Shree Rudrana Matha

Shree Rudrana Matha Claimed

ಶ್ರೀ ರುದ್ರನ ಮಠ

Average Reviews

Description

ಶ್ರೀ ರುದ್ರನ ಮಠ – ಬೆಳ್ಳಾವಿ

ಕರ್ತೃ – ಶ್ರೀ ಷ. ಬ್ರ. ನಂಜುಂಡ ಶಿವಯೋಗಿಗಳು

ತುಮಕೂರು ತಾಲ್ಲೂಕಿನ ಬೆಳ್ಳಾವಿ ಗ್ರಾಮದ ಮಧ್ಯಭಾಗದಲ್ಲಿ ಅಸ್ತಿತ್ವದಲ್ಲಿರುವ ಶ್ರೀರುದ್ರನ ಮಠವು ಪುರಾತನ ಕಾಲದಿಂದಲೂ ಗ್ರಾಮದಲ್ಲಿ ಧಾರ್ಮಿಕ ಆಚರಣೆಗಳನ್ನುಮುನ್ನಡೆಸಿಕೊಂಡು ಬರುತ್ತಿದೆ. ಶ್ರೀ ಮಠದ ಸ್ಥಾಪಿತ ಕಾಲಮಾನ 10ನೇ ಶತಮಾನವೆಂದುತಿಳಿದುಬರುತ್ತಾದರೂ ಪರಂಪರೆಯ ಬಗ್ಗೆ ತಿಳಿದು ಬರುವುದಿಲ್ಲ. ಬಹುಶಃ ಶ್ರೀ ವೀರಭದ್ರಶಿವಾಚಾರ್ಯರು ಶ್ರೀ ಮಠವನ್ನು ಸ್ಥಾಪಿಸಿರಬಹುದೆಂದು ಹೇಳಲಾದರೂ ಸ್ಪಷ್ಟತೆಯಿಲ್ಲ. ಶ್ರೀಮಠವು ಶ್ರೀ ರಂಭಾಪುರಿ ಶಾಖಾ ಮಠವಾಗಿ ಪುತ್ರ ವರ್ಗದ ಪರಂಪರೆಯನ್ನು ಹೊಂದಿದೆ.ಸುಮಾರು 2 ಶತಮಾನಗಳ ಹಿಂದೆ ಶ್ರೀ ಮಠವನ್ನು ಮುನ್ನಡೆಸಿದರು ಶ್ರೀ ಷ. ಬ್ರ.ನಂಜುಂಡ ಶಿವಯೋಗಿಗಳಿಂದ ಮುಂದಿನ ಪರಂಪರೆಯ ಬಗ್ಗೆ ಮಾಹಿತಿಗಳುಲಭ್ಯವಾಗುತ್ತವೆ. ಶ್ರೀ ನಂಜುಂಡ ಶಿವಯೋಗಿಗಳಿಗಿಂತಲೂ ಪೂರ್ವದಲ್ಲಿ 10 ಜನ ಶ್ರೀಗಳುಅಧಿಕಾರ ನಡೆಸಿದ್ದು ಇವರು 11ನೇಯವರೆಂದು ಅಂದಾಜಿಸಲಾಗಿದೆ. ಇವರ ಕಾಲದಲ್ಲಿ ಶ್ರೀಮಠದ ಕಾರ್ಯಚಟುವಟಿಕೆಗಳು ಹಾಲನೂರಿಗೆ ಸ್ಥಳಾಂತರಗೊಂಡು ತದನಂತರದ ಶ್ರೀ ಷ.ಬ್ರ. ಶಿವಯೋಗಿ ಮಲ್ಲಿಕಾರ್ಜುನ ಶಿವಾಚಾರ್ಯರ ಕಾಲದಲ್ಲಿ ಮತ್ತೆ ಬೆಳ್ಳಾವಿಗೆಸ್ಥಳಾಂತರಗೊಂಡಿರುವ ಮಾಹಿತಿ ಶ್ರೀ ಮಠದಲ್ಲಿ ತಿಳಿದು ಬರುತ್ತದೆ.ಶ್ರೀ ಮಲ್ಲಿಕಾರ್ಜುನ ಶಿವಾಚಾರ್ಯರು ತಪಸ್ವಿಗಳಾಗಿದ್ದು ತಮ್ಮ ಅನುಷ್ಠಾನಬಲದಿಂದ ಭಕ್ತರಿಗೆ ಸನ್ಮಾರ್ಗ ತೋರುತ್ತಿದ್ದರು. ಸಂಚಾರ ಮೂರ್ತಿಗಳಾದ ಶ್ರೀಗಳು ತಮ್ಮಉಪದೇಶಗಳಿಂದ ಧರ್ಮ ಪ್ರಸಾರ ಕಾರ್ಯ ಕೈಗೊಂಡು ವೀರಶೈವ ಧರ್ಮದ ಬೆಳವಣಿಗೆಗೆಶ್ರಮಿಸಿದ್ದಾರೆ. ಇವರಿಗೆ ಭಕ್ತರೇ ಮಠದ ಕಟ್ಟಡವನ್ನು ನಿರ್ಮಿಸಿಕೊಟ್ಟಿರುವುದು ತಿಳಿದುಬರುತ್ತದೆ. ಇವರ ನಂತರ ಬಂದ ಶ್ರೀ ಶಿವರುದ್ರ ಶಿವಾಚಾರ್ಯರು ಹಾಗೂ ಶ್ರೀ ಷ. ಬ್ರ.ಗುರುಲಿಂಗ ಶಿವಾಚಾರ್ಯರು ಶ್ರೀ ಮಠವನ್ನು ಸಮರ್ಥವಾಗಿ ಮುನ್ನಡೆಸಿದ್ದಾರೆ.ಈಗಿನ ಶ್ರೀಗಳಾದ ಶ್ರೀ ಷ. ಬ್ರ. ರುದ್ರಮುನಿ ಶಿವಾಚಾರ್ಯ ಸ್ವಾಮಿಗಳು 1974ರಮೇ 13ರಂದು ಶ್ರೀ ಮಠದ ಪಟ್ಟಕ್ಕೆ ಬಂದಿದ್ದು ಭಕ್ತರ ಸಹಕಾರದೊಂದಿಗೆ ಶ್ರೀ ಮಠವನ್ನುಅಭಿವೃದ್ಧಿಪಡಿಸುತ್ತಿದ್ದಾರೆ. ಇತ್ತೀಚೆಗೆ ಹಳೆಯ ಕಟ್ಟಡದ ಪಕ್ಕದಲ್ಲೇ ನೂತನ ಕಟ್ಟಡವನ್ನುನಿರ್ಮಿಸಿ ಶ್ರೀ ಮಠವನ್ನು ವಿಸ್ತಾರಗೊಳಿಸಿದ್ದಾರೆ. ಮಠದ ಆವರಣದಲ್ಲಿ ವೀರಭದ್ರದೇವಸ್ಥಾನವನ್ನು ಸ್ಥಾಪಿಸಿದ್ದು ಜೇಷ್ಠಮಾಸದಲ್ಲಿ ಶ್ರೀ ಮಠದ ಜಾತ್ರೆಯನ್ನು ನಡೆಸುತ್ತಾರೆ. ಶ್ರೀಮಠದ ಗದ್ದುಗೆಗಳು ಹಾಗೂ ಹಾವನೂರಿನ ಮಠದಲ್ಲಿನ ಶ್ರೀ ನಂಜುಂಡ ಶಿವಯೋಗಿಗಳಗದ್ದುಗೆಗಳನ್ನು ಅಭಿವೃದ್ಧಿಪಡಿಸಿ ನಿತ್ಯ ಪೂಜೆಗೆ ಒಳಪಡಿಸಿದ್ದಾರೆ.

