ತುಮಕೂರು ಜಿಲ್ಲೆ ಕುಣಿಗಲ್ ಪಟ್ಟಣದ ಮಧ್ಯಭಾಗದಲ್ಲಿರುವ ಶ್ರೀ ಹಿರೇಮಠವುಸುಮಾರು 16ನೇ ಶತಮಾನದ ಅಂತ್ಯಭಾಗದಲ್ಲಿ ಶ್ರೀ ಷ. ಬ್ರ. ಸಿದ್ದೇಶ್ವರ ಶಿವಾಚಾರ್ಯಮಹಾಸ್ವಾಮಿಗಳಿಂದ ಸ್ಥಾಪಿತಗೊಂಡಿದ್ದು ತನ್ನ ಧಾರ್ಮಿಕ ಹಾಗೂ ಸಾಂಸ್ಕøತಿಕಕಾರ್ಯಕ್ರಮಗಳ ಮೂಲಕ ಕುಣಿಗಲ್ ಪಟ್ಟಣದ ಪ್ರಮುಖ ಧಾರ್ಮಿಕ ಕೇಂದ್ರವಾಗಿಗುರುತಿಸಿಕೊಂಡಿದೆ. ಶ್ರೀ ಹಿರೇಮಠವು ಶ್ರೀಮದ್ ರಂಬಾಪುರಿ ಪೀಠದ ಶಾಖಾಮಠವಾಗಿಪುತ್ರ ವರ್ಗದ ಪರಂಪರೆಯಲ್ಲಿ ಬೆಳೆದು ಬಂದಿದೆ.ಶ್ರೀ ಹಿರೇಮಠದ ಪರಂಪರೆಯಲ್ಲಿ ಕರ್ತೃ ಗುರುಗಳ ನಂತರ ಬಂದಿರುವಗುರುಗಳ ಕುರಿತು ಸ್ಪಷ್ಟವಾದ ಮಾಹಿತಿಗಳ ಕೊರತೆಯಿದೆ. ಹಿಂದಿನ ಶ್ರೀಗಳಾದ ಶ್ರೀ ಷ. ಬ್ರ.ಪಟ್ಟದ ಬಸವಲಿಂಗ ಸ್ವಾಮಿಗಳು ಭಕ್ತರನ್ನು ಸಂಪಾದಿಸಿಕೊಂಡು ಅವರ ಸಹಕಾರದೊಂದಿಗೆಶ್ರೀ ಮಠದ ಧಾರ್ಮಿಕ ಕಾರ್ಯಕ್ರಮಗಳನ್ನು ಮುನ್ನಡೆಸಿದ್ದು ಭಕ್ತರಲ್ಲಿ ಧರ್ಮ ಜಾಗೃತಿಮೂಡಿಸಿ 1972ರಲ್ಲಿ ಲಿಂಗೈಕ್ಯರಾದರು.ಈಗಿನ ಶ್ರೀಗಳಾದ ಶ್ರೀ ಷ. ಬ್ರ. ಶಿವಕುಮಾರ ಶಿವಾಚಾರ್ಯ ಸ್ವಾಮಿಗಳು ಹಿಂದಿನಶ್ರೀಗಳ ಐಕ್ಯಾ ನಂತರ 1975ರ ಮೇ 22 ರಂದು ಶ್ರೀ ಹಿರೇಮಠದ ಪಟ್ಟಾಧಿಕಾರಿಗಳಾಗಿಅಧಿಕಾರವನ್ನು ವಹಿಸಿಕೊಂಡು ಸಮರ್ಥವಾಗಿ ಮುನ್ನಡೆಸಿಕೊಂಡು ಬರುತ್ತಿದ್ದಾರೆ. ಶ್ರೀಗಳುಸಿದ್ದಗಂಗಾದ ಸಿದ್ದಲಿಂಗೇಶ್ವರ ಸಂಸ್ಕøತ ಕಾಲೇಜಿನಲ್ಲಿ ವಿದ್ವತ್ ಉತ್ತಮ (ಬಿಎ) ಪದವಿಪೂರೈಸಿ ತದ ನಂತರ ಕುವೆಂಪು ವಿಶ್ವವಿದ್ಯಾನಿಲಯದಿಂದ ಸಂಸ್ಕøತದಲ್ಲಿ ಎಂ.ಎ. ಪದವಿಪಡೆದರು.ಶ್ರೀಗಳು ಪ್ರಸ್ತುತ ತಮ್ಮ ವಾಸ್ತವ್ಯಕ್ಕಾಗಿ ಶ್ರೀ ಸಿದ್ದೇಶ್ವರ ಸ್ವಾಮಿ ದೇವಸ್ಥಾನದಆವರಣದಲ್ಲಿ ವ್ಯವಸ್ಥೆಯನ್ನು ಮಾಡಿಕೊಂಡು ಶ್ರೀ ಮಠವನ್ನು ಸಂಪೂರ್ಣವಾಗಿನೂತನವಾಗಿ ನಿರ್ಮಿಸುತ್ತಿದ್ದಾರೆ ಹಾಗೂ ಗದ್ದುಗೆಗಳನ್ನು ನವೀಕರಿಸಿ ನಿತ್ಯ ಪೂಜೆಗೆಒಳಪಡಿಸಿದ್ದಾರೆ. ಭಕ್ತರನ್ನು ಪುನಃ ಸಂಪಾದಿಸಿಕೊಂಡು ಶ್ರೀ ಮಠದ ನವೀಕರಣಕಾರ್ಯದಲ್ಲಿ ಅವರನ್ನು ತೊಡಗಿಸಿಕೊಂಡಿದ್ದಾರೆ. ಪ್ರತಿವರ್ಷ ಶಿವರಾತ್ರಿಯಲ್ಲಿ ರುದ್ರಾಭಿಷೇಕ,ವಿಶೇಷ ಧಾರ್ಮಿಕ ಆಚರಣೆಗಳು ಹಾಗೂ ಮಹಾಜಾಗರಣೆ ಕಾರ್ಯಕ್ರಮವನ್ನುಹಮ್ಮಿಕೊಂಡು ಭಕ್ತರ ಪ್ರೀತಿಗೆ ಪಾತ್ರರಾಗಿದ್ದಾರೆ.
Swamiji
Swamiji Name :
ಷ. ಬ್ರ. ಶ್ರೀ ಶಿವಕುಮಾರ ಶಿವಾಚಾರ್ಯ ಸ್ವಾಮಿಗಳು
Date of Birth :
01-10-1961
Place :
ಕುಣಿಗಲ್, ತುಮಕೂರು ಜಿಲ್ಲೆ
Pattadikara :
22-05-1975
Photo :
Programs
ಶಿವರಾತ್ರಿಗೆ ವಿಶೇಷ ಪೂಜೆ, ಜಾಗರಣೆ ಹುಣ್ಣಿಮೆ ಕಾರ್ಯಕ್ರಮ
Photos
Full Address Kannada
ಶ್ರೀ ಹಿರೇಮಠ ಕೋಟೆ ಬಡಾವಣೆ, ಕುಣಿಗಲ್ - 572 130 ತುಮಕೂರು ಜಿಲ್ಲೆ