ತುಮಕೂರು ಜಿಲ್ಲೆ ಹೊಸಕೆರೆ ಗ್ರಾಮದ ಹೊರವಲಯದಲ್ಲಿ ಅಸ್ತಿತ್ವದಲ್ಲಿರುವ ಶ್ರೀತ್ರಿಪುರಾಂತಕೇಶ್ವರ ಮಠವು ಶ್ರೀಶೈಲ ಪೀಠದ ಶಾಖಾಮಠವಾಗಿ ಪುತ್ರ ವರ್ಗದಪರಂಪರೆಯಲ್ಲಿ ಬೆಳೆದುಬಂದಿದೆ. ಶ್ರೀ ಮಠವು ಮೊದಲು ಇಲ್ಲಿಗೆ ಸಮೀಪದ ಸೀನಪ್ಪನಹಳ್ಳಿಯ ಹತ್ತಿರ ಜಂಗಮ ಮಠವಾಗಿ ಪ್ರಾರಂಭಗೊಂಡು ಕಾಲಕ್ರಮೇಣ ಹೊಸಕೆರೆಯಈಗಿನ ಸ್ಥಳಕ್ಕೆ ಸ್ಥಳಾಂತರಗೊಂಡಿದ್ದು ಆಗ ಶ್ರೀ ಮಠವನ್ನು ಹಿತ್ತಲಹಳ್ಳಿ ಮಠವೆಂದುಕರೆಯಲಾಗುತ್ತಿತ್ತು. ನಂತರ ಬಹುಕಾಲ ಶ್ರೀ ಮಠವು ಖಾಲಿ ಉಳಿದಂತೆ ತೋರುತ್ತಿದ್ದು ಶ್ರೀತ್ರಿಪುರಾಂತಕೇಶ್ವರ ಸ್ವಾಮಿಗಳು ಶ್ರೀ ಮಠವನ್ನು ಜೀರ್ಣೋದ್ಧಾರಗೊಳಿಸಿ ಧಾರ್ಮಿಕಕಾರ್ಯಗಳನ್ನು ಚುರುಕುಗೊಳಿಸಿದ್ದರಿಂದ ಶ್ರೀ ಮಠಕ್ಕೆ ಶ್ರೀ ತ್ರಿಪುರಾಂತಕೇಶ್ವರ ಮಠವೆಂದುಹೆಸರು ಬಂದಿದೆ.ಶ್ರೀ ತ್ರಿಪುರಾಂತಕೇಶ್ವರ ಸ್ವಾಮಿಗಳ ನಂತರ ಶ್ರೀ ಪಂಡಿತಾರಾದ್ಯ ಶಿವಾಚಾರ್ಯಸ್ವಾಮಿಗಳ ಹೆಸರು ಪರಂಪರೆಯಲ್ಲಿ ದಾಖಾಲಾಗಿದ್ದು ಶ್ರೀಗಳು 1975ರಲ್ಲಿಲಿಂಗೈಕ್ಯರಾಗಿದ್ದಾರೆ. ತದ ನಂತರ 1995ರಲ್ಲಿ ಈಗಿನ ಶ್ರೀಗಳಾದ ಶ್ರೀ ಷ. ಬ್ರ. ಸದಾಶಿವಶಿವಾಚಾರ್ಯ ಸ್ವಾಮಿಗಳನ್ನು ಶ್ರೀ ಮಠದ ಉತ್ತರಾಧಿಕಾರಿಗಳನ್ನಾಗಿ ನೇಮಿಸಲಾಗಿದ್ದುಶ್ರೀಗಳು ಬೆಂಗಳೂರು ವಿಶ್ವವಿದ್ಯಾನಿಲಯದಿಂದ ಸಂಸ್ಕøತ ಸ್ನಾತಕೋತ್ತರ ಪದವಿ ಹಾಗೂಎಂ.ಫಿಲ್ ಪದವಿ ಪೂರೈಸಿ ಶ್ರೀ ಮಠಕ್ಕೆ ಮರಳಿ 1995ರ ಮೇ 18 ರಂದು ಶ್ರೀ ಮಠದಪಟ್ಟಾಧಿಕಾರವನ್ನು ಸ್ವೀಕರಿಸಿದರು.