Keladi Rajaguru Mahamahattina Bhuvanagiri Samsthana Matha
Claimed
ಕೆಳದಿ ರಾಜಗುರು ಮಹಾಮಹತ್ತಿನ ಭುವನಗಿರಿ ಸಂಸ್ಥಾನ ಮಠ
Average Reviews
Description
ಕೆಳದಿ ರಾಜಗುರು ಮಹಾಮಹತ್ತಿನ ಭುವನಗಿರಿ ಸಂಸ್ಥಾನ ಮಠ
ಕರ್ತೃ – ರಾಜಗುರು ಶ್ರೀ ಮರುಳಸಿದ್ದೇಶ್ವರ ಮಹಾಸ್ವಾಮಿಗಳು
600 ವರ್ಷಗಳ ಹಿಂದೆ ಕೆಳದಿ ನಾಯಕರ ಕಾಲದಲ್ಲಿ ಪ್ರಾರಂಭವಾಗಿರಬಹುದಾದಶ್ರೀಮಠವು ಸಹ್ಯಾದ್ರಿ ತಪ್ಪಲಿನ ಕವˉÉೀದುರ್ಗದಿಂದ ಸುಮಾರು ದೂರದಲ್ಲಿ ಧಾರ್ಮಿಕ ಕೇಂದ್ರವಾಗಿಕಂಗೊಳಿಸುತ್ತಿದೆ. ಶ್ರೀಮಠವು ಕೆಳದಿ ಸಂಸ್ಥಾನದ ಇತಿಹಾಸದಲ್ಲಿ ತನ್ನದೇ ಆದ ಮಹತ್ವವನ್ನು ಹೊಂದಿಹಿರಿಯ ವೆಂಕಟಪ್ಪನಾಯಕನ (ಕ್ರಿ.ಶ. 1583-1630) ಕಾಲದಲ್ಲಿ ತನ್ನ ಧಾರ್ಮಿಕತೆಯ ಪ್ರಭಾವದಿಂದಕೆಳದಿ ಸಂಸ್ಥಾನದ ಪ್ರಭಾವಿ ಮಠವಾಗಿ ರೂಪುಗೊಂಡಿತ್ತು ಎಂದು ಹೇಳˉÁಗಿದೆ.ಕೆಳದಿ ಸಂಸ್ಥಾನದ ಕಣ್ಮಣಿಯಾದ ರಾಣಿ ಚೆನ್ನಮ್ಮಾಜಿಯು ತನ್ನ ಪತಿ ಸೋಮಶೇಖರನಾಯಕನ ಹತ್ಯೆಯ ನಂತರ ಕೆಳದಿ ಸಂಸ್ಥಾನದ ಅಧಿಕಾರವನ್ನು ವಹಿಸಿಕೊಳ್ಳಬೇಕೆನ್ನುವುದುಸಂಸ್ಥಾನದ ಪ್ರಧಾನಮಂತ್ರಿಗಳ ಹಾಗೂ ರಾಜಗುರುಗಳ ಆಶಯವಾಗಿತ್ತು. ಆದರೆ ಕೆಲವು ಪಟ್ಟಭದ್ರಹಿತಾಸಕ್ತಿಗಳ ಕಾರಣದಿಂದ ರಾಜಮನೆತನದಲ್ಲಿ ಒಡಕುಂಟಾಗಿ ಒಬ್ಬರಿಗೊಬ್ಬರು ಯುದ್ಧಕ್ಕೆ ನಿಲ್ಲುವಪರಿಸ್ಥಿತಿ ನಿರ್ಮಾಣವಾಯಿತು. ಆ ಸಮಯದಲ್ಲಿ ರಾಣಿ ಚೆನ್ನಮ್ಮಾಜಿಯು ತಂತ್ರ ಬಳಸಿ ಬಿದನೂರಿನಕೋಟೆಯಿಂದ ಕವˉÉೀದುರ್ಗದ ಕೋಟೆಗೆ ಬಂದು ನೆˉÉಸುತ್ತಾಳೆ. ರಾಣಿ ಚೆನ್ನಮ್ಮಾಜಿಯುಕವˉÉೀದುರ್ಗದ ಕೋಟೆಯಲ್ಲಿ ಇರುವತನಕವೂ ರಾಣಿಯ ಪ್ರತಿದಿನದ ಧಾರ್ಮಿಕ ಶ್ರದ್ಧೆಗಳಿಗೆ ಹಾಗೂರಾಣಿಯ ಯೋಗಕ್ಷೇಮವನ್ನು ಶ್ರೀಮಠವೇ ನೋಡಿಕೊಂಡಿದ್ದು ಇತಿಹಾಸದಲ್ಲಿ ದಾಖˉÁಗಿದೆ.ಇಂತಹ ಇತಿಹಾಸವಿರುವ ಶ್ರೀಮಠದ ಪರಂಪರೆಯ ಬಗ್ಗೆ ನಿಖರವಾದ ಮಾಹಿತಿಗಳುಲಭ್ಯವಿಲ್ಲ. ಶ್ರೀಮಠದ ಗುರುಗಳು ದೇಶಸಂಚಾರಕ್ಕೆ ಹೋದ ಕಡೆಗೆ ಲಿಂಗೈಕ್ಯರಾಗಿರುತ್ತಾರೆ. ಶ್ರೀಮಠದಆವರಣದಲ್ಲಿರುವ 6 ಗದ್ದುಗೆಗಳ ಪೈಕಿ ಶ್ರೀ ವೃಷಭಲಿಂಗ ಶಿವಾಚಾರ್ಯರ ಗದ್ದುಗೆಯನ್ನು ಮಾತ್ರಗುರುತಿಸಬಹುದು. ಈ ಕಾರಣದಿಂದಾಗಿ ಮಠದ ಗುರುಗಳ ಬಗ್ಗೆ ನಿಖರವಾದ ಮಾಹಿತಿ ಲಭ್ಯವಿಲ್ಲ.