ತುಮಕೂರು ನಗರದ ಚಿಕ್ಕಪೇಟೆಯಲ್ಲಿರುವ ಹಿರೇಮಠವು ಪ್ರಾಚೀನಕಾಲದ್ದಾಗಿದ್ದು ಶ್ರೀ ಶ್ರೀಶೈಲ ಪೀಠದ ಶಾಖಾಮಠವೆಂದು ಗುರುತಿಸಿಕೊಂಡಿದೆ. ಶ್ರೀ ಮಠಕ್ಕೆನೂರಾರು ವರ್ಷಗಳ ಇತಿಹಾಸವಿದೆ. ಆದರೆ ಅದೆಲ್ಲವೂ ಕಾಲಗರ್ಭದಲ್ಲಿ ಹುದುಗಿಹೋಗಿದೆ. ದಾಖಲೆಗಳ ತೀವ್ರತರ ಅಭಾವದಿಂದಾಗಿ ಈ ಮಠದ ಪ್ರಾಚೀನತೆಯಕುರಿತಾಗಲೀ, ಪರಂಪರೆಯ ಕುರಿತಾಗಲೀ ನಿಖರವಾಗಿ ಹೇಳಲು ಸಾಧ್ಯವಿಲ್ಲ. ಶ್ರೀ ಮಠದಲ್ಲಿಶ್ರೀ ಮಲ್ಲಿಕಾರ್ಜುನ ಮಹಾಸ್ವಾಮಿಗಳ ಗದ್ದುಗೆಯನ್ನು ಕೇಂದ್ರವಾಗಿಟ್ಟುಕೊಂಡು ಶ್ರೀಮಠಸ್ಥಾಪನೆಯಾಗಿರುವುದರಿಂದ ಅವರನ್ನೇ ಕರ್ತೃ ಗುರುಗಳೆಂದು ಗುರುತಿಸಲಾಗಿದೆ.ಶ್ರೀ ಹಿರೇಮಠವು 1996ರವರೆಗೆ ಗುರುಗಳಿಲ್ಲದೇ ಜೀರ್ಣಗೊಂಡಿತ್ತು. ಪುರಾತನಮಠವು ಗುರುಗಳಿಲ್ಲದೆ ಖಾಲಿ ಉಳಿದದ್ದನ್ನು ಮನಗಂಡ ವೀರಶೈವ ಮುಖಂಡರುರಂಭಾಪುರಿ ಶ್ರೀಗಳಲ್ಲಿ ಬಿನ್ನವಿಸಿಕೊಂಡಾಗ ಶ್ರೀ ಮಠಕ್ಕೆ ಪೀಠಾಧಿಪತಿಗಳಾಗಿ ಬಂದವರೇಈಗಿನ ಶ್ರೀಗಳಾದ ಡಾ. ಶ್ರೀ ಶಿವಾನಂದ ಶಿವಾಚಾರ್ಯ ಮಹಾಸ್ವಾಮಿಗಳು. ಬಿಜಾಪುರದಲ್ಲಿಜನಿಸಿದ ಶ್ರೀಗಳು ಕರ್ನಾಟಕ ವಿಶ್ವವಿದ್ಯಾನಿಲಯದಲ್ಲಿ ಸಂಸ್ಕøತದಲ್ಲಿ ಸ್ನಾತಕೋತ್ತರ ಪದವಿಪಡೆದರು. ಜಾನಕೀಹರಣಂ ಎಂಬ ಮಹಾಕಾವ್ಯದ ಮೇಲೆ ಸಂಶೋದನಾ ಪ್ರಬಂದಮಂಡಿಸಿ ಡಾಕ್ಟರೇಟ್ ಪಡೆದರು. ಮುಂದೆ ಕಾಶಿಗೆ ತೆರಳಿ ವೇದಾಂತಾಚಾರ್ಯ ಪರೀಕ್ಷೆಮುಗಿಸಿದ ಶ್ರೀಗಳು, ಕಾಶಿಯ ಬನಾರಸ್ ವಿಶ್ವವಿದ್ಯಾನಿಲಯದಲ್ಲಿ ಕಾನೂನು ಪದವಿಪೂರೈಸಿದರು.ತಮ್ಮ ವಿದ್ವತ್ನಿಂದ ಹೆಸರಾಗಿದ್ದ ಶ್ರೀಗಳು ಮೊದಲು ಗುಳೇದಗುಡ್ಡದಅಮರೇಶ್ವರ ಮಠದ ಪಟ್ಟಾಧಿಕಾರ ವಹಿಸಿಕೊಂಡಿದ್ದು, ತದನಂತರ ತುಮಕೂರಿಗೆ ಆಗಮಿಸಿಶ್ರೀ ಹಿರೇಮಠದ ಜವಾಬ್ದಾರಿ ಹೊತ್ತುಕೊಂಡರು. ಸಂಪೂರ್ಣ ಜೀರ್ಣಗೊಂಡಿದ್ದ ಶ್ರೀಮಠದ ಕಟ್ಟಡವನ್ನು ಅಭಿವೃದ್ದಿಗೊಳಿಸಿದ ಶ್ರೀಗಳು, ಹಿರೇಮಠದ ಸುತ್ತ ವಸತಿಸಂಕೀರ್ಣವನ್ನು ನಿರ್ಮಿಸಿದರು. ತದನಂತರ 1998ರಲ್ಲಿ ತಾವೇ ಅಭಿವೃದ್ದಿ ಪಡಿಸಿದ ಶ್ರೀಹಿರೇಮಠದ ಪಟ್ಟಾಧಿಕಾರದ ಅನುಗ್ರಹವನ್ನು ಪಂಚ ಪೀಠಗಳ ಜಗದ್ಗುರುಗಳು ಹಾಗೂಸಿದ್ದಗಂಗಾ ಶ್ರೀಗಳ ಸಾನಿಧ್ಯದಲ್ಲಿ ಪಡೆದುಕೊಂಡರು.