Shree Murugharajendra Matha

Shree Murugharajendra Matha Claimed

ಶ್ರೀ ಮುರುಘರಾಜೇಂದ್ರ ಮಠ,

Average Reviews

Description

ಶ್ರೀ ಮುರುಘರಾಜೇಂದ್ರ ಮಠ, ಹಿರೇಮಾಗಡಿ

ಕರ್ತೃ ಶ್ರೀ ಜ.ಚ.ಮುರುಘರಾಜೇಂದ್ರ ಮಹಾಶಿವಯೋಗಿಗಳು

ಸೊರಬ ತಾಲ್ಲೂಕಿನ ಹಿರೇಮಾಗಡಿ ಗ್ರಾಮವು ತಾಲ್ಲೂಕು ಕೇಂದ್ರದಿಂದ 25ಕಿ.ಮೀ. ದೂರದಲ್ಲಿದ್ದು ಈ ಗ್ರಾಮದಲ್ಲಿ ಸುಮಾರು 18ನೇ ಶತಮಾನದ ಆರಂಭದಲ್ಲಿಸ್ಥಾಪಿತಗೊಂಡಿರುವ ಶ್ರೀ ಮುರುಘರಾಜೇಂದ್ರ ಮಠವು ಅಸ್ತಿತ್ವದಲ್ಲಿದ್ದು, ಈ ಭಾಗದ ಜನರಲ್ಲಿಧಾರ್ಮಿಕತೆಯನ್ನು ಉಳಿಸಿ ಬೆಳೆಸಿಕೊಂಡು ಬರುವಲ್ಲಿ ಸಹಕಾರಿಯಾಗಿದೆ.ಶ್ರೀ ಜ.ಚ. ಮುರುಘರಾಜೇಂದ್ರ ಮಹಾಶಿವಯೋಗಿಗಳ ಅನುಷ್ಠಾನ ಬಲದಿಂದಸ್ಥಾಪಿತಗೊಂಡಿರುವ ಶ್ರೀ ಮಠದಲ್ಲಿ ಚಿತ್ರದುರ್ಗ ಬೃಹನ್ಮಠದ ಶ್ರೀ ಸ್ವಾದಿ ಚನ್ನಬಸವಸ್ವಾಮಿಗಳು (1729) ಮೂರು ಸಾವಿರ ಶ್ರೀ ಸಿದ್ದಲಿಂಗ ಸ್ವಾಮಿಗಳು (1759) ಮತ್ತು ವ್ಯಾಕರಣಶ್ರೀ ಸಿದ್ದಲಿಂಗ ಸ್ವಾಮಿಗಳು (1790-1800) ಲಿಂಗೈಕ್ಯರಾಗಿದ್ದು, ಇವರ ಗದ್ದುಗೆಗಳು ಇಲ್ಲಿಸ್ಥಾಪನೆಯಾಗಿರುವುದರಿಂದ ಈ ಮಠವು ಹೆಚ್ಚು ಪ್ರಸಿದ್ಧಿ ಪಡೆಯಲು ಕಾರಣವಾಗಿದೆ.ಪ್ರಸ್ತುತ 1983 ರಲ್ಲಿ ಅಧಿಕಾರಕ್ಕೆ ಬಂದಿರುವ ಶ್ರೀ ಮ.ನಿ.ಪ್ರ. ಶಿವಮೂರ್ತಿಮುರುಘರಾಜೇಂದ್ರ ಸ್ವಾಮಿಗಳು ಮಠದ ಆಡಳಿತವನ್ನು ವಹಿಸಿಕೊಂಡು ಮಠವನ್ನುಅಭಿವೃದ್ಧಿಪಡಿಸುತ್ತಿದ್ದಾರೆ. ಶ್ರೀಗಳು ಕೇವಲ ಮಠದ ಕಟ್ಟಡ ಹಾಗೂ ಆಡಳಿತಕ್ಕೆ ಗಮನಕೊಡದೆ ಆಧುನಿಕ ಪದ್ಧತಿಯ ವ್ಯವಸಾಯದಲ್ಲಿ ನಿರತರಾಗಿದ್ದಾರೆ. ಇದರೊಂದಿಗೆ ಶ್ರೀಗಳುಈ ಭಾಗದ ಜನರಲ್ಲಿ ರೈತರಲ್ಲಿ ಆತ್ಮವಿಶ್ವಾಸ ತುಂಬುವ ಕೆಲಸವನ್ನು ಮಾಡುತ್ತಿದ್ದಾರೆ.ಹಾಗೆಯೇ ಮಠದಲ್ಲಿ ಹಲವಾರು ಅಭಿವೃದ್ಧಿ ಕೆಲಸಗಳನ್ನು ಮಾಡಿ ಭಕ್ತರ ಸಂಖ್ಯೆಯನ್ನುಹೆಚ್ಚಿಸುವಲ್ಲಿ ಯಶಸ್ವಿಯಾಗಿದ್ದಾರೆ.ಶ್ರೀ ಮಠದಲ್ಲಿ ಪ್ರತಿದಿನ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ಶ್ರಾವಣ ಮಾಸದಲ್ಲಿಪ್ರತಿದಿನ ವಿಶೇಷ ಧಾರ್ಮಿಕ, ಸಾಂಸ್ಕøತಿಕ ಕಾರ್ಯಕ್ರಮಗಳು ಜರುಗುತ್ತವೆ. ಶ್ರೀಗಳು ಚೈತ್ರಮಾಸದಲ್ಲಿ ಶ್ರೀಮಠದ ರಥೋತ್ಸವದ ಜೊತೆಗೆ ಸಾಮೂಹಿಕ ವಿವಾಹಗಳನ್ನು ನಡೆಸಿಕೊಟ್ಟುಇತರರಿಗೆ ಮಾದರಿಯಾಗಿದ್ದಾರೆ. ಹಾಗೆಯೇ ಶ್ರಾವಣ ಮಾಸದಲ್ಲಿ ಪ್ರತಿನಿತ್ಯ ಶಿವಾನುಭವಕಾರ್ಯಕ್ರಮದ ಮೂಲಕ ವಚನ ಸಾಹಿತ್ಯವನ್ನು ಜನರಿಗೆ ತಲುಪಿಸುವತ್ತ ನಿರತರಾಗಿದ್ದಾರೆ.ಈ ಮೂಲಕ ಶ್ರೀಗಳು ವೈಚಾರಿಕ ಮನೋಭಾವದೊಂದಿಗೆ ಭಕ್ತರನ್ನು ಸನ್ಮಾರ್ಗದತ್ತಮುನ್ನಡೆಸಿಕೊಂಡು ಹೋಗುತ್ತಿದ್ದಾರೆ.

