Shree Murughamatha

Shree Murughamatha Claimed

ಶ್ರೀ ಮುರುಘಾಮಠ

Average Reviews

Description

ಶ್ರೀ ಮುರುಘಾ ಮಠ, ಸೊರಬ

ಕರ್ತೃ – ಶ್ರೀ ಜಗದ್ಗುರು ಸಿದ್ದ ವೃಷಭೇಂದ್ರ ಮಹಾಸ್ವಾಮಿಗಳು

ಶಿವಮೊಗ್ಗ ಜಿˉÉ್ಲಯ ಸೊರಬ ಪಟ್ಟಣದ ಹೊರಭಾಗದಲ್ಲಿರುವ ಶ್ರೀ ಮುರುಘಾಮಠವು ಶ್ರೀ ಜಗದ್ಗುರು ಸಿದ್ಧವೃಷಬೇಂದ್ರ ಮಹಾಸ್ವಾಮಿಗಳಿಂದ ಸ್ಥಾಪಿತಗೊಂಡಿರುವವಿರಕ್ತಮಠವಾಗಿದೆ. ಶ್ರೀ ಮುರುಘಾ ಮಠವು ಜಡೆ ಗ್ರಾಮದ ಶ್ರೀ ಸಂಸ್ಥಾನ ಮಠದ ಶಾಖಾಮಠವಾಗಿದ್ದು ಅಲ್ಲಿ ಅಧಿಕಾರ ನಡೆಸಿರುವ ಎˉÁ್ಲ ಗುರುಗಳು ಈ ಮಠವನ್ನು ಕೂಡನಿರ್ವಹಿಸಿಕೊಂಡು ಬಂದಿರುತ್ತಾರೆ.ಹಿಂದಿನ ಶ್ರೀಗಳಾದ ಶ್ರೀ.ಮ.ನಿ.ಪ್ರ. ಕುಮಾರ ಪ್ರಭು ಸ್ವಾಮಿಗಳು ಜಡೆ ಮಠದಜೊತೆಗೆ ಈ ಮಠದ ಅಧಿಕಾರವನ್ನು ವಹಿಸಿಕೊಂಡು ಶ್ರೀಮಠವು ಧಾರ್ಮಿಕ, ಸಾಮಾಜಿಕ,ಶೈಕ್ಷಣಿಕವಾಗಿ ಅಭಿವೃದ್ಧಿಯಾಗುವಂತೆ ಮಾಡಿದ್ದಾರೆ. ಶ್ರೀಗಳು ಸಂಸ್ಕøತದಲ್ಲಿ ವಿದ್ವತ್ಸಂಪಾದಿಸಿಕೊಂಡವರಾಗಿದ್ದು ಶ್ರೀ ಕುಮಾರೇಶ್ವರ ವಿದ್ಯಾವರ್ಧಕ ಸಂಘವೆಂಬ ಶಿಕ್ಷಣ ಸಂಸ್ಥೆಸ್ಥಾಪಿಸಿ ಅದರ ಮೂಲಕ ಬಡ ವಿದ್ಯಾರ್ಥಿಗಳ ವಿದ್ಯಾಭ್ಯಾಸಕ್ಕೆ ಅನುಕೂಲ ಕಲ್ಪಿಸಿದ್ದರು.ಈಗಿನ ಶ್ರೀಗಳಾದ ಶ್ರೀ ಮಹಾಂತ ಸ್ವಾಮಿಗಳು 1999 ರ ಫೆಬ್ರವರಿ 1 ರಂದುಅಧಿಕಾರವನ್ನು ವಹಿಸಿಕೊಂಡು ಹಿರಿಯ ಗುರುಗಳ ಹಾದಿಯಲ್ಲಿಯೇ ಮಠವನ್ನುಮುನ್ನಡೆಸುತ್ತಿದ್ದಾರೆ. ಹಾಗೆಯೇ ಶ್ರೀ ಕುಮಾರಪ್ರಭು ಸ್ಮಾರಕ ಸೇವಾ ಟ್ರಸ್ಟ್ ಮೂಲಕ ಶೈಕ್ಷಣಿಕಸೇವೆಯನ್ನು ನೀಡುತ್ತಿದ್ದಾರೆ. ಶ್ರೀಗಳು ಗ್ರಾಮದಲ್ಲಿ ನಡೆಯುವ ಧಾರ್ಮಿಕ, ಸಾಮಾಜಿಕಕಾರ್ಯಗಳಲ್ಲಿ ಪಾˉÉ್ಗೂಂಡು ಭಕ್ತರೊಂದಿಗೆ ಉತ್ತಮ ಬಾಂಧವ್ಯ ವೃದ್ಧಿಗೆ ಶ್ರಮಿಸಿದ್ದಾರೆ.ಶ್ರೀಗಳು ತಮ್ಮ ಸಾಮಾಜಿಕ ಚಟುವಟಿಕೆಗಳು ಹಾಗೂ ಯೋಗದ ಚಟುವಟಿಕೆಗಳಜೊತೆಯಲ್ಲಿಯೇ ಧಾರ್ಮಿಕ ಆಚರಣೆಗಳನ್ನು ಮುನ್ನಡೆಸುತ್ತಿದ್ದಾರೆ. ಮೂಲ ಜಡೆ ಮಠದಐದು ಜನ ಸ್ವಾಮಿಗಳು ಸೊರಬದ ಮಠದಲ್ಲಿಯೇ ಲಿಂಗೈಕ್ಯರಾಗಿದ್ದು ಅವರ ಸಮಾಧಿಗದ್ದುಗೆಗಳು ನಿತ್ಯ ಪೂಜೆಗೆ ಒಳಪಟ್ಟಿವೆ.ವಿಶೇಷತೆ: ಶ್ರೀ ಮಹಾಂತ ಸ್ವಾಮಿಗಳು ಸೊರಬದಲ್ಲಿ 5 ಎಕರೆ ಭೂಮಿಯಲ್ಲಿಸುಮಾರು 11 ಕೋಟಿ ರೂಪಾಯಿಗಳ ವೆಚ್ಚದ ಯೋಗ ಕೇಂದ್ರವನ್ನು ಸ್ಥಾಪಿಸುತ್ತಿದ್ದಾರೆಹಾಗೆಯೇ ಮುಂದಿನ ಹಂತದಲ್ಲಿ ಶಿವಮೊಗ್ಗದಲ್ಲಿಯೂ ಯೋಗಕೇಂದ್ರವನ್ನು ಸ್ಥಾಪಿಸುವಯೋಜನೆ ಹಾಕಿಕೊಂಡು ಅದಕ್ಕೆ ಬೇಕಾದ ಭೂಮಿಯನ್ನು ಈಗಾಗˉÉೀ ಖರೀದಿಸಿದ್ದಾರೆ.