ಸುಮಾರು ಎರಡು ದಶಕಗಳ ಕಾಲ ಖಾಲಿ ಉಳಿದಿದ್ದ ಶ್ರೀ ಮಠವನ್ನು ಶ್ರೀಸದಾಶಿವ ಶಿವಾಚಾರ್ಯರು ಸರ್ವಾಂಗೀಣವಾಗಿ ಅಭಿವೃದ್ಧಿ ಪಡಿಸಲು ಶ್ರಮಿಸುತ್ತಿದ್ದು ಶ್ರೀಮಠದ ಜೊತೆಯಲ್ಲಿ ಶ್ರೀ ಮಠದ ಮೂಲಮಠವಾಗಿದ್ದ ಸೀನಪ್ಪನ ಹಳ್ಳಿಯ ಜಂಗಮಮಠವನ್ನು ಜೀರ್ಣಾಭಿವೃದ್ಧಿಗೊಳಿಸುತ್ತಿದ್ದಾರೆ. ಮಠದ ಆಸ್ತಿಗಳು ಬೇರೆಯವರ ಪಾಲಾಗಿದ್ದುಶ್ರೀಗಳ ಶ್ರಮದಿಂದ ಚಿಕ್ಕಣ್ಣ ಎಂಬ ಗ್ರಾಮದ ಭಕ್ತರು ಭೂಮಿಯನ್ನು ಹಿಂದಿರುಗಿಸಿಸೀನಪ್ಪನಹಳ್ಳಿಯ ಮಠದ ಅಭಿವೃದ್ಧಿಗೆ ಸಹಕಾರ ನೀಡಿದ್ದಾರೆ.ಶ್ರೀಗಳು ಕೇವಲ ಧಾರ್ಮಿಕ ಕಾರ್ಯಗಳಿಗಷ್ಟೆ ಗಮನಕೊಡದೇ ಶ್ರೀ ಮಠದವತಿಯಿಂದ ಸಂಸ್ಕøತ ವೇದ ಪಾಠಶಾಲೆ, ಪ್ರಾಥಮಿಕ ಶಾಲೆಗಳನ್ನು ಪ್ರಾರಂಭಿಸಿದ್ದಾರೆ ಹಾಗೂಗ್ರಾಮೀಣ ಮಕ್ಕಳ ಹಿತವೃಷ್ಠಿಯಿಂದ ಸರ್ಕಾರಿ ಪ್ರೌಢಶಾಲೆ ಹಾಗೂ ಪದವಿ ಪೂರ್ವಕಾಲೇಜುಗಳಿಗೆ ಮಠದಲ್ಲಿ ಅವಕಾಶ ಕಲ್ಪಿಸಿದ್ದಾರೆ. ಶ್ರೀಗಳು ಪ್ರಸ್ತುತ “ಲಿಂಗದಾರಣೆ ಚಂದ್ರಿಕಾ”ಗ್ರಂಥದ ಮೇಲೆ ಪಿ.ಎಚ್.ಡಿ. ಪ್ರಬಂಧ ಮಂಡಿಸಿದ್ದಾರೆ.
Swamiji
Swamiji Name :
ಷ. ಬ್ರ. ಶ್ರೀ ಸದಾಶಿವ ಶಿವಾಚಾರ್ಯ ಸ್ವಾಮಿಗಳು
Date of Birth :
10-08-1966
Place :
ನೀಲಸಂದ್ರ, ಕುಣಿಗಲ್ ತಾ||
Pattadikara :
18-05-1995
Photo :
Programs
ಶಿವರಾತ್ರಿಗೆ ವಿಶೇಷ ಪೂಜೆ ಜ್ಞಾನ ದಾಸೋಹ ಕಾರ್ಯಕ್ರಮಗಳು ಧನುರ್ಮಾಸದಲ್ಲಿ ವಿಶೇಷ ಪೂಜೆ ಬಸವ ಜಯಂತಿ ಕಾರ್ಯಕ್ರಮ
Institutions
ಶಿಶು ಪಾಲನ ಕೇಂದ್ರ ಸಂಸ್ಕøತ ವೇದ ಪಾಠಶಾಲೆ ಕಿರಿಯ / ಹಿರಿಯ ಪ್ರಾಥಮಿಕ ಶಾಲೆ ವಿದ್ಯಾರ್ಥಿ ನಿಲಯ ಪ್ರೌಢಶಾಲೆ / ಪದವಿ ಪೂರ್ವ ಕಾಲೇಜ್
Photos
Full Address Kannada
ಶ್ರೀ ತ್ರಿಪುರಾಂತಕೇಶ್ವರ ಮಠ (ಹಿತ್ತಲಹಳ್ಳಿ ಮಠ) ಹೊಸಕೆರೆ, ಸೀನಪ್ಪನಹಳ್ಳಿ ಪೋ. - 572 126 ಕುಣಿಗಲ್ ತಾ||, ತುಮಕೂರು ಜಿಲ್ಲೆ