ಶ್ರೀಗಳು ಶ್ರೀ ಮಠದ ಧಾರ್ಮಿಕ ಆಚರಣೆಗಳನ್ನು ಚುರುಕುಗೊಳಿಸಿದ್ದಲ್ಲದೇ ಶ್ರೀಮಲ್ಲಿಕಾರ್ಜುನ ಗುಡಿಯ ಗೋಪುರವನ್ನು ನಿರ್ಮಿಸಿದರು. ಪ್ರಪ್ರಥಮ ಬಾರಿಗೆಮಹಿಳೆಯರಿಗೆ ವೇದವನ್ನು ಹೇಳಿಕೊಡಲು ಪ್ರಾರಂಭಿಸಿದ ಶ್ರೀಗಳು ಶ್ರೀ ಮಠವನ್ನು ಸಂಸ್ಕಾರಶಿಬಿರಗಳು, ಬೇಸಿಗೆ ಶಿಬಿರಗಳು, ಶೈಕ್ಷಣಿಕ ಚಟುವಟಿಕೆಗಳ ಮೂಲಕ ಸದಾ ಚಟುವಟಿಕೆಯಕೇಂದ್ರವನ್ನಾಗಿ ಪರಿವರ್ತಿಸಿದ್ದಾರೆ ಹಾಗೂ ವಿದೇಶಗಳ ಧಾರ್ಮಿಕ ಮಹಾಸಭೆಗಳಲ್ಲಿಭಾಗವಹಿಸಿ ಶ್ರೀ ಮಠದ ಕೀರ್ತಿಯನ್ನು ಹೆಚ್ಚಿಸಿದ್ದಾರೆ.
Swamiji
Swamiji Name :
ಶ್ರೀ ಷ. ಬ್ರ. ಡಾ. ಶಿವಾನಂದ ಶಿವಾಚಾರ್ಯ ಮಹಾಸ್ವಾಮಿಗಳು
Date of Birth :
29-03-1961
Place :
ಬಿಜಾಪುರ
Pattadikara :
06-05-1998
Photo :
Programs
ಪ್ರತಿ ಅಮವಾಸ್ಯೆಗೆ ರುದ್ರಾಭಿಷೇಕ, ವಿಶೇಷ ಪೂಜೆ, ಧರ್ಮಗೋಷ್ಠಿ ಮಹಾಶಿವರಾತ್ರಿಯಂದು ಭಕ್ತಾದಿಗಳಿಂದ ಕ್ಷೀರಾಭಿಷೇಕ, ಇಷ್ಟಲಿಂಗಪೂಜೆ ಹಾಗೂ ಭಜನೆ ಮಠದ ಸಂಕ್ರಾಂತಿಗೆ ಕರ್ತೃ ಶ್ರೀ ಮಲ್ಲಿಕಾರ್ಜುನ ಮಹಾಸ್ವಾಮಿ ಸನ್ನಿದಿಯಲ್ಲಿ ವಿಶೇಷ ಪೂಜೆ ಮಾರ್ಚ್ 29ರಂದು ಶ್ರೀಗಳ ಹುಟ್ಟುಹಬ್ಬ * ಮೇ 5/6ರಂದು ಶ್ರೀಗಳ ವರ್ದಂತಿ ಮಹೋತ್ಸವ ಯುಗಾದಿ, ದಸರಾ, ದೀಪಾವಳಿ, ಗಣೇಶ ಹಬ್ಬಗಳ ಆಚರಣೆ, ವಿಶೇಷ ಧಾರ್ಮಿಕ ಕಾರ್ಯಕ್ರಮಗಳು ಆಷಾಡ ಮಾಸದಲ್ಲಿ ಮಹಿಳೆಯರಿಗಾಗಿ "ವೇದ ಪಠಣ" & "ವೇದ ಪಾರಾಯಣ" ಶಿಬಿರ ಶ್ರಾವಣ ಮಾಸದಲ್ಲಿ ಶ್ರೀಗಳ ಶಿವಪೂಜಾನುಷ್ಟಾನ & ಸತ್ಸಂಗ ಕಾರ್ತೀಕ ಮಾಸದಲ್ಲಿ ನಿತ್ಯ ದೀಪೋತ್ಸವ ಹಾಗೂ ಕಡೇ ಸೋಮವಾರ ಸಾಮೂಹಿಕ "ಲಿಂಗಪೂಜಾ" & "ಮಂತ್ರದೀಕ್ಷಾ" ಕಾರ್ಯಕ್ರಮ
Institutions
ಪೂರ್ವ ಪ್ರಾಥಮಿಕ ಶಾಲೆ ಕಿರಿಯ / ಹಿರಿಯ ಪ್ರಾಥಮಿಕ / ಪ್ರೌಢಶಾಲೆ
Photos
Full Address Kannada
ಶ್ರೀ ಹಿರೇಮಠ ಚಿಕ್ಕಪೇಟೆ, ತುಮಕೂರು - 572 101 ತುಮಕೂರು ಜಿಲ್ಲೆ