ಶ್ರೀ ಕಾಶಿ ಅನ್ನಪೂರ್ಣೇಶ್ವರಿ ಸುಕ್ಷೇತ್ರ, ಶ್ರೀ ತಿಮ್ಮಪ್ಪಸ್ವಾಮಿ ಮಠ
Average Reviews
Description
ಶ್ರೀ ಕಾಶಿ ಅನ್ನಪೂರ್ಣೇಶ್ವರಿ ಸುಕ್ಷೇತ್ರ, ಶ್ರೀ ತಿಮ್ಮಪ್ಪಸ್ವಾಮಿ ಮಠ
ಕರ್ತೃ – ಪೂಜ್ಯ ಶ್ರೀ ತಿಮ್ಮಪ್ಪ ಸ್ವಾಮಿಗಳು
ತುಮಕೂರು ಜಿಲ್ಲೆ ಕೊರಟಗೆರೆ ತಾಲ್ಲೂಕಿನ ತಂಗನಹಳ್ಳಿ ಗ್ರಾಮದಹೊರವಲಯದಲ್ಲಿ ಅಸ್ತಿತ್ವದಲ್ಲಿರುವ ಶ್ರೀ ಕಾಶಿ ಅನ್ನಪೂರ್ಣೇಶ್ವರಿ ಸುಕ್ಷೇತ್ರ ಶ್ರೀ ತಿಮ್ಮಪ್ಪಸ್ವಾಮಿಮಠವು ತನ್ನ ಧಾರ್ಮಿಕ, ಸಾಮಾಜಿಕ ಕಾರ್ಯಕ್ರಮಗಳ ಮೂಲಕ ಈ ಭಾಗದ ಭಕ್ತರಿಗೆಸೂಕ್ತ ಮಾರ್ಗದರ್ಶನ ನೀಡುತ್ತಿದೆ. ಶ್ರೀ ಮಠದ ಕರ್ತೃ ಗುರುಗಳೆಂದು ಪೂಜ್ಯ ಶ್ರೀ ತಿಮ್ಮಪ್ಪಸ್ವಾಮಿಗಳನ್ನು ಗುರುತಿಸಲಾಗಿದ್ದು ಶ್ರೀ ಮಠದ ಸ್ಥಾಪಿತ ಕಾಲಮಾನ 1932ರ ಮಾರ್ಚ್ತಿಂಗಳ 18ರಂದು.ಪೂಜ್ಯ ಶ್ರೀ ತಿಮ್ಮಪ್ಪ ಸ್ವಾಮಿಗಳು ಮಹಾ ದೈವನಿಷ್ಠರಾಗಿದ್ದು ವಿರಕ್ತ ಸಂಪ್ರದಾಯದಸಾಕಾರ ಮೂರ್ತಿಗಳಾಗಿದ್ದರು. ತಮ್ಮ ಆಚಾರ-ವಿಚಾರಗಳ ಮೂಲಕ ಬಂದ ಭಕ್ತರಲ್ಲಿಧಾರ್ಮಿಕ, ಸಾಮಾಜಿಕ ಪ್ರಜ್ಞೆಯನ್ನು ಮೂಡಿಸುತ್ತಿದ್ದ ಶ್ರೀಗಳು ಶ್ರೀ ಮಠವನ್ನು ಸ್ಥಾಪಿಸಿಬೆಳೆಸಿದ್ದಾರೆ. ಇವರ ನಂತರ ಬಂದ ಎರಡನೇ ಶ್ರೀಗಳಾದ ಶ್ರೀ ನಿರಂಜನಪ್ಪ ಸ್ವಾಮಿಗಳುಕರ್ತೃ ಗುರುಗಳ ಹಾದಿಯಲ್ಲಿಯೇ ಶ್ರೀಮಠವನ್ನು ಸಾಮಾಜಿಕ ಚಿಂತನೆಗಳ ಮೂಲಕಮುನ್ನಡೆಸಿರುವುದು ತಿಳಿದುಬರುತ್ತದೆ. ಆದರೆ ಇವರ ಕುರಿತಂತೆ ಹೆಚ್ಚಿನ ಮಾಹಿತಿಗಳುಲಭ್ಯವಿಲ್ಲ.