ಗುಬ್ಬಿ ಪಟ್ಟಣದ ಹೊರಭಾಗದ ಹಳ್ಳದ ದಡದಲ್ಲಿ ಶ್ರೀ ಮಠವು ಸ್ಥಾಪನೆಗೊಂಡಿದ್ದುಈ ಕಾರಣದಿಂದಾಗಿ ಶ್ರೀ ಮಠಕ್ಕೆ ಶ್ರೀ ತೊರೆಮಠವೆಂದು ಹೆಸರು ಬಂದಿದೆ. ಶ್ರೀ ಮಠದಸಮೀಪದಲ್ಲಿಯೇ ಪ್ರಖ್ಯಾತ ಗುಬ್ಬಿ ಗೋಸಲ ಚನ್ನಬಸವೇಶ್ವರ ದೇವಸ್ಥಾನವಿದ್ದು ಶ್ರೀಮಠಕ್ಕೂ ದೇವಸ್ಥಾನಕ್ಕೂ ಅವಿನಾಭಾವ ಸಂಬಂಧವಿದೆ. ಸುಮಾರು 150 ವರ್ಷಗಳಇತಿಹಾಸವಿರುವ ಶ್ರೀ ಮಠದ ಕರ್ತೃ ಗುರುಗಳು ಶ್ರೀ ಮ.ನಿ.ಪ್ರ. ಅಟವಿ ಮಹಾಶಿವಯೋಗಿಗಳು.ಉತ್ತರದ ಅಂಕಲಗಿಯಿಂದ ಸಂಚಾರ ಹೊರ ಟು ಅಲ್ಲಲ್ಲಿ ನೆಲೆಸಿಪವಾಡಗಳನ್ನು ನಡೆಸುತ್ತಾ ಗುಬ್ಬಿಗೆ ಆಗಮಿಸುವ ಶ್ರೀ ಅಟವಿ ಮಹಾಸ್ವಾಮಿಗಳನ್ನು ಗ್ರಾಮದಭಕ್ತರು ಅದ್ದೂರಿಯಾಗಿ ಸ್ವಾಗತಿಸಿ ಇಲ್ಲಿಯೇ ನೆಲೆ ನಿಲ್ಲುವಂತೆ ಒತ್ತಾಯಿಸುತ್ತಾರೆ. ಶ್ರೀಗಳುಗೋಸಲ ಚನ್ನಬಸವೇಶ್ವರ ದೇವಸ್ಥಾನದಲ್ಲಿ ನೆಲೆನಿಂತು ತೊರೆಯಲ್ಲಿ ಮಿಂದು ತೊರೆಯದಡದ ಪ್ರಶಾಂತ ಸ್ಥಳದಲ್ಲಿ ನಿತ್ಯ ಅನುಷ್ಠಾನ ಕೈಗೊಳ್ಳುತ್ತಿದ್ದರು ಮುಂದೆ ಈ ಸ್ಥಳವೇ ಶ್ರೀಅಟವಿ ಸ್ವಾಮಿಗಳ ಖಾಯಂ ಪೂಜಾ ಸ್ಥಳವಾಗಿ ತೊರೆಮಠ ಸ್ಥಾಪನೆಗೊಂಡಿತು.ಶ್ರೀ ಅಟವಿ ಸ್ವಾಮಿಗಳು ಗುಬ್ಬಿಯಲ್ಲಿರುವಾಗಲೇ ಸಿದ್ದಗಂಗಾ ಕ್ಷೇತ್ರಕ್ಕೆ ತೆರಳಿಗವಿಯಲ್ಲಿ ಅನುಷ್ಠಾನ ಕೈಗೊಳ್ಳುತ್ತಾರೆ. ಕ್ಷೇತ್ರದ ಅಭಿವೃದ್ಧಿಯಲ್ಲಿ ಪಾತ್ರ ವಹಿಸುವ ಶ್ರೀಗಳು ಶ್ರೀಕ್ಷೇತ್ರದ ಪ್ರಖ್ಯಾತಿಗೆ ಓಂಕಾರ ಹಾಕಿ ಗುಬ್ಬಿಗೆ ಮರಳಿ ಕೊನೆಯಲ್ಲಿ ಚಿಕ್ಕತೊಟ್ಟಿಕೆರೆಯಲ್ಲಿನಿರ್ವಿಕಲ್ಪ ಸಮಾದಿ ಹೊಂದಿದರು. ತದ ನಂತರ ಶ್ರೀ ಚಿಕ್ಕ ಅಟವಿ ಸ್ವಾಮಿಗಳು ಶ್ರೀಮಠವನ್ನು ಮುನ್ನಡೆಸಿ ನಂತರದಲ್ಲಿ ಶ್ರೀ ನೀಲಕಂಠ ಸ್ವಾಮಿಗಳಿಗೆ ಅಧಿಕಾರ ವಹಿಸುತ್ತಾರೆ.