Shree Siddaganga Matha

Shree Siddaganga Matha Claimed

ಶ್ರೀ ಸಿದ್ಧಗಂಗಾ ಮಠ

Average Reviews

Description

ಶ್ರೀ ಸಿದ್ಧಗಂಗಾ ಮಠ

ಕರ್ತೃ – ಶ್ರೀ ಮ. ನಿ. ಪ್ರ. ಬಸವಲಿಂಗ ಸ್ವಾಮಿಗಳು

ತುಮಕೂರು ಜಿಲ್ಲೆ ಹುಲಿಯೂರು ದುರ್ಗದ ಮಧ್ಯ ಭಾಗದಲ್ಲಿ ಅಸ್ತಿತ್ವದಲ್ಲಿರುವಶ್ರೀ ಸಿದ್ದಗಂಗಾ ಮಠವು ಶ್ರೀಮಂತ ಪರಂಪರೆಯನ್ನು ಹೊಂದಿ ಭಕ್ತರಲ್ಲಿ ಧರ್ಮಜಾಗೃತಿಮೂಡಿಸುವ ಕಾರ್ಯದಲ್ಲಿ ನಿರತವಾಗಿದೆ. ಶ್ರೀ ಯಡೆಯೂರು ಸಿದ್ದಲಿಂಗೇಶ್ವರರು ತಮ್ಮನೂರೊಂದು ವಿರಕ್ತರೊಡನೆ ಸಂಚರಿಸುತ್ತಾ ಹುಲಿಯೂರುದುರ್ಗಕ್ಕೆ ಬಂದು ಕೆಲಕಾಲಅನುಷ್ಠಾನಗೊಂಡಿದ್ದರು. ಆ ಸಂದರ್ಭದಲ್ಲಿ ಗ್ರಾಮದ ನೀರಿನ ಸಮಸ್ಯೆಯನ್ನರಿತು ತಮ್ಮಅನುಷ್ಠಾನಬಲದಿಂದ ಒಂದು ಕಲ್ಲನ್ನು ಭೂಮಿಗೆ ಒತ್ತಿದಾಗ ಜಲ ಉದ್ಭವವಾಯಿತೆಂದು ಆಕಾರಣದಿಂದಾಗಿ ಶ್ರೀ ಮಠಕ್ಕೆ ಶ್ರೀ ಸಿದ್ದಗಂಗಾ ಮಠ ಎಂದು ಹೆಸರು ಬಂದಿತೆಂದು ಪ್ರತೀತಿಇದೆ.ಶ್ರೀ ಯಡೆಯೂರು ಸಿದ್ದಲಿಂಗೇಶ್ವರರು ಅನುಷ್ಠಾನ ಪೂರ್ಣಗೊಳಿಸಿ ಮುಂದೆಸಂಚರಿಸಲು ಅನುವಾದಾಗ ಭಕ್ತರ ಕೋರಿಕೆಯಂತೆ ತಮ್ಮ ಶಿಷ್ಯರಾದ ಶ್ರೀ ಬಸವಲಿಂಗಸ್ವಾಮಿಗಳನ್ನು ಅಲ್ಲೇ ನೆಲೆಗೊಳಿಸಿ ಮಠ ಸ್ಥಾಪಿಸಿದರೆಂದು ಹೇಳಲಾಗುತ್ತದೆ. ಶ್ರೀಸಿದ್ದಲಿಂಗೇಶ್ವರರ ತೋರು ಗದ್ದುಗೆಯು ಈ ಮಠದ ಕೇಂದ್ರ ಬಿಂದುವಾಗಿ ಭಕ್ತರನ್ನುಹರಸುತ್ತಿದೆ. ತದನಂತರ ಶ್ರೀ ಜಡೆ ಬಸವಲಿಂಗ ಸ್ವಾಮಿಗಳು, ಶ್ರೀ ಸಂಗಪ್ಪ ಸ್ವಾಮಿಗಳು ಶ್ರೀಮಠವನ್ನು ಭಕ್ತರ ಸಹಕಾರದೊಂದಿಗೆ ಮುನ್ನಡೆಸಿರುವುದು ಕಂಡು ಬರುತ್ತದೆ.ಪರಂಪರೆಯ ಹಿಂದಿನ ಶ್ರೀಗಳಾದ ಶ್ರೀ ಮ.ನಿ.ಪ್ರ. ತೋಂಟದಾರ್ಯಮಹಾಸ್ವಾಮಿಗಳು ಶ್ರೀ ಮಠವನ್ನು ಧಾರ್ಮಿಕ ಆಚರಣೆಗಳೊಂದಿಗೆ ಅಭಿವೃದ್ಧಿಪಡಿಸಿದ್ದು1972ರಲ್ಲಿ ಈಗಿನ ಶ್ರೀಗಳಾದ ಶ್ರೀ ಮ.ನಿ.ಪ್ರ. ಸಿದ್ದಲಿಂಗ ಶಿವಾನಂದ ಸ್ವಾಮಿಗಳನ್ನುಅಧಿಕಾರಕ್ಕೆ ತಂದು 1976ರ ಅಕ್ಟೋಬರ್ 13ರಲ್ಲಿ ಲಿಂಗೈಕ್ಯರಾಗಿದ್ದಾರೆ. ಈಗಿನ ಶ್ರೀಗಳು ಶ್ರೀಮಠಕ್ಕೆ ಅಧಿಕಾರ ವಹಿಸಿಕೊಂಡಾಗ ಕೇವಲ 14-15ರ ವಯಸ್ಸು.ಕರ್ನಾಟಕ ವಿಶ್ವವಿದ್ಯಾನಿಲಯದಿಂದ ಕನ್ನಡದಲ್ಲಿ ಸ್ನಾತಕೋತ್ತರ ಪದವಿಪಡೆದಿರುವ ಶ್ರೀ ಸಿದ್ದಲಿಂಗ ಶಿವಾನಂದ ಸ್ವಾಮಿಗಳು ಮೈಸೂರಿನ ಜೆ.ಎಸ್.ಎಸ್.ಕಾಲೇಜಿನಲ್ಲಿ ಶರಣ ಸಾಹಿತ್ಯದ ಡಿಪ್ಲೋಮಾ ಪೂರೈಸಿದ್ದಾರೆ. ಸುಧೀರ್ಘ ನಾಲ್ಕು ದಶಕಗಳಕಾಲ ಶ್ರೀ ಮಠದ ಧಾರ್ಮಿಕ ಹಾಗೂ ಸಾಮಾಜಿಕ ಕಾರ್ಯಕ್ರಮಗಳನ್ನು ಮುನ್ನಡೆಸಿಕೊಂಡುಬರುತ್ತಿರುವ ಶ್ರೀಗಳು, ತಮ್ಮ ಕ್ರಿಯಾಶೀಲ ಗುಣಗಳಿಂದ ಮಠದ ಸರ್ವಾಂಗೀಣ ಅಭಿವೃದ್ಧಿಗೆಶ್ರಮಿಸುತ್ತಿದ್ದಾರೆ ಮತ್ತು ಸಂಸ್ಕಾರ ಭಾರತಿ ಎಂಬ ಸಂಸ್ಥೆಯನ್ನು ಸ್ಥಾಪಿಸಿ ಆ ಮೂಲಕಯೋಗಶಿಕ್ಷಣ ನೀಡುತ್ತಾ ಬರುತ್ತಿರುವುದು ಗಮನಾರ್ಹ.

