Shree Ankanahalli Gavimatha

Shree Ankanahalli Gavimatha Claimed

ಶ್ರೀ ಅಂಕನಹಳ್ಳಿ ಗವಿಮಠ

Average Reviews

Description

ಶ್ರೀ ಅಂಕನಹಳ್ಳಿ ಗವಿಮಠ

ಕರ್ತೃ – ಶ್ರೀ ಷ.ಬ್ರ. ಗವಿಗುರುಬಸವ ಶಿವಾಚಾರ್ಯ ಮಹಾಸ್ವಾಮಿಗಳು

ಅಂಕನಹಳ್ಳಿ ಗ್ರಾಮದ ಹೊರವಲಯದಲ್ಲಿ ಅಸ್ತಿತ್ವದಲ್ಲಿರುವ ಶ್ರೀ ಗವಿಮಠವುಶ್ರೀಮದ್ ರಂಭಾಪುರಿ ಪೀಠದ ಶಾಖಾಮಠವಾಗಿ ಪ್ರಸಿದ್ಧಿಯಲ್ಲಿದೆ. ಮೂಲ ಕುಣಿಗಲ್ಗವಿಮಠವಾಗಿದ್ದು ನಂತರದ ಕಾಲಘಟ್ಟದಲ್ಲಿ ಅಂಕನಹಳ್ಳಿಗೆ ಶ್ರೀ ಮಠದಕಾರ್ಯಚಟುವಟಿಕೆಗಳು ಸ್ಥಳಾಂತರಗೊಂಡಿವೆ. ಶ್ರೀ ಗವಿಮಠದ ಸ್ಥಾಪಕ ಗುರುಗಳು ಶ್ರೀಷ.ಬ್ರ. ಗವಿಗುರುಬಸವ ಶಿವಾಚಾರ್ಯರು ಹಾಗೂ ನಂತರದ ಶ್ರೀ ಗುರು ಬಸವಶಿವಾಚಾರ್ಯರ ಗದ್ದುಗೆಗಳನ್ನು ಮೂಲ ಕುಣಿಗಲ್ ಗವಿಮಠದಲ್ಲಿ ಕಾಣಬಹುದು.ಶ್ರೀ ಗವಿಮಠವು ಶ್ರೀ ಫಿರಂಗಿ ಸ್ವಾಮಿಗಳ ಕಾಲದಲ್ಲಿ ಹೆಚ್ಚು ಪ್ರಸಿದ್ದಿಗೆ ಬಂದಿದೆ.ಶ್ರೀಗಳ ಪವಾಡವನ್ನು ಕಂಡ ಮೈಸೂರು ಅರಸರಾದ ದೊಡ್ಡ ದೇವರಾಜ ಒಡೆಯರು,ಮೈಸೂರು ಸೇರಿದಂತೆ ಅನೇಕ ಕಡೆ ಗವಿಮಠಗಳನ್ನು ಸ್ಥಾಪಿಸಿ 60 ಎಕರೆ ಭೂಮಿಯನ್ನುಉಂಬಳಿಯಾಗಿ ನೀಡಿದರು. ಶ್ರೀ ಫಿರಂಗಿ ಸ್ವಾಮಿಗಳ ನಂತರ ಅನೇಕ ಶ್ರೀಗಳು ಶ್ರೀ ಮಠದಪಟ್ಟಕ್ಕೆ ಬಂದಿದ್ದು ಈ ಕಾಲಘಟ್ಟದಲ್ಲಿ ಶ್ರೀ ಮಠದ ಕಾರ್ಯ ಚಟುವಟಿಕೆಗಳು ಕುಣಿಗಲ್ಮಠದಿಂದ ಅಂಕನಹಳ್ಳಿ ಗವಿಮಠಕ್ಕೆ ಸ್ಥಳಾಂತರಗೊಂಡಿವೆ.ಪರಂಪರೆಯಲ್ಲಿ ಬಂದಿರುವ ಶ್ರೀ ಷ. ಬ್ರ. ಬಸವಯ್ಯ ಸ್ವಾಮಿಗಳು ಶ್ರೀ ಮಠವನ್ನುಜೀರ್ಣೋದ್ದಾರಗೊಳಿಸಿದ್ದು ಶ್ರೀ ಮಠದ ಆದಾಯವನ್ನು ಹೆಚ್ಚಿಸಿದ್ದಾರೆ. ಶಿವರಾತ್ರಿಜಾತ್ರೆಯನ್ನು ಪ್ರಾರಂಭಿಸಿದ ಶ್ರೀಗಳು 1935ರಲ್ಲಿ ಹಿಂದಿನ ಶ್ರೀಗಳಾದ ಶ್ರೀ ಷ.ಬ್ರ. ಸಿದ್ಧಲಿಂಗಶಿವಾಚಾರ್ಯರನ್ನು ಅಧಿಕಾರಕ್ಕೆ ತಂದು ಲಿಂಗೈಕ್ಯರಾದರು. ಶ್ರೀ ಸಿದ್ದಲಿಂಗ ಶಿವಾಚಾರ್ಯರುರಂಭಾಪುರಿ ಜಗದ್ಗುರುಗಳ ಜೊತೆ ಲೋಕ ಸಂಚಾರ ಕೈಗೊಂಡು ಪರಿಪಕ್ವಗೊಂಡರು.ಸಂಚಾರದಿಂದ ಮರಳಿದ ಶ್ರೀಗಳು, ಶ್ರೀಮಠವನ್ನು ಅಭಿವೃದ್ಧಿಪಡಿಸಲು ಶ್ರಮಿಸಿದ್ದು 1950ರಲ್ಲಿಶ್ರೀ ಫಿರಂಗಿಸ್ವಾಮಿ ಗುರುಕುಲಾಶ್ರಮ ವಿದ್ಯಾಪೀಠವನ್ನು ಸ್ಥಾಪಿಸಿದರು. ಇಂದು ಈ ಸಂಸ್ಥೆಯಅಡಿಯಲ್ಲಿ ಅಸಂಖ್ಯ ವಿದ್ಯಾರ್ಥಿಗಳು ಅಭ್ಯಸಿಸುತ್ತಿದ್ದಾರೆ.ಸುಧೀರ್ಘ ಕಾಲ ಶ್ರೀ ಮಠ ಹಾಗೂ ಸಮಾಜಗಳೆರಡನ್ನೂ ಅಭಿವೃದ್ಧಿಪಡಿಸಿದಶ್ರೀಗಳು ಈಗಿನ ಶ್ರೀಗಳಾದ ಶ್ರೀ ಷ. ಬ್ರ. ಶಿವರುದ್ರ ಶಿವಾಚಾರ್ಯ ಸ್ವಾಮಿಗಳಿಗೆ ಅಧಿಕಾರವಹಿಸಿ 1992ರಲ್ಲಿ ಲಿಂಗೈಕ್ಯರಾದರು. ಗುರುಗಳ ಮಾರ್ಗದರ್ಶನದಲ್ಲಿ ಪರಿಪಕ್ವಗೊಂಡ ಈಗಿನಶ್ರೀಗಳು ಅವರ ಕಾಲಾ ನಂತರ ಶ್ರೀ ಮಠವನ್ನು ಸರ್ವಾಂಗೀಣವಾಗಿಅಭಿವೃದ್ಧಿಪಡಿಸುತ್ತಿದ್ದಾರೆ ಹಾಗೂ ಶಿಕ್ಷಣ ಸಂಸ್ಥೆಗಳನ್ನೂ ವ್ಯವಸ್ಥಿತವಾಗಿ ನಡೆಸುತ್ತಿದ್ದಾರೆ.

