Somekatti Kadasiddeshwara Matha

Somekatti Kadasiddeshwara Matha Claimed

ಸೋಮೇಕಟ್ಟಿ ಕಾಡಸಿದ್ದೇಶ್ವರ ಮಠ

Average Reviews

Description

ಸೋಮೇಕಟ್ಟಿ ಕಾಡಸಿದ್ದೇಶ್ವರ ಮಠ

ಕರ್ತೃ – ಪರಮ ಪೂಜ್ಯ ಶ್ರೀ ಕಾಡಸಿದ್ದೇಶ್ವರರು

ಕಲ್ಪತರು ನಾಡು ತುಮಕೂರು ಜಿಲ್ಲೆ ತಿಪಟೂರು ತಾಲ್ಲೂಕಿನ ನೊಣವಿನಕೆರೆಗ್ರಾಮದ ಹೊರವಲಯದಲ್ಲಿ ಅಸ್ತಿತ್ವದಲ್ಲಿರುವ ಶ್ರೀ ಸೋಮೇಕಟ್ಟಿ ಕಾಡಸಿದ್ದೇಶ್ವರ ಮಠವುಶ್ರೀಮಂತ ಪರಂಪರೆಯನ್ನು ಹೊಂದಿ ನಾಡಿನ ಪ್ರಮುಖ ಮಠಗಳಲ್ಲಿ ಒಂದಾಗಿಗುರುತಿಸಿಕೊಂಡಿದೆ. ನಿಸರ್ಗದ ಮಡಿಲಲ್ಲಿ ಧಾರ್ಮಿಕ ಹಾಗೂ ಆರ್ಥಿಕ ಶ್ರೀಮಂತಿಕೆಯಿಂದಕಂಗೊಳಿಸುತ್ತಿರುವ ಶ್ರೀ ಮಠದ ಕರ್ತೃಗುರುಗಳು ಪರಮಪೂಜ್ಯ ಶ್ರೀ ಕಾಡಸಿದ್ದೇಶ್ವರಮಹಾಸ್ವಾಮಿಗಳು.ಉತ್ತರ ಕರ್ನಾಟಕದ ಕಡೆಯಿಂದ ಸಂಚಾರ ಹೊರಟು ನಾಡಿನಲ್ಲೆಲ್ಲಾಸಂಚರಿಸುತ್ತಾ ದಾವಣಗೆರೆ ಜಿಲ್ಲೆ ಉಕ್ಕಡಗಾತ್ರಿಗೆ ಆಗಮಿಸಿದ ಶ್ರೀ ಕಾಡಸಿದ್ದೇಶ್ವರರು ಶ್ರೀಕರಿಬಸವೇಶ್ವರ ಮಹಾಸ್ವಾಮಿಗಳ ಸಮಕಾಲೀನರಾಗಿ ಕೆಲಕಾಲ ಅಲ್ಲೇ ನೆಲೆನಿಂತರು. ತಮ್ಮಪವಾಡಗಳಿಮದ ಮನೆಮಾತಾಗಿ ಗುರುಗಳ ಆಶೀರ್ವಾದ ಪಡೆದು ಮತ್ತೆ ಸಂಚಾರಕೈಗೊಂಡ ಶ್ರೀಗಳು ಬಂದು ನೆಲೆನಿಂತದ್ದು ನೊಣವಿನಕೆರೆಗೆ.ಗುರುಗಳು ಚೋಳೂರು, ಮಾಗಡಿ, ಹಾಗಲವಾಡಿ, ಸೋಮೇಕಟ್ಟಿ ಹೀಗೆಸಂಚರಿಸುತ್ತಾ ನೊಣವಿನಕೆರೆಗೆ ಬಂದವರಾಗಿದ್ದು, ಅವರು ಸಂಚರಿಸಿ ಅನುಷ್ಠಾನ ಕೈಗೊಂಡಸ್ಥಳಗಳೆಲ್ಲಾ ಜಾಗೃತ ಸ್ಥಳಗಳಾಗಿವೆ. ಶ್ರೀಗಳು ಈ ಪ್ರದೇಶದಲ್ಲಿ ಅನುಷ್ಠಾನದಲ್ಲಿದ್ದಾಗಪಾಳೆಗಾರನೊಬ್ಬ ಕಾಡುಪ್ರಾಣಿಗೆ ಹೊಡೆದ ಬಾಣ ಶ್ರೀಗಳಿಗೆ ತಗುಲಿತೆಂದು, ಆದರೆ ಶ್ರೀಗಳುಒಂದಿಷ್ಟೂ ನೋವು ಮಾಡಿಕೊಳ್ಳದೆ ಪಾಳೆಗಾರನಿಗೆ ಬುದ್ದಿವಾದ ಹೇಳಿ ಮನಪರಿವರ್ತನೆಮಾಡಿದರೆಂಬ ಜನಜನಿತ ಕಥೆ ಕೇಳಿಬರುತ್ತದೆ. ಇವರ ಮಹಿಮೆಯನ್ನ ಅರಿತ ಪಾಳೆಗಾರನುಶ್ರೀಗಳಿಗೆ ಅವರು ಅನುಷ್ಠಾನದಲ್ಲಿದ್ದ ಪ್ರದೇಶದಲ್ಲಿಯೇ ಒಂದು ಕಲ್ಲಿನ ಕಟ್ಟಡವನ್ನು ಕಟ್ಟಿಸಿಮಠವನ್ನು ಸ್ಥಾಪಿಸಿಕೊಡುತ್ತಾನೆ.ಹೀಗೆ ಪ್ರಾರಂಭಗೊಂಡ ಶ್ರೀಮಠದ ನಂತರದ ಪರಂಪರೆಯಲ್ಲಿ ಬಂದಿರುವಎಲ್ಲಾ ಗುರುಗಳ ಕುರಿತಾದ ಮಾಹಿತಿಗಳು ಲಭ್ಯವಿಲ್ಲ. ಈ ಬಗ್ಗೆ ಸಮಗ್ರವಾದ ಸಂಶೋಧನೆನಡೆಯಬೇಕಿದೆ. ಪರಂಪರೆಯಲ್ಲಿ ಈವರೆಗೂ 12 ಜನ ಶ್ರೀಗಳು ಶ್ರೀ ಮಠದಲ್ಲಿ ಅಧಿಕಾರನಡೆಸಿದ್ದಾರೆಂದು ತಿಳಿದುಬರುತ್ತಿದ್ದು. ಅವರುಗಳ ಗದ್ದುಗೆಗಳ ಕುರಿತಾದ ಮಾಹಿತಿಗಳುಲಭ್ಯವಿಲ್ಲ. ಶತಮಾನದ ಪ್ರಾರಂಭದಲ್ಲಿ ಅಧಿಕಾರದಲ್ಲಿದ್ದ ಶ್ರೀ ಚನ್ನವೀರ ದೇಶಿಕೇಂದ್ರಮಹಾಸ್ವಾಮಿಗಳು ಉದ್ದಾಮ ಪಂಡಿತರಾಗಿ, ಧರ್ಮನಿಷ್ಠರಾಗಿ ಈ ನಾಡನ್ನು ಧಾರ್ಮಿಕವಾಗಿಶ್ರೀಮಂತಗೊಳಿಸಿದ್ದಾರೆ. ಕಾಯಕಯೋಗಿಗಳಾದ ಶ್ರೀ ಚನ್ನವೀರ ದೇಶಿಕೇಂದ್ರ ಸ್ವಾಮಿಗಳುಮಠವನ್ನು ಸ್ವಾವಲಂಬಿಯಾಗಿಸಿದರು.ಶ್ರೀ ಮಠದ ಹಿಂದಿನ ಗುರುಗಳಾದ ಶ್ರೀ ಮ.ನಿ.ಪ್ರ. ಕರಿಬಸವ ಮಹಾಸ್ವಾಮಿಗಳುಪರಂಪರೆಯ ಗುರುಗಳ ಹಾದಿಯಲ್ಲಿ ಮುನ್ನಡೆದು ಶ್ರೀ ಮಠವನ್ನು ಸಮರ್ಥವಾಗಿ77ಮುನ್ನಡೆಸಿದ್ದರು. 