Swamiji

Swamiji Name :
ಶ್ರೀ ಮ.ನಿ.ಪ್ರ. ಶಿವಮೂರ್ತಿ ಮುರುಘರಾಜೇಂದ್ರ ಸ್ವಾಮಿಗಳು
Date of Birth :
1954
Place :
ಬಳಗಾನೂರು ಗದಗ ತಾ||
Pattadikara :
1983
Photo :

Programs

ಪ್ರತಿ ಅಮವಾಸ್ಯೆಗೆ ವಿಶೇಷ ಪೂಜೆ. ಶ್ರಾವಣ ಮಾಸದಲ್ಲಿ ವಿಶೇಷ ಕಾರ್ಯಕ್ರಮಗಳು. ಕಾರ್ತೀಕ ಮಾಸದಲ್ಲಿ ಲಕ್ಷ ದೀಪೋತ್ಸವ ಮತ್ತು ಸರ್ವಧರ್ಮ ಸಭೆ ಚೈತ್ರ ಮಾಸ ದಶಮಿ ಏಕಾದಶಿಗೆ ಶ್ರೀಮಠದ ರಥೋತ್ಸವ ಹಾಗೂ ಸಾಮೂಹಿಕ ವಿವಾಹಗಳು, ವಿವಿಧ ಧಾರ್ಮಿಕ, ಸಾಂಸ್ಕøತಿಕ ಕಾರ್ಯಕ್ರಮಗಳು. ಊರ ಒಳಗೆ ಮಠ

Institutions

ಪೂರ್ವ ಪ್ರಾಥಮಿಕ / ಕಿರಿಯ ಪ್ರಾಥಮಿಕ / ಪ್ರೌಢಶಾˉÉ

Photos

Full Address Kannada

ಶ್ರೀ ಮುರುಘರಾಜೇಂದ್ರ ಮಠ ಹಿರೇಮಾಗಡಿ, ಕೊಳಗಿ ಪೋಸ್ಟ್ - 577 433 ಸೊರಬ ತಾ||, ಶಿವಮೊಗ್ಗ ಜಿ||

Map

Near by Places

ಹಿರೇಕೆರೂರು - 18 ಕಿ.ಮೀ. ಶಿರಾಳಕೊಪ್ಪ - 19 ಕಿ.ಮೀ. ಸೊರಬ - 25 ಕಿ.ಮೀ. ಶಿಕಾರಿಪುರ - 39 ಕಿ.ಮೀ.

Statistic

35 Views
0 Rating
0 Favorite
0 Share
error: Content is protected !!