಿ ಹುಣ್ಣಿಮೆ - ಉಚಿತ ಸಾಮೂಹಿಕ ವಿವಾಹ

Institutions

ಕಿರಿಯ / ಹಿರಿಯ ಪ್ರಾಥಮಿಕ ಶಾಲೆಗಳು ಶ್ರೀ ಶಿವಯೋಗೀಶ್ವರ ವಿಧ್ಯಾರ್ಥಿನಿಲಯ

Photos

Full Address Kannada

ಶ್ರೀ ಶಿವಯೋಗೀಶ್ವರ ಮಂದಿರ-ವಿರಕ್ತ ಮಠ ತುರುವೇಕೆರೆ - 572 227 ತುರುವೇಕೆರೆ ತಾ||, ತುಮಕೂರು ಜಿಲ್ಲೆ

Map

Near by Places

ಯಡಿಯೂರು - 33 ಕಿ.ಮೀ. ತಿಪಟೂರು - 25 ಕಿ.ಮೀ. ತುಮಕೂರು - 60 ಕಿ.ಮೀ.

Statistic

375 Views
0 Rating
0 Favorite
0 Share
error: Content is protected !!