ತಿಪಟೂರು ತಾಲ್ಲೂಕಿನ ಹೊನ್ನವಳ್ಳಿ ಗ್ರಾಮದ ಹೊರವಲಯದ ಕೆರೆಯದಡದಲ್ಲಿ ಸುಮಾರು 500 ವರ್ಷಗಳಷ್ಟು ಪುರಾತನ ಶ್ರೀ ಗುರು ಕರಿಸಿದ್ದೇಶ್ವರಸ್ವಾಮಿ ಮಠವುಅಸ್ತಿತ್ವದಲ್ಲಿದ್ದು ತನ್ನ ಧಾರ್ಮಿಕ ಹಾಗೂ ಸಾಮಾಜಿಕ ಕಾರ್ಯಚಟುವಟಿಕೆಗಳ ಮೂಲಕಪ್ರಸಿದ್ದಿಗೊಂಡಿದೆ. ಶ್ರೀ ಮಠವು ಶ್ರೀ ರಂಭಾಪುರಿ ಪೀಠದ ಶಾಖಾ ಮಠವಾಗಿ ಪುತ್ರವರ್ಗದಪರಂಪರೆಯಲ್ಲಿ ಬೆಳೆದುಬಂದಿದೆ.ಶ್ರೀ ಗುರು ಕರಿಸಿದ್ದೇಶ್ವರ ಮಹಾಸ್ವಾಮಿಗಳನ್ನು ಶ್ರೀ ಮಠದ ಕರ್ತೃ ಗುರುಗಳೆಂದುಹೆಸರಿಸಲಾಗಿದ್ದು, ಗುರುಗಳು ಧರ್ಮನಿಷ್ಠರೂ, ಪವಾಡ ಪುರುಷರೂ ಆಗಿದ್ದರು. ಇಂತಹಪವಾಡ ಪುರುಷರು ಈ ಭಾಗದಲ್ಲಿ ಸಂಚಾರದಲ್ಲಿದ್ದಾಗ ಈ ಭಾಗದ ಅರಸರಾಗಿದ್ದಚಿತ್ರಶೇಖರ ಮತ್ತು ಸೋಮಶೇಖರ ದೊರೆಗಳಿಗೆ ತಮ್ಮ ಪವಾಡವನ್ನು ತೋರುತ್ತಾರೆ. ಇವರಪವಾಡಗಳಿಗೆ, ವಿದ್ವತ್ಗಳಿಗೆ ಶರಣಾದ ಅರಸರು ಹೊನ್ನವಳ್ಳಿಯ ತಮ್ಮ ಅರಮನೆಯನ್ನೇಗುರುಮನೆಯನ್ನಾಗಿ ಗುರುಗಳಿಗೆ ಸಮರ್ಪಿಸಿದರು. ಕೆಲಕಾಲ ಗುರುಗಳು ಅಲ್ಲಿ ಧಾರ್ಮಿಕಆಚರಣೆಗಳನ್ನು ಮುನ್ನಡೆಸಿ ನಂತರ ಚಿತ್ರದುರ್ಗ ಜಿಲ್ಲೆಯ ರಾಮಗಿರಿ ಬೆಟ್ಟಕ್ಕೆ ತೆರಳಿಐಕ್ಯಗೊಂಡರು ಎಂಬ ಕಥೆ ಕೇಳಿ ಬರುತ್ತದೆ.ಆದರೆ ಕರ್ತೃ ಗುರುಗಳ ನಂತರದ ಪರಂಪರೆಯ ಬಗ್ಗೆ ಸ್ಪಷ್ಟತೆಯಲ್ಲ. ತದನಂತರಹೊನ್ನವಳ್ಳಿಯ ಬೈರಪ್ಪ ಎಂಬುವವರಿಗೆ ಬಿದ್ದ ಕನಸಿನಂತೆ ರಾಮಗಿರಿ ಸಮೀಪದ ಗುಂಡಸಮುದ್ರದ ರಾಮಗಿರಿ ಅಪ್ಪಯ್ಯನವರ ಕುಟುಂಬವನ್ನು ಕರೆತರಲಾಗಿದ್ದು ಇವರು ಕರ್ತೃಗಳವಂಶಜರು. ಈ ವಂಶದ ಶ್ರೀ ಷ. ಬ್ರ. ಚನ್ನವೀರ ಸ್ವಾಮಿಗಳು 