Sukshetra Shree Siddaganga Matha

Sukshetra Shree Siddaganga Matha Claimed

ಸುಕ್ಷೇತ್ರ ಶ್ರೀ ಸಿದ್ದಗಂಗಾ ಮಠ

Average Reviews

Description

ಸುಕ್ಷೇತ್ರ ಶ್ರೀ ಸಿದ್ದಗಂಗಾ ಮಠ

ಕರ್ತೃ – ಪರಮ ಪೂಜ್ಯ ಶ್ರೀ ಗೋಸಲ ಸಿದ್ದೇಶ್ವರರು

ಕಲ್ಪತರು ನಾಡು ತುಮಕೂರು ನಗರದ ಹೊರವಲಯದಲ್ಲಿ ಬೆಟ್ಟಗುಡ್ಡಗಳನಡುವಿನ ರಮಣೀಯ ಸ್ಥಳದಲ್ಲಿ ಅಸ್ಥಿತ್ವದಲ್ಲಿರುವ ಮಠವೇ ಸುಕ್ಷೇತ್ರ ಶ್ರೀ ಸಿದ್ದಗಂಗಾ ಮಠ.ನಾಡಿನ ಎಲ್ಲೆಡೆಯಲ್ಲಿ ಅಪಾರ ಭಕ್ತ ಬಳಗವನ್ನು ಹೊಂದಿರುವ ಶ್ರೀ ಮಠಕ್ಕೆ ಸುಮಾರು ಏಳುಶತಮಾನಗಳ ಶ್ರೀಮಂತ ಇತಿಹಾಸವಿದೆ. ಸಿದ್ದಗಂಗೆ ಬೆಟ್ಟದಲ್ಲಿ ಅನೇಕ ಗುಹೆಗಳುನಿರ್ಮಿತವಾಗಿದ್ದು ಈ ಗುಹೆಗಳಲ್ಲಿ ಕ್ರಿ.ಶ. 1300 ರಿಂದಲೂ ಶಿವಶರಣರುತಪೋನುಷ್ಠಾನಗೊಂಡ ಐತಿಹ್ಯಗಳಿವೆ.ಶ್ರೀ ಸಿದ್ದಗಂಗಾ ಮಠದ ಪರಂಪರೆ 1300-1350ರ ಸುಮಾರಿಗೆ ಪರಮ ಪೂಜ್ಯಶ್ರೀ ಗೋಸಲ ಸಿದ್ದೇಶ್ವರರಿಂದ ಪ್ರಾರಂಭಗೊಂಡಿದ್ದು ಇವರೇ ಶ್ರೀ ಮಠದ ಕರ್ತೃಗುರುಗಳಾಗಿದ್ದಾರೆ. ಚಾಮರಾಜನಗರ ಜಿಲ್ಲೆ ಹರದನಹಳ್ಳಿಯ ಪೀಠಾಚಾರ್ಯರಾದಶ್ರೀ ಗೋಸಲ ಸಿದ್ದೇಶ್ವರರು ಶ್ರೀ ಶಂಕರಾಚಾರ್ಯರಿಗೆ ಪಟ್ಟಾಧಿಕಾರ ಮಾಡಿ ತಮ್ಮನೂರೊಂದು ವಿರಕ್ತ ಅನುಯಾಯಿಗಳೊಡನೆ ಲೋಕೋದ್ದಾರಕ್ಕಾಗಿ ಸಂಚಾರ ಹೊರಟರು.ಹರದನಹಳ್ಳಿ ಯಿಂದ ಸಂಚರಿಸುತ್ತಾ ಅಲ್ಲಲ್ಲಿ ನೆಲೆಗೊಂಡು ಧರ್ಮಪ್ರಚಾರ ಮಾಡುತ್ತಾಶಿವಗಂಗೆಯಲ್ಲಿ ಕೆಲ ಕಾಲ ನೆಲೆನಿಂತು ಅಲ್ಲಿಂದ ಸಿದ್ದಗಂಗಾ ಬೆಟ್ಟದಲ್ಲಿ ನೆಲೆಯಾಗುತ್ತಾರೆ.ಶ್ರೀ ಗೋಸಲ ಸಿದ್ದೇಶ್ವರರು ತಮ್ಮ ಅನುಯಾಯಿಗಳೊಡನೆ ಅನುಷ್ಠಾನಕೈಗೊಂಡು ತಮ್ಮ ಪವಾಡಗಳಿಂದ ಮನೆಮಾತಾಗಿ ಭಕ್ತರ ನೆರವಿನಿಂದ ಶ್ರೀ ಮಠವನ್ನುಸ್ಥಾಪಿಸಿದರೆಂಬ ಐತಿಹ್ಯವಿದೆ ಹಾಗೂ ತಮ್ಮ ಶಿಷ್ಯರೊಬ್ಬರಿಗೆ ನೀರಿನ ದಾಹವುಂಟಾದಾಗತಮ್ಮ ಪವಾಡದಿಂದ ಗಂಗೋದ್ಭವ ಮಾಡಿದರೆಂದು, ಇದರಿಂದ ಈ ಕ್ಷೇತ್ರಕ್ಕೆ ಸಿದ್ದಗಂಗಾಕ್ಷೇತ್ರವೆಂಬ ಹೆಸರು ಬಂದಿದೆ ಎಂದು ಹೇಳುವ ಜಾನಪದ ಕಥೆ ಚಾಲನೆಯಲ್ಲಿದೆ.