1965ರಲ್ಲಿ ಶ್ರೀ ಮಠದ ಪಟ್ಟಾಧಿಕಾರ ಸ್ವೀಕರಿಸಿದ ಶ್ರೀಗಳು ಶ್ರೀ ಮಠದಧಾರ್ಮಿಕ ಆಚರಣೆಗಳನ್ನು ಚುರುಕುಗೊಳಿಸಿದರು. 1985ರಲ್ಲಿ ಈಗಿನ ಶ್ರೀಗಳಿಗೆಪಟ್ಟಾಧಿಕಾರದ ಅನುಗ್ರಹ ನೀಡಿದ ಶ್ರೀಗಳು 2008ರಲ್ಲಿ ಲಿಂಗೈಕ್ಯರಾದರು.1985ರ ನವೆಂಬರ್ 15ರಲ್ಲಿ ಹಿರಿಯ ಗುರುಗಳ ಕೃಪಾಶೀರ್ವಾದದೊಂದಿಗೆ ಶ್ರೀಮಠದ ಅಧಿಕಾರ ಸ್ವೀಕರಿಸಿದ ಪ್ರಸ್ತುತ ಶ್ರೀಗಳಾದ ಶ್ರೀ ಮ.ನಿ.ಪ್ರ. ಕರಿ ವೃಶಭ ದೇಶಿಕೇಂದ್ರಶಿವಯೋಗೇಶ್ವರ ಮಹಾಸ್ವಾಮಿಗಳು ಶ್ರೀ ಮಠದ ಸರ್ವತೋಮುಖ ಅಭಿವೃದ್ಧಿಗೆಶ್ರಮಿಸುತ್ತಿದ್ದಾರೆ. ಸ್ವತಃ ಕಾಯಕಯೋಗಿಗಳಾಗಿ ಮಠದ ಆಸ್ತಿಯಲ್ಲಿ ಹೆಚ್ಚಿನ ಆದಾಯಬರುವಂತೆ ಮಾಡುತ್ತಿರುವ ಶ್ರೀಗಳು ತಮ್ಮ ಭಕ್ತರಿಗೆ ಕಾಯಕಯೋಗದ ಮಹತ್ವವನ್ನುತಿಳಿಹೇಳುತ್ತಿದ್ದಾರೆ.ಶ್ರೀಗಳು ತಮ್ಮ ಕ್ರಿಯಾಶೀಲ ವ್ಯಕ್ತಿತ್ವದಿಂದ ಅನೇಕ ಸಮಾಜಮುಖಿಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಾ ಭಕ್ತರನ್ನು ಸಂಘಟಿಸಿ ಅವರಲ್ಲಿ ಧಾರ್ಮಿಕ ಪ್ರಜ್ಞೆಬೆಳೆಯುವಂತೆ ಮಾಡಿದ್ದಾರೆ. ಭಕ್ತರ ಸಹಕಾರದೊಂದಿಗೆ ಶ್ರೀ ಮಠಕ್ಕೆ ಬೃಹತ್ ಕಲ್ಲಿನ ಕಟ್ಟಡನಿರ್ಮಿಸುತ್ತಿರುವ ಶ್ರೀಗಳು ಕರ್ತೃ ಗುರುಗಳ ಗದ್ದುಗೆಯೂ ಸೇರಿ ಮಠದ ಆವರಣದಲ್ಲಿರುವಗದ್ದುಗೆಗಳನ್ನು ನವೀಕರಿಸಿದ್ದಾರೆ. ಬಂದ ಭಕ್ತರಿಗೆ ಹಾಗೂ ವಿದ್ಯಾರ್ಥಿಗಳಿಗೆ ನಿತ್ಯದಾಸೋಹದವ್ಯವಸ್ಥೆ ಮಾಡಿರುವ ಶ್ರೀಗಳು ಶ್ರೀ ಮಠದ ವತಿಯಿಂದ ಅನೇಕ ಶಾಲಾ ಕಾಲೇಜುಗಳನ್ನುತೆರೆದು ತ್ರಿವಿದ ದಾಸೋಹ ಮೂರ್ತಿಗಳಾಗಿ ಕಂಗೊಳಿಸುತ್ತಿದ್ದಾರೆ.