Swamiji

Swamiji Name :
ಶ್ರೀ ಷ. ಬ್ರ. ರುದ್ರಮುನಿ ಶಿವಾಚಾರ್ಯ ಸ್ವಾಮಿಗಳು
Date of Birth :
15-11-1959
Place :
ಬೆಳ್ಳಾವಿ, ತುಮಕೂರು ತಾ||
Pattadikara :
13-05-1974
Photo :

Programs

ಪ್ರತಿ ಅಮವಾಸ್ಯೆಗೆ ರುದ್ರಾಭಿಷೇಕ ಶ್ರಾವಣ ಮಾಸದಲ್ಲಿ ನಿತ್ಯ ರುದ್ರಾಭಿಷೇಕ ಕಾರ್ತಿಕ ಮಾಸದಲ್ಲಿ ನಿತ್ಯ ಪ್ರವಚನ ಧನುರ್ಮಾಸದಲ್ಲಿ ನಿತ್ಯ ವಿಶೇಷ ಪೂಜೆ ಜೇಷ್ಠ ಮಾಸದಲ್ಲಿ ಶ್ರೀ ಮಠದ ಜಾತ್ರೆ

Institutions

ಸಂಸ್ಕøತ ಪಾಠಶಾಲೆ

Photos

Full Address Kannada

ಶ್ರೀ ರುದ್ರನ ಮಠ ಬೆಳ್ಳಾವಿ - 572 107 ತುಮಕೂರು ತಾ|| ಮತ್ತು ಜಿಲ್ಲೆ

Map

Near by Places

ತುಮಕೂರು - 13 ಕಿ.ಮೀ. ಗುಬ್ಬಿ - 16 ಕಿ.ಮೀ. ಶಿರಾ - 30 ಕಿ.ಮೀ.

Statistic

87 Views
0 Rating
0 Favorite
0 Share
error: Content is protected !!