ತುಮಕೂರು ಜಿಲ್ಲೆ ಚಿಕ್ಕನಾಯಕನಹಳ್ಳಿ ತಾಲ್ಲೂಕಿನ ಮಾದಿಹಳ್ಳಿ ಗ್ರಾಮದಮಧ್ಯಭಾಗದಲ್ಲಿ ಅಸ್ತಿತ್ವದಲ್ಲಿರುವ ಶ್ರೀ ಹಿರೇಮಠವು ಪುರಾತನ ಕಾಲದಿಂದಲೂ ಗ್ರಾಮದಜನರ ಶ್ರದ್ದಾಭಕ್ತಿಯ ಕೇಂದ್ರವಾಗಿ ಬೆಳೆದುಬಂದಿದೆ. ಶ್ರೀ ಶ್ರೀಶೈಲ ಪೀಠದ ಶಾಖಾ ಮಠವಾಗಿಪುತ್ರ ವರ್ಗದ ಪರಂಪರೆಯಲ್ಲಿ ಬೆಳೆದು ಬಂದಿರುವ ಶ್ರೀ ಹಿರೇಮಠವು ಪುರಾತನಕಾಲದ್ದಾದರೂ ಶ್ರೀ ಮಠದ ಸ್ಥಾಪಿತ ಕಾಲಮಾನ ಹಾಗೂ ಗುರುಗಳ ಕುರಿತುತಿಳಿದುಬರುವುದಿಲ್ಲ.ಶ್ರೀ ಹಿರೇಮಠವು ಬಹುಕಾಲ ಗುರುಗಳಿಲ್ಲದೇ ಖಾಲಿ ಉಳಿದಿದ್ದ ಸಂದರ್ಭದಲ್ಲಿಶ್ರೀ ಮಠಕ್ಕೆ ಗುರುಗಳಾಗಿ ಪಟ್ಟಕ್ಕೆ ಬಂದವರು ಹಿಂದಿನ ಶ್ರೀಗಳಾದ ಶ್ರೀ ಮಹಾದೇವಶಿವಾಚಾರ್ಯ ಮಹಾಸ್ವಾಮಿಗಳು. ಶ್ರೀಗಳು ಅಧಿಕಾರಕ್ಕೆ ಬಂದಾಗ ಶ್ರೀ ಮಠದ ಕಟ್ಟಡವುನಿರ್ವಹಣೆ ಇಲ್ಲದೆ ಶಿಥಿಲಗೊಂಡಿತ್ತು. ಇದನ್ನು ಸವಾಲಾಗಿ ಸ್ವೀಕರಿಸಿದ ಶ್ರೀಗಳು ಹಂತಹಂತವಾಗಿ ಭಕ್ತರ ಸಹಕಾರದೊಂದಿಗೆ ಶ್ರೀ ಮಠವನ್ನು ಅಭಿವೃದ್ಧಿಪಡಿಸಿದರು.ಶ್ರೀ ಮಹಾದೇವ ಶಿವಾಚಾರ್ಯರು ಶ್ರೀ ಮಠದಲ್ಲಿ ನಿತ್ಯ ಧಾರ್ಮಿಕಆಚರಣೆಗಳನ್ನು ನಡೆಸುತ್ತಾ ವಿಶೇಷ ಸಂದರ್ಭಗಳಲ್ಲಿ ವಿಶೇಷ ಧಾರ್ಮಿಕ ಕಾರ್ಯಕ್ರಮಗಳು.ವಿಶೇಷ ಪೂಜಾ ಅನುಷ್ಠಾನಗಳನ್ನು ಹಮ್ಮಿಕೊಂಡು ಹೆಚ್ಚಿನ ಭಕ್ತರನ್ನು ಸಂಪಾದಿಸಿಕೊಂಡರು.ಮಠದಲ್ಲಿರುವ ಗದ್ದುಗೆಗಳನ್ನು ಅಭಿವೃದ್ಧಿಪಡಿಸಿ ನಿತ್ಯ ಪೂಜೆಗೆ ಒಳಪಡಿಸಿದರು. ಈಶ್ವರಲಿಂಗವನ್ನು ಪ್ರತಿಷ್ಠಾಪಿಸಿದರು ಮಠದ ಆಸ್ತಿಯನ್ನು ಅಭಿವೃದ್ಧಿಪಡಿಸಿ ಆದಾಯಮೂಲವನ್ನಾಗಿ ಪರಿವರ್ತಿಸಿದ್ದರು.ಶ್ರೀಗಳು ತಾವಿರುವಾಗಲೇ ತಮ್ಮ ಉತ್ತರಾಧಿಕಾರಿಗಳನ್ನಾಗಿ 1994ರಲ್ಲಿ ಈಗಿನಶ್ರೀಗಳಾದ ಶ್ರೀ. ಷ. ಬ್ರ. ಚನ್ನಮಲ್ಲಿಕಾರ್ಜುನ ಶಿವಾಚಾರ್ಯ ಸ್ವಾಮಿಗಳನ್ನು ಪಟ್ಟಕ್ಕೆತಂದಿದ್ದರು. ಈಗಿನ ಶ್ರೀಗಳು ಗುರುಗಳ ಹಾದಿಯಲ್ಲಿಯೇ ಭಕ್ತರ ಹಾಗೂ ಶ್ರೀ ಮಠದಶ್ರೇಯೋಭಿವೃದ್ಧಿಗೆ ಶ್ರಮಿಸುತ್ತಿದ್ದಾರೆ. ಮಠದ ಸರ್ವಾಂಗೀಣ ಅಭಿವೃದ್ಧಿಗೆ ಯೋಜನೆರೂಪಿಸಿಕೊಂಡು ಆ ನಿಟ್ಟಿನಲ್ಲಿ ಕಾರ್ಯತತ್ಪರರಾಗಿದ್ದಾರೆ ಹಾಗೂ ಪ್ರತಿ ವರ್ಷ ಜೇಷ್ಠಮಾಸದಲ್ಲಿ ಶ್ರೀ ಹಿರಿಯ ಗುರುಗಳ ಪುಣ್ಯರಾಧನೆ ಮಹೋತ್ಸವವನ್ನು ನಡೆಸುತ್ತಾಬಂದಿದ್ದಾರೆ.
Swamiji
Swamiji Name :
ಷ.ಬ್ರ. ಶ್ರೀ ಚನ್ನಮಲ್ಲಿಕಾರ್ಜುನ ಶಿವಾಚಾರ್ಯ ಸ್ವಾಮಿಗಳು
Date of Birth :
03-03-1976
Place :
ಮಾದಿಹಳ್ಳಿ, ಚಿಕ್ಕನಾಯಕನಹಳ್ಳಿ ತಾ||
Pattadikara :
1994
Photo :
Programs
ಶ್ರಾವಣ ಮಾಸದಲ್ಲಿ ನಿತ್ಯ ವಿಶೇಷ ಕಾರ್ಯಕ್ರಮಗಳು ಜೇಷ್ಠ ಮಾಸದಲ್ಲಿ ಶ್ರೀ ಹಿರಿಯ ಗುರುಗಳ ಪುಣ್ಯಾರಾಧನೆ
Photos
Full Address Kannada
ಶ್ರೀ ಹಿರೇಮಠ ಮಾದಿಹಳ್ಳಿ, ಕುಪ್ಪೂರು ಪೋ. - 572 226 ಚಿಕ್ಕನಾಯಕನಹಳ್ಳಿ ತಾ||, ತುಮಕೂರು ಜಿಲ್ಲೆ