ಶ್ರೀ ಮ.ನಿ.ಪ್ರ. ನೀಲಕಂಠ ಸ್ವಾಮಿಗಳು ಶಿವಯೋಗ ಮಂದಿರದಲ್ಲಿ ಅಭ್ಯಸಿಸಿ1930ರಲ್ಲಿ ಗುಳೇದ ಗುಡ್ಡದ ಮುರುಘಾ ಮಠದ ಪಟ್ಟಾಧಿಕಾರವನ್ನು ಪಡೆದಿದ್ದು ಪುನಃಗುರುಗಳ ಅಭಿಲಾಷೆ ಮೇರೆಗೆ ಗುಬ್ಬಿಯಲ್ಲಿ 1958ರಲ್ಲಿ ಪಟ್ಟಾಧಿಕಾರ ಸ್ವೀಕರಿಸುತ್ತಾರೆ. ಶ್ರೀಗಳುಶ್ರೀ ಮಠವನ್ನು ಸರ್ವಾಂಗೀಣವಾಗಿ ಅಭಿವೃದ್ಧಿಪಡಿಸಿದ್ದು ಪಾಪನಾಶಿನಿ ಕೊಳದಲ್ಲಿಪಂಚಸೂತ್ರಕ್ಕೆ ಸರಿಯಾಗಿ ಅರವತ್ತಮೂರು ಲಿಂಗಗಳನ್ನು ಅರವತ್ತೂರು ಗುರುಗಳ ಕೈಯಲ್ಲಿಪ್ರತಿಷ್ಠಾಪಿಸಿದರು. 1988ರ ಫೆಬ್ರವರಿ 28ರಂದು ಇಂದಿನ ಶ್ರೀಗಳಾದ ಶ್ರೀ ಮ.ನಿ.ಪ್ರ.ರಾಜಶೇಖರ ಸ್ವಾಮಿಗಳಿಗೆ ಅಧಿಕಾರ ವಹಿಸಿಕೊಟ್ಟು 1999ರ ಡಿಸೆಂಬರ್ನಲ್ಲಿಶತಾಯುಷಿಗಳಾಗಿ ಸಾರ್ಥಕ್ಯ ಜೀವನ ನಡೆಸಿ ಲಿಂಗೈಕ್ಯರಾದರು. ಶ್ರೀ ರಾಜಶೇಖರಮಹಾಸ್ವಾಮಿಗಳು ಪರಂಪರೆಗೆ ಅನುಗುಣವಾಗಿ ಶ್ರೀ ಮಠವನ್ನು ಸರ್ವಾಂಗೀಣವಾಗಿಅಭಿವೃದ್ಧಿಪಡಿಸುತ್ತಿದ್ದಾರೆ.
Swamiji
Swamiji Name :
ಶ್ರೀ ಮ.ನಿ.ಪ್ರ. ರಾಜಶೇಖರ ಮಹಾಸ್ವಾಮಿಗಳು
Date of Birth :
19-09-1949
Place :
ಧಾರವಾಡ
Pattadikara :
28-02-1988
Photo :
Programs
ಪ್ರತಿ ಹುಣ್ಣಿಮೆಗೆ ಉಚಿತ ಆರೋಗ್ಯ ತಪಾಸಣಾ ಶಿಬಿರ ಪಾಲ್ಗುಣ ಮಾಸದಲ್ಲಿ ಶ್ರೀ ಮಠದ ಜಾತ್ರೆ ಕಾರ್ತಿಕ ಶುದ್ಧ ದಶಮಿಗೆ ಶ್ರೀ ಅಡವಿ ಸ್ವಾಮಿಗಳ ಜಾತ್ರೆ