ಹೀಗೆ ಶ್ರೀ ಗೋಸಲ ಸಿದ್ದೇಶ್ವರರಿಂದ ಪ್ರಾರಂಭಗೊಂಡ ಸುಕ್ಷೇತ್ರಕ್ಕೆ 15-16ನೇಶತಮಾನದ ಸುಮಾರಿಗೆ ಬಂದು ನೆಲೆಗೊಂಡವರೇ ಶ್ರೀ ತೋಂಟದ ಸಿದ್ದಲಿಂಗೇಶ್ವರರು.ಹರದನಹಳ್ಳಿಯ ಪೀಠಾಚಾರ್ಯರೇ ಆಗಿದ್ದ ಶ್ರೀ ಸಿದ್ದಲಿಂಗೇಶ್ವರರು, ತಮ್ಮಏಳುನೂರೊಂದು ಅನುಯಾಯಿಗಳ ಪಡೆಯೊಂದಿಗೆ ನಾಡಿನುದ್ದಗಲಕ್ಕೂ ಸಂಚರಿಸಿಧರ್ಮಜಾಗೃತಿ ಕಾರ್ಯ ಕೈಗೊಂಡ ಮಹಾಪುರುಷರು. ನಾಡಿನ ಮೂಲೆ ಮೂಲೆಗಳಲ್ಲಿಸಂಚರಿಸಿ ಪಾಳು ಬಿದ್ದ ಮಠಗಳನ್ನು ಪುನರುಜ್ಜೀವನಗೊಳಿಸುತ್ತಾ, ಅಲ್ಲಲ್ಲಿ ತಮ್ಮ ಶಿಷ್ಯರನ್ನುಧರ್ಮ ಜಾಗೃತಿಗಾಗಿ ನೆಲೆಗೊಳಿಸುತ್ತಾ ಸಿದ್ದಗಂಗೆಗೆ ಬಂದರು. ಇಲ್ಲಿ ಕೆಲ ಕಾಲ ನೆಲೆನಿಂತುಕ್ಷೇತ್ರವನ್ನು ಧರ್ಮ ಪ್ರಚಾರದ ಕೇಂದ್ರವನ್ನಾಗಿ ಪ್ರಸಿದ್ದಿಗೆ ತಂದ ಶ್ರೀಗಳು ಪವಾಡ ಪುರುಷರು.ಶ್ರೀ ಸಿದ್ದಲಿಂಗೇಶ್ವರರು ಮಠದ ಪಕ್ಕದಲ್ಲಿದ್ದ ದೇವರಾಯಪಟ್ಟಣದಲ್ಲಿ ಒಂದುಮಡಕೆ ಅನ್ನವನ್ನು ಐನೂರು ಜನ ಜಂಗಮರಿಗೆ ಬಡಿಸಿ ಪವಾಡ ಮಾಡಿದ್ದುಜನಜನಿತವಾಗಿದೆ. ಈ ರೀತಿ ಅನೇಕ ಪವಾಡಗಳ ಮೂಲಕ ನಾಡಿನ ಜನರುಜಾಗೃತರಾಗುವಂತೆ ಮಾಡಿ ಅಂಧಕಾರವನ್ನು ತೊಡೆದು ಧರ್ಮದ ಬೆಳಕಿನಲ್ಲಿ ಸಮಷ್ಠಿ56ಸಮಾಜವು ಸನ್ಮಾರ್ಗದಲ್ಲಿ ನಡೆಯುವಂತೆ ಮಾಡಿದರು. ಶ್ರೀಗಳು ಇಲ್ಲಿ ಅನೇಕಪವಾಡಗಳನ್ನು ಮಾಡಿ ನಂತರ ಎಡೆಯೂರು ಕ್ಷೇತ್ರಕ್ಕೆ ಹೊರಟಿದ್ದು ಇವರ ನಂತರ ಮೂರುಶತಮಾನಗಳ ಪರಂಪರೆ ಲಭ್ಯವಿಲ್ಲ.ಪ್ರಸ್ತುತ ಲಭ್ಯವಿರುವ ದಾಖಲೆಗಳ ಪ್ರಕಾರ ಶ್ರೀ ಮಠದ ಪರಂಪರೆಯನ್ನು 1784-1820ರ ಅವಧಿಯಲ್ಲಿದ್ದ ಶ್ರೀ ನಂಜುಂಡ ಸ್ವಾಮಿಗಳಿಂದ ಗುರುತಿಸಬಹುದಾಗಿದೆ. ಇವರಿಗೂಪೂರ್ವದಲ್ಲಿ ಬಂದಿರುವ ಶ್ರೀಗಳು ಮೌನಕ್ರಾಂತಿಯಿಂದ ಸಮಾಜವನ್ನುಮುನ್ನಡೆಸಿರಬಹುದೆಂದೂ ಹಾಗೂ ಅವರುಗಳ ಪರಂಪರೆಯು ಶಿಥಿಲಗೊಂಡುಕಣ್ಮರೆಯಾಗಿರಬಹುದೆಂದು ಅಂದಾಜಿಸಲಾಗಿದೆ. ಶ್ರೀ ನಂಜುಂಡ ಸ್ವಾಮಿಗಳ ನಂತರದಪರಂಪರೆಯ ಬಗ್ಗೆ ನಾವು ತಿಳಿದುಕೊಳ್ಳಬಹುದು. ಇವರ ನಂತರ ಶ್ರೀ ರುದ್ರ ಸ್ವಾಮಿಗಳು(1820-1853) ಶ್ರೀ ಮಠವನ್ನು ಮುನ್ನಡೆಸಿರುವುದು ಕಂಡು ಬರುತ್ತದೆ.