Shree Channa Basaveshwara Gadduge Matha

Shree Channa Basaveshwara Gadduge Matha Claimed

ಶ್ರೀ ಚನ್ನಬಸವೇಶ್ವರ ಗದ್ದುಗೆ ಮಠ

Average Reviews

Description

ಶ್ರೀ ಚನ್ನಬಸವೇಶ್ವರ ಗದ್ದುಗೆ ಮಠ

ಕರ್ತೃ – ಪ.ಪೂ. ಶ್ರೀ ಗೋಸಲ ಚನ್ನಬಸವೇಶ್ವರ ಸ್ವಾಮಿಗಳು

ತುಮಕೂರು ಜಿಲ್ಲೆ ಗುಬ್ಬಿ ತಾಲ್ಲೂಕಿನ ತೆವಡೆಹಳ್ಳಿ ಗ್ರಾಮವು ತಾಲ್ಲೂಕುಕೇಂದ್ರದಿಂದ 25 ಕಿ.ಮೀ. ದೂರದಲ್ಲಿದ್ದು ಈ ಗ್ರಾಮದಲ್ಲಿ ಪುರಾತನ ಚನ್ನಬಸವೇಶ್ವರ ಸ್ವಾಮಿದೇವಸ್ಥಾನವಿದ್ದು ಇಲ್ಲಿಯೇ 2012ರಲ್ಲಿ ಸ್ಥಾಪಿತಗೊಂಡಿರುವ ಶ್ರೀ ಚನ್ನಬಸವೇಶ್ವರ ಗದ್ದುಗೆಮಠವು ಅಸ್ತಿತ್ವದಲ್ಲಿದೆ. ಊರ ಹೊರಗೆ ಸ್ಥಾಪಿತಗೊಂಡಿರುವ ಶ್ರೀ ಮಠದ ಸ್ಥಾಪಕರು ಶ್ರೀ ಷ.ಬ್ರ. ಗೋಸಲ ಚನ್ನಬಸವೇಶ್ವರ ಶಿವಾಚಾರ್ಯ ಸ್ವಾಮಿಗಳು.14ನೇ ಶತಮಾನದಲ್ಲಿ ಜೀವಿತವಿದ್ದ ಪವಾಡ ಪುರುಷ ಗೋಸಲ ಶ್ರೀಚನ್ನಬಸವೇಶ್ವರರು ನಾಡಿನ ಪ್ರಮುಖ ಧಾರ್ಮಿಕ ಪುರುಷರು. ಇವರು ಸಂಚರಿಸುತ್ತಾ ಅಲ್ಲಲ್ಲಿನೆಲೆಗೊಂಡು ಅನುಷ್ಠಾನಗೊಂಡಿದ್ದ ಸ್ಥಳಗಳಲೆಲ್ಲಾ ಇಂದು ದೇವಸ್ಥಾನಗಳು, ಮಠಗಳುಅಸ್ತಿತ್ವದಲ್ಲಿವೆ. ಹೀಗೆ ಗೋಸಲ ಶ್ರೀ ಚನ್ನಬಸವೇಶ್ವರರು ಅನುಷ್ಠಾನಗೊಂಡುಪಾವನಗೊಳಿಸಿದ್ದ ತೆವಡೆಹಳ್ಳಿಯಲ್ಲಿಯೂ ದೇವಸ್ಥಾನ ಪುರಾತನ ಕಾಲದಲ್ಲೇ ಅಸ್ತಿತ್ವದಲ್ಲಿದ್ದು.ಇತ್ತೀಚಿಗೆ ಶ್ರೀ ಚನ್ನಬಸವೇಶ್ವರ ಗದ್ದುಗೆ ಮಠವು ಸ್ಥಾಪಿತಗೊಂಡಿದೆ.ಶ್ರೀ ಷ. ಬ್ರ. ಚನ್ನಬಸವೇಶ್ವರ ಶಿವಾಚಾರ್ಯ ಸ್ವಾಮಿಗಳು ಗದಗ ತಾಲ್ಲೂಕಿನಹರ್ಲಾಪುರ ಗ್ರಾಮದಲ್ಲಿ ಜನಿಸಿ ಪ್ರಾಥಮಿಕ ಶಿಕ್ಷಣ ಪಡೆದು ಮೈಸೂರಿನ ಜಪದಕಟ್ಟೆಮಠದಲ್ಲಿ ವಾಸ್ತವ್ಯವಿದ್ದು ಮೈಸೂರು ವಿಶ್ವವಿದ್ಯಾನಿಲಯದಿಂದ ಸಂಸ್ಕøತ ಸ್ನಾತಕೋತ್ತರಪದವಿ ಪೂರೈಸಿದರು. ನಂತರ 2009ರ ಜುಲೈ ಒಂದರಂದು ತೆವಡೆಹಳ್ಳಿಗೆ ಆಗಮಿಸಿಚನ್ನಬಸವೇಶ್ವರ ದೇವಸ್ಥಾನದಲ್ಲಿ ನೆಲೆನಿಂತು ತಮ್ಮ ಧಾರ್ಮಿಕ ಆಚರಣೆಗಳ ಮೂಲಕಭಕ್ತರನ್ನು ಸಂಪಾದಿಸಿಕೊಂಡು ಅವರ ಸಹಕಾರದೊಂದಿಗೆ ಊರ ಹೊರಗೆ ಶ್ರೀಮಠವನ್ನುಸ್ಥಾಪಿಸಿದರು.2012ರ ಫೆಬ್ರವರಿ 02ರ ಗುರುವಾರ ಶಿವಗಂಗೆಯ ಮೇಲನಗವಿ ಮಠದ ಶ್ರೀ ಷ.ಬ್ರ. ಮಲಯ ಶಾಂತಮುನಿ ಶಿವಾಚಾರ್ಯ ಸ್ವಾಮಿಗಳಿಂದ ಪಟ್ಟಾಧಿಕಾರದ ಅನುಗ್ರಹ ಪಡೆದಶ್ರೀಗಳು ಚನ್ನಬಸವೇಶ್ವರ ಗದ್ದುಗೆ ಮಠವನ್ನು ಸರ್ವಾಂಗೀಣವಾಗಿ ಅಭಿವೃದ್ಧಿಪಡಿಸುತ್ತಿದ್ದಾರೆ.ಶಿವರಾತ್ರಿ ನಂತರದ 10ನೇ ದಿನಕ್ಕೆ ಉತ್ಸವ ಜಾತ್ರೆ ಆಯೋಜಿಸುವ ಶ್ರೀಗಳು ಶ್ರೀ ಮಠದಲ್ಲಿವಿವಿದ ಧಾರ್ಮಿಕ ಸಾಂಸ್ಕøತಿಕ ಕಾರ್ಯಕ್ರಮಗಳನ್ನು ನಡೆಸುತ್ತಾರೆ. ಶ್ರೀ ಮಠದರಥೋತ್ಸವವು ಕಾರ್ತೀಕ ಮಾಸದ ಕಡೆ ಅಮವಾಸ್ಯೆ ದಿವಸ ಜರುಗುತ್ತದೆ.