Swamiji

Swamiji Name :
ಶ್ರೀ ಷ. ಬ್ರ. ಶಿವರುದ್ರ ಶಿವಾಚಾರ್ಯ ಸ್ವಾಮಿಗಳು
Date of Birth :
05-05-1956
Place :
ಹುಣಸೇದೊಡ್ಡಿ, ರಾಮನಗರ ತಾ||
Photo :

Programs

ಪ್ರತಿ ಹುಣ್ಣಿಮೆಗೆ ರುದ್ರಾಭಿಷೇಕ ಶಿವರಾತ್ರಿಗೆ ಶ್ರೀ ಮಠದ ಜಾತ್ರೆ ಜೇಷ್ಠ ಮಾಸದಲ್ಲಿ ಶ್ರೀ ಹಿರಿಯ ಗುರುಗಳ ಪುಣ್ಯಾರಾಧನೆ

Institutions

ಹಿಂದಿ ಮತ್ತು ಸಂಸ್ಕøತ ವೇದ ಪಾಠಶಾಲೆ ಕಿರಿಯ / ಹಿರಿಯ ಪ್ರಾಥಮಿಕ / ಪ್ರೌಢಶಾಲೆ ವಿದ್ಯಾರ್ಥಿ ನಿಲಯ

Photos

Full Address Kannada

ಶ್ರೀ ಅಂಕನಹಳ್ಳಿ ಗವಿಮಠ ಅಂಕನಹಳ್ಳಿ, ಅರಬೇಡರಹಳ್ಳಿ ಪೋ. - 572 130 ಕುಣಿಗಲ್ ತಾ||, ತುಮಕೂರು ಜಿಲ್ಲೆ

Map

Near by Places

ಮಾಗಡಿ - 18 ಕಿ.ಮೀ. ತುಮಕೂರು - 70 ಕಿ.ಮೀ. ಹುಲಿಯಾರುದುರ್ಗ - 10 ಕಿ.ಮೀ.

Statistic

8 Views
0 Rating
0 Favorite
0 Share
error: Content is protected !!