ಈಗಿನ ಶ್ರೀಗಳಾದ ಡಾ.ಸಿದ್ದಲಿಂಗ ಶಿವಾಚಾರ್ಯ ಮಹಾಸ್ವಾಮಿಗಳು 1996 ರ ಫೆಬ್ರವರಿ4 ರಂದು ಶ್ರೀ ರಂಭಾಪುರೀ ಹಾಗೂ ಶ್ರೀ ಉಜ್ಜಯಿನಿ ಜಗದ್ಗುರುಗಳ ದಿವ್ಯ ಸಾನಿಧ್ಯದಲ್ಲಿ ಪಟ್ಟಾಧಿಕಾರಸ್ವೀಕರಿಸಿದ್ದಾರೆ. ಶ್ರೀಗಳು ಕುವೆಂಪು ವಿ.ವಿ. ಹಾಗೂ ಕೊಲಂಬೋ ಆರೋಗ್ಯ ವಿ.ವಿ. ಶ್ರೀಲಂಕಾ,ಇವುಗಳಿಂದ ಡಾಕ್ಟರೇಟ್ ಪದವಿಯನ್ನು ಪಡೆದಿದ್ದಾರೆ. ಶ್ರೀ ರಂಭಾಪುರೀ ಮಹಾಪೀಠದಿಂದಆಚಾರ್ಯ ತತ್ವ ಪರಿಪಾಲಕ ಪದವಿ ಹಾಗೂ ಶ್ರೀ ಕಾಶಿ ಮಹಾಪೀಠದಿಂದ ಶಿವಾಚಾರ್ಯಶಿರೋಮಣಿ ಮುಂತಾದ ಸಾಕಷ್ಟು ಪದವಿಗಳನ್ನು ಹಾಗೂ ಗೌರವ ಸನ್ಮಾನಗಳನ್ನು ಸ್ವೀಕರಿಸಿದ್ದಾರೆ.ಇಂತಹ ಮಹನೀಯ ಶ್ರೀಗಳು ಮಠವನ್ನು ಆರ್ಥಿಕವಾಗಿ, ಧಾರ್ಮಿಕವಾಗಿ, ಶೈಕ್ಷಣಿಕವಾಗಿಹಾಗೂ ಸಾಂಸ್ಕøತಿಕವಾಗಿ ಅಭಿವೃದ್ಧಿ ಪಥದತ್ತ ಮುನ್ನಡೆಸಿ ಭಕ್ತರ ಪ್ರೀತ್ಯಾದರಗಳಿಗೆ ಪಾತ್ರರಾಗಿದ್ದಾರೆ.
ವಿಶೇಷತೆ :
“ಕೆಳದಿ ವೀರ ಶಿವಪ್ಪನಾಯಕ ಶ್ರೀ” ಪ್ರಶಸ್ತಿ.
“ಕವˉÉೀ ದುರ್ಗದ ಕೆಳದಿ ಚನ್ನಮ್ಮ” ಪ್ರಶಸ್ತಿ.
(ಶ್ರೀ ಮರುಳಸಿದ್ದೇಶ್ವರ ಸ್ವಾಮಿ ಜಾತ್ರೆಯಲ್ಲಿ ಪ್ರಶಸ್ತಿ ಪ್ರದಾನ)
Swamiji
Swamiji Name :
ರಾಜಗುರು ಡಾ. ಸಿದ್ದಲಿಂಗ ಶಿವಾಚಾರ್ಯ ಮಹಾಸ್ವಾಮಿಗಳು
Date of Birth :
1-6-1959
Place :
ರಡ್ಡೇರ ಹಟ್ಟಿ ಅಥಣಿ ತಾ||
Pattadikara :
4-2-1996
Photo :
Programs
ಪ್ರತಿ ಅಮವಾಸ್ಯೆಗೆ ಗಿಡಮೂಲಿಕೆ ಔಷಧಿ ವಿತರಣೆ. ಪ್ರತಿ ಅಮವಾಸೆ ಮತ್ತು ಹುಣ್ಣಿಮೆಯಂದು ವಿಶೇಷ ಪೂಜೆ ಶಿವರಾತ್ರಿ, ಶ್ರಾವಣ ಮಾಸ, ದಸರಾ ಹಾಗೂ ಕಾರ್ತೀಕ ಮಾಸದಲ್ಲಿ ವಿಶೇಷ ಪೂಜೆ ಪ್ರತಿ 2ವರ್ಷಕೊಮ್ಮೆ ಶ್ರೀ ಮರುಳಸಿದ್ಧೇಶ್ವರ ಸ್ವಾಮಿ ಐತಿಹಾಸಿಕ ಜಾತ್ರೆ
Photos
Full Address Kannada
ಕೆಳದಿ ರಾಜಗುರು ಮಹಾಮಹತ್ತಿನ ಭುವನಗಿರಿ ಸಂಸ್ಥಾನ ಮಠ ಕವˉÉೀದುರ್ಗ - 577 414 ತೀರ್ಥಹಳ್ಳಿ ತಾ|| ಶಿವಮೊಗ್ಗ ಜಿ||