Shree Bettahalli Matha

Shree Bettahalli Matha Claimed

ಶ್ರೀ ಬೆಟ್ಟಹಳ್ಳಿ ಮಠ

Average Reviews

Description

ಶ್ರೀ ಬೆಟ್ಟಹಳ್ಳಿ ಮಠ

ಕರ್ತೃ – ಪೂಜ್ಯ ಶ್ರೀ ಕಾಡಪ್ಪ ಸ್ವಾಮಿಗಳು (ಶ್ರೀ ರೇವಣಸಿದ್ದ ಸ್ವಾಮೀಜಿ)

ತುಮಕೂರು ಜಿಲ್ಲೆ ಬೆಟ್ಟದಹಳ್ಳಿಯ ಶ್ರೀ ಬೆಟ್ಟಹಳ್ಳಿ ಮಠವು 13ನೇ ಶತಮಾನದಷ್ಟುಪುರಾತನ ಇತಿಹಾಸಹೊಂದಿದ್ದು ತನ್ನ ಧಾರ್ಮಿಕ ಆಚರಣೆಗಳ ಮೂಲಕ ಈ ಭಾಗದಲ್ಲಿಹೆಸರು ಮಾಡಿದೆ. ಶ್ರೀ ವೀರಭದ್ರ ಶಿವಾಚಾರ್ಯರಿಂದ ಪ್ರಾರಂಭಗೊಂಡಿರುವ ಶ್ರೀ ಮಠದಪರಂಪರೆಯು 13 ಜನ ಶ್ರೀಗಳನ್ನು ಕಂಡಿದ್ದು ಇವರಲ್ಲಿ 6ನೇ ಶ್ರೀಗಳಾದ ಶ್ರೀ ಉರಿಲಿಂಗಮಹಾಸ್ವಾಮಿಗಳನ್ನು ಪ್ರಮುಖವಾಗಿ ಗುರುತಿಸಲಾಗುತ್ತದೆ.ಪರಂಪರೆಯ 6ನೇ ಶ್ರೀಗಳಾದ ಶ್ರೀ ಉರಿಲಿಂಗ ಸ್ವಾಮಿಗಳ ಹೆಸರು ಶ್ರೀ ಷ. ಬ್ರ.ಪಟ್ಟದ ಚನ್ನವೀರಾರಾಧ್ಯ ಶಿವಾಚಾರ್ಯರ ಸ್ವಾಮಿಗಳು. ಶ್ರೀಗಳ ಕಾಲದಲ್ಲಿ ಶ್ರೀ ಮಠವುಹೆಚ್ಚು ಪ್ರಸಿದ್ಧಿಗಳಿಸಿದ್ದು ಇವರ ಲೋಕ ಕಲ್ಯಾಣ ಕಾರ್ಯಗಳನ್ನು ಗಮನಿಸಿದ ಶ್ರೀರಂಗಪಟ್ಟಣಮತ್ತು ಮೈಸೂರು ಅರಸರು ಕಾಣಿಕೆಗಳನ್ನು ನೀಡಿ ಮಠದ ಅಭಿವೃದ್ಧಿಯಲ್ಲಿಪಾತ್ರವಹಿಸಿದ್ದಾರೆ. 1714ರಲ್ಲಿ ಪಾಳೆಗಾರರಾದ ಮುಮ್ಮುಡಿ ಕೆಂಪ ವೀರಪ್ಪಗೌಡರುಮೈಸೂರಿನ ಅರಸರ ಅಧೀನವೆಂದು ಒಪ್ಪಿಕೊಂಡು ಬೆಟ್ಟಹಳ್ಳಿ ಮಠಕ್ಕೆ ದಾನ ನೀಡಿದ ಬಗ್ಗೆಉಲ್ಲೇಖವಿದೆ.ಪರಂಪರೆಯ 12ನೇ ಶ್ರೀಗಳಾದ ಶ್ರೀ ಪಟ್ಟದ ಚನ್ನವೀರ ಶಿವಾಚಾರ್ಯಸ್ವಾಮಿಗಳು ಸ್ವತಃ ಕಾಯಕಯೋಗಿಗಳಾಗಿದ್ದರು. ಪುಣ್ಯಕ್ಷೇತ್ರಗಳ ಸಂದರ್ಶನದಿಂದ ಅಪಾರಜ್ಞಾನವನ್ನು ಸಂಪಾದಿಸಿದ್ದ ಶ್ರೀಗಳು 1903ರಲ್ಲಿ ಶ್ರೀ ಮಠದ ಅಧಿಕಾರಕ್ಕೆ ಬಂದು ಆಕಾಲದಲ್ಲೇ ಸಂಸ್ಕøತ, ವೇದ ಪಾಠಶಾಲೆಯನ್ನು ಸ್ಥಾಪಿಸಿದ್ದರು. ನಂತರ ಶ್ರೀಗಳಾದ ಶ್ರೀ ಷ. ಬ್ರ.ನೀಲಕಂಠ ಶಿವಾಚಾರ್ಯರನ್ನು 1951ರಲ್ಲಿ ಪಟ್ಟಕ್ಕೆ ತಂದು 1973ರಲ್ಲಿ ಲಿಂಗೈಕ್ಯರಾದರು. ಶ್ರೀನೀಲಕಂಠ ಶಿವಾಚಾರ್ಯರು ಗುರುಗಳ ಮಾರ್ಗದರ್ಶನದಲ್ಲಿ ಪರಿಪಕ್ವಗೊಂಡವರು.1952ರಲ್ಲಿಯೇ ಮಾಧ್ಯಮಿಕ ಪಾಠಶಾಲೆಯನ್ನು ತೆರೆದ ಶ್ರೀಗಳು ತದನಂತರ ಪ್ರೌಢಪದವಿಪೂರ್ವ ಕಾಲೇಜುಗಳನ್ನು ತೆರೆದು 2001ರಲ್ಲಿ ಲಿಂಗೈಕ್ಯರಾದರು.ಈಗಿನ ಶ್ರೀಗಳಾದ ಶ್ರೀ ಷ. ಬ್ರ. ಚಂದ್ರಶೇಖರ ಶಿವಾಚಾರ್ಯ ಸ್ವಾಮಿಗಳು 2001ರಮಾರ್ಚ್ 5ರಂದು ಶ್ರೀ ಮಠದ ಪಟ್ಟಕ್ಕೆ ಬಂದಿದ್ದು ಶ್ರೀ ಮಠವನ್ನು ಧಾರ್ಮಿಕ ಶೈಕ್ಷಣಿಕ,ಸಾಮಾಜಿಕ ಕಾರ್ಯಚಟುವಟಿಕೆಗಳೊಂದಿಗೆ ಸರ್ವಾಂಗೀಣವಾಗಿ ಅಭಿವೃದಿ್ಧಪಡಿಸುತ್ತಿದ್ದಾರೆ. ಪ್ರತಿ ವರ್ಷ ಮಹಾಶಿವರಾತ್ರಿಯಂದು ಶ್ರೀ ಮಠದಲ್ಲಿ ಜಾತ್ರೆ ನಡೆಯುತ್ತಿದ್ದುಸಾವಿರಾರು ಭಕ್ತರು ಪಾಲ್ಗೊಂಡು ಗುರುಗಳ ಆಶೀರ್ವಾದಕ್ಕೆ ಪಾತ್ರರಾಗುತ್ತಾರೆ. ಪ್ರಸ್ತುತಶ್ರೀಗಳು ದೇವಸ್ಥಾನದ ಜೀರ್ಣೋದ್ಧಾರ, ಶಾಲಾ ಕಾಲೇಜುಗಳ ಸ್ಥಾಪನೆ ಹಾಗೂ ವಿವಿಧರೀತಿಯ ಸಮಾಜಮುಖಿ ಕಾರ್ಯಗಳನ್ನು ಕೈಗೊಂಡಿದ್ದಾರೆ.