ಎರಡನೇ ಶ್ರೀಗಳ ನಂತರ ಸುಮಾರು 20 ವರ್ಷಗಳ ಕಾಲ ಖಾಲಿ ಉಳಿದಿರುವಶ್ರೀ ಮಠಕ್ಕೆ 2011ರಲ್ಲಿ ಅಧಿಕಾರ ಮಾಡಿಕೊಂಡಿರುವ ಪ್ರಸ್ತುತ ಶ್ರೀಗಳಾದ ಶ್ರೀ ಬಸವಮಹಾಲಿಂಗ ಸ್ವಾಮೀಜಿಗಳು “ಜಾತಿ ಅಳಿಯಲಿ, ನೀತಿ ಬೆಳೆಯಲಿ, ಪ್ರೀತಿ ಉಳಿಯಲಿ” ಎಂಬವೇದವಾಕ್ಯದೊಂದಿಗೆ ಶ್ರೀಮಠ ಹಾಗೂ ಸಮಾಜದ ಶ್ರೇಯೋಭಿವೃದ್ಧಿಗೆ ಶ್ರಮಿಸುತ್ತಿದ್ದಾರೆಶ್ರೀಗಳು ಶ್ರೀಮಠದ ಅಧಿಕಾರ ವಹಿಸಿಕೊಂಡಾಗ ಬಹುಕಾಲ ಕಾಲಿ ಉಳಿದಿದ್ದ ಮಠದಸ್ಥಿತಿಗತಿ ಉತ್ತಮವಾಗಿರಲಿಲ್ಲ. ಶ್ರೀಗಳು ಭಕ್ತರ ಹಾಗೂ ಸಮಾಜದ ಗಣ್ಯರಸಹಕಾರದೊಂದಿಗೆ ಶ್ರೀ ಮಠವನ್ನು ಸರ್ವತೋಮುಖ ರೀತಿಯಲ್ಲಿ ಅಭಿವೃದ್ಧಿಪಡಿಸುತ್ತಿದ್ದಾರೆ. ಶ್ರೀ ಮಠದಲ್ಲಿ ಸಂಸ್ಕøತ, ವೇದ ಪಾಠಶಾಲೆ ತೆರೆಯುವ ಯೋಜನೆಹಾಕಿಕೊಂಡಿದ್ದಾರೆ. ಶ್ರೀ ಮಠದ ಶ್ರೀ ಕಾಶಿ ಅನ್ನಪೂರ್ಣೇಶ್ವರಿ ದೇವಿಯ ಜಾತ್ರಾ ಮಹೋತ್ಸವಹಾಗೂ ದನಗಳ ಜಾತ್ರೆಯು ಪ್ರತಿ ವರ್ಷ ಭರತ ಹುಣ್ಣಿಮೆ ದಿನ ನಡೆಯುತ್ತದೆ.
Swamiji
Swamiji Name :
ಪೂಜ್ಯ ಶ್ರೀ ಬಸವ ಮಹಾಲಿಂಗ ಸ್ವಾಮಿಗಳು
Date of Birth :
26-03-1974
Place :
ಹಿರೇಕೆರೂರು, ಹಾವೇರಿ ಜಿಲ್ಲೆ
Pattadikara :
2011
Programs
ಭರತ ಹುಣ್ಣಿಮೆ ದಿನ (ಫೆಬ್ರವರಿ)ಯಲ್ಲಿ ಶ್ರೀ ಕಾಶಿ ಅನ್ನಪೂರ್ಣೇಶ್ವರಿ ದೇವಿಯ ಜಾತ್ರಾ ಮಹೋತ್ಸವ ಹಾಗೂ ದನಗಳ ಜಾತ್ರೆ
Full Address Kannada
ಶ್ರೀ ಕಾಶಿ ಅನ್ನಪೂರ್ಣೇಶ್ವರಿ ಸುಕ್ಷೇತ್ರ, ಶ್ರೀ ತಿಮ್ಮಪ್ಪಸ್ವಾಮಿ ಮಠ ತಂಗನಹಳ್ಳಿ (ದೇವರಾಯನದುರ್ಗದ ಹತ್ತಿರ) ಕೊರಟಗೆರೆ ತಾ||, ತುಮಕೂರು ಜಿಲ್ಲೆ