Swamiji

Swamiji Name :
ಶ್ರೀ ಷ.ಬ್ರ. ಗೋಸಲ ಚನ್ನಬಸವೇಶ್ವರ ಶಿವಾಚಾರ್ಯ ಸ್ವಾಮಿಗಳು
Date of Birth :
14-05-1980
Place :
ಹರ್ಲಾಪುರ, ಗದಗ ತಾ||
Pattadikara :
02-02-2012
Photo :

Programs

ಪ್ರತಿ ಹುಣ್ಣಿಮೆಗೆ ರುದ್ರಾಭಿಷೇಕ ಹಾಗೂ ಭಜನೆ ಶಿವರಾತ್ರಿ ಆದ 10ನೇ ದಿನಕ್ಕೆ ಉತ್ಸವ, ರಥೋತ್ಸವ, ಜಾತ್ರೆ ಹಾಗೂ ವಿ.ಧಾ.ಸಾಂ. ಕಾರ್ಯಕ್ರಮಗಳು ಶ್ರಾವಣ ಮಾಸದಲ್ಲಿ ಒಂದು ಸೋಮವಾರ ಶ್ರೀ ಮಹಾದೇಶ್ವರ ಸ್ವಾಮಿಯ ವಿಶೇಷ ಪೂಜೆ ಮತ್ತು ಕಾರ್ಯಕ್ರಮಗಳು ಕಾರ್ತೀಕ ಮಾಸದ ಕಡೇ ಅಮವಾಸ್ಯೆ ದಿವಸ ಊರ ಜನರಿಂದ ಎಡೆಜಾತ್ರೆ ಮತ್ತು ಶ್ರೀ ಮಠದ ರಥೋತ್ಸವ ಹಾಗೂ ವಿವಿಧ ಧಾರ್ಮಿಕ ಸಾಂಸ್ಕøತಿಕ ಕಾರ್ಯಕ್ರಮಗಳು

Photos

Full Address Kannada

ಶ್ರೀ ಚನ್ನಬಸವೇಶ್ವರ ಗದ್ದುಗೆ ಮಠ ತೆವಡೆಹಳ್ಳಿ, ಅಳಲಘಟ್ಟ ಪೋ. - 572 222 ಗುಬ್ಬಿ ತಾ||, ತುಮಕೂರು ಜಿಲ್ಲೆ

Map

Near by Places

ಶ್ರೀ ಚನ್ನಬಸವೇಶ್ವರ ಗದ್ದುಗೆ ಮಠ ತೆವಡೆಹಳ್ಳಿ, ಅಳಲಘಟ್ಟ ಪೋ. - 572 222 ಗುಬ್ಬಿ ತಾ||, ತುಮಕೂರು ಜಿಲ್ಲೆ

Statistic

41 Views
0 Rating
0 Favorite
0 Share
error: Content is protected !!