ಇವರ ನಂತರ ಸುಮಾರು ಅರ್ಧ ಶತಮಾನಗಳ ಕಾಲ ಶ್ರೀ ಮಠದಅಧಿಕಾರದಲ್ಲಿದ್ದ ಶ್ರೀ ಸಿದ್ದಲಿಂಗ ಸ್ವಾಮಿಗಳ (1853-1901) ಕಾಲದಿಂದ ಶ್ರೀ ಮಠವುಪ್ರಚಲಿತಕ್ಕೆ ಬಂದಿದೆ. ಇವರು ಅನುಷ್ಠಾನ ಮೂರ್ತಿಗಳಾಗಿ ಸದಾ ಶಿವಪೂಜಾನಿಷ್ಠರಾಗಿದ್ದು,ಅಲೌಕಿಕತೆಯತ್ತ ಹೆಚ್ಚು ಸಾಗಿದ್ದರು. ಈ ಕಾರಣದಿಂದಾಗಿ ಸಿದ್ದಗಂಗಾ ಮಠವು ಜೀರ್ಣಾವಸ್ಥೆತಲುಪುತಿತ್ತು. ಆಗ ಶ್ರೀ ಮಠದ ಸಂಪರ್ಕಕ್ಕೆ ಬಂದವರೇ ಶ್ರೀ ಅಟವೀ ಸ್ವಾಮಿಗಳು. ಶ್ರೀಗಳುಮಠಕ್ಕೆ ಬಂದವರೇ ದಾಸೋಹ ಕ್ರಿಯೆ ಮೊದಲಾದವುಗಳನ್ನು ಪ್ರಾರಂಭಿಸಿದರು. ದಾಸೋಹಕ್ರಿಯೆಗೆ ಮಹತ್ವ ಕೊಟ್ಟ ಅಟವಿ ಸ್ವಾಮಿಗಳು ದಾಸೋಹಕ್ಕಾಗಿ “ಇಂದು ಹಾಕಿದ ಬೆಂಕಿಮುಂದೆ ಎಂದೂ ಆರದಿರಲಿ, ಇಂದು ಪ್ರಾರಂಭಗೊಂಡ ಅನ್ನದಾಸೋಹ ಎಂದೆಂದಿಗೂನಿಲ್ಲದಿರಲಿ” ಎಂದು ಹಾರೈಸಿ ಪ್ರಾರಂಭ ಮಾಡಿದರು. ಅಂದು ಪ್ರಾರಂಭಗೊಂಡಅನ್ನದಾಸೋಹ ಕ್ರಿಯೆ ಹತ್ತುಪಟ್ಟು, ಸಾವಿರ ಪಟ್ಟು ಬೆಳೆದು ಇಂದು ಮಹಾ ದಾಸೋಹಕ್ಷೇತ್ರವಾಗಿ ಶ್ರೀ ಮಠವು ಗುರುತಿಸಿಕೊಂಡಿದೆ.ಶ್ರೀ ಅಟವಿ ಸ್ವಾಮಿಗಳು ಶ್ರೀ ಸಿದ್ದಲಿಂಗ ಸ್ವಾಮಿಗಳ ಮಾರ್ಗದರ್ಶನದಲ್ಲಿಸಿದ್ದಗಂಗಾ ಕ್ಷೇತ್ರವನ್ನು ಪಾವನಗೊಳಿಸಿ, ಹಿಂದಿನಂತೆಯೇ ವೈಭವಯುತವಾಗಿ ಧಾರ್ಮಿಕಸುಕ್ಷೇತ್ರವಾಗಿ ಬೆಳೆಯಲು ತಮ್ಮ ಶಕ್ತಿ ಮೀರಿ ಶ್ರಮಿಸಿದರು. ಶ್ರೀ ಸಿದ್ದಲಿಂಗ ಸ್ವಾಮಿಗಳ ಐಕ್ಯಾನಂತರ ಶ್ರೀ ಅಟವಿ ಸ್ವಾಮಿಗಳು ತಮ್ಮ ಶಿಷ್ಯರಾದ ಅಪ್ರತಿಮ ಪೂಜಾ ನಿಷ್ಠರಾದ ಶ್ರೀ ಉದ್ದಾನಶಿವಯೋಗಿಗಳನ್ನು ಸಿದ್ದಗಂಗೆಯ ಧಾರ್ಮಿಕ ಹಾಗೂ ದಾಸೋಹ ಕ್ರಿಯೆಗಳನ್ನುಮುನ್ನಡೆಸಿಕೊಂಡು ಹೋಗಲು ನೆಲೆಗೊಳಿಸಿ ತಾವು ಗುಬ್ಬಿಗೆ ಹಿಂತಿರುಗಿ ಚಿಕ್ಕತೊಟ್ಲುಕೆರೆಯಲ್ಲಿನಿರ್ವಿಕಲ್ಪ ಸಮಾದಿ ಪಡೆಯುತ್ತಾರೆ.