Swamiji

Swamiji Name :
ಶ್ರೀ ಮ.ನಿ.ಪ್ರ. ಡಾ. ಮಹಾಂತ ಸ್ವಾಮಿಗಳು
Date of Birth :
22-7-1970
Place :
ಗೊರವಿನಕೊಳ್ಳ ಸವದತ್ತಿ ತಾ||
Pattadikara :
1-2-1999
Photo :

Programs

ಪ್ರತಿ ಅಮವಾಸ್ಯೆಗೆ ವಿಶೇಷ ಪೂಜೆ. ಪ್ರತಿ ಹಬ್ಬಗಳ ಆಚರಣೆ. ಕಾರ್ತೀಕ ಮಾಸದಲ್ಲಿ ದೀಪೋತ್ಸವ. ಶ್ರಾವಣ ಮಾಸದಲ್ಲಿ ನಿತ್ಯ ವಿಶೇಷ ಪೂಜೆ.

Photos

Full Address Kannada

ಶ್ರೀ ಮುರುಘಾಮಠ ಸೊರಬ - 577 ಸೊರಬ ತಾ||, ಶಿವಮೊಗ್ಗ ಜಿ||

Map

Near by Places

ಶಿಕಾರಿಪುರ - 36 ಕಿ.ಮೀ. ಬನವಾಸಿ - 20 ಕಿ.ಮೀ. ಶಿವಮೊಗ್ಗ - 95 ಕಿ.ಮೀ. ಸಾಗರ - 30 ಕಿ.ಮೀ.

Statistic

117 Views
0 Rating
0 Favorite
0 Share
error: Content is protected !!