1902ರಲ್ಲಿ ಶ್ರೀ ಮಠಕ್ಕೆಪಟ್ಟಾಧಿಕಾರ ಸ್ವೀಕರಿಸಿ ಸುಮಾರು 7 ದಶಕಗಳ ಕಾಲ ಶ್ರೀ ಮಠದಲ್ಲಿ ಧಾರ್ಮಿಕಆಚರಣೆಗಳನ್ನು ಮುನ್ನಡೆಸಿಕೊಂಡು ಬಂದು ಈಗಿನ ಶ್ರೀಗಳಾದ ಶ್ರೀ ಷ. ಬ್ರ. ಶಿವಪ್ರಕಾಶಶಿವಾಚಾರ್ಯ ಸ್ವಾಮಿಗಳನ್ನು 1973ರ ಫೆಬ್ರವರಿ 15ರಂದು ಪಟ್ಟಕ್ಕೆ ತಂದು 1979ರಲ್ಲಿಲಿಂಗೈಕ್ಯರಾದರು.ಶ್ರೀ ಶಿವಪ್ರಕಾಶ ಶಿವಾಚಾರ್ಯರು ಕ್ರಿಯಾಶೀಲ ವ್ಯಕ್ತಿತ್ವದವರಾಗಿದ್ದು ಶ್ರೀ ಮಠದಲ್ಲಿಧಾರ್ಮಿಕ ಆಚರಣೆಗಳನ್ನು ಚುರುಕುಗೊಳಿಸಿದ್ದಲ್ಲದೇ, ಸಾಮಾಜಿಕವಾಗಿಯೂ ಅನೇಕಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿದ್ದಾರೆ. 2005ರಿಂದ ಭಕ್ತರ ಸಹಕಾರದೊಂದಿಗೆ ಶ್ರೀಮಠದ ಜೀರ್ಣಾಭಿವೃದ್ಧಿಯಲ್ಲಿ ನಿರತರಾಗಿರುವ ಶ್ರೀಗಳು ಕಲ್ಯಾಣಮಂಟಪ ನಿರ್ಮಾಣಮುಂತಾದ ಯೋಜನೆಗಳನ್ನು ಹೊಂದಿದ್ದಾರೆ ಹಾಗೂ ಬಡ ಮಕ್ಕಳ ಹೆಚ್ಚಿನ ವಿದ್ಯಾಭ್ಯಾಸದಖರ್ಚನ್ನು ಪೂರೈಸುವ ಅಭಿಲಾಷೆ ಹೊಂದಿದ್ದಾರೆ.
Swamiji
Swamiji Name :
ಶ್ರೀ ಷ. ಬ್ರ. ಶಿವಪ್ರಕಾಶ ಶಿವಾಚಾರ್ಯ ಸ್ವಾಮಿಗಳು
Date of Birth :
24-05-1961
Place :
ಹೊನ್ನವಳ್ಳಿ, ತಿಪಟೂರು ತಾ||
Pattadikara :
15-02-1973
Photo :
Programs
ಪ್ರತಿ ಅಮವಾಸೆಗೆ ರುದ್ರಾಭಿಷೇಕ ಕಾರ್ತಿಕ ಶುದ್ಧ ಬಿದಿಗೆ ದಿನ ಕೃತಿಕೋತ್ಸವ, ಕರ್ಪೂರ ಸೇವೆ ವಿಶೇಷ ಪೂಜೆ
Photos
Full Address Kannada
ಶ್ರೀ ಗುರು ಕರಿಸಿದ್ದೇಶ್ವರಸ್ವಾಮಿ ಮಠ ಹೊನ್ನವಳ್ಳಿ - 572 217 ತಿಪಟೂರು ತಾ||, ತುಮಕೂರು ಜಿಲ್ಲೆ