Shree Hirematha

Shree Hirematha Claimed

ಶ್ರೀ ಹಿರೇಮಠ

Average Reviews

Description

ಶ್ರೀ ಹಿರೇಮಠ, ಜಡೆ

ಕರ್ತೃ – ಶ್ರೀ ಮ.ಘ.ಚ. ಬಸವಲಿಂಗ ಪಟ್ಟದ ದೇವರು

ಸೊರಬ ತಾಲ್ಲೂಕು ಕೇಂದ್ರದಿಂದ ಸುಮಾರು 28 ಕಿ.ಮೀ. ದೂರದಲ್ಲಿರುವ ಜಡೆಗ್ರಾಮದಲ್ಲಿ ಶ್ರೀ.ಮ.ಘ.ಚ.ಬಸವಲಿಂಗ ಪಟ್ಟದ ದೇವರಿಂದ ಸ್ಥಾಪಿತಗೊಂಡಿರಬಹುದಾದಪುರಾತನ ಕಾಲದ ಶ್ರೀ ಹಿರೇಮಠವು ಅಸ್ತಿತ್ವದಲ್ಲಿದೆ. ಶ್ರೀಮಠದಲ್ಲಿ ಅನೇಕ ಗುರುಗಳುಅಧಿಕಾರ ವಹಿಸಿಕೊಂಡು ವೀರಶೈವ ಧರ್ಮವನ್ನು ಹಾಗೂ ಅದರ ಮಹತ್ವವನ್ನುನಾಡಿನಾದ್ಯಂತ ಪಸರಿಸಿದ್ದಾರೆ.ಶ್ರೀಮಠದ ಇತಿಹಾಸದ ಬಗ್ಗೆ ಹಾಗೂ ಪರಂಪರೆಯಲ್ಲಿ ಬಂದಿರುವ ಗುರುಗಳಬಗ್ಗೆ ಸ್ಪಷ್ಟ ಮಾಹಿತಿಗಳು ಲಭ್ಯವಿಲ್ಲದೆ ಇರುವುದು ದುರದೃಷ್ಟಕರ. ಪ್ರಸ್ತುತ ಶ್ರೀಗಳಪೂರ್ವದಲ್ಲಿ, ಇತ್ತೀಚಿನ ದಶಕಗಳಲ್ಲಿ ಶ್ರೀಮಠದಲ್ಲಿ ಅಧಿಕಾರದಲ್ಲಿದ್ದ ಗುರುಗಳ ಬಗ್ಗೆಮಾಹಿತಿ ಲಭ್ಯವಿಲ್ಲ. ಆದರೆ ಮೌನತಪಸ್ವಿ ಜಡೆಯ ಶಾಂತಲಿಂಗ ಮಹಾಸ್ವಾಮಿಗಳಿಂದ ಶ್ರೀಮಠವು ಜೀರ್ಣೋದ್ಧಾರವಾಗಿತ್ತು ಎಂದು ಹೇಳˉÁಗುತ್ತದೆ.ಈಗಿನ ಶ್ರೀಗಳಾದ ಶ್ರೀ.ಮ.ಘ.ಚ. ಘನಬಸವ ಅಮರೇಶ್ವರ ಶಿವಾಚಾರ್ಯಸ್ವಾಮಿಗಳು 2006 ರಲ್ಲಿ ಪಟ್ಟಾಧಿಕಾರ ವಹಿಸಿಕೊಂಡಿದ್ದು ಮಠದಲ್ಲಿ ಧಾರ್ಮಿಕಚಟುವಟಿಕೆಗಳ ಜೊತೆಗೆ ಅಭಿವೃದ್ಧಿಯತ್ತ ಗಮನ ಹರಿಸಿದ್ದಾರೆ. ಶ್ರೀಮಠದಲ್ಲಿ ವಿಶೇಷವಾಗಿಶ್ರಾವಣ ಮಾಸದಲ್ಲಿ ಪಿತೃ ಸ್ಮರಣೋತ್ಸವ ಕಾರ್ಯಕ್ರಮ ಹಾಗೂ ಪುಷ್ಯ ಮಾಸದಲ್ಲಿ ಮಾತೃಸ್ಮರಣೋತ್ಸವ ಕಾರ್ಯಕ್ರಮಗಳು ನಡೆಯುತ್ತವೆ. ಹಾಗೆಯೇ ಶ್ರೀಗಳಿಂದ ವರ್ಷದಲ್ಲಿ 10ದಿನಗಳ ಕಾಲ ರಾಜ್ಯದ ವಿವಿಧ ಭಾಗಗಳಲ್ಲಿ ಪುರಾತನ ಸಂಸ್ಕಾರ ಶಿಬಿರಗಳು ಜರುಗುತ್ತವೆ.

ವಿಶೇಷತೆ

ಪ್ರತಿವರ್ಷ 10 ದಿನಗಳ ಕಾಲ ರಾಜ್ಯದ ನಾನಾ ಭಾಗಗಳಲ್ಲಿ

ಪುರಾತನ ಸಂಸ್ಕಾರ ಶಿಬಿರದ ಆಯೋಜನೆ.

Swamiji

Swamiji Name :
ಶ್ರೀ ಮ.ಘ.ಚ. ಘನ ಬಸವ ಅಮರೇಶ್ವರ ಶಿವಾಚಾರ್ಯ ಸ್ವಾಮಿಗಳು
Place :
ಜಡೆ, ಸೊರಬ ತಾ||
Pattadikara :
2006
Photo :

Programs

ಶ್ರಾವಣ ಮಾಸದಲ್ಲಿ ಪಿತೃ ಸ್ಮರಣೋತ್ಸವ ಕಾರ್ಯಕ್ರಮ. ಪುಷ್ಯ ಮಾಸದಲ್ಲಿ ಮಾತೃ ಸ್ಮರಣೋತ್ಸವ ಕಾರ್ಯಕ್ರಮ (ಶ್ರೀಗಳ ಅನುಷ್ಠಾನ, ಮುತ್ತೈದೆಯರಿಗೆ ಉಡಿತುಂಬುವ ಕಾರ್ಯಕ್ರಮ).

Photos

Full Address Kannada

ಶ್ರೀ ಹಿರೇಮಠ ಜಡೆ - 577 419 ಸೊರಬ ತಾ||, ಶಿವಮೊಗ್ಗ ಜಿ||

Map

Near by Places

ಬನವಾಸಿ - 10 ಕಿ.ಮೀ. ಶಿರಸಿ - 31 ಕಿ.ಮೀ. ಸೊರಬ - 28 ಕಿ.ಮೀ.

Statistic

111 Views
0 Rating
0 Favorite
0 Share
error: Content is protected !!