Swamiji

Swamiji Name :
ಶ್ರೀ ಮ.ನಿ.ಪ್ರ. ಕರಿ ವೃಶಭ ದೇಶಿಕೇಂದ್ರ ಶಿವಯೋಗೇಶ್ವರ ಮಹಾಸ್ವಾಮಿಗಳು
Date of Birth :
30-01-1954
Place :
ಸಾಲುಟಗಿ, ಇಂಡಿ ತಾ||
Pattadikara :
15-11-1985
Photo :

Programs

ಪ್ರತಿ ಶುಕ್ರವಾರ ಶ್ರೀ ಮಠದ ಗುರುಗಳ ಮೌನ ಪ್ರತಿ ಅಮವಾಸೆಗೆ ಗುರುಗಳ ಮಹಾಪೂಜೆ ಕಾರ್ಯಕ್ರಮ ಶ್ರಾವಣ ಮಾಸದಲ್ಲಿ ಮೌನ ಅನುಷ್ಠಾನ ಮತ್ತು ಸಾಂಸ್ಕøತಿಕ ಕಾರ್ಯಕ್ರಮಗಳು ಫಾಲ್ಗುಣ ಮಾಸದಲ್ಲಿ ಶ್ರೀ ಮಠದ ಜಾತ್ರೆ (ಸಾಮೂಹಿಕ ವಿವಾಹ, 108 ಮಕ್ಕಳಿಗೆ ವಿದ್ಯಾಯಜ್ಞ ಹೋಮ ಮತ್ತು ವಿವಿಧ ಕಾರ್ಯಕ್ರಮಗಳು)

Institutions

ಶ್ರೀ ಕಾಡಸಿದ್ದೇಶ್ವರ ಶಿಕ್ಷಣ ಸಂಸ್ಥೆ ಕಿರಿಯ / ಹಿರಿಯ / ಪ್ರೌಢಶಾಲೆಗಳು ಐ.ಟಿ.ಐ. ಕಾಲೇಜು ಪ್ಯಾರಮೆಡಿಕಲ್ ಕಾಲೇಜು ಪದವಿಪೂರ್ವ ಕಾಲೇಜು ಸಂಸ್ಕøತ ವೇದ ಪಾಠಶಾಲೆ ಆಯುರ್ವೇದ ಆಸ್ಪತ್ರೆ ಶಿವಯೋಗೀಶ್ವರ ಪ್ರಕೃತಿ ಚಿಕಿತ್ಸಾಲಯ

Photos

Full Address Kannada

ಶ್ರೀ ಸೋಮೇಕಟ್ಟಿ ಕಾಡಸಿದ್ದೇಶ್ವರ ಮಠ ನೊಣವಿನಕೆರೆ - 572 224 ತಿಪಟೂರು ತಾ||, ತುಮಕೂರು ಜಿಲ್ಲೆ

Map

Near by Places

ತಿಪಟೂರು - 13 ಕಿ.ಮೀ. ತುರುವೇಕೆರೆ - 13 ಕಿ.ಮೀ. ತುಮಕೂರು - 80 ಕಿ.ಮೀ.

Statistic

9 Views
0 Rating
0 Favorite
0 Share
error: Content is protected !!