ತುಮಕೂರು ಜಿಲ್ಲೆ ಗುಬ್ಬಿ ತಾಲ್ಲೂಕಿನ ಗೊಲ್ಲಳ್ಳಿ ಗ್ರಾಮವು ತಾಲ್ಲೂಕು ಕೇಂದ್ರದಿಂದಕೇವಲ 7 ಕಿ.ಮೀ. ದೂರದಲ್ಲಿದ್ದು ಈ ಗ್ರಾಮದ ಹೊರವಲಯದಲ್ಲಿ ಅಸ್ತಿತ್ವದಲ್ಲಿರುವ ಶ್ರೀಜಂಗಮ ಮಠವು ತನ್ನ ಧಾರ್ಮಿಕ ಹಾಗೂ ಶೈಕ್ಷಣಿಕ ಕಾರ್ಯಚಟುವಟಿಕೆಗಳ ಮೂಲಕ ಈಭಾಗದಲ್ಲಿ ಪ್ರಚಲಿತದಲ್ಲಿದೆ ಶ್ರೀ ಮಠವು ಕಳೆದ ದಶಕಗಳಲ್ಲಿ ಸ್ಥಾಪಿತಗೊಂಡಿದ್ದು ಬಹುಬೇಗನೇ ಭಕ್ತರನ್ನು ಸಂಪಾದಿಸಿಕೊಂಡಿದೆ.ತುಮಕೂರಿನ ಸಿದ್ದಗಂಗಾ ಮಠದಲ್ಲಿ ಪಟ್ಟಾಧಿಕಾರಿಯಾಗಿ ನೇಮಕಗೊಂಡುತದನಂತರ ಅಲ್ಲಿನ ವ್ಯಾಜ್ಯದಿಂದಾಗಿ ಹೊರ ಬಂದ ಶ್ರೀ ಮ. ನಿ. ಪ್ರ. ಸ್ವ ಗೌರಿಶಂಕರಸ್ವಾಮಿಗಳು, ಗೊಲ್ಲಳ್ಳಿ ಗ್ರಾಮಕ್ಕೆ ಬಂದು ಭಕ್ತರ ಸಹಕಾರ ಪಡೆದು ಶ್ರೀ ಮಠವನ್ನು ಸ್ಥಾಪನೆಮಾಡಿದ್ದಾರೆ. ಶ್ರೀ ಮಠಕ್ಕೆ ಗೊಲ್ಲಳ್ಳಿ ಹಾಗೂ ಸುತ್ತಮುತ್ತಲಿನ ಮೂವತ್ತಮೂರು ಹಳ್ಳಿಗಳಲ್ಲಿಭಕ್ತರಿದ್ದು ಮಠದ ಕಾರ್ಯ ಚಟುವಟಿಕೆಗಳಿಗಾಗಿ ಸಂಪೂರ್ಣ ಸಹಕಾರ ನೀಡುತ್ತಾಬಂದಿದ್ದಾರೆ. ಈ ರೀತಿ ಭಕ್ತರ ನೆರವಿನಿಂದ ಸ್ಥಾಪಿತಗೊಂಡ ಶ್ರೀ ಮಠವು ಶರಣರತತ್ತ್ವಗಳನ್ನು ಸಾರುತ್ತಾ. ಭಕ್ತರಿಗೆ ಸೂಕ್ತ ಮಾರ್ಗದರ್ಶನ ನೀಡುತ್ತಾ ಶ್ರೀ ಗೌರಿಶಂಕರಸ್ವಾಮಿಗಳ ನೇತೃತ್ವದಲ್ಲಿ ಯಶಸ್ವಿಯಾಗಿ ಮುನ್ನಡೆದಿದೆ.ಶ್ರೀ ಗೌರಿಶಂಕರ ಸ್ವಾಮಿಗಳು ಕೇವಲ ಧಾರ್ಮಿಕ ಆಚರಣೆಗಳಿಗಷ್ಟೇ ಒತ್ತುನೀಡದೇ ಸಾಮಾಜಿಕ ಹಾಗೂ ಶೈಕ್ಷಣಿಕವಾಗಿಯೂ ಶ್ರೀ ಮಠದಲ್ಲಿ ಚಟುವಟಿಕೆಗಳನ್ನುನಡೆಸುತ್ತಿದ್ದಾರೆ. ಶ್ರೀ ಮಠದ ವತಿಯಿಂದ ಪ್ರಾಥಮಿಕ ಹಾಗೂ ಪ್ರೌಢಶಾಲೆಗಳನ್ನುಸ್ಥಾಪಿಸಿರುವ ಶ್ರೀಗಳು ಗ್ರಾಮೀಣ ಬಡ ಮಕ್ಕಳ ವಿದ್ಯಾಭ್ಯಾಸಕ್ಕೋಸ್ಕರ ಮಠದಲ್ಲೇವಿದ್ಯಾರ್ಥಿಗಳಿಗೆ ಆಶ್ರಯ ನೀಡಿ ಮಾದರಿ ಎನಿಸಿದ್ದಾರೆ.ಶ್ರೀ ಮಠದಲ್ಲಿ ಪ್ರತಿನಿತ್ಯ ಧಾರ್ಮಿಕ ಆಚರಣೆಗಳೊಂದಿಗೆ ಪ್ರತಿ ಅಮಾವಾಸ್ಯೆಹುಣ್ಣಿಮೆಗಳಲ್ಲಿ ಭಜನಾ ಕಾರ್ಯಕ್ರಮಗಳನ್ನು ನಡೆಸಲಾಗುತ್ತದೆ ಹಾಗೂ ವಿಜೃಂಭಣೆಯದಸರಾ ಆಚರಣೆಗಳು ನಡೆಯುತ್ತವೆ. ಶ್ರೀ ಮಠದ ರಥೋತ್ಸವವು ಚೈತ್ರ ಮಾಸದಲ್ಲಿಯುಗಾದಿ ನಂತರದ 7ನೇ ದಿನಕ್ಕೆ ಜರುಗುತ್ತಿದ್ದು ಅಪಾರ ಭಕ್ತರು ಪಾಲ್ಗೊಂಡುಯಶಸ್ವಿಗೊಳಿಸುತ್ತಾರೆ.
Swamiji
Swamiji Name :
ಶ್ರೀ ಮ. ನಿ. ಪ್ರ. ಸ್ವ. ಗೌರಿಶಂಕರ ಸ್ವಾಮಿಗಳು
Photo :
Programs
ಅಮವಾಸೆ ಮತ್ತು ಹುಣ್ಣಿಮೆಯಂದು ಶ್ರೀ ಮಠದಲ್ಲಿ ಭಜನೆ ಚೈರ್ತ ಮಾಸದಲ್ಲಿ ಶ್ರೀ ಮಠದ ರಥೋತ್ಸವ ನಾಡಹಬ್ಬ ದಸರ ಆಚರಣೆ
Institutions
ಕಿರಿಯ / ಹಿರಿಯ ಪ್ರಾಥಮಿಕ / ಪ್ರೌಢಶಾಲೆ ವಿದ್ಯಾರ್ಥಿ ನಿಲಯ
Photos
Full Address Kannada
ಶ್ರೀ ಜಂಗಮ ಮಠ ಗೊಲ್ಲಳ್ಳಿ, ತಿಪ್ಪೂರು ಪೋ. - 572 142 ಗುಬ್ಬಿ ತಾ||, ತುಮಕೂರು ಜಿಲ್ಲೆ