Swamiji

Swamiji Name :
ಶ್ರೀ ಷ. ಬ್ರ. ಚಂದ್ರಶೇಖರ ಶಿವಾಚಾರ್ಯ ಸ್ವಾಮಿಗಳು
Date of Birth :
05-01-1985
Place :
ನೀಲಸಂದ್ರ, ಕುಣಿಗಲ್ ತಾ||
Pattadikara :
05-03-2001
Photo :

Programs

ಕಾರ್ತೀಕ - ಕಡೆ ಶನಿವಾರ - ಲಕ್ಷದೀಪೆÇೀತ್ಸವ ಪ್ರತಿ ಅಮವಾಸ್ಯೆಗೆ ಮತ್ತು ಹುಣ್ಣಿಮೆಗೆ ರುದ್ರಾಭಿಷೇಕ ಮಹಾ ಶಿವರಾತ್ರಿಗೆ ಶ್ರೀ ಮಠದ ಜಾತ್ರೆ ವೈಶಾಖ ಮಾಸದಲ್ಲಿ ಶ್ರೀ ಹಿರಿಯ ಗುರುಗಳ ಪುಣ್ಯರಾಧನೆ (ಶ್ರೀ ಚನ್ನವೀರ ಶಿವಾಚಾರ್ಯ ಸ್ವಾಮಿಗಳು) ಧನುರ್ಮಾಸದಲ್ಲಿ ಶ್ರೀ ಶ್ರೀ ಶ್ರೀ ಷ. ಬ್ರ. ನೀಲಕಂಠ ಶಿವಾಚಾರ್ಯ ಸ್ವಾಮಿಗಳ ಪುಣ್ಯಾರಾಧನೆ ಮಹಾಶಿವರಾತ್ರಿಯಂದು ವಿಶೇಷ ಪೂಜೆ-ದನಗಳ ಜಾತ್ರೆ

Institutions

ಕಿರಿಯ / ಹಿರಿಯ ಪ್ರಾಥಮಿಕ / ಪ್ರೌಢಶಾಲೆ ಪದವಿ ಪೂರ್ವ / ಪದವಿ ಕಾಲೇಜ್ ವಿದ್ಯಾರ್ಥಿ ನಿಲಯ ಅನಾಥಾಶ್ರಮ

Photos

Full Address Kannada

ಶ್ರೀ ಬೆಟ್ಟಹಳ್ಳಿ ಮಠ ಬೆಟ್ಟಹಳ್ಳಿ, ಉತ್ತರಿದುರ್ಗ ಪೋ. - 572 126 ಕುಣಿಗಲ್ ತಾ||, ತುಮಕೂರು ಜಿಲ್ಲೆ

Map

Near by Places

ಕುಣಿಗಲ್ - 20 ಕಿ.ಮೀ. ಮಾಗಡಿ - 3 ಕಿ.ಮೀ. ತುಮಕೂರು - 65 ಕಿ.ಮೀ.

Statistic

40 Views
0 Rating
0 Favorite
0 Share
error: Content is protected !!