ತುಮಕೂರು ಜಿಲ್ಲೆಯ ಮಾಕನಹಳ್ಳಿ ಗ್ರಾಮದ ಹೊರವಲಯದಲ್ಲಿ ಇತ್ತೀಚೆಗೆಸ್ಥಾಪಿತಗೊಂಡಿರುವ ಶ್ರೀ ಜಂಗಮ ಮಠವು ಅಸ್ತಿತ್ವದಲ್ಲಿದ್ದು ತನ್ನ ಧಾರ್ಮಿಕ ಹಾಗೂಸಾಮಾಜಿಕ ಕಾರ್ಯಕ್ರಮಗಳ ಮೂಲಕ ಈ ಭಾಗದ ಪ್ರಮುಖ ಧಾರ್ಮಿಕ ಕೇಂದ್ರವಾಗಿಪ್ರಚಲಿತದಲ್ಲಿದೆ. ಶ್ರೀ ಮಠವು ತುಮಕೂರಿನ ಶ್ರೀ ಸಿದ್ದಗಂಗಾ ಮಠದ ಶಾಖಾಮಠವಾಗಿಬೆಳೆದು ಬಂದಿದೆ.ಶ್ರೀ ಮಠದ ಸ್ಥಾಪಕ ಗುರುಗಳಾದ ಶ್ರೀ ಶ್ರೀ ಗಂಗಾಧರ ಮಹಾಸ್ವಾಮಿಗಳುತುಮಕೂರು ಸಿದ್ದಗಂಗಾ ಶ್ರೀಗಳ ಆಶೀರ್ವಾದದಿಂದ ಬೆಳೆದವರಾಗಿದ್ದು ಅವರ ಹಾಗೂಭಕ್ತರ ಸಹಕಾರದೊಂದಿಗೆ 1995ರ ಮೇ 21ರಂದು ಮಾಕನಹಳ್ಳಿ ಗ್ರಾಮದಲ್ಲಿ ಶ್ರೀ ಜಂಗಮಮಠವನ್ನು ಸ್ಥಾಪಿಸಿದರು. ಶ್ರೀ ಮಠದಲ್ಲಿ ಧಾರ್ಮಿಕ ಆಚರಣೆಗಳನ್ನು ಪ್ರಾರಂಭಿಸಿದ ಶ್ರೀಗಳುಸಾಮಾಜಿಕವಾಗಿಯೂ ಭಕ್ತರನ್ನು ಚಿಂತನೆಗೆ ಒಳಪಡಿಸುತ್ತಿದ್ದಾರೆ.ಶ್ರೀ ಮಠದ ವತಿಯಿಂದ ಕಿರಿಯ ಹಾಗೂ ಹಿರಿಯ ಪ್ರಾಥಮಿಕ ಶಾಲೆ,ಪ್ರೌಢಶಾಲೆಗಳನ್ನು ತೆರೆಯಲಾಗಿದ್ದು ಈ ಭಾಗದ ಗ್ರಾಮೀಣ ಮಕ್ಕಳಿಗೆ ಅನುಕೂಲವಾಗಿದೆಒಟ್ಟು 280ಕ್ಕೂ ಅಧಿಕ ಮಕ್ಕಳು ಇಲ್ಲಿ ವಿದ್ಯಾಭ್ಯಾಸ ನಿರತರಾಗಿದ್ದಾರೆ ಹಾಗೂ ಶ್ರೀ ಮಠದಲ್ಲಿವಿದ್ಯಾರ್ಥಿನಿಲಯವನ್ನು ಸ್ಥಾಪಿಸಲಾಗಿದ್ದು ದೂರದೂರಿನ ಗ್ರಾಮಗಳ ಮಕ್ಕಳ ವಸತಿ ಹಾಗೂಪ್ರಸಾದದ ವ್ಯವಸ್ಥೆ ಮಾಡಲಾಗಿದೆ.ಶ್ರೀ ಮಠದಲ್ಲಿ ನಿತ್ಯ ಧಾರ್ಮಿಕ ಆಚರಣೆಗಳೊಂದಿಗೆ ಪ್ರತಿವರ್ಷ ಡಿಸಂಬರ್18ರಂದು ಶ್ರೀಗಳ ಗುರುವಂದನಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗುತ್ತಿದ್ದು ಆಸಮಯದಲ್ಲಿ ವಿವಿಧ ಧಾರ್ಮಿಕ, ಸಾಂಸ್ಕøತಿಕ ಕಾರ್ಯಕ್ರಮಗಳು ಆಯೋಜಿಸಲ್ಪಡುತ್ತವೆಹಾಗೂ ದಸರಾದಲ್ಲಿ ವಿಶೇಷ ಧಾರ್ಮಿಕ ಆಚರಣೆಗಳನ್ನು ನಡೆಸಿಕೊಂಡು ಬರಲಾಗುತ್ತಿದೆ.
Swamiji
Swamiji Name :
ಶ್ರೀ ಶ್ರೀ ಗಂಗಾಧರ ಮಹಾಸ್ವಾಮಿಗಳು
Date of Birth :
18-12-1967
Place :
ವೀರಾಪುರ, ಮಾಗಡಿ ತಾ||
Pattadikara :
29-01-1988
Photo :
Programs
ಪ್ರತಿ ಅಮವಾಸ್ಯೆಗೆ ವಿಶೇಷ ಕಾರ್ಯಕ್ರಮಗಳು ಡಿಸೆಂಬರ್ 18ರಂದು ಶ್ರೀಗಳ ಗುರುವಂದನಾ ಕಾರ್ಯಕ್ರಮ ಹಾಗೂ ಧಾರ್ಮಿಕ, ಸಾಂಸ್ಕøತಿಕ ಕಾರ್ಯಕ್ರಮಗಳು ದಸರಾದಲ್ಲಿ ವಿಶೇಷ ಧಾರ್ಮಿಕ ಆಚರಣೆಗಳು
Institutions
ಕಿರಿಯ / ಹಿರಿಯ ಪ್ರಾಥಮಿಕ / ಪ್ರೌಢಶಾಲೆ ವಿದ್ಯಾರ್ಥಿ ನಿಲಯ
Photos
Full Address Kannada
ಶ್ರೀ ಜಂಗಮ ಮಠ
ಮಾಕನಹಳ್ಳಿ - 572 118
ತುಮಕೂರು ತಾ|| ಮತ್ತು ಜಿಲ್ಲೆ