ಚಿನ್ಮಯ ಜ್ಞಾನಿ, ಜ್ಞಾನನಿಧಿ, ಮಹಾಶರಣ ಪರಮ ಪೂಜ್ಯ ಶ್ರೀ ಚನ್ನಬಸವಣ್ಣನವರು
ಹನ್ನೆರಡನೇ ಶತಮಾನದಲ್ಲಿ ಕಲ್ಯಾಣದಲ್ಲಿ ಶರಣರ ಕ್ರಾಂತಿಯಾದಾಗ ಬಸವಾದಿಶಿವಶರಣರು ತಂಡಗಳಾಗಿ ಕರ್ನಾಟಕದ ದಕ್ಷಿಣ ಭಾಗದ ಕಡೆಗೆ ಸಂಚಾರ ಹೊರಟರು.ಬಸವಣ್ಣನವರು ಕೂಡಲ ಸಂಗಮಕ್ಕೆ ತೆರಳಿ ಅಲ್ಲಿಯೇ ಐಕ್ಯಗೊಂಡರು. ನೂರಾರುಶಿವಶರಣರು ಜ್ಞಾನನಿಧಿ ಚನ್ನಬಸವಣ್ಣ ಹಾಗೂ ಅಕ್ಕ ನಾಗಲಾಂಬಿಕೆಯರ ನೇತೃತ್ವದಲ್ಲಿಉತ್ತರ ಕನ್ನಡ ಜಿಲ್ಲೆಯೆಡೆಗೆ ಸಂಚಾರ ಬೆಳೆಸಿದ್ದು ಚನ್ನಬಸವಣ್ಣನವರ ಗುಂಪು ಉಳವಿಗೆಬಂದು ನೆಲೆಗೊಂಡಿತು. ಶರಣರು ರಚಿಸಿದ ಸಾಹಿತ್ಯದ ಗಂಟುಗಳು ಈ ಶರಣರ ಹೆಗಲಮೇಲಿದ್ದವು ಮುಂದಿನ ಪೀಳಿಗೆಗೆ ವಚನ ಸಾಹಿತ್ಯವನ್ನು ಸುರಕ್ಷಿತವಾಗಿ ತಲುಪಿಸುವಉದ್ದೇಶದಿಂದ ಹೊರಟಿದ್ದ ಇವರು ಉಳವಿಯಲ್ಲಿ ನೆಲೆನಿಂತು ವಚನ ಸಾಹಿತ್ಯವನ್ನುಸಂರಕ್ಷಿಸುವ ಕೆಲಸ ಮಾಡಿದರು. ಇಲ್ಲಿಯೇ ಚನ್ನಬಸವಣ್ಣನವರ ಲಿಂಗೈಕ್ಯರಾದರು. ಇವರಸಮಾಧಿಯನ್ನು ಇಲ್ಲಿಯೇ ನಿರ್ಮಿಸಲಾಗಿದ್ದು ಇದಕ್ಕೆ ಸನಿಹದಲ್ಲಿಯೇ ಚನ್ನಬಸವಣ್ಣನವರತಾಯಿ ಮತ್ತು ಬಸವಣ್ಣನವರ ಸೋದರಿ ಅಕ್ಕ ನಾಗಲಾಂಬಿಕೆ ಗುಹೆಯೂ ಇದೆ.ಶರಣರು ಬಂದು ಉಳಿದುಕೊಂಡದ್ದರಿಂದ ಈ ಸ್ಥಳವೂ ‘ಉಳವಿ’ ಎಂದಾಯಿತುಎಂಬುದು ಇಲ್ಲಿಯ ಸ್ಥಳ ಪುರಾಣ. ಇಲ್ಲಿ ಪ್ರಖ್ಯಾತ ಶ್ರೀ ಚನ್ನಬಸವೇಶ್ವರರ ದೇವಾಲಯವನ್ನುನಿರ್ಮಿಸಲಾಗಿದ್ದು ಅಸಂಖ್ಯಾತ ಭಕ್ತರ ಆರಾಧ್ಯ ದೈವವಾಗಿ ಕಂಗೊಳಿಸುತ್ತಿದೆ. ಇಲ್ಲಿ ನಮಗೆಕಾಣಸಿಗುವ ಹತ್ತು ಹಲವು ಸ್ಥಳಗಳು, ಸ್ಮಾರಕಗಳು 12ನೇ ಶತಮಾನದ ಶರಣ ಕ್ರಾಂತಿಯಇತಿಹಾಸವನ್ನು ಸಾರಿ ಹೇಳುತ್ತದೆ. ಅವುಗಳಲ್ಲಿ ಕೆಲವು ಸ್ಮಾರಕಗಳು ಉಳಿದು ಕೊಂಡಿದ್ದುಬಹುತೇಕ ಸ್ಮಾರಕಗಳು ಅಸ್ಥಿತ್ವ ಕಳೆದುಕೊಂಡಿವೆ.
Swamiji
Swamiji Name :
ಚಿನ್ಮಯ ಜ್ಞಾನಿ, ಜ್ಞಾನನಿಧಿ, ಮಹಾಶರಣ ಪರಮ ಪೂಜ್ಯ ಶ್ರೀ ಚನ್ನಬಸವಣ್ಣನವರು
Programs
ಭರತ ಹುಣ್ಣಿಮೆಗೆ ಮಹಾರಥೋತ್ಸವ ಹಾಗೂ ಧಾರ್ಮಿಕ ಸಾಂಸ್ಕøತಿಕ ಕಾರ್ಯಕ್ರಮಗಳು ಸಂಕ್ರಾಂತಿ ಹಬ್ಬಕ್ಕೆ ಸಹಸ್ರಾರು ಭಕ್ತರಿಂದ ಮಹಾರುದ್ರಾಭಿಷೇಕ
Full Address Kannada
ಶ್ರೀ ಚನ್ನಬಸವೇಶ್ವರ ಟ್ರಸ್ಟ್ ಕಮಿಟಿ (ರಿ.)
ಉಳವಿ - 581187 ಜೋಯಿಡ (ಸೂಪ)
ತಾ||, ಕಾರವಾರ ಜಿಲ್ಲೆ