ಸೊರಬ ತಾಲ್ಲೂಕು ಕೇಂದ್ರದಿಂದ ಸುಮಾರು 11 ಕಿ.ಮೀ. ದೂರದಲ್ಲಿರುವಕ್ಯಾಸನೂರು ಗ್ರಾಮದ ಹೊರಭಾಗದಲ್ಲಿ ಸುಮಾರು 400 ವರ್ಷಗಳ ಇತಿಹಾಸಹೊಂದಿರುವ ಶ್ರೀ ಶೈಲ ಪೀಠದ ಶಾಖಾಮಠವಾದ ಶ್ರೀ ಗುರುಬಸವ ದೇವರ ಸಂಸ್ಥಾನಮಠವು ಅಸ್ತಿತ್ವದಲ್ಲಿದೆ.ಶ್ರೀ ಮಠವು 400 ವರ್ಷಗಳ ಹಿಂದೆ ಅಸ್ತಿತ್ವದಲ್ಲಿದ್ದ ಕೆಳದಿಯ ಅರಸರುಗಳಗುರುಮಠವೆಂದು, ಹಾಗೆಯೇ ಕೆಳದಿಯ ಅರಸರು ಕಟ್ಟಿಸಿದ ಪಂಚಮಠಗಳಲ್ಲಿ ಶ್ರೀಮಠವೂಒಂದು ಎಂದು ಹೇಳˉÁಗಿದೆ. ಶ್ರೀಮಠದಲ್ಲಿ ಪರಮ ತಪಸ್ವಿಗಳಾದ ಹಾಗೂ ಷಟ್ಕಾವ್ಯಗಳನ್ನುರಚಿಸಿದ ಮಹಾಮಹಿಮರಾದ ಶ್ರೀ ಷ.ಬ್ರ.ಗುರುಬಸವ ದೇವರ ನಿರ್ವಿಕಲ್ಪ ಯೋಗ ಸಮಾಧಿಇದ್ದು ಶ್ರೀ ಕ್ಷೇತ್ರಕ್ಕೆ ಬಂದ ಭಕ್ತರ ಕಷ್ಟಕಾರ್ಪಣ್ಯUಳನ್ನು ಬಗೆಹರಿಸುವ ಪುಣ್ಯಧಾಮವಾಗಿದೆಎಂದು ಇಲ್ಲಿ ಗುಣಕಂಡ ಭಕ್ತರು ಅಭಿಪ್ರಾಯ ಪಡುತ್ತಾರೆ. ಶ್ರೀ ಗುರುಬಸವ ದೇವರ ನಂತರ ಅನೇಕ ಗುರುಗಳು ಮಠದಲ್ಲಿ ಅಧಿಕಾರವನ್ನುನಡೆಸಿದ್ದಾರೆ ಎಂದು ಹೇಳˉÁದರೂ, ಶ್ರೀ ಮಠದ ಪರಂಪರೆಯ ಬಗ್ಗೆ ದಾಖˉÉಗಳಿಲ್ಲದಿರುವುದು ಬೇಸರದ ಸಂಗತಿ. ಇಂತಹ ಶ್ರೀಮಂತ ಪರಂಪರೆಯ ಮಠವು ಗುರುಗಳಿಲ್ಲದೆ ಖಾಲಿಉಳಿದುದನ್ನು ಕಂಡ ಶ್ರೀಶೈಲ ಜಗದ್ಗುರು ಮಹಾಸನ್ನಿಧಿಯು ದಿನಾಂಕ 06-06-2004 ರಲ್ಲಿಶ್ರೀಮಠಕ್ಕೆ ಶ್ರೀ ಷ.ಬ್ರ. ಗುರುಬಸವ ಪಂಡಿತಾರಾಧ್ಯ ಶಿವಾಚಾರ್ಯರನ್ನು ಪಟ್ಟಾಧಿಕಾರಿಗಳನ್ನಾಗಿ ಮಾಡಿ ಮಠದಲ್ಲಿ ಅಭಿವೃದ್ಧಿ ಕಾರ್ಯಗಳು ಪ್ರಾರಂಭಗೊಳ್ಳಲು ಕಾರಣವಾಗಿದೆ.ಶ್ರೀಗಳು ಅಧಿಕಾರಕ್ಕೆ ಬಂದಾಗಿನಿಂದ ಮಠದಲ್ಲಿ ಧಾರ್ಮಿಕ ಕಾರ್ಯಗಳನ್ನುನಿರಂತರವಾಗಿ ಮಾಡುತ್ತಿರುವುದಲ್ಲದೆ. ಮಠದಲ್ಲಿ ಅಭಿವೃದ್ಧಿ ಕೆಲಸಗಳತ್ತ ಗಮನ ಹರಿಸಿದ್ದಾರೆ. ಹಾಗೆಯೇ ಸಮಾಜದಲ್ಲಿ ಶ್ರೀಮಠವು ತನ್ನದೇ ಆದ ಸ್ಥಾನ ಹೊಂದಲುಶ್ರಮಿಸುತ್ತಿದ್ದಾರೆ.
Swamiji
Swamiji Name :
ಶ್ರೀ ಷ.ಬ್ರ. ಗುರುಬಸವ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮಿಗಳು
Pattadikara :
6-6-2004
Photo :
Programs
ಪ್ರತಿ ಅಮವಾಸ್ಯೆಗೆ ವಿಶೇಷ ಪೂಜೆ. ಶ್ರಾವಣ ಮಾಸದಲ್ಲಿ ನಿತ್ಯ ವಿಶೇಷ ಪೂಜೆ. ನವರಾತ್ರಿಯಲ್ಲಿ ವಿಶೇಷ ಆಚರಣೆ.
Photos
Full Address Kannada
ಶ್ರೀ ಗುರುಬಸವ ದೇವರ ಸಂಸ್ಥಾನ ಮಠ ಕ್ಯಾಸನೂರು (ಬೇಚರಿಪುರ) ನಿಸರಾಣಿ ಪೋಸ್ಟ್ - 577 434