ಗುರುಗಳ ಆಶೀರ್ವಾದ ಬಲದೊಂದಿಗೆ ಶ್ರೀ ಮಠದ ಅಧಿಕಾರ ವಹಿಸಿಕೊಂಡ ಶ್ರೀಉದ್ದಾನ ಶಿವಯೋಗಿಗಳು ದೊಡ್ಡ ಮಠದ ಗುರುತರ ಜವಾಬ್ದಾರಿಯನ್ನು ಸಮರ್ಥವಾಗಿಮುನ್ನಡೆಸಿದರು. ಕಾಯಕಯೋಗಿಯಾಗಿ ದುಡಿಯ ಹೊರಟಿದ್ದ ಶ್ರೀಗಳು ಬಾವಿ ತೆಗೆದರು,ಕಲ್ಯಾಣಿ ಕಟ್ಟಿಸಿದರು. ದಾಸೋಹ ಗೃಹಗಳನ್ನು ಕಟ್ಟಿಸಿದರು. ಮಠದ ಕಾರ್ಯಕ್ರಮಗಳನ್ನು 7ವಿಸ್ತಾರಗೊಳಿಸಿದರು. ಶಿಕ್ಷಣ ಸಂಸ್ಥೆಗಳು ಹಾಗೂ ವಿದ್ಯಾರ್ಥಿನಿಲಯಗಳನ್ನು ತೆರೆದರು. ಈರೀತಿಯಾಗಿ ಶ್ರೀ ಮಠದ ಹೆಸರನ್ನು ನಾಡಿನುದ್ದಗಲಕ್ಕೂ ಪಸರಿಸಿದರು. ಶ್ರೀ ಅಟವಿಸ್ವಾಮಿಗಳು ಮಾಡಬೇಕು ಎಂದುಕೊಂಡಿದ್ದ ಎಲ್ಲಾ ಸಂಕಲ್ಪಗಳನ್ನೂ ಕಾರ್ಯರೂಪಕ್ಕೆ ತಂದುಅದ್ಭುತ ಕ್ರಿಯೆ ಮಾಡಿ, ಸಮಷ್ಠಿ ಸಮಾಜದ ಒಳಿತಿಗಾಗಿ ಸದಾ ಶ್ರಮಿಸಿದ ಶ್ರೀ ಉದ್ದಾನಶಿವಯೋಗಿಗಳು 1930ರಲ್ಲಿ ಶ್ರೀ ಶಿವಕುಮಾರ ಸ್ವಾಮಿಗಳಿಗೆ ಅಧಿಕಾರ ನೀಡಿ 1941ರಲ್ಲಿಲಿಂಗೈಕ್ಯರಾದರು.1907ರ ಏಪ್ರಿಲ್ 01 ರಂದು ಮಾಗಡಿ ತಾಲ್ಲೂಕಿನ ವೀರಾಪುರ ಗ್ರಾಮದ ಹೊನ್ನಪ್ಪಹಾಗೂ ಗಂಗಮ್ಮ ದಂಪತಿಯ ಮಗನಾಗಿ ಜನಿಸಿದ ಶಿವಣ್ಣನವರು ಬಾಲ್ಯದಿಂದಲೂಗುರುಹಿರಿಯರಿಗೆ ಗೌರವ ನೀಡುತ್ತಾ ಧಾರ್ಮಿಕ ಪ್ರಜ್ಞೆಯನ್ನು ಮೈಗೂಡಿಸಿಕೊಂಡುಬೆಳೆದರು. ಚಿಕ್ಕ ವಯಸ್ಸಿನಲ್ಲಿಯೇ ತಾಯಿಯನ್ನು ಕಳೆದುಕೊಂಡು ಸಹೋದರಿಯಮನೆಯಲ್ಲಿ ಬೆಳೆದ ಶಿವಣ್ಣನವರು ಪ್ರೌಢಶಾಲಾ ಶಿಕ್ಷಣಕ್ಕಾಗಿ ತುಮಕೂರಿಗೆ ಬಂದುಸಿದ್ದಗಂಗಾ ಮಠದ ಆಶ್ರಯ ಪಡೆದರು. ಗುರು ಶ್ರೀ ಉದ್ದಾನ ಶಿವಯೋಗಿಗಳ ಕೃಪಾದೃಷ್ಟಿಗೆಬೀಳುವ ಶಿವಣ್ಣನವರು ಗುರುಗಳ ಸೇವೆಯಲ್ಲಿ ತಲ್ಲೀನರಾಗಿರುತ್ತಿದ್ದರು. ಅಲ್ಲಿಂದ ಮುಂದೆಗುರುಗಳ ಅಪ್ಪಣೆಯಂತೆ ಬೆಂಗಳೂರಿನ ಸೆಂಟ್ರಲ್ ಕಾಲೇಜಿನಲ್ಲಿ ಪದವಿ ಶಿಕ್ಷಣ ಪಡೆದಶಿವಣ್ಣನವರು ಶ್ರೀ ಉದ್ದಾನ ಶಿವಯೋಗಿಗಳ ಅಪೇಕ್ಷೆಯಂತೆ. 1930ರಲ್ಲಿ ಶ್ರೀ ಶಿವಕುಮಾರಮಹಾಸ್ವಾಮಿಗಳೆಂಬ ಅಭಿದಾನ ಪಡೆದು ಸಿದ್ದಗಂಗಾ ಮಠದ ಪೀಠಾಧ್ಯಕ್ಷರಾದರು.ಕನ್ನಡ, ಇಂಗ್ಲಿಷ್ ಹಾಗೂ ಸಂಸ್ಕøತ ಭಾಷಾ ಜ್ಞಾನಿಗಳಾಗಿದ್ದ ಶ್ರೀಗಳು ಗುರು ಶ್ರೀಉದ್ದಾನ ಶಿವಯೋಗಿಗಳ ಮಾರ್ಗದರ್ಶನದಲ್ಲಿ ಶ್ರೀ ಮಠವನ್ನು ಮುನ್ನಡೆಸುತ್ತಾಪರಿಪಕ್ವಗೊಂಡರು. 1941ರಲ್ಲಿ ಗುರುಗಳ ಐಕ್ಯಾನಂತರ ಶ್ರೀಗಳು ಮಠದ ಬಿಡುವಿಲ್ಲದಕಾರ್ಯದಲ್ಲಿ ಮಗ್ನರಾಗಿ ಹೋದರು. ಶ್ರೀ ಮಠವನ್ನು ಸದಾ ಚಟುವಟಿಕೆಯಕೇಂದ್ರವನ್ನಾಗಿಸಿದ ಶ್ರೀಗಳು ಅನೇಕ ಶಾಲಾ ಕಾಲೇಜು, ವಿದ್ಯಾರ್ಥಿನಿಲಯಗಳನ್ನು ತೆರೆದುತ್ರಿವಿದ ದಾಸೋಹ ಮೂರ್ತಿಗಳಾದರು. ಶ್ರೀ ಶಿವಕುಮಾರ ಸ್ವಾಮಿಗಳು ಸಿದ್ದಗಂಗೆಯಲ್ಲಿಕೈಗೊಂಡ ಕಾರ್ಯಗಳು ನಾಡಿನಲೆಲ್ಲಾ ಪ್ರಚುರಗೊಂಡು ಈ ಕಾರ್ಯಕ್ಷೇತ್ರವನ್ನು ದರ್ಶಿಸಲುಜನರು ಜಾತ್ರೆಗೆ ಬರುವಂತೆ ಬರತೊಡಗಿದರು. ಬಂದ ಭಕ್ತರಿಗೆಲ್ಲಾ ದಾಸೋಹ ಕಾರ್ಯನಿರಂತರವಾಗಿ ನಡೆಯತೊಡಗಿತು. ಒಮ್ಮೆ ನಾಡಿನಲೆಲ್ಲಾ ಅನಾವೃಷ್ಟಿ ಸಂಭವಿಸಿ ಜನರು ಅನ್ನನೀರಿಗಾಗಿ ಹಾಹಾಕಾರ ಪಡತೊಡಗಿದರು. ಸಿದ್ದಗಂಗೆಯಲ್ಲಿ ನಿತ್ಯವೂ ಅನ್ನದಾಸೋಹಕಾರ್ಯ ನಿರಂತರವಾಗಿ ನಡೆಯುತ್ತಿತ್ತು. ಅಸಂಖ್ಯ ಜನ ಮಠದ ಕಡೆ ಹರಿದುಬರತೊಡಗಿದರು. ಆದರೆ ಶ್ರೀಗಳು ಯಾವುದಕ್ಕೂ ಎದೆಗುಂದದೇ ಸಹಸ್ರ-ಸಹಸ್ರ ಹಸಿದಹೊಟ್ಟೆಗಳಿಗೆ ಅನ್ನ ನೀಡಿ ಸಂತೃಪ್ತಗೊಳಿಸಿದರು.ಈ ರೀತಿಯಾಗಿ ತ್ರಿವಿದ ದಾಸೋಹ ಮೂರ್ತಿಗಳಾಗಿ ನಾಡಿನುದ್ದಗಲಕ್ಕೂಪ್ರಸಿದ್ದಿಗೊಂಡ ಶ್ರೀಗಳು ಶ್ರೀ ಮಠವನ್ನು ಸರ್ವಾಂಗೀಣವಾಗಿ ಅಭಿವೃದ್ಧಿಗೊಳಿಸಿದ್ದಾರೆ. 8ಲಕ್ಷೋಪಲಕ್ಷ ಬಡ ವಿದ್ಯಾರ್ಥಿಗಳಿಗೆ ಅನ್ನ ನೀರು ಕೊಟ್ಟು ಅವರ ಕತ್ತಲೆಯ ಬಾಳಿನಲ್ಲಿಬೆಳಕಿನ ಜ್ಯೋತಿಯನ್ನು ಬೆಳಗಿಸಿದ್ದಾರೆ. ತಮ್ಮ ಗುರುಗಳಾದ ಶ್ರೀ ಉದ್ದಾನ ಶಿವಯೋಗಿಗಳುಪ್ರಾರಂಭಿಸಿದ್ದ ಪಾಠಶಾಲೆಗಳನ್ನು ಆಲದ ಮರದಂತೆ ಬೆಳೆಸಿದ್ದಾರೆ. ಇಂದು ನಿತ್ಯವು ಜಾತಿಭೇದವಿಲ್ಲದೇ ಶ್ರೀ ಮಠದ ಶಿಕ್ಷಣ ಸಂಸ್ಥೆಗಳಲ್ಲಿ 10,000ಕ್ಕೂ ಅಧಿಕ ವಿದ್ಯಾರ್ಥಿಗಳುಅಭ್ಯಸಿಸುತ್ತಿದ್ದಾರೆ ಹಾಗೂ ಇಷ್ಟೂ ಮಕ್ಕಳಿಗೂ ಹಾಗೂ ಅಷ್ಟೇ ಸಂಖ್ಯೆಯಲ್ಲಿ ಬರುವಭಕ್ತರಿಗೂ ನಿತ್ಯದಾಸೋಹ ವ್ಯವಸ್ಥೆ ಇದೆ. “ಶ್ರೀ ಸಿದ್ದಲಿಂಗ ಪ್ರಕಾಶನ ಸಂಸ್ಥೆ”ಯ ಮುಖಾಂತರಅನೇಕ ಮಹತ್ವದ ಕೃತಿಗಳನ್ನು ಪ್ರಕಟಿಸಿದ್ದಾರೆ ಹಾಗೂ ಮಠದ ವತಿಯಿಂದ “ಸಿದ್ದಗಂಗಾ”ಎಂಬ ಮಾಸಿಕ ಪತ್ರಿಕೆಯು ನಿರಂತರವಾಗಿ ಪ್ರಕಟಗೊಳ್ಳುತ್ತಿದೆ.ಶ್ರೀ ಮಠದ ವತಿಯಿಂದ ಶ್ರೀ ಸಿದ್ದಲಿಂಗೇಶ್ವರ ನಾಟಕ ಮಂಡಳಿಯನ್ನು ಸ್ಥಾಪಿಸಿ600ಕ್ಕೂ ಹೆಚ್ಚು ನಾಟಕಗಳನ್ನು ಗ್ರಾಮಾಂತರ ಪ್ರದೇಶಗಳಲ್ಲಿ ಪ್ರದರ್ಶಿಸಲಾಗಿದೆ ಹಾಗೂ ಪ್ರತಿವರ್ಷ ಗ್ರಾಮಾಂತರ ಬಸವ ಜಯಂತಿಯನ್ನು ಆಚರಿಸಿಕೊಂಡು ಬರಲಾಗುತ್ತಿದೆ. ಈರೀತಿಯಾಗಿ ಧಾರ್ಮಿಕ, ಸಾಮಾಜಿಕ, ಶೈಕ್ಷಣಿಕ ಸಾಂಸ್ಕøತಿಕವಾಗಿ ಶ್ರೀ ಮಠವನ್ನುಪ್ರಸಿದ್ದಿಗೊಳಿಸಿರುವ ಶ್ರೀಗಳು 1938ರಲ್ಲಿ ತಮ್ಮ ಉತ್ತರಾಧಿಕಾರಿಯನ್ನಾಗಿ ಶ್ರೀ ಸಿದ್ದಲಿಂಗಸ್ವಾಮಿಗಳನ್ನು ನೇಮಕಗೊಳಿಸಿದ್ದು ಕಿರಿಯ ಶ್ರೀಗಳು ಹಿರಿಯ ಗುರುಗಳಮಾರ್ಗದರ್ಶನದಂತೆ ಮಠದ ಆಡಳಿತವನ್ನು ನೋಡಿಕೊಂಡು ಧಾರ್ಮಿಕ ಕಾರ್ಯಗಳನ್ನುನಡೆಸಿಕೊಂಡು ಬರುತ್ತಿದ್ದಾರೆ.ಶ್ರೀ ಶಿವಕುಮಾರ ಮಹಾಸ್ವಾಮಿಗಳ ಜಾತ್ಯಾತೀತ, ಧರ್ಮಾತೀತ ಶಿಕ್ಷಣ ಸೇವೆ,ಸಾಮಾಜಿಕ ಸೇವೆಯನ್ನು ಪರಿಗಣಿಸಿ ಕರ್ನಾಟಕ ವಿಶ್ವವಿದ್ಯಾನಿಲಯವು ಶ್ರೀಗಳಿಗೆ 1965ರಲ್ಲಿಗೌರವ ಡಾಕ್ಟರೇಟ್ ಪದವಿ ನೀಡಿ ಗೌರವಿಸಿದೆ. ಪೂಜ್ಯ ಶ್ರೀಗಳ 100ನೇ ಹುಟ್ಟುಹಬ್ಬ ಹಾಗೂಕರ್ನಾಟಕ ಸುವರ್ಣ ಮಹೋತ್ಸವ ಸಮಯದಲ್ಲಿ ಕರ್ನಾಟಕ ಘನ ಸರ್ಕಾರವು ರಾಜ್ಯದಮಹೋನ್ನತ ಪ್ರಶಸ್ತಿಯಾದ “ಕರ್ನಾಟಕ ರತ್ನ” ಪ್ರಶಸ್ತಿಯನ್ನು ಶ್ರೀಗಳಿಗೆ ನೀಡಿ ಗೌರವಿಸಿದೆಹಾಗೂ ಭಾರತ ಸರ್ಕಾರವು 2015ರಲ್ಲಿ ಶ್ರೀಗಳ ಸೇವೆಯನ್ನು ಪರಿಗಣಿಸಿ “ಪದ್ಮಭೂಷಣ”ಪ್ರಶಸ್ತಿಯನ್ನು ನೀಡಿ ಗೌರವಿಸಿದೆ.

ಶ್ರೀ ಮಠದ ದೂರವಾಣಿ ಸಂಖ್ಯೆಗಳು
ಮಠದ ಕಾರ್ಯಾಲಯ : 0816-2282211/2285113 (ಫ್ಯಾಕ್ಸ್) 2282211/2285122/2285133
ವಿದ್ಯಾಸಂಸ್ಥೆ : 0816-2282411/2282511 (ಫ್ಯಾಕ್ಸ್)
ಯಾತ್ರಿ ನಿವಾಸ : 0816-2282277

Swamiji

Swamiji Name :
ಪರಮ ಪೂಜ್ಯ ಡಾ. ಶ್ರೀ ಶ್ರೀ ಶಿವಕುಮಾರ ಮಹಾಸ್ವಾಮಿಗಳು
Date of Birth :
01-04-1907
Place :
ವೀರಾಪುರ, ಮಾಗಡಿ ತಾ||
Photo :
Swamiji Name :
ಪೂಜ್ಯ ಶ್ರೀ ಸಿದ್ಧಲಿಂಗ ಸ್ವಾಮಿಜಿ
Photo :

Programs

*ಮಾರ್ಗಶಿರ ಪುಷ್ಯ ಮಾಸದಲ್ಲಿ ಸಿದ್ದಗಂಗಾ ಹಳೆಯ ವಿದ್ಯಾರ್ಥಿಗಳ ಹಾಗೂ ಹಿತೈಷಿಗಳ ಸಂಘದ ವಾರ್ಷಿಕ ಸಮಾವೇಶ

* ಮಕರ ಸಂಕ್ರಾಂತಿಗೆ ಶ್ರೀ ಸಿದ್ದರಾಮೇಶ್ವರ ಜಯಂತಿ, ಲಿಂ. ಶ್ರೀ ಅಟವೀ ಶ್ರೀಗಳವರ ಲಿಂ. ಶ್ರೀ ಉದ್ದಾನ

* ಶ್ರೀಗಳವರ ಆರಾಧನೆ ಮತ್ತು ವಾರ್ಷಿಕ ಗ್ರಾಮಾಂತರ ಬಸವ ಜಯಂತಿ ಸಮಾರೋಪ, ಶಿವಗಂಗೆ
ಗಂಗಾಧರೇಶ್ವರ ಧಾರೆ.

* ಮಾಘ ಮಾಸದಲ್ಲಿ * ಶ್ರೀ ಸಿದ್ದಗಂಗಾ ಕೃಷಿ ಮತ್ತು ಕೈಗಾರಿಕಾ ವಸ್ತು ಪ್ರದರ್ಶನ ಆರಂಭ

* ಶ್ರೀ ಸಿದ್ದಗಂಗಾ ಜಾತ್ರೆ ಪ್ರಾರಂಭ

* ಮಹಾ ಶಿವರಾತ್ರಿಗೆ ವಿಶೇಷ ಪೂಜೆಗಳು

* ಸಿದ್ದಗಂಗೆಯಲ್ಲಿ ಶ್ರೀ ಸಿದ್ದಲಿಂಗೇಶ್ವರ ಸ್ವಾಮಿ ರಥೋತ್ಸವ

* ಮಾಘ, ಪಾಲ್ಗುಣ ಮಾಸದಲ್ಲಿ ಸಿದ್ದಗಂಗೆಯಲ್ಲಿ ಬೆಳ್ಳಿ ಪಲ್ಲಕ್ಕಿ ಉತ್ಸವ, ತೆಪ್ಪೋತ್ಸವ,
ಪಂಚಬ್ರಹ್ಮೋತ್ಸವ

* ಚೈತ್ರ - ವೈಶಾಖ ಮಾಸದಲ್ಲಿ ಏಪ್ರಿಲ್ 1 ರಂದು ಶ್ರೀ ಶ್ರೀ ಶಿವಕುಮಾರ ಮಹಾಸ್ವಾಮಿಗಳ ಜನ್ಮದಿನ

Institutions

18 ಸಂಸ್ಕøತ ಪಾಠಶಾಲೆಗಳು
12 ಪ್ರಾಥಮಿಕ ಶಾಲೆಗಳು
45 ಪ್ರೌಢಶಾಲೆಗಳು
9 ಪದವಿ ಪೂರ್ವ ಕಾಲೇಜುಗಳು
3 ಪ್ರಥಮ ದರ್ಜೆ ಕಾಲೇಜುಗಳು
ಫಾರ್ಮಸಿ ಕಾಲೇಜು
ತಾಂತ್ರಿಕ ಕಾಲೇಜು
ಶಿಕ್ಷಕರ ತರಬೇತಿ ಕೇಂದ್ರಗಳು
ಕನ್ನಡ ಪಂಡಿತ ಕಾಲೇಜು
ಅಂದ ಮಕ್ಕಳ ಪಾಠಶಾಲೆ
ಪಾಲಿಟೆಕ್ನಿಕ್ ಕಾಲೇಜು
ಒಟ್ಟು 125ಕ್ಕೂ ಹೆಚ್ಚು ವಿದ್ಯಾಸಂಸ್ಥೆಗಳು

ಉಚಿತ ವಿದ್ಯಾರ್ಥಿ ನಿಲಯ ಹಾಗೂ ಪ್ರಸಾದ ನಿಲಯ
10000ಕ್ಕೂ ಅಧಿಕ ವಿದ್ಯಾರ್ಥಿಗಳಿಗೆ ನಿತ್ಯದಾಸೋಹ

Photos

Full Address Kannada

ಸುಕ್ಷೇತ್ರ ಶ್ರೀ ಸಿದ್ದಗಂಗಾ ಮಠ
ತುಮಕೂರು-572 104

Map

Near by Places

ಸಿದ್ದಗಂಗಾ ಕ್ರಾಸ್ - 1 ಕಿ.ಮೀ.
ಹೊಸ ಬಸ್ನಿಲ್ದಾಣ - 6 ಕಿ.ಮೀ.
ಬೆಂಗಳೂರು - 70 ಕಿ.ಮೀ.

Statistic

37 Views
0 Rating
0 Favorite
0 Share
error: Content is protected !!