Swamiji

Swamiji Name :
ಶ್ರೀ ಮ. ನಿ. ಪ್ರ. ಸಿದ್ಧಲಿಂಗ ಶಿವಾನಂದ ಸ್ವಾಮಿಗಳು
Date of Birth :
12-06-1955
Place :
ಹುಲಿಯೂರುದುರ್ಗ, ಕುಣಿಗಲ್ ತಾ||
Pattadikara :
02-03-1972
Photo :

Programs

ಪ್ರತಿ ಅಮವಾಸ್ಯೆಗೆ ವಿಶೇಷ ಪೂಜೆ ಶಿವರಾತ್ರಿಗೆ ಜಾಗರಣೆ, ದಾಸೋಹ ಶ್ರಾವಣ ಮಾಸದಲ್ಲಿ ನಾನಾಭಾಗಗಳಲ್ಲಿ ನಿತ್ಯ ಪುರಾಣ ಪ್ರವಚನ ಧನುರ್ಮಾಸದಲ್ಲಿ ನಿತ್ಯ ವಿಶೇಷ ಪೂಜೆ, ಅನುಷ್ಠಾನ ಮತ್ತು ಪ್ರವಚನ ಸಾಂಸ್ಕøತಿಕ ಕಾರ್ಯಕ್ರಮಗಳು

Institutions

ಯೋಗ ಶಿಕ್ಷಣ ಸಂಸ್ಕಾರ ಭಾರತಿ ಸಂಸ್ಥೆ ವಿದ್ಯಾರ್ಥಿ ನಿಲಯ

Photos

Full Address Kannada

ಶ್ರೀ ಸಿದ್ಧಗಂಗಾ ಮಠ ಹುಲಿಯೂರುದುರ್ಗ - 572 123 ಕುಣಿಗಲ್ ತಾ||, ತುಮಕೂರು ಜಿಲ್ಲೆ

Map

Near by Places

ಕುಣಿಗಲ್ - 18 ಕಿ.ಮೀ. ಯಡಿಯೂರು - 15 ಕಿ.ಮೀ. ತುಮಕೂರು - 60 ಕಿ.ಮೀ.

Statistic

28 Views
0 Rating
0 Favorite
